Londan Nagara

RMH

ಗದ್ಯ ಪಾಠ-3 ಲಂಡನ್‌ ನಗರ

ಒಂದು ಅಂಕದ ಪ್ರಶ್ನೆಗಳು

ಉತ್ತರ : ದೇಶ ಸುತ್ತಿ ನೋಡು; ಕೋಶ ಓದಿ ನೋಡು ಎಂಬುದಾಗಿದೆ

ಉತ್ತರ: ನೆಲ್ಸನ್ರವರ ಮೂರ್ತಿಯಿರುವ ಸ್ಥಳದ ಹೆಸರು – ಟ್ರಾಫಲ್ಗಾರ್ ಸ್ಕ್ವೇರ್ . [ Trafalgar Square]

ಉತ್ತರ: ‘ವೆಸ್ಟ್ಮಿನ್ಸ್ಟರ್ ಅಬೆ’ ಸತ್ತುಹೋಗಿರುವ ಸಂತ, ಸಾರ್ವಭೌಮರ, ಕವಿ ಪುಂಗವರ ಸ್ಮಾರಕವಾಗಿದೆ.

ಉತ್ತರ: “ಚೇರಿಂಗ್ ಕ್ರಾಸ್” ಎಂಬ ಓಣಿಯಲ್ಲಿ ಆಂಗ್ಲರ ಸಾಮ್ರಾಜ್ಯ ವೈಭವವು ಕಂಡುಬರುವುದು.

ಉತ್ತರ: ಲಂಡನ ನಗರದ ಟ್ರಾಮ್ ಬಸ್ಸುಗಳು ಸಕಾಲಕ್ಕೆ ಹೋಗಲಾಗದು ರಸ್ತೆಗಳಲ್ಲಿ ವ್ಯಾಪಾರವು ತುಂಬಿರುವುದರಿಂದ.

ಉತ್ತರ: ಲಂಡನ ನಗರದ ಪೇಟೆಯ ಸ್ಟೇಷನರಿ ಅಂಗಡಿಯ ಹೆಸರು ವೂಲವರ್ಥ.

ಉತ್ತರ: ಲಂಡನ ನಗರದಲ್ಲಿ ಹೆಣ್ಣು ಮಕ್ಕಳು ಉಪಹಾರ ಗೃಹ, ಟೈಪಿಸ್ಟ್, ಕಾರಕೂನ,ಸಿಪಾಯಿಣಿ ಕೆಲಸಗಳಲ್ಲಿ ತೊಡಗಿರುತ್ತಾರೆ

ಉತ್ತರ: ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಚೇರಿಂಗ ಕ್ರಾಸ್.

ಉತ್ತರ: ಜನರ ಆತ್ಮಗಳ ಆರೋಗ್ಯವನ್ನು ಕಾಪಾಡುವುದೇ ಪ್ರಾರ್ಥನಾ ಮಂದಿರದ ಸರ್ಕಾರಿ ವೈದಿಕರ ಕೆಲಸ.

ಉತ್ತರ: ಬೆನ್ ಜಾನ್ಸನ್ ಇಂಗ್ಲೇಡಿನ ಪ್ರಸಿದ್ದ ಲೇಖಕ.

ಉತ್ತರ: ‘ವೆಸ್ಟ್ಮಿನ್ಸ್ಟರ್ ಅಬೆ’ಯಲ್ಲಿರುವ ಸಿಂಹಾಸನದ ಹೆಸರು ಸ್ಟೋನ್ ಆಫ್ ಸ್ಕೋನ್.

ಉತ್ತರ: ಲಂಡನ ನಗರದಲ್ಲಿ ಪ್ರಸಿದ್ದಿ ಪಡೆದ ಸಿಂಪಿಗಳು ಸ್ಯಾವ್ಯೋಯ್.

ಉತ್ತರ: 3ನೇ ಎಡ್ವರ್ಡ ತಂದ ಶಿಲೆಯ ಹೆಸರು ಸ್ಟೋನ್ ಆಫ್ ಸ್ಕೋನ್.

ಉತ್ತರ: ಟ್ರಾಫಲ್ಗಾರ್ ಯುದ್ದದಲ್ಲಿ ಹೋರಾಡಿ ಮಡಿದವನು ನೆಲ್ಸನ್.

ಉತ್ತರ: ಈಸ್ಟ ಇಂಡಿಯಾ ಕಂಪನಿಯನ್ನು ಲಂಡನ್ನಿನ ರಾಣಿ ಎಲಿಜಿಬೆತ್ ಸ್ಥಾಪಿಸಿದರು.

ಉತ್ತರ: ಭೂಗರ್ಭದಲ್ಲಿ ಇಲೆಕ್ಟಿçಕ್ ಗಾಡಿಗಳನ್ನು ಒಯ್ದಿದ್ದಾರೆ.

ಉತ್ತರ:ಲಂಡನ್ ನಗರದ ಪೇಟೆಯ ಸ್ಟೇಷನರಿ ಅಂಗಡಿ ಹೆಸರು ವೂಲವರ್ಥ

ಉತ್ತರ: ‘ಟ್ರಾಫಲ್ಗರ್ ಸ್ಕ್ವೇರ್ ʼ ನಲ್ಲಿ ನೆಲ್ಸನ್ನ ಮೂರ್ತಿ ಇದೆ

ಉತ್ತರ: ಇಂಗ್ಲೆಂಡ್ ನಗರದ ಬೀದಿ ಬೀದಿಗಳಲ್ಲಿನ ಇತಿಹಾಸದ ಅಡಿಗಲ್ಲು ಜನರಿಗೆ ನಿಮ್ಮ ದೇಶದ ಗೌರವವನ್ನು ಕಾಯಿರಿ ಇದು ದೊಡ್ಡದಾದ ರಾಷ್ಟ್ರ ಎಂಬ ಸಂದೇಶ ಸಾರುತ್ತಿದೆ

ಉತ್ತರ :ಕವಿಪುಂಗವರ, ಸಾರ್ವಭೌಮರ ಸ್ಮಾರಕ ಇರುವ ಪ್ರಾರ್ಥನಾ ಮಂದಿರ ವೆಸ್ಟ ಮಿನಿಸ್ಟರ್ ಅಬೆ’

ಉತ್ತರ: ವೆಸ್ಟ್ ಮಿನಿಸ್ಟರ್ ಅಬೆ ಕುರಿತು ನಿಬಂಧ ಬರೆದಿರುವ ಸಾಹಿತಿಗಳು ಗೋಲ್ಡಸ್ಮೀತ್ ಹಾಗೂ ಎಡಿಸನ್

ಉತ್ತರ: ಮರ್ತ್ಯತ್ವವೇ ಎಷ್ಟು ಗೋರಿಗುಂಪುಗಳು ಇಲ್ಲಿವೆ ನೋಡಿ ಅಂಜು” ಎಂದು ಹಾಡಿದ ಕವಿ ಬ್ಯೂಮಾಂಟ್

ಉತ್ತರ: ವೆಸ್ಟ ಮಿನಿಸ್ಟರ್ ಅಬೆ’ ಕವಿಗಳ ಸ್ಪೂರ್ತಿಯ ತವರು ಮನೆಯಾಗಿದೆ.

ಉತ್ತರ: .ಪ್ರಾರ್ಥನಾ ಮಂದಿರದಲ್ಲಿ ಸರಕಾರಿ ಡಾಕ್ಟರಂತೆ ಸರಕಾರಿ ವೈಧಿಕರು ಇರುತ್ತಾರೆ.

ಉತ್ತರ: ‘ಪೋಯಟ್ ಕಾರ್ನರ್’ ವೆಸ್ಟ್ ಮಿನಿಸ್ಟರ್ ಅಬೆ ಪ್ರಾರ್ಥನಾ ಮಂದಿರದಲ್ಲಿದೆ.

ಉತ್ತರ: ರಾಯಲ್ ಚಾಪೆಲ್ ನಲ್ಲಿ ಬೆನ್ ಜಾನ್ಸನ್, ರಿಚರ್ಡ್, 2ನೇ ಎಡ್ವರ್ಡ್ , ಅರ್ಲ್ ಆಫ್ ಸ್ಟಾöಫೋರ್ಡ್, ರಾಣಿ ಎಲಿಜಬತ್, 1 ನೇ ಜೇಮ್ಸ್ ಮೊದಲಾದ ಅರಸ-ಅರಸಿಯರ ಮೂರ್ತಿಗಳಿವೆ.

ಉತ್ತರ: ವೆಸ್ಟ್ ಮಿನಿಸ್ಟರ್ ಅಬೆ ಯಲ್ಲಿರುವ ಸಿಂಹಾಸನದ ಹೆಸರು ಸ್ಟೋನ್ ಆಫ್ ಸ್ಕೋನ್

ಉತ್ತರ:‘ಸ್ಟೋನ್ ಆಫ್ ಸ್ಕೋನ್’ ಈ ಸಿಂಹಾಸನವನ್ನು 3ನೇ ಎಡ್ವರ್ಡನು ಸ್ಕಾಟ್ ಲೆಂಡಿನ ಅರಸರಿಂದ ವಶಪಡಿಸಿಕೊಂಡನು.

ಉತ್ತರ:ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ ಇದು ಷೇಕ್ಸಪಿಯರ್ ಕವಿಯ ನುಡಿ

ಉತ್ತರ: “ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ” ಎಂದು ಬೇಕನ್ ಹೇಳಿದ.

ಉತ್ತರ: ಚೇರಿಂಗ್ ಕ್ರಾಸ್

ಉತ್ತರ:ಇಲ್ಲಿಯ ರಸ್ತೆಗಳಲ್ಲಿ ವ್ಯಾಪಾರವು ತುಂಬಿ ಲಂಡನ್ ನಗರದ ಟ್ರಾಮ್ ಬಸ್ಸುಗಳು ಸಕಾಲಕ್ಕೆ ಹೋಗಲಾಗದು.

ಉತ್ತರ: ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಭೂಗರ್ಭದಲ್ಲಿ ಗಾಡಿಯನ್ನು ಒಯ್ದಿದ್ದಾರೆ.

?

ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )

ಉತ್ತರ: ವೂಲವರ್ಥ ಅಂಗಡಿಯಲ್ಲಿ ಬೂಟು, ಕಾಲುಚೀಲ, ಚಣ್ಣ, ಸಾಬೂನು, ಔಷಧ, ಪುಸ್ತಕ, ಅಡಿಗೆಯ ಪಾತ್ರೆ, ಇಲೆಕ್ಟ್ರಿಕ್ ದೀಪದ ಸಾಮಾನು, ಫೊಟೋ, ಅಡವಿಯ ಹೂವು, ಯುದ್ಧಸಾಮಗ್ರಿ ಎಲ್ಲವೂ ಇಲ್ಲಿ ಸಿಗುವ ವಸ್ತುಗಳಾಗಿವೆ.

ಉತ್ತರ: ಲಂಡನ್ನಿನ ಯಾವುದಾದರೊಂದು ದೊಡ್ಡ ಅಂಗಡಿಗೆ ಹೋದರೆ ಅಲ್ಲಿಯ ಟೈಪಿಸ್ಟ್ ಕಾರಕೂನ, ಒಬ್ಬ ಹೆಣ್ಣು ಮಗಳು. ಸಿನಿಮಾ ಗೃಹದಲ್ಲಿ ನಿಮ್ಮ ಜಾಗವನ್ನು ಹುಡುಕಿ ಕೊಡುವವರು ಹೆಣ್ಣು! ನಮ್ಮ ಕಾಲೇಜಿನಲ್ಲಿ ಸಹ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಸಿಪಾಯಿಣಿಯರನ್ನು ಇಟ್ಟಿದ್ದಾರೆ!

ಉತ್ತರ: ಲಂಡನ್ನಿನಲ್ಲಿ ಹೆಣ್ಣುಮಕ್ಕಳು ಧರಿಸುವ ಟೊಪ್ಪಿಗೆಯ ವಿಶೇಷತೆಯನ್ನು ತಿಳಿಸುತ್ತಾ ಲೇಖಕರು ``ಒಂದು ಟೊಪ್ಪಿಗೆಯಂತೆ ಇನ್ನೊಂದು ಇರುವುದಿಲ್ಲ. ಸಿಕ್ಕಿಸಿದ ಪುಚ್ಚವಾದರೂ ಕನಿಷ್ಠಪಕ್ಷಕ್ಕೆ ಬೇರೆಯಾಗಿರುತ್ತದೆ! ಕೋಟ್ಯಾವಧಿ ಟೊಪ್ಪಿಗೆಗಳನ್ನು ಬೇಕಾದರೆ ಪರೀಕ್ಷಿಸಿ ಇದನ್ನು ಮನಗಾಣಬಹುದು. ಮನುಷ್ಯನಂತೆ ಟೊಪ್ಪಿಗೆಯಲ್ಲವೆ? ಒಬ್ಬ ಮನುಷ್ಯಳಂತೆ ಇನ್ನೊಬ್ಬಳಿಲ್ಲ” ಎಂದು ದಾಖಲಿಸಿದ್ದಾರೆ.

ಉತ್ತರ: ಪೊಯೆಟ್ ಕಾರ್ನರ್ನಲ್ಲಿ ಕಿಪ್ಲಿಂಗ್, ಹಾರ್ಡಿ, ಮ್ಯಾಕಾಲೆ, ಜಾನ್ಸನ್, ಗೋಲ್ಡ್ಸ್ಮಿತ್, ಡ್ರಾಯ್ಡನ್, ಬೆನ್ ಜಾನ್ಸನ್, ವರ್ಡ್ಸವರ್ತ ಮೊದಲಾದ ಕವಿಗಳ ಸಮಾಧಿಗಳಿವೆ.

ಉತ್ತರ: ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲು ಪಾಟಿಯನ್ನು ಹಾಕುತ್ತಾರೆ. ಅದರ ವಿಶೇಷತೆ ಏನೆಂದರೆ ಪಟ್ಟಾಭಿಷೇಕ ಆಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ ಕೂಡಬೇಕು. ಈ ಶಿಲೆಯನ್ನು ಒಳಗೊಂಡ ಸಿಂಹಾಸನವು ವೆಸ್ಟ್ಮಿನ್ಸ್ಟರ್ ಮಂದಿರದಲ್ಲಿಯ ಒಂದು ಭಾಗದಲ್ಲಿದೆ. “ಸ್ಟೋನ್ ಆಫ್ ಸ್ಕೋನ್” ಎಂದು ಇದರ ಹೆಸರು. 3ನೇ ಎಡ್ವರ್ಡನು ಸ್ಕಾಟ್ಲೆಂಡಿನ ಅರಸರಿಂದ ಇದನ್ನು ಕಿತ್ತುಕೊಂಡು ಬಂದಂತೆ ಕಾಣುತ್ತದೆ. ಅಂದಿನಿಂದ ಎಲ್ಲ ಸಾಮ್ರಾಟರ ಅಭಿಷೇಕವು ಈ ಕಲ್ಲಿನ ಮೇಲೆಯೇ ಆಗಿದೆ.

ಉತ್ತರ: ಲಂಡನ್ ನಗರದ ಚೇರಿಗ್ ಕ್ರಾಸ್ ಓಣಿಯಲ್ಲಿ ಇಂಡಿಯಾ ಆಫೀಸ್ ಇದೆ. ಇದರ ವಾಚನಾಲಯದಲ್ಲಿ ಮಹತ್ವದ ಪುಸ್ತಕಗಳಿವೆ.ಕರ್ನಾಟಕದ ವಿಷಯವಾಗಿ ಎಷ್ಟೋ ಹೊಸ ಮಾತುಗಳು ಗೊತ್ತಾಗಬಹುದೆಂದು ಕಾಣುತ್ತದೆ. ವಸ್ತು ಸಂಗ್ರಹಾಲಯದಲ್ಲಿ ಹಿಂದೂಸ್ತಾನದ ಲಲಿತ ಕಲೆಯ ಹಾಗೂ ಇತರ ಮಾರ್ಗಗಳ ಮಾದರಿಗಳು, ಎಲ್ಲ ಮುಖ್ಯವಾದ ಇಂಗ್ಲೀಷ್ ವರ್ತಮಾನ ಪತ್ರಿಕೆಗಳು (ಹಿಂದೂಸ್ತಾನದಲ್ಲಿ ಪ್ರಕಟವಾಗುವಂತವು) ಇವೆ.

ಉತ್ತರ : ಚೇರಿಂಗ್ ಕ್ರಾಸ್ ಓಣಿಯಲ್ಲಿ ಇಂಡಿಯಾ ಆಫೀಸ್ ಇದೆ. ಆಂಗ್ಲರ ಸಾಮ್ರಾಜ್ಯ ವೈಭವವು ಕಂಡು ಬರುವುದು ! ಇಂಡಿಯಾ ಆಫೀಸಿನ ಹತ್ತಿರ ಆಪ್ರಿಕನ್ ಕಛೇರಿ, ಇನ್ನೊಂದು ವಸಾಹತಿನ ಕಛೇರಿ,ನೂರೆಂಟು ಬ್ಯಾಂಕುಗಳು ದೊಡ್ಡ ಕಂಪನಿಗಳ ಕಛೇರಿಗಳು ಎಲ್ಲವೂ ದಂಗುಬಡಿಸುವಂತೆ ನೆರೆದಿವೆ. ಒಂದೊಂದು ದೇಶದ ಮೇಲಿನ ಪ್ರಭುತ್ವ ಇಲ್ಲಿಯ ಒಂದೊಂದು ಕಛೇರಿಯಿಂದ ನಡೆಯುತ್ತದೆ.

?

ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ (3 ಅಂಕ)

ಆಯ್ಕೆ :- ಈ ವಾಕ್ಯವನ್ನು ವಿ.ಕೃ.ಗೋಕಾಕ್ ಅವರು ರಚಿಸಿರುವ “ಸಮುದ್ರದಾಚೆಯಿಂದ” ಎಂಬ ಪ್ರವಾಸ ಕಥನಂದಿಂದ ಆಯ್ದ “ಲಂಡನ್ನಗರ” ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ :- ಲೇಖಕರು ಲಂಡನ್ ನಗರದ ಬೀದಿ ಬೀದಿಯಲ್ಲೂ ಇತಿಹಾಸ ಪ್ರಸಿದ್ಧ ಪುರುಷರ ಪ್ರತಿಮೆಗಳನ್ನು ನೋಡಿ ತಮ್ಮ ದೇಶಕ್ಕಾಗಿ ಜೀವನವನ್ನು ಲೆಕ್ಕಿಸದೇ ದುಡಿದವರು ನಿಂತು ಕೈಯೆತ್ತಿ “ನಿಮ್ಮ ದೇಶದ ಗೌರವವನ್ನು ಕಾಯಿರಿ! ಇದು ದೊಡ್ಡದಾದ ರಾಷ್ಟ್ರ” ಎಂದು ಹೇಳುತ್ತಿರುವಂತೆ ತೋರುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಸ್ವಾರಸ್ಯ :- ರಾಷ್ಟ್ರಕ್ಕಾಗಿ ದುಡಿದ ಮಹನೀಯರಿಗೆ ಲಂಡನ್ ನಗರದಲ್ಲಿ ಅಲ್ಲಿನ ಜನ ತೋರಿಸಿರುವ ಗೌರವ ಭಾವನೆ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.

ಆಯ್ಕೆ :- ಈ ವಾಕ್ಯವನ್ನು ವಿ.ಕೃ.ಗೋಕಾಕ್ ಅವರು ರಚಿಸಿರುವ “ಸಮುದ್ರದಾಚೆಯಿಂದ” ಎಂಬ ಪ್ರವಾಸ ಕಥನದಿಂದ ಆಯ್ದ “ಲಂಡನ್ ನಗರ” ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ :- ಲಂಡನ್ ನಗರದ ಬೀದಿಯಲ್ಲಿ ಲಕ್ಷಾನುಲಕ್ಷ ಜನರು ಅವಸರದಿಂದ ಓಡಾಡುತ್ತಿರುವುದನ್ನು ನೋಡಿ time! time! time is money (ಹೊತ್ತು! ಹೊತ್ತು! ಹೊತ್ತೇ ಹಣ) ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ. 0
ಸ್ವಾರಸ್ಯ :- ಸಮಯಕ್ಕೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲೂ ವಿದೇಶಗಳಲ್ಲೂ ಸಮಯವೇ ಹಣ ಎಂಬ ಮಾತು ಅಕ್ಷರಶಃ ನಿಜವಾಗಿದೆ ಎಂಬ ಮಾತು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.

ಆಯ್ಕೆ :- ಈ ವಾಕ್ಯವನ್ನು ವಿ.ಕೃ.ಗೋಕಾಕ್ ಅವರು ರಚಿಸಿರುವ “ಸಮುದ್ರದಾಚೆಯಿಂದ” ಎಂಬ ಪ್ರವಾಸ ಕಥನದಿಂದ ಆಯ್ದ “ಲಂಡನ್ ನಗರ” ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ :- ವೆಸ್ಟಮಿನ್ಸ್ಟರ್ ಅಬೆ ಎಂಬ ಪ್ರಾರ್ಥನಾ ಮಂದಿರದ ಆವರಣದಲ್ಲಿ ಸ್ಥಾಪಿಸಲಾಗಿದ್ದ ಕವಿಗಳ, ಸಾರ್ವಭೌಮರ ನೆನಪಿಗಾಗಿ ಕಲ್ಲುಹಾಸುಗಳನ್ನು ಇಟ್ಟಿದ್ದು ಅವುಗಳ ಮೇಲೆ ನಡೆದು ಹೋಗಬೇಕಾಗಿತ್ತು. ಅವುಗಳ ಬಳಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಲೇಖಕರು ``ಯಾರನ್ನು ತುಳಿದರೇನು? ಎಲ್ಲಿ ಹೆಜ್ಜೆ ಹಾಕಿದರೇನು ? ಎಲ್ಲವೂ ಅಷ್ಟೆ! ಮಣ್ಣು ಮಣ್ಣು ಎಂದು ಮನಸ್ಸಿಗೆ ಬಂದಂತೆ ಮನುಷ್ಯನು ನಡೆಯ ಹತ್ತುತ್ತಾನೆ‟ ಎಂದು ಹೇಳಿದ್ದಾರೆ.
ಸ್ವಾರಸ್ಯ :-ಸಾಧಕರ ಮಾರ್ಗದರ್ಶನದಲ್ಲಿ ನಡೆವಾಗ ಮಾನವನ ದಿಕ್ಕು ತಪ್ಪಿದಂತಾದಾಗ “ಎಲ್ಲವೂ ಅಷ್ಟೇ! ಬರಿಯ ಮಣ್ಣು” ಎಂದು ಮನಸ್ಸಿನಲ್ಲಿ ಮೂಡುತ್ತದೆ. ನಶ್ವರವಾಗಿ ಕಾಣುತ್ತದೆ. ಎಂಬುದು ಇಲ್ಲಿ ಸ್ವಾರಸ್ಯ ಪೂರ್ಣವಾಗಿ ವ್ಯಕ್ತವಾಗಿದೆ.

ಆಯ್ಕೆ :- ಈ ವಾಕ್ಯವನ್ನು ವಿ.ಕೃ.ಗೋಕಾಕ್ ಅವರು ರಚಿಸಿರುವ “ಸಮುದ್ರದಾಚೆಯಿಂದ” ಎಂಬ ಪ್ರವಾಸ ಕಥನದಿಂದ ಆಯ್ದ “ಲಂಡನ್ ನಗರ” ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ :- ಲಂಡನ್ ನಗರ ಪ್ರವಾಸ ಕಥನದ ಕೊನೆಯಲ್ಲಿ ಪ್ರವಾಸದ ಶೈಕ್ಷಣಿಕ ಮಹತ್ವವನ್ನು ತಿಳಿಸುವ ಸಂದರ್ಭದಲ್ಲಿ ಪ್ರವಾಸದಿಂದ ತಮ್ಮ ಮನಸ್ಸು ವಿಕಾಸ ಹೊಂದಿ, ದೃಷ್ಟಿಕೋನ ವಿಶಾಲವಾದ ಬಗ್ಗೆ ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ ಎಂದು ಬೇಕನ್ ಹೇಳಿದ ಮಾತನ್ನು ಇಲ್ಲಿ ಲೇಖಕರು ಉದಾಹರಿಸಿದ್ದಾರೆ.
ಸ್ವಾರಸ್ಯ :- “ದೇಶ ಸುತ್ತು : ಕೋಶ ಓದು” ಎಂಬ ಮಾತಿನಂತೆ ಪರಿಪೂರ್ಣ ಶಿಕ್ಷಣಕ್ಕೆ ಪ್ರವಾಸ ಅತಿ ಮುಖ್ಯ. ಆದ್ದರಿಂದ ಈ ಪ್ರವಾಸದ ಮಹತ್ವ ತಿಳಿಸುತ್ತದೆ.

?

ಲೇಖಕರ ಪರಿಚಯ(3 ಅಂಕ)

**** : ****

ಎಂಟು-ಹತ್ತು ವಾಕ್ಯದಲ್ಲಿ ಉತ್ತರ ಬರೆಯಿರಿ(4 ಅಂಕ)

ಉತ್ತರ:- ಲಂಡನ್ ಪಟ್ಟಣವೆಂದರೆ ಒಂದು ಸ್ವತಂತ್ರ ಜಗತ್ತು. ಇಲ್ಲಿನ ಟ್ರಾಮ್ ಬಸ್ಸುಗಳು ಭೂಗರ್ಭದಲ್ಲಿ ಸಂಚರಿಸುತ್ತವೆ. ವೂಲವರ್ಥ ಸ್ಟೇಷನರಿ ಅಂಗಡಿಯು ಪ್ರಾಚೀನ ಮಹಾಕಾವ್ಯದಂತೆ ಒಂದು ಮಹಾಕೋಶವಾಗಿದೆ.ಇಲ್ಲಿ ಎಲ್ಲಾ ತರಹದ ಸಾಮಾಗ್ರಿಗಳು ದೊರಕುತ್ತವೆ. ಲಂಡನ್ ನಗರದ ಎಲ್ಲಾ ಅಂಗಡಿಗಳಲ್ಲಿ ಸಾಮಾನ್ಯವಾಗಿ ಹೆಣ್ಣು ಮಕ್ಕಳೇ ಕಾರ್ಯನಿರ್ವಹಿಸುತ್ತಾರೆ. ಚೇರಿಂಗ್ ಕ್ರಾಸ್ ಎಂಬ ಓಣಿಯಲ್ಲಿ ಆಂಗ್ಲ ಸಾಮ್ರಾಜ್ಯದ ವೈಭವು ಕಂಡುಬರುತ್ತದೆ. ಇಲ್ಲಿಯ ಇಂಡಿಯಾ ಆಫೀಸು ನೋಡುವ ಹಾಗಿದೆ. ಇಲ್ಲಿನ ಜನರಿಗೆ ಹೊತ್ತು! ಹೊತ್ತು! ಹೊತ್ತೇ ಹಣ. ಟ್ರಾಫಲ್ಗಾರ್ ಸ್ಕ್ವೇರ್ ನಲ್ಲಿ ನೆಲ್ಸನ್ ಅವರ ಮೂರ್ತಿ ಇದೆ.ಲಂಡನ್ ನಗರದಲ್ಲಿ ಟೊಪ್ಪಿಗೆ ಒಂದರಂತೆ ಇನ್ನೊಂದಿರುವುದಿಲ್ಲ. ಹೆಣ್ಣುಮಕ್ಕಳ ಟೊಪ್ಪಿಗೆಯು ವೈವಿಧ್ಯಮಯವಾಗಿರುತ್ತವೆ. ಸ್ಟಾçಂಡ್ದಲ್ಲಿಯ ಸ್ಯಾವ್ಯೋಯ್ ಸಿಂಪಿಗಳು ಇಲ್ಲಿ ಪ್ರಸಿದ್ಧಿ ಹೋಂದಿದ್ದಾರೆ. ವೆಸ್ಟ್ ಮಿನಿಸ್ಟರ್ ಅಬೆ ಎಂಬುದು ಒಂದು ಸಾವಿರ ವರ್ಷದಷ್ಟು ಪುರಾತನವಾದ ಪ್ರಾರ್ಥನಾ ಮಂದಿರಾ. ಇದನ್ನು ಸತ್ತವರ ಸ್ಮಾರಕ ಎಂತಲೂ ಕರೆಯುತ್ತಾರೆ. ಇಲ್ಲಿ ಹಲವಾರ ವಿಭಾಗಗಳಿವೆ ಅವು ಪೊಯೆಟ್ಸ್ ಕಾರ್ನರ್, ರಾಯೆಲ್ ಚಾಪೆಲ್ , ವಿಜ್ಞಾನಿಗಳ ಮೂಲೆ ಕಂಡುಬರುತ್ತವೆ. ಸಾಮ್ರಾಟರ ಪಟ್ಟಾಭಿಷೇಕವಾಗುವಾಗ ಕೂಡುವ ‘ಸ್ಟೋನ್ ಆಫ್ ಸ್ಕೋನ್’ ವಿಶೇಷತೆಯನ್ನು ಹೋಂದಿವೆ.

ಉತ್ತರ:- ‘ವೆಸ್ಟ್ ಮಿನ್ಸ್ಟರ್ ಅಬೆ’ ಎಂಬ ಪ್ರಾರ್ಥನಾ ಮಂದಿರ ಕನಿಷ್ಠ ಒಂದು ಸಾವಿರ ವರ್ಷದಷ್ಟು ಪುರಾತನವಾದ ಮಂದಿರ. ಇಲ್ಲಿ ಸಂತ, ಸಾರ್ವಭೌಮರು ಮಲಗಿರುವರು; ಕವಿಪುಂಗವರು ಒರಗಿರುವರು. ಸತ್ತವರ ಸ್ಮಾರಕವೆಂದು ಇದಕ್ಕಿಂತ ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದು. ‘ಸರಕಾರಿ ಡಾಕ್ಟರ’ರಂತೆ ಇಲ್ಲಿ ‘ಸರಕಾರಿ ವೈದಿಕರೂ’ ಇರುತ್ತಾರೆ. ಜನರ ಆತ್ಮಗಳ ಆರೋಗ್ಯವನ್ನು ಕಾಯುವುದೇ ಅವರ ಕೆಲಸ. ಬಹುಜನರು ಪ್ರಾರ್ಥನೆ ಗಿಂತ ಪ್ರಾರ್ಥನಾ ಮಂದಿರವನ್ನು ನಮ್ಮಂತೆ ನೋಡಲು ಬಂದಿದ್ದರೆಂದು ತೋರಿತು. ರಾಜರಿಗಿಂತ, ಕವಿಗಳಿಗಿಂತ ಇವರೇ ಆಂಗ್ಲರ ಕೀರ್ತಿ ಧ್ವಜವನ್ನು ನಿಲ್ಲಿಸಿದರೆಂದು ಇಲ್ಲಿಯವರ ಅಭಿಪ್ರಾಯವೆಂದು ಕಾಣುತ್ತದೆ. Earl of Chatham (ಅರ್ಲ್ ಆಫ್ ಚ್ಯಾಟ್ಹಾಂ)ನು ಗ್ಯಾಡ್ಸ್ಟನ್, ಮಾಲ್ಫ್ ಡಿಸ್ರೇಲಿ ಮೊದಲಾದವರು ಕಣ್ಣಿಗೆ ಬಿದ್ದರು! ಆಮೇಲೆ ನನಗೆ ಮುಖ್ಯವಾಗಿ ಬೇಕಾದ Poet’s Corner (ಪೊಯೆಟ್ಸ್ ಕಾರ್ನರ್) ಕವಿಗಳ ಮೂಲೆ ಕಿಪ್ಲಿಂಗ್ ಕವಿಯ ಮೇಲೆ ಹಾಕಿದ ಕಲ್ಲು ಅಲ್ಲಿ ಕಣ್ಣಿಗೆ ಬಿತ್ತು. ಅದಕ್ಕೆ ತುಸು ದೂರದಲ್ಲಿಯೇ ಹಾರ್ಡಿಯು ಒರಗಿದ್ದನು. ಮ್ಯಾಕಾಲೆ, ಜಾನ್ಸನ್, ಗೋಲ್ಡ್ ಸ್ಮಿತ್, ಡ್ರಾಯ್ಡನ್ ಎಲ್ಲರಿಗೂ ಒಂದೊಂದು ಹಿಡಿ ಮಣ್ಣನ್ನು ನಾವು ಕೊಡುವಂತೆ ಒಂದೊಂದು ಕಲ್ಲನ್ನು ಇಲ್ಲಿ ಕೊಟ್ಟಿದ್ದಾರೆ. ಅವು ನನ್ನ ಕಣ್ಣಿಗೆ ಬಿದ್ದುವು. ಓದಿದೆ, `ಓ ಅಪರೂಪ ಬೆನ್ಜಾನ್ಸನ್’ ವರ್ಡ್ಸ್ವರ್ತ್ನಂಥವರನ್ನೂ ಅವರು ಮೂಲೆಗೊತ್ತಿಬಿಟ್ಟಿದ್ದಾರೆ! ಯಾರನ್ನು ತುಳಿದರೇನು? ಎಲ್ಲ ಹೆಜ್ಜೆ ಹಾಕಿದರೇನು? ಎಲ್ಲವೂ ಅಷ್ಟೆ! ಮಣ್ಣು, ಮಣ್ಣು! ಇದಕ್ಕೆ ಸಮೀಪವಾಗಿ ವೈಜ್ಞಾನಿಕರ ಮೂಲೆಯಿದೆ. ಇಲ್ಲಿ ನ್ಯೂಟನನ ದೊಡ್ಡದಾದ ಶಿಲಾಮೂರ್ತಿಯನ್ನುನಿಲ್ಲಿಸಿದ್ದಾರೆ. ಡಾರ್ವಿನ್, ಹರ್ಶೆಲ್ ಮೊದಲಾದವರ ಮೇಲೆ ಕಲ್ಲೊಗೆದಿದ್ದಾರೆ. ಇದಕ್ಕೆ ಹತ್ತಿರದಲ್ಲಿ ವ್ಯಾಪಾರಿಗಳು, ವಾಸ್ತುಶಿಲ್ಪಿಗರು, ಸರದಾರರು, ಸೇನಾಪತಿಗಳು ಮೊದಲಾದ ಅನೇಕರಿಗೆ ಜಾಗವು ದೊರೆತಿದೆ. ಅರಸರ ಅರಮನೆಯಲ್ಲಿ ರಾಜದಂಡವೂ, ಕಿರೀಟವೂ ನೆಲಕ್ಕುರುಳಲೇಬೇಕು ಇದಕ್ಕೆ Royal Chapel (ರಾಜವಿಭಾಗ) ಎಂದು ಹೆಸರು. ಬೆನ್ಜಾನ್ಸನ್ನನನ್ನೂ ಜನರು ತುಳಿದಾಡುತ್ತಾ ನಡೆಯುತ್ತಾರೆ. ಈ ರಾಜಮಂದಿರದಲ್ಲಿ ಸಿಂಹದೆದೆಯ ರಿಚರ್ಡ್, ೨ನೆಯ ಎಡ್ವರ್ಡ್, ಅರ್ಲ್ ಆಫ್ ಸ್ಟಾಯಫೋರ್ಡ್, ರಾಣಿ ಎಲಿಜಬೆತ್, ೧ನೆಯ ಜೇಮ್ಸ್ ಮೊದಲಾದ ಅರಸು, ಅರಸಿಯರು ಒರಗಿದ್ದಾರೆ. ಮುಖ್ಯತಃ ಗೋರಿಯ ಮೇಲೆ ಆ ವ್ಯಕ್ತಿಯು ಮಲಗಿಕೊಂಡಂತೆ ಮೂರ್ತಿಯನ್ನು ಕಡೆದಿದ್ದಾರೆ. ಈ ಗೋರಿಗಳ ನಡುವೆ ಹಾಯ್ದು ಅರಸರ ಪ್ರಾರ್ಥನಾ ಮಂದಿರಕ್ಕೆ ಹೋಗಬಹುದು. ಇಲ್ಲಿಯ ಕೆತ್ತನೆಯ ಕೆಲಸವೆಲ್ಲ ಬಂಗಾರದ ಬಣ್ಣದಲ್ಲಿಯೇ ಆಗಿವೆ. ಮಂದಿರದ ಹಿಂದೆ ಭವ್ಯವಾಗಿ ೭ನೆಯ ಹೆನ್ರಿಯ ಗೋರಿಯು ನಿಂತಿದೆ.ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲು ಪಾಟಿಯನ್ನು ಹಾಕುತ್ತಾರೆ. ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ ಕೂಡಬೇಕು. ಈ ಶಿಲೆಯನ್ನು ಒಳಗೊಂಡ ಸಿಂಹಾಸನವು ವೆಸ್ಟ್ಮಿನ್ಸ್ಟರ್ ಮಂದಿರದಲ್ಲಿಯ ಒಂದು ಭಾಗದಲ್ಲಿದೆ. ‘ಸ್ಟೋನ್ ಆಫ್ ಸ್ಕೋನ್’ ಎಂದು ಇದರ ಹೆಸರು. ೩ನೇ ಎಡ್ವರ್ಡನು ಸ್ಕಾಟ್ಲೆಂಡಿನ ಅರಸರಿಂದ ಇದನ್ನು ಕಿತ್ತುಕೊಂಡು ಬಂದಂತೆ ಕಾಣುತ್ತದೆ. ಅಂದಿನಿಂದ ಎಲ್ಲ ಸಾಮ್ರಾಟರ ಅಭಿಷೇಕವು ಈ ಕಲ್ಲಿನ ಮೇಲೆಯೇ ಆಗಿದೆ.ಹಲವಾರು ಲೇಖಕರು ವೆಸ್ಟ್ಮಿನ್ಸ್ಟರ್ ಅಬೆಯ ಕುರಿತು ಲೇಖನಗಳನ್ನು ಬರೆದಿದ್ದಾರೆ.

« BACK ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ