ಗದ್ಯ ಪಾಠ-4 ಭಾಗ್ಯಶಿಲ್ಪಿಗಳು
ಒಂದು ಅಂಕದ ಪ್ರಶ್ನೆಗಳು
ಉತ್ತರ: ಮೈಸೂರು ಸಂಸ್ಥಾನ ಒಡೆಯರು ರಾಜಸಂತತಿಯ 24 ನೇ ರಾಜರು ನಾಲ್ವಡಿಕೃಷ್ಣರಾಜ ಒಡೆಯರು
ಉತ್ತರ: ನಾಲ್ವಡಿಕೃಷ್ಣರಾಜ ಒಡೆಯರ ಆಳ್ವಿಕೆ 1902 ರಿಂದ 1940 ರ ವರೆಗೆ ನಡೆಯುತು.
ಉತ್ತರ: ನಾಲ್ವಡಿಕೃಷ್ಣರಾಜ ಒಡೆಯರು 10ನೇ ವರ್ಷದಲ್ಲಿ ಪಟ್ಟಠಭಿಷಿಕ್ತರಾದರು.
ಉತ್ತರ: ನಾಲ್ವಡಿಕೃಷ್ಣರಾಜ ಒಡೆಯರು ಬಾಲಕರಾಗಿದ್ದರಿಂದ ಅವರ ಆಡಳಿತ ನಿರ್ವಹಣೆಯನ್ನು ಅವರ ತಾಯಿಂದರಾದ ಮಹಾರಾಣಿ ʼವಾಣಿ ವಿಲಾಸʼ ರವರು ರಿಜೇಂಟರಾಗಿ ನೋಡಿಕೊಂಡರು.
ಉತ್ತರ: ಪ್ರಜಾಪ್ರತಿನಿಧಿ ಸಭೆಯಲ್ಲಿದ್ದ ಒಟ್ಟು ಸದಸ್ಯರ ಸಂಖ್ಯೆ 275 .
ಉತ್ತರ: ನಾಲ್ವಡಿಕೃಷ್ಣರಾಜ ಒಡೆಯರು ಪ್ರಜಾಪ್ರತಿನಿಧಿ ಸಭೆಯಲ್ಲಿ 1923ರಲ್ಲಿ ಹೊಸ ಕಾನೂನನ್ನು ಜಾರಿಗೆ ತಂದರು.
ಉತ್ತರ: ನಾಲ್ವಡಿಕೃಷ್ಣರಾಜ ಒಡೆಯರು ನ್ಯಾಯವಿಧಾಯಕ ಸಭೆಯನ್ನು 1907ರಲ್ಲಿ ಸ್ಥಾಪಿಸಿದರು.
ಉತ್ತರ: ನ್ಯಾಯವಿಧಾಯಕ ಸಭೆಯ ಒಟ್ಟು ಸದಸ್ಯರ ಸಂಖ್ಯೆ 50 .
ಉತ್ತರ: ಪ್ರಜಾಪ್ರತಿನಿಧಿ ಸಭೆಯಲ್ಲಿ ಮಂಡಿಸಿದ ಎಲ್ಲ ವಿಷಯಗಳನ್ನು ವಿಮರ್ಶಿಸುವ ಆಧಿಕಾರ ನ್ಯಾಯವಿಧಾಯಕ ಸಭೆ ಗೆ ಇದ್ದಿತು.
ಉತ್ತರ: ಸಾಮಾಜಿಕ ಕಾನೂನುಗಳ ಹರಿಕಾರ ಎಂದು ನಾಲ್ವಡಿಕೃಷ್ಣರಾಜ ಒಡೆಯರನ್ನು ಕರೆಯುತ್ತಾರೆ.
ಉತ್ತರ: ನಾಲ್ವಡಿಕೃಷ್ಣರಾಜ ಒಡೆಯರ ಆಡಳಿತ ಕಾಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು.
ಉತ್ತರ: ನಾಲ್ವಡಿಕೃಷ್ಣರಾಜ ಒಡೆಯರ ಆಡಳಿತ ಕಾಲದಲ್ಲಿ 1931 ವೇಳೆಗೆ ಎಲ್ಲಾ ರೈಲು ಮಾರ್ಗಗಳನ್ನು ಪೂರೈಸಲಾಯಿತು.
ಉತ್ತರ: ಕಾವೇರಿ ನದಿಗೆ ಜಲವಿದ್ಯುತ್ತ ಉತ್ಪಾದನಾ ಕೇಂದ್ರವನ್ನು ಶಿವನಸಮುದ್ರದ ಬಳಿ ಪ್ರಾರಂಭಿಸಲಾಯಿತು.
ಉತ್ತರ: ಕಾವೇರಿ ನದಿಗೆ ಶಿವನಸಮುದ್ರದ ಬಳಿ ಜಲವಿದ್ಯುತ್ತ ಉತ್ಪಾದನಾ ಕೇಂದ್ರವನ್ನು 1900ರಲ್ಲಿ ಪ್ರಾರಂಭಿಸಲಾಯಿತು.
ಉತ್ತರ: ಶಿವನಸಮುದ್ರದ ಬಳಿ ಕಾವೇರಿ ನದಿಯ ಜಲವಿದ್ಯುತ್ ಯೋಜನೆ ಏಷ್ಯಾ ಖಂಡದಲ್ಲೇ ಮೊದಲ ಜಲವಿದ್ಯುತ್ ಯೋಜನೆಯಾಗಿದೆ.
ಉತ್ತರ: ವಾಣಿವಿಲಾಸ ಸಾಗರ (ಮಾರಿಕಣಿವೆ) ಯೋಜನೆಯನ್ನು 1907ರಲ್ಲಿ ಸ್ಥಾಪಿಸಲಾಯಿತು.
ಉತ್ತರ: ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾಲಯ ‘ಮೈಸೂರ ವಿಶ್ವವಿದ್ಯಾನಿಲಯ’.
ಉತ್ತರ: ನಾಲ್ವಡಿಕೃಷ್ಣರಾಜ ಒಡೆಯರು ಜನತೆಯು ಆಡಳಿತದಲ್ಲಿ ಪಾಲ್ಗೊಳ್ಳುವಿಕೆ ಯ ಪರವಾಗಿದ್ದವರು.
ಉತ್ತರ: ಗಾಂಧೀಜಿಯವರು ಮೈಸೂರು ಸಂಸ್ಥಾನವನ್ನು ‘ಮಾದರಿ ಮೈಸೂರು’ ಎಂದು ಹೊಗಳಿದವರು.
ಉತ್ತರ: ಸೆಪ್ಟೆಂಬರ್ 15, 1960 ರಂದು ಶತಮಾನೋತ್ಸವ ಅಭಿನಂದನೆ ‘ಸರ್.ಎಂ.ವಿ’ ಅಭಿನಂದನಾ ಗ್ರಂಥವನ್ನು ಪ್ರಕಟಿಸಲಾಯಿತು.
ಉತ್ತರ: ವಿಶ್ವೇಶ್ವರಯ್ಯನವರು ಕ್ರಿಸ್ತ ಶಕ 1860 ಸೆಪ್ಟೆಂಬರ್ 15 ರಂದು ಜನಿಸಿದರು.
ಉತ್ತರ: ವಿಶ್ವೇಶ್ವರಯ್ಯನವರ ತಂದೆ ಶ್ರೀನಿವಾಸಶಾಸ್ತ್ರೀ ತಾಯಿ ವೆಂಕಟಲಕ್ಷ್ಮಮ್ಮ.
ಉತ್ತರ: ವಿಶ್ವೇಶ್ವರಯ್ಯನವರ ಪೂರ್ವಜರ ಊರು ಕರ್ನೂಲ್ ಜಿಲ್ಲೆಯ ಗಿಡ್ಡಲೂರು ತಾಲೂಕಿನ ‘ಮೋಕ್ಷಗೊಂಡಂ’.
ಉತ್ತರ: ವಿಶ್ವೇಶ್ವರಯ್ಯನವರ ಮನೆತನದ ಹೆಸರು ‘ಮೋಕ್ಷಗೊಂಡಂ’.
ಉತ್ತರ: ವಿಶ್ವೇಶ್ವರಯ್ಯನವರ ಸೋದರಮಾವನ ಹೆಸರು ಎಚ್.ರಾಮಯ್ಯ.
ಉತ್ತರ: ವಿಶ್ವೇಶ್ವರಯ್ಯನವರು ಬೆಂಗಳೂರಿನ ವೇಸ್ಲಿಯನ್ ಪೌಢಶಾಲೆ ಯಲ್ಲಿ ಓದಿದರು.
ಉತ್ತರ: ವಿಶ್ವೇಶ್ವರಯ್ಯನವರು ವ್ಯಾಸಂಗ ಮಾಡಿದ್ದು ಪೂನಾದ ಎಂಜಿನಿಯರಿಂಗ್ ಕಾಲೇಜಿನಲ್ಲಿ.
ವಿಶ್ವೇಶ್ವರಯ್ಯನವರು ಡಿಪ್ಲೋಮೊ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಪಡೆದ ಬಹುಮಾನ ಜೇಮ್ಸ್ ಬರ್ಕ್ಲಿ.
ಉತ್ತರ: ವಿಶ್ವೇಶ್ವರಯ್ಯನವರು ವಿದ್ಯಾಭ್ಯಾಸ ಮುಗಿಸಿ ಮೊದಲು ಪ್ರಾರಂಭಿಸಿದ ಸೇವೆ ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ ಆಗಿ ಕಾರ್ಯನಿರ್ವಹಿಸಿದರು.
ಉತ್ತರ: ವಿಶ್ವೇಶ್ವರಯ್ಯನವರನ್ನು ಮುಕ್ತಕಂಠದಿ0ದ ಹೊಗಳಿದ ಮುಂಬೈ ಗರ್ವನರ್ ಲಾರ್ಡ ಸಂಡ್ ಹರ್ಸ್ಟ.
ಉತ್ತರ: ಮುಂಬೈ ಪ್ರಾಂತದ ಸ್ಯಾನಿಟರಿ ಎಂಜಿನಿಯರ್ ಆಗಿ ನೇಮಕವಾದ ಪ್ರಥಮ ಭಾರತೀಯ ವಿಶ್ವೇಶ್ವರಯ್ಯನವರು
ಉತ್ತರ: ಹೈದರಾಬಾದ್ ನಗರಕ್ಕೆ ಅಪಾರ ನಷ್ಟ ಉಂಟು ಮಾಡುತ್ತಿದ್ದ ನದಿಗಳು ಈಸಿ ಮತ್ತು ಮೂಸಿ
ಉತ್ತರ: ವಿಶ್ವೇಶ್ವರಯ್ಯನವರನ್ನು ನಾಲ್ವಡಿಕೃಷ್ಣರಾಜ ಒಡೆಯರು ದಿವಾನರನ್ನಾಗಿ ನೇಮಿಸಿದವರು
ಉತ್ತರ: ವಿಶ್ವೇಶ್ವರಯ್ಯನವರು ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದು ನಂಬಿದ್ದರು
ಉತ್ತರ: ವಿಶ್ವೇಶ್ವರಯ್ಯನವರು ತಾಂತ್ರಿಕ ಮತ್ತು ವೃತ್ತಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು.
ಉತ್ತರ: ನಾಲ್ವಡಿ ಕೃಷ್ಣರಾಜ ಒಡೆಯರ ತಾಯಿಯ ಹೆಸರು ‘ಮಹಾರಾಣಿ ವಾಣಿವಿಲಾಸ’
ಉತ್ತರ: ವಿಶ್ವೇಶ್ವರಯ್ಯನವರಿಗೆ ವಿದ್ಯಾರ್ಥಿವೇತನ ನೀಡಿದ ಮೈಸುರಿನ ದಿವಾನರು ‘ಸಿ, ರಂಗಾಚಾರ್ಲು’
ಉತ್ತರ: ಕ್ರಿಸ್ತ ಶಕ 1913 ರಲ್ಲಿ ವಿಶ್ವೇನವರು ಮೈಸುರು ಬ್ಯಾಂಕ ಸ್ಥಾಪಿಸಿದರು.
ಉತ್ತರ: ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ‘ಸರ್’ ಪದವಿಯನ್ನು ನೀಡಿ ಗೌರವಿಸಿತು.
ಉತ್ತರ: ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ “ಎಂಜನಿಯರ‍್ಸ್ ದಿನಾಚರಣೆ” ಯನ್ನು ಮಾಡಲಾಗುತ್ತಿದೆ.
ಉತ್ತರ: ವಿಶ್ವೇಶ್ವರಯ್ಯನವರ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನ ನೀಡಿದವರು ಸಿ ರಂಗಾಚಾರ್ಲು
ಉತ್ತರ: ಎಂಜಿನಿಯರಿಂಗ್ ಡಿಪ್ಲೋಮಾ ಶಿಕ್ಷಣದಲ್ಲಿ ವಿಶ್ವೇಶ್ವರಯ್ಯನವರು ಜೇಮ್ಸ ಬರ್ಕ್ಲಿ ಬಹುಮಾನ ಪಡೆದರು.
ಉತ್ತರ: ವಿಶ್ವೇಶ್ವರಯ್ಯನವರು ವಿದ್ಯಾಭ್ಯಾಸ ಮುಗಿಸಿ ಮೊದಲು ಲೋಕೋಪಯೋಗಿ ಇಂಜಿನಿಯರ್ ಕೆಲಸ/ಸೇವೆಗೆ `ಸೇರಿದರು
ಉತ್ತರ: ಪಂಜ್ರಾ ನದಿಯ ನೀರಾವರಿ ಕಾಲುವೆಗೆ ತೂಬು ಮೇಲ್ಗಾಲುವೆಯನ್ನು ನಿರ್ಮಿಸುವ ಕಾರ್ಯದಲ್ಲಿ ಯಶಸ್ವಿ ಗಳಿಸಿ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು.
ಉತ್ತರ: ವಿಶ್ವೇಶ್ವರಯ್ಯನವರು ಸ್ವ;ಯಂ ಚಾಲಿತಬಾಗಿಲನ್ನು ಮೊದಲು ಅಳವಡಿಸಿದ್ದು ಪೀಪ್ ಜಲಾಶಯ
ಉತ್ತರ: ಮುಂಬೈ ಪ್ರಾಂತದ ಸ್ಯಾನಿಟರಿ ಎಂಜಿನಿಯರ್ ಆಗಿ ನೇಮಕವಾದ ಪ್ರಥಮ ಭಾರತೀಯ ವಿಶ್ವೇಶ್ವರಯ್ಯನವರು
ಉತ್ತರ: ಹೈದ್ರಾಬಾದ್ ನಗರಕ್ಕೆ ಅಪಾರ ನಷ್ಟ ಉಂಟುಮಾಡುತ್ತಿದ್ದ ನದಿಗಳು ಈಸಿ ಮತ್ತು ಮೂಸಿ
ಉತ್ತರ: ಪ್ರಾಥಮಿಕ ಶಿಕ್ಷಣ ನಿಬಂಧನೆ ಯನ್ನು ಜಾರಿಗೆ ತಂದರು.
ಉತ್ತರ: ಬೆಂಗಳೂರು –ಮೆಕಾನಿಕಲ್ ಎಂಜಿನಿಯರಿಂಗ್ ಶಾಲೆ ಮತ್ತು ಮೈಸೂರು ನಗರಗಳಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ ಗಳನ್ನು ಸ್ಥಾಪಿಸಿದರು
ಉತ್ತರ: ಮಹಿಳಾಶಿಕ್ಷಣಕ್ಕಾಗಿ ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಶಾಲೆ ?
ಉತ್ತರ: ವಿಶ್ವೇಶ್ವರಯ್ಯನವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು
ಉತ್ತರ: ನಾಲ್ವಡಿ ಕೃಷ್ಣರಾಜ ಒಡೆಯರು 1895 ರಲ್ಲಿ ಪಟ್ಟಾಭಿಷಿಕ್ತರಾದರು.
ಉತ್ತರ: ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ಬದ್ಧರಾದರು.
ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )
ಉತ್ತರ: ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ
1. ಗ್ರಾಮ ನಿರ್ಮಲೀಕರಣ
2. ವೈದ್ಯ ಸಹಾಯ
3.ವಿದ್ಯಾ ಪ್ರಚಾರ
4.ನೀರಿನ ಸೌಕರ್ಯ
5. ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು.
ಉತ್ತರ: ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ 1900ರಲ್ಲಿಯೇ ಶಿವನಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಉತ್ಪಾದನಾ ಕೇಂದ್ರ ಪ್ರಾರಂಭವಾಯಿತು.
ಇದು ಭಾರತ ಮಾತ್ರವಲ್ಲ ,ಏಷ್ಯಾ ಖಂಡದಲ್ಲೇ ಮೊದಲ ಜಲವಿದ್ಯುತ್ ಯೋಜನೆ.
1907ರಲ್ಲಿ ವಾಣಿ ವಿಲಾಸ ಸಾಗರ ( ಮಾರಿಕಣಿವೆ) ಕಟ್ಟಲ್ಪಟ್ಟಿತು.
1911ರಲ್ಲಿ ಕೃಷ್ಣ ರಾಜ ಸಾಗರ ಇವರ ಬೃಹತ್ ಕೊಡುಗೆ.
ಉತ್ತರ: ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು “ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಛ ಪರಿಹಾರ. ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆ ಜನ್ಮಸಿದ್ಧ ಹಕ್ಕಾಗಬೇಕು” ಎಂದು ಹೇಳಿದ್ದಾರೆ.
ಉತ್ತರ: ನೆಹರೂ ಅವರು ಸರ್.ಎಂ.ವಿಶ್ವೇಶ್ವರಯ್ಯ ಅವರ ಶತಮಾನೋತ್ಸವ ಸಮಾರಂಭದಲ್ಲಿ ವಿಶ್ವೇಶ್ವರಯ್ಯ ಅವರನ್ನು ಕುರಿತು “ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರು ಎಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹು ದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ” ಎಂದು ಹೇಳಿದ್ದಾರೆ.
ಉತ್ತರ: ವಿಶ್ವೇಶ್ವರಯ್ಯ ಅವರು ಕ್ರಿ.ಶ. 1913ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು.
ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳು ರಚಿತಗೊಂಡವು.
ಸಾರ್ವಜನಿಕ ಜೀವವಿಮಾ ಯೋಜನೆ ಜಾರಿಗೆ ತಂದರು.
ರೈತರಿಗೆ ಹಾಗೂ ಕರಕುಶಲ ಕೆಲಸಗಾರರಿಗೆ ಸಾಲದ ಸೌಲಭ್ಯ ನೀಡಲು ಪ್ರಾಂತೀಯ ಸಹಕಾರಿ ಬ್ಯಾಂಕ್ಗಳನ್ನು ಸ್ಥಾಪಿಸಿದರು.
ರಾಜ್ಯದ ಆಸ್ತಿಯನ್ನು ಹೆಚ್ಚಿಸಿ ಆದಾಯ ತರುವುದರ ಮೂಲಕ ಅಭಿವೃದ್ಧಿ ಕಾರ್ಯಗಳ ಪ್ರಭಾವವನ್ನು ಅಳೆಯಲು ಅನುಕೂಲವಾಗುವಂತೆ ಆಯವ್ಯಯದಲ್ಲಿ ಹೊಸ ದೃಷ್ಟಿಕೋನವನ್ನು ಕಂಡುಕೊಂಡರು.
ಉತ್ತರ: 1907ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ನ್ಯಾಯವಿದಾಯಕ ಸಭೆಯನ್ನು ಸ್ಥಾಪಿಸಿದರು.
ಈ ಸಭೆ 50 ಜನ ಸದಸ್ಯರನ್ನು ಹೊಂದಿತ್ತು.
ಇದರಲ್ಲಿ ಜನರಿಂದ ನೇರವಾಗಿ 22ಜನ ಸದಸ್ಯರು ಆಯ್ಕೆಯಾಗುತ್ತಿದ್ದರು.
ಮೇಲ್ಮನೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನ್ಯಾಯವಿಧಾಯಕ ಸಭೆ ಬೆಂಗಳೂರಿನಲ್ಲಿ ಜೂನ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಸಮಾವೇಶಗೊಳ್ಳುತ್ತಿತ್ತು.
ಪ್ರಜಾಪ್ರತಿನಿಧಿ ಸಭೆಯಲ್ಲಿ ಮಂಡಿಸಿದ ಎಲ್ಲ ವಿಷಯಗಳನ್ನು ವಿಮರ್ಶಿಸುವ ಅಧಿಕಾರ ಈ ಸಭೆಗೆ ಇತ್ತು.
ಯಾವುದೆ ಕಾನೂನನ್ನು ಜಾರಿಗೊಳಿಸಲು ನ್ಯಾಯವಿಧಾಯಕ ಸಭೆಯ ಅನುಮತಿ ಅಗತ್ಯವಾಗಿತ್ತು.
ಇದಕ್ಕೆ ಸರ್ಕಾರದ ಖರ್ಚುಗಳನ್ನು ಕಡಿಮೆ ಮಾಡುವ ಅಧಿಕಾರ ಸಹ ಇದ್ದಿತ್ತು.
ಉತ್ತರ: ಕ್ರಮನಿಷ್ಠತೆ, ಏನನ್ನಾದರು ಸಾಧಿಸಬೆಕೆಂಬ ದೃಢನಿರ್ಧಾರ, ಅದಕ್ಕೆ ತಕ್ಕಂತೆ ಪ್ರತಿಭೆ ಮತ್ತು ಮನೋಸ್ಥೈರ್ಯವನ್ನು ಹೊಂದಿರುವ
ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ನಡೆಯಿತು.
ಬೆಂಗಳೂರಿನ ವೆಸ್ಲೀಯನ್ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು, ಸೆ
ಂಟ್ರಲ್ ಕಾಲೇಜಿನಲ್ಲಿ ಎರಡು ವರ್ಷಗಳ ಇಂಟರ್,ಮೀಡಿಯಟ್ ಮತ್ತು ಮೂರು ವರ್ಷಗಳ ಬಿ.ಎ.ಪದವಿ ಶಿಕ್ಷಣವನ್ನು ಪಡೆದರು.
ಮೈಸೂರಿನ ದಿವಾನರಾದ ಸಿ.ರಂಗಾಚಾರ್ಲು ಅವರಿಂದ ವಿದ್ಯಾರ್ಥಿವೇತನ ಸೌಲಭ್ಯ ಪಡೆದು ಪೂನಾದ ಎಂಜನಿಯರಿಂಗ ಕಾಲೇಜಿನಲ್ಲಿ ಡಿಪ್ಲೋಮಾ ಶಿಕ್ಷಣವನ್ನು ಪ್ರಥಮ ಸ್ಥಾನದಲ್ಲಿ ಪಡೆದುದಲ್ಲದೆ ಜೇಮ್ಸ ಬರ್ಕ್ಲಿ ಬಹುಮಾನಕ್ಕೂ ಪಾತ್ರರಾದರು.
ಉತ್ತರ: ವಿಶ್ವೇಶ್ವರಯ್ಯನವರು ಪೂನಾದ ಮುಥಾ ಕಾಲುವಿಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಶಯಕ್ಕೆ ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸುವ ಮೂಲಕ ಯಶಸ್ವಿಯಾದರು. ಸ್ವಯಂ ಚಾಲಿತ ಬಾಗಿಲುಗಳ ಅನ್ವೇಷಣೆ ಅವರ ಸಾಧನೆಯ ಕಿರಿಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು. ಇದನ್ನೆ ಮುಂದೆ ಗ್ವಾಲಿಯರ್ನ ತಿಗ್ರ ಜಲಾಶಯಕ್ಕೂ ಮೈಸೂರಿನ ಕೃಷ್ಣರಾಜಸಾಗರ ( ಮಂಡ್ಯಜಿಲ್ಲೆಯ) ಜಲಾಶಯಕ್ಕೂ ಅಳವಡಿಸಲಾಯಿತು.
ಉತ್ತರ: ಹೈದ್ರಬಾದ ನಗರಕ್ಕೆ ಈಸಿ ಮತ್ತು ಮೂಸಿ ನದಿಗಳ ಪ್ರವಾಹದಿಂದ ಅಪಾರ ನಷ್ಟ ಸಂಭವಿಸುತ್ತಿತ್ತು. ಅದನ್ನು ತಡೆಯಲು ಎರಡು ನದಿಗಳಿಗೂ ಪ್ರತ್ಯೇಕ ಜಲಾಶಯ ನಿರ್ಮಿಸುವ ಮೂಲಕ ಸಮಸ್ಯೆಯನ್ನು ವಿಶ್ವೇಶ್ವರಯ್ಯನವರು ಬಗೆಹರಿಸಿದರು. ಅವರು ಹೈದ್ರಬಾದ ನಗರವನ್ನು ಭಾರತದ ಸಂಯೋಜಿತ ನಗರಗಳ ಸಾಲಿಗೆ ಸೇರ್ಪಡೆಯಾಗುವಂತೆ ಮಾಡಿದರು.
ಉತ್ತರ: ಕೈಗಾರೀಕರಣ ಇಲ್ಲವೆ ಅವನತಿ ಎಂದು ಘೋಷಣೆ ಮಾಡಿದ ವಿಶ್ವೇಶ್ವರಯ್ಯನವರು ಭದ್ರವತಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯೊಂದನ್ನು ಸ್ಥಾಪಿಸಿದರು. ಹಂಚಿನ ಕಾರ್ಖಾನೆ, ಮೂಳೆ ಮತ್ತು ಗೊಬ್ಬರ ತಯಾರಿಕಾ ಸ್ಥಾವರ, ಸಕ್ಕರೆ ಕಾರ್ಖಾನೆ, ಔಷಧಿ ತಯಾರಿಕಾ ಘಟಕ, ಗಂಧದ ಎಣ್ಣೆ, ಬೆಂಕಿಕಡ್ಡಿ ಹಾಗೂ ಕಾಗದದ ಕಾರ್ಖಾನೆಗಳ ಸ್ಥಾಪನೆ, ಸೋಪು ಮತ್ತು ಲೋಹ ತಯಾರಿಕೆ, ಕಲೆ ಮತ್ತು ಕರಕುಶಲತೆ ಡಿಪೋ, ಕೃಷ್ಣರಾಜೇಂದ್ರ ಬಟ್ಟೆಗಿರಣಿ, ಕಾಗದ ತಿರುಳು, ರಟ್ಟು, ಪೆನ್ಸಿಲ್, ಬೆಂಕಿಕಡ್ಡಿ ಮತ್ತು ಪೀಠೋಪಕರಣಗಳ ತಯಾರಿಕಾ ಘಟಕಗಳನ್ನು ಪ್ರಾರಂಭಿಸಿ ಕೈಗಾರೀಕರಣಕ್ಕೆ ಕೊಡುಗೆ ನೀಡಿದ್ದಾರೆ.
ಉತ್ತರ: ಖಾನ್ ದೇಶ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಹರಿಯುತ್ತಿದ್ದ ಪಂಜ್ರಾ ನದಿಯ ನೀರಾವರಿ ಕಾಲುವೆಗೆ ತೂಬು ಮೇಲ್ಗಾಲುವೆಯನ್ನು ನಿರ್ಮಿಸುವ ಕಾರ್ಯದಲ್ಲಿ ಯಶಸ್ಸುಗಳಿಸಿ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು. ಮುಂಬೈ ಸರ್ಕಾರದ ಸೂಚನೆಯ ಮೇರೆಗೆ ಸಿಂಧ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದರು. ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಲಾರ್ಡ್ ಸಂಡ್ ಹರ್ಸ್ಟ್ ಅವರು ಇವರನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದರು.
ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ (3 ಅಂಕ)
ಆಯ್ಕೆ :- ಈ ವಾಕ್ಯವನ್ನು ಭಾಗ್ಯಶಿಲ್ಷಿಗಳು ಎಂಬ ಪಾಠದಲ್ಲಿ ಸಮಿತಿ ಸಂಗ್ರಹಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂಬ ಭಾಗ ದಿಂದ ಆರಿಸಲಾಗಿದೆ.
ಸಂದರ್ಭ :-ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆಗಳನ್ನು ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.ನಾಲ್ವಡಿ ಕೃಷ್ಣರಾಜ ಒಡೆಯರ ಸ್ಥಳೀಯ ಸಂಸ್ಥೆಗಳನ್ನು ರಚಿಸಿ ಆಡಳೀತ ವಿಕೇಂದ್ರೀಕರಣ ಮಾಡಿದರು. ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವನ್ನಾಗಿ ರೂಪಿಸಿದರು. “ಸಾಮಾಜಿಕ ಕಾನೂನುಗಳ ಹರಿಕಾರ” ಎಂದು ಹೆಸರಾದರು. ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಗೆ ಒತ್ತುನೀಡಿದರು.
ಸ್ವಾರಸ್ಯ :-ಸ್ವತಃ ರಾಜರಾಗಿ ಕೇಂದ್ರೀಕೃತ ವ್ಯವಸ್ಥ್ಯಗೆ ಬದಲಾಗಿ ಆಡಳಿತದಲ್ಲಿ ವಿಕೇಂದ್ರೀಕೃತ ವ್ಯವಸ್ಥೆ ತಂದು ಸಾಮಾಜಿಕ ಕಾನೂನುಗಳನ್ನು ಜಾರಿಗೊಳಿಸಿದ ಒಡೆಯರಿಗೆ ಈ ಬಿರುದು ನೀಡಿರುವುದು ಒಪ್ಪುವಂತಾದ್ದಾಗಿದೆ.
ಆಯ್ಕೆ :- ಈ ವಾಕ್ಯವನ್ನು ಶ್ರೀ ಡಿ.ಎಸ್. ಜಯಪ್ಪಗೌಡ ಅವರು ರಚಿಸಿರುವ “ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು” ಎಂಬ ಕೃತಿಯಿಂದ ಆಯ್ದ“ಭಾಗ್ಯಶಿಲ್ಪಿಗಳು” ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ :- ವಿಶ್ವೇಶ್ವರಯ್ಯ ಅವರು ಪೂನಾದ ಮುಥಾ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕೆ ಸ್ವತಃ ತಾವೇ ಅನ್ವೇಷಣೆ ಮಾಡಿದ ಸ್ವಯಂಚಾಲಿತ ಬಾಗಿಲುಗಳನ್ನು ಯಶಸ್ವಿಯಾಗಿ ಅಳವಡಿಸಿದರು ಎಂದು ಹೇಳುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ:-ವಿಶ್ವೇಶ್ವರಯ್ಯ ಅವರಲ್ಲಿದ್ದ ಬುದ್ಧಿಶಕ್ತಿ ಹಾಗೂ ಅನ್ವೇಷಣಾ ಸಾಮರ್ಥ್ಯವನ್ನು ಈ ಮಾತಿನಮೂಲಕಸ್ವಾರಸ್ಯಪೂರ್ಣವಾಗಿಅಭಿವ್ಯಕ್ತಪಡಿಸಲಾಗಿದೆ.
ಆಯ್ಕೆ :- ಈ ವಾಕ್ಯವನ್ನು ಶ್ರೀ ಡಿ.ಎಸ್. ಜಯಪ್ಪಗೌಡ ಅವರು ರಚಿಸಿರುವ “ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು” ಎಂಬ ಕೃತಿಯಿಂದ ಆಯ್ದ“ಭಾಗ್ಯಶಿಲ್ಪಿಗಳು” ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ :- ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಾರಿ ಮಾಡಿದ ಸಾಮಾಜಿಕ ಕಾನೂನುಗಳನ್ನು ತಿಳಿಸುವ ಸಂದರ್ಭದಲ್ಲಿ 1927 ರಲ್ಲಿ ಮೊಟ್ಟಮೊದಲ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕನ್ನು ನೀಡಿದರು.ಎಂದು ಲೇಖಕರು ಉಲ್ಲೇಖಿಸಿದ್ದಾರೆ.ಇಷ್ಟೇ ಅಲ್ಲದೆ ದೇವದಾಸಿ ಪದ್ಧತಿ ನಿಷೇಧ , ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆ; ವಿಧವಾ ವಿವಾಹ ಕಾಯ್ದೆ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿಗೊಳಿಸಿ ಸ್ತ್ರೀಯರಿಗೆ ಬಲತುಂಬಿದರು.
ಸ್ವಾರಸ್ಯ :- ಸ್ತ್ರೀಯರಿಗೆ ಸರಿಯಾದ ಸ್ಥಾನಮಾನಗಳಿಲ್ಲದ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಅವರಿಗೆ ಸಾಮಾಜಿಕ ನ್ಯಾಯ ದೊರಕಿಸಿದ್ದು ಸ್ವಾರಸ್ಯ ಪೂರ್ಣವಾಗಿ ವ್ಯಕ್ತಗೊಂಡಿದೆ.
ಉತ್ತರ:
ಲೇಖಕರ ಪರಿಚಯ(3 ಅಂಕ)
ಡಿ. ಎಸ್. ಜಯಪ್ಪಗೌಡ : ಲೇಖಕರಾದ ಶ್ರೀ ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ ಅವರು
ಕ್ರಿ. ಶ. 1947ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿಯಲ್ಲಿ ಜನಿಸಿದರು.
ಶ್ರೀಯುತರು ದಿವಾನ್ ಸರ್.ಎಂ.ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು, ಕರ್ನಾಟಕ ಗ್ರಾಮೀಣ ಸಂಸ್ಥೆಗಳು, ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಧಾರವಾಡ ಕರ್ನಾಟಕ ಸಂಘದ ಸಂಶೋಧನಾ ಬಹುಮಾನವನ್ನು ನೀಡಿ ಗೌರವಿಸಲಾಗಿದೆ.
ಎಂಟು-ಹತ್ತು ವಾಕ್ಯದಲ್ಲಿ ಉತ್ತರ ಬರೆಯಿರಿ(4 ಅಂಕ)
* ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ದರಾಗಿದ್ದರು.
* ಇವರ ಕಾಲದಲ್ಲಿ ಸ್ಥಳಿಯ ಸಂಸ್ಥೆಗಳನ್ನು ರಚಿಸಿ ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟರು.
* ಗ್ರಾಮ ಪಂಚಾಯಿತಿ ಹಾಗೂ ನಗರ ಪಾಲಿಕೆಗಳು ಕಾರ್ಯನಿರ್ವಹಿಸಲು ಆರಂಭ ಮಾಡಿದವು.
* ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಗೆ ಒತ್ತು ನೀಡಿದರು.
* ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮೈಸೂರು ಬ್ಯಾಂಕ್ ಆರಂಭಿಸಿದರು.
* ರೈಲು ಮಾರ್ಗ ಹಾಗೂ ರಸ್ತೆ ಮಾರ್ಗಗಳನ್ನು ಮೈಸೂರು –ಅರಸೀಕೆರೆ, ಬೆಂಗಳೂರು ಇತ್ಯಾದಿ ಪ್ರದೇಶಗಳಿಗೆ ವಿಸ್ತರಿಸಲಾಯಿತು.
* ಏಷ್ಯಾ ಖಂಡದಲ್ಲಿಯೇ ಮೊದಲ ಜಲ ವಿದ್ಯತ್ ಯೋಜನೆಯನ್ನು ಶಿವನಸಮುದ್ರದ ಬಳಿ ಪ್ರಾರಂಭಿಸಿದರು.
* 1907 ರಲ್ಲಿ ವಾಣಿವಿಲಾಸ ಸಾಗರ ಹಾಗೂ 1911 ರಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣ .
* ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಆರಂಭಿಸಲಾಯಿತು.
* ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ, 1906ರಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿ - ಹೀಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವು ಕಾಣದ ಅಭಿವೃದ್ಧಿಯನ್ನು ಮೈಸೂರು ರಾಜ್ಯವು ಕಂಡಿದುದರಿಂದ ಮೈಸೂರು ಸಂಸ್ಥಾನಕ್ಕೆ `ಮಾದರಿ ಮೈಸೂರು ರಾಜ್ಯ` ಹೆಗ್ಗಳಿಕೆಯನ್ನು ಪಡೆಯಿತು.
* ಇಂಜೀನಿಯರ್ ಆಗಿ ಸಲ್ಲಿಸಿದ ಸೇವೆ: ಈಸಿ ಮತ್ತು ಮೂಸಿ ನದಿಗಳಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಿ, ಹೈದರಾಬಾದ್ ನಗರವನ್ನು ಪ್ರವಾಹದಿಂದ ರಕ್ಷಿಸಿದರು.
* ಖಾನ್ ದೇಶ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಹರಿಯುತ್ತಿದ್ದ ಪಂಜ್ರಾ ನದಿಯ ನೀರಾವರಿ ಕಾಲುವೆಗೆ ತೂಬು ಮೇಲ್ಗಾಲುವೆಯನ್ನು ನಿರ್ಮಿಸಿದರು.
* ಮುಂಬಾಯಿ ಸರ್ಕಾರದ ಸೂಚನೆಯ ಮೇರೆಗೆ ಸಿಂಧ್ ಪ್ರಾಂತ್ಯದ ಸುಕ್ಕೂರು ಕುಡಿಯುವ ನೀರಿನ ಯೋಜನೆಯನ್ನು ಪೂರೈಸಿದರು.
* ಪೂನಾದ ಮುಥಾ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕ್ಕೆ ಪ್ರಪಥಮ ಬಾರಿಗೆ ಸ್ವಯಂಚಾಲಿತ ಬಾಗಿಲನ್ನು ಅಳವಡಿಸಿದರು.
* ಇದನ್ನೆ ಗ್ವಾಲಿಯರ್ನ ತಿಗ್ರ ಹಾಗೂ ಕೃಷ್ಣರಾಜ ಸಾಗರ ಜಲಾಶಯಕ್ಕೂ ಅಳವಡಿಸಲಾಯಿತು.
* ದಿವಾನರಾಗಿ ಸಲ್ಲಿಸಿದ ಸೇವೆ: ಮೈಸೂರಿನ ಹೊಸ ಅರಮನೆ ವಿಸ್ತರಣೆ, ಸಿ. ರಂಗಚಾರ್ಯಲು ಸ್ಮಾರಕ ಪುರಭವನ, ಕೃಷರಾಜೇಂದ್ರ ಆಸ್ಪತ್ರೆ, ಲಲಿತಮಹಲ್ ಅರಮನೆಗೆ ತಳಹದಿ, ಹಾಗೂ ಕಛೇರಿ ಸಮುಚ್ಛಗಳು ಇವರ ಕಾಲದಲ್ಲಿಯೇ ನಿರ್ಮಾಣಗೊಂಡವು.
* ಆಸ್ಪತ್ರಗಳ ಸ್ಥಾಪನೆ, ಸಾಂಕ್ರಾಮಿಕ ರೋಗಗಳನ್ನು ತಡಗಟ್ಟುವ ಯೋಜನೆಗಳನ್ನು ರೂಪಿಸಿದರು.
* ಇತ್ಯಾದಿಗಳು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ: ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಛ ಪರಿಹಾರವೆಂದು ನಂಬಿದ್ದರು.
* 1913ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು.
* ಪ್ರೌಢ ಶಿಕ್ಷಣ ಶಾಲೆಗಳು, ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿದ್ದ ಪ್ರೌಢಶಿಕ್ಷಣ ಶಾಲೆಗಳನ್ನು ಬದಲಿಸಿ ಮೈಸೂರಿನ ವ್ಯಾಪ್ತಿಗೆ ತಂದರು.
* ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ. ಇವರ ಕಾಲದಲ್ಲಿ ತಾಂತ್ರಿಕ ಶಿಕ್ಷಣ, ಮಹಿಳಾ ಶಿಕ್ಷಣ, ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಆಧ್ಯತೆ, ವಿದ್ಯಾರ್ಥಿ ವೇತನ ನೀಡುವುದರ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದರು.
ಉತ್ತರ:* ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ‘ಪ್ರಜಾಪ್ರತಿನಿಧಿಸಭೆ’ ಯು ನೂತನ ರೂಪವನ್ನು ಪಡೆದು, ನಿಜವಾದ ಜನಪ್ರತಿನಿದಿ ಸಭೆಯಾಗಿ ಪರಿವರ್ತನೆಯಾಯಿತು.
* ಅದಕ್ಕಾಗಿ 1923 ರಲ್ಲಿ ಹೊಸ ಕಾನೂನೊಂದನ್ನು ಜಾರಿಗೆತಂದು, ಪ್ರಜಾಪ್ರತಿನಿದಿ ಸಭೆಯನ್ನು ಶಾಸನಬದ್ಧ ಸಂಸ್ಥೆಯನ್ನಾಗಿ ಮಾರ್ಪಡಿಸಿದರು.
* ಇದು ಪ್ರಜಾತಂತ್ರದ ದೃಷ್ಟಿಯಿಂದ ಭಾರತದಲ್ಲಿಯೇ ಮಾದರಿಯಾದ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿತು.
* ಪ್ರಜಾಪ್ರತಿನಿಧಿ ಸಭೆಯು ವರ್ಷಕ್ಕೆ ಎರಡು ಬಾರಿ (1.ಜೂನ್-ಮಹಾರಾಜರ ವರ್ಧಂತಿ, 2.ಅಕ್ಟೋಬರ್-ದಸರಾಮಹೋತ್ಸವ) ಸಮಾವೇಶಗೊಂಡು ಕಲಾಪಗಳನ್ನು ನಡೆಸುತ್ತಿತ್ತು.
* ಅಲ್ಲಿ ವಾರ್ಷಿಕ ಆಯವ್ಯಯ ಪರಿಶೀಲನೆ, ಪ್ರಶ್ನೋತ್ತರಗಳು, ಠರಾವುಗಳನ್ನು ಮಂಡಿಸುವುದು ಮುಂತಾದ ಸಂಸದೀಯ ಮಾದರಿಯ ನಡವಳಿಕೆಗಳು ನಡೆಯುತ್ತಿದ್ದವು.
* ಪ್ರತಿನಿಧಿ ಸಭೆಯಲ್ಲಿದ್ದ 275 ಸದಸ್ಯರಲ್ಲಿ ಹೆಚ್ಚು ಪ್ರತಿನಿಧಿಗಳು ಜನರಿಂದ ಆಯ್ಕೆಯಾದವರಾಗಿದ್ದರು.
* ನ್ಯಾಯ ವಿಧಾಯಕ ಸಭೆ : ನಾಲ್ವಡಿ ಕೃಷ್ಣರಾಜರು 1907 ರಲ್ಲಿ ನ್ಯಾಯ ವಿಧಾಯಕ ಸಭೆಯನ್ನೂ ಸಹಸ್ಥಾಪಿಸಿದರು.
* ಇದರ ಸದಸ್ಯರ ಸಂಖ್ಯೆ 50. ಇದರಲ್ಲಿ ಜನರಿಂದ ಆಯ್ಕೆಯಾದವರು 22 ಸದಸ್ಯರು.
* ಮೇಲ್ಮನೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆ, ಜೂನ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಸಮಾವೇಶಗೊಳ್ಳುತ್ತಿತ್ತು.
* ಪ್ರಜಾಪ್ರತಿನಿಧಿ ಸಭೆಯಲ್ಲಿ ಮಂಡಿಸಿದ ಎಲ್ಲ ವಿಷಯಗಳನ್ನೂ ಸಹ ವಿರ್ಮಶಿಸುವ ಅಧಿಕಾರ ಆ ಸಭೆಗೆ ಇದ್ದಿತು.
* ಮುಖ್ಯವಾಗಿ ಯಾವುದೇ ಕಾನೂನನ್ನು ಜಾರಿಗೊಳಿಸಲು ಆ ಸಭೆಯ ಅನುಮತಿ ಅಗತ್ಯವಾಗಿತ್ತು.
* ಆ ಸಭೆಗೆ ಸರ್ಕಾರದ ಖರ್ಚುಗಳನ್ನು ಕಡಿಮೆ ಮಾಡುವ ಅಧಿಕಾರ ಸಹ ಇದ್ದಿತು.
ಉತ್ತರ:* ಸಾಹಿತ್ಯ ಸೃಷ್ಟಿಯನ್ನು ಮಾಡಿದ್ದಕ್ಕೆ ನಿದರ್ಶನ ಅವರ ‘ರಿಕನ್ಸ್ಟ್ರಕ್ಟಿಂಗ್ ಇಂಡಿಯಾ’, ‘ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯ’
* ಹಾಗೂ ಆತ್ಮಚರಿತ್ರೆ‘ ಮೆಮೋರೀಸ್ ಆಫ್ ಮೈ ವರ್ಕಿಂಗ್ಲೈಫ್ ’, ‘ನೇಷನ್ ಬಿಲ್ಡಿಂಗ್ ಪ್ಲಾನ್ ಫಾರ್ ಇಂಡಿಯಾ’ ಕೃತಿಗಳು.
* ಸೆಪ್ಟೆಂಬರ್ 15 , 1960 ರಂದು ಶತಮಾನೋತ್ಸವ ಅಭಿನಂದನೆ ‘ಸರ್ಎಂ.ವಿ.’ ಅಭಿನಂದನಾ ಗ್ರಂಥವನ್ನು ಪ್ರಕಟಿಸಲಾಯಿತು.
* ಗೊಮ್ಮಟ ವ್ಯಕ್ತಿತ್ವದ ದಾರ್ಶನಿಕ ನೇತಾರರಾಗಿ ‘ಆಡು ಮುಟ್ಟದ ಸೊಪ್ಪಿಲ್ಲ ’ಎಂಬ ಗಾದೆಮಾತಿನಂತೆಬೆಳೆದ ವಿಶ್ವೇಶ್ವರಯ್ಯ ಅವರಿಗೆ ಬ್ರಿಟಿಷ್ ಸರ್ಕಾರ ‘ಸರ್’ ಪದವಿಯನ್ನು ನೀಡಿ ಗೌರವಿಸಿತು.
* ಅವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ದೇಶದ ಅತ್ಯುನ್ನತ ‘ಭಾರತರತ್ನ’ ಪ್ರಶಸ್ತಿಯನ್ನು ಸಲ್ಲಿಸಿತು.
* ದೇಶದ ಹಲವಾರು ಪ್ರತಿಷ್ಠಿತ ಸಂಸ್ಥೆ ಹಾಗೂ ವಿಶ್ವ ವಿದ್ಯಾನಿಲಯಗಳು ಸದಸ್ಯತ್ವ ಹಾಗೂ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಿದವು.
* ಮಹಾನ್ ಆಡಳಿತಗಾರರಾದ ಇವರ ಶತಮಾನೋತ್ಸವದ ಸವಿನೆನಪಿಗಾಗಿ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು.
ಉತ್ತರ:* ವಿಶ್ವೇಶ್ವರಯ್ಯ ಅವರು ಕ್ರಿ. ಶ. 1884 ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು.
* ಖಾನ್ದೇಶ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಹರಿಯುತ್ತಿದ್ದ ಪಂಜ್ರಾ ನದಿಯ ನೀರಾವರಿ ಕಾಲುವೆಗೆ ತೂಗು ಮೇಲ್ಗಾಲುವೆಯನ್ನು ನಿರ್ಮಿಸುವ ಕಾರ್ಯದಲ್ಲಿ ಯಶಸ್ಸು ಗಳಿಸಿ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು.
* ಮುಂಬೈ ಸರ್ಕಾರದ ಸೂಚನೆಯ ಮೇರೆಗೆ ಸಿಂಧ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದರು.
* ಪೂನಾದ ಮುಥಾ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಿದರು.
* ಸ್ವಯಂಚಾಲಿತ ಬಾಗಿಲುಗಳ ಅನ್ವೇಷಣೆ ವಿಶ್ವೇಶ್ವರಯ್ಯ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು.
* ತಮ್ಮ ಕಾರ್ಯಚಟುವಟಿಕೆಗಳಿಂದ ಮೆಚ್ಚುಗೆಗೆ ಪಾತ್ರರಾದ ವಿಶ್ವೇಶ್ವರಯ್ಯ ಅವರು ಮುಂಬೈ ಪ್ರಾಂತ್ಯದ ಸ್ಯಾನಿಟರಿ ಎಂಜಿನಿಯರಾಗಿ ನೇಮಕಗೊಂಡರು.
* ಈ ಹುದ್ದೆಗೆ ನೇಮಕವಾದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಉತ್ತರ:* ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ದಿವಾನರಾಗಿ ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಠಾನಗೊಳಿಸಿದರು
* ಕಛೇರಿಯ ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಸುಧಾರಣೆ ಮಾಡಿದರು.
* ಆಡಳಿತದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತು ನೀಡಿದರು.
* ಸಂಸ್ಥಾನದಲ್ಲಿ ಸ್ಥಳೀಯ ಮಟ್ಟದಲ್ಲಿ ಕೇಂದ್ರೀಕೃತವಾಗಿದ್ದ ನ್ಯಾಯಾಂಗ ಮತ್ತು ಕಾರ್ಯಾಂಗಗಳ ಅಧಿಕಾರವನ್ನು ಪ್ರತ್ಯೇಕಗೊಳಿಸಿದರು.
* ರಾಜ್ಯ ಪ್ರವಾಸ ಮಾಡಿ ಅಜಮಾಯಿಷಿ ಕಾರ್ಯ ನಡೆಸಿದರು. ಸಮರ್ಥ ಕಾರ್ಯನಿರ್ವಹಣೆಗಾಗಿ ಸಮಿತಿಗಳನ್ನು ರಚಿಸಿದರು.
* ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿದರು.ತಾಂತ್ರಿಕ ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು.
* ಭಾಷೆ ಸಾಹಿತ್ಯ ಮತ್ತು ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಿದರು.
* ಮೈಸೂರು ಸಂಸ್ಥಾನದಲ್ಲಿ ಕೈಗಾರಿಕೆಗೆ ಅಗ್ರ ಪ್ರಾಶಸ್ಥ್ಯ ನೀಡಿದರು.
* ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಿದರು.
* ವಿಶ್ವೇಶ್ವರಯ್ಯ ಅವರು ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿದರು.
* ಕ್ರಿ.ಶ. 1913 ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು.
* ಮದ್ರಾಸ್ ವಿಶ್ವವಿದ್ಯಾನಿಲಯದ ನಿಯಂತ್ರಣಕ್ಕೆ ಒಳಪಟ್ಟಿದ್ದ ಪ್ರೌಢಶಿಕ್ಷಣ ಶಾಲೆಗಳನ್ನು ಬದಲಿಸಿ
* ಸಂಸ್ಥಾನವೇ ಪ್ರತ್ಯೇಕವಾದ ಪ್ರೌಢಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವ ಯೋಜನೆಯನ್ನು ಆರ್ಥಿಕ ಪರಿಷತ್ತಿನ ಮೂಲಕ ಜಾರಿಗೆ ತಂದರು.
* ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ ಇವರ ದೂರದೃಷ್ಟಿಯ ಮತ್ತೊಂದು ಫಲಶ್ರುತಿ.
* “ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು.ಅದು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು”
ಎಂಬುದನ್ನು ಮನಗಂಡ ಇವರು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು.
* ಬೆಂಗಳೂರಿನಲ್ಲಿ ಮೆಕಾನಿಕಲ್ ಎಂಜಿನಿಯರಿಗ್ ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಪ್ರಾರಂಭಿಸಿದರು.
* ಮಹಿಳಾ ಶಿಕ್ಷಣದ ಬಗ್ಗೆ ಸಹಾನುಭೂತಿ ಹೊಂದಿದ್ದ ಇವರು ಗೃಹಶಿಕ್ಷಣ ಶಾಲೆಗಳನ್ನು ಸ್ಥಾಪಿಸಿದರು.
* ವಿದ್ಯಾರ್ಥಿ ವೇತನವನ್ನು ಕೊಡುವ ಮೂಲಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟರು.
ಉತ್ತರ:
« BACK ಮುಂದಿನ ಅಧ್ಯಾಯ
THANK URMH-9731734068
ನಿಮ್ಮ ಕಾರ್ಯ ಶ್ಲಾಘನೀಯವಾದುದು ಸರ್
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್
ಅಳಿಸಿTq sir
ಪ್ರತ್ಯುತ್ತರಅಳಿಸಿಆಡು ಮುಟ್ಟದ ಸೊಪ್ಪಿಲ್ಲ ಈ ವಾಕ್ಯದ ಸ೦ದರ್ಭ ಭಾಗ್ಯ ಶಿಲ್ಪಿಗಳು
ಪ್ರತ್ಯುತ್ತರಅಳಿಸಿ