10-Kan ಎದೆಗೆ ಬಿದ್ದ ಅಕ್ಷರ

RMH

ಗದ್ಯ ಪಾಠ-5 ಎದೆಗೆ ಬಿದ್ದ ಅಕ್ಷರ

ಒಂದು ಅಂಕದ ಪ್ರಶ್ನೆಗಳು

ಉತ್ತರ- ಶ್ರೀ ಫ.ಗು ಹಳಕಟ್ಟಿಯವರು ‘ಶಿವಾನುಭವ ಶಬ್ದಕೋಶ’ ಪುಸ್ತಕವನ್ನು ಬರೆದರು.

ಉತ್ತರ- ಕವಿ ಸಿದ್ದಲಿಂಗಯ್ಯನವರು ದೇವನೂರು ಮಹಾದೇವ ಅವರಿಗೆ ಮನೆ ಮಂಚಮ್ಮನ ಕಥೆಯನ್ನು ಹೇಳಿದರು.

ಉತ್ತರ- ಎದೆಗೆ ಬಿದ್ದ ಅಕ್ಷರಗಳು ಮತ್ತು ಭೂಮಿಗೆ ಬಿದ್ದ ಬೀಜಗಳು ಇಂದಲ್ಲದಿದ್ದರೂ ನಾಳೆ ಫಲವನ್ನು ಕೊಟ್ಟೆ ಕೋಡುತ್ತವೆ.

ಉತ್ತರ- ತಮಗೆ ಮನೆ ಇಲ್ಲದವರು ತನಗೆ ಮನೆ ಕಟ್ಟುತ್ತಿರುವದನ್ನು ಕೇಳಿ ತನಗೆ ಮನೆಯನ್ನು ನಿರಾಕರಿಸಿ ಸಿಟ್ಟಿನಿಂದ ಅಬ್ಬರಿಸುತ್ತಾಳೆ.

ಉತ್ತರ- ಗ್ರಾಮದೇವತೆ ತನ್ನ ಮಕ್ಕಳಿಗೆ ಮನೆ ಇಲ್ಲದಿರುವದರ ಕುರಿತು ಕಳಕಳಿಯನ್ನು ವ್ಯಾಕುಲತೆಯನ್ನು ತಿಳಿಸುವದಾಗಿದೆ.

ಉತ್ತರ- ತನ್ನೆಲ್ಲ ಮಕ್ಕಳಿಗೆ ಮನೆ ಆಗುವವರೆಗೆ ತನಗೆ ಮನೆ ಬೇಡಾ ಎನ್ನುವ ಮೂಲಕ ಎಲ್ಲರ ಮೆಚ್ಚಿನ ಮನೆ ಮಂಚಮ್ಮನಾಗುತ್ತಾಳೆ.

ಉತ್ತರ- ಚಾವಣಿ ಇಲ್ಲದ ಗುಡಿಯಲ್ಲಿ ಮನೆ ಮಂಚಮ್ಮ ಪೂಜಿಸಲ್ಪಡುತ್ತಿದ್ದಾಳೆ?

ಉತ್ತರ- ಚಾವಣಿ ಇಲ್ಲದ ಗುಡಿಯಲ್ಲಿ ಬುದ್ಧನನ್ನು ಇಟ್ಟರೆ ಅವನು ದೇವರಾಗುತ್ತಾನೆ?

ಉತ್ತರ: - ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು ಎಂಬುದು ವಚನಕಾರರ ದೃಷ್ಟಿ.

ಉತ್ತರ- ಅರಿವು ಎಂಬುದು ಕ್ರೀಯೆಯ ಅನುಭವದಿಂದ ಒಡಮೂಡುತ್ತದೆ.

ಉತ್ತರ- ವಚನಕಾರರ ಪ್ರಜ್ಞೆಯೇ ಅವರ ಇಷ್ಟದೈವವಾಗಿತ್ತು.

ಉತ್ತರ- ಪ್ರಜ್ಞೆ ದೇವರು ಎಂದುಕೊಂಡರೆ ಸುಡುವ ಬೆಂಕಿಯನ್ನು ನೆತ್ತಿಯ ಮೇಲೆ ಇಟ್ಟುಕೊಂಡಂತಾಗುತ್ತದೆ.

ಉತ್ತರ- ಬೆಂಕಿಯಯಂತ ವಚನ ಸೃಷ್ಟಿಗೆ ಸಾಂತ್ವನದ ಜಾನಪದ ಕಸಿಯನ್ನು ಮಾಡಬೇಕಾಗಿದೆ.

ಉತ್ತರ- ಡಾ. ಅಶೋಕ ಪೈ ರವರು ಶಿವಮೊಗ್ಗದ ಪ್ರಖ್ಯಾತ ಮನೋವೈದ್ಯರು.

ಉತ್ತರ- ಶಿವಾನುಭವ ಶಬ್ದಕೋಶ ಫ.ಗು. ಹಳಕಟ್ಟಿಯವರ ಬರೆದ ಪುಸ್ತಕವಾಗಿದೆ.

ಉತ್ತರ- ನಾವು ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ.

ಉತ್ತರ- ನಮ್ಮ ಸಮಷ್ಟಿ ಮನಸ್ಸಿನ ಕಾರುಣ್ಯವನ್ನು ಎಚ್ಚರಿಸುತ್ತ ಜಾಗತೀಕರಣವನ್ನು ರೂಪಿಸಬೇಕಾಗಿದೆ.

ಉತ್ತರ- ಪ್ರಜ್ಞೆ ಮತ್ತು ದೇವರ ನಡುವಿನ ಇಕ್ಕಟ್ಟುಗಳ ಮಧ್ಯೆ ಒದ್ದಾಡುತ್ತಿದ್ದರು.

ಉತ್ತರ- ದೇವನೂರ ಮಹಾದೇವರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು.

ಉತ್ತರ- ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು.

ಉತ್ತರ: ಗ್ರಾಮದ ಜನರು ಮಂಚಮ್ಮ ದೇವಿಗಾಗಿ ಗುಡಿಕಟ್ಟುತ್ತಿದ್ದರು

ಉತ್ತರ: ಎಲ್ಲರಿಗೂ ಮನೆ ಆಗುವವರೆಗೂ ನನಗೂ ಮನೆ ಬೇಡಾ ಎಂದು ಮಂಚಮ್ಮದೇವಿ ಹೇಳುತ್ತಾಳೆ.

ಉತ್ತರ- ಚಾವಣಿಯಿಲ್ಲದ ಗುಡಿಯಲ್ಲಿ ಕಾರುಣ್ಯಸಮತೆಯ ಬುದ್ದನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ.ಎಂದಿದ್ದಾರೆ.

ಉತ್ತರ- ಬೆಂಕಿಯಂತ ವಚನ ಸೃಷ್ಟಿಗೆ ಸಾಂತ್ವನದ ಜಾನಪದ ಕಸಿ ಮಾಡಿ, ನಾವು ಹುಟ್ಟಬೇಕಾಗಿದೆ, ಹುಟ್ಟು ಪಡೆಯಬೇಕಾಗಿದೆ ಅನ್ನಿಸತೊಡಗಿದೆ ಎನ್ನುತ್ತಾರೆ

ಉತ್ತರ- ಮನುಷ್ಯರಲ್ಲಿರುವ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ

ಉತ್ತರ: ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ.

ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )

ಉತ್ತರ: ವಚನಕಾರರಿಗೆ ಅವರವರ ಪ್ರಜ್ಞೆಯೇದೇವರಾಗಿತ್ತು.
ಈ ಪ್ರಜ್ಞೆಯನ್ನೇ ದೇವರು ಅಂತ ಅಂದುಕೊಂಡರೆ ಸುಡುವ ಬೆಂಕಿಯನ್ನು ನೆತ್ತಿ ಮೇಲೆ ಇಟ್ಟುಕೊಂಡಂತಾಗುತ್ತದೆ.
ತಮ್ಮ ಪ್ರಜ್ಞೆಮುಂದೆ ಸುಳ್ಳು ಹೇಳಕ್ಕಾಗಲ್ಲ. ಅದೇ ಕಷ್ಟ ಆಗೋದು.
ಇತರೆ ದೇವರಿಗಾದರೆ ಯಾವುದೇ ಸುಳ್ಳು ಪಳ್ಳು ಹೇಳಿಬಿಡಬಹುದು. ಆದರೆ ಪ್ರಜ್ಞೆ ಮುಂದೆ ಇದು ನಡೆಯದು.

ಉತ್ತರ: ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ತನ್ನಷ್ಪಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ; ಅದು ಕ್ರಿಯೆಯ ಅನುಭವದಿಂದ ಒಡಮೂಡುವುದು.
ಅದು ಕೇಳಿ ತಿಳಿದಿದ್ದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ, ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು.

ಉತ್ತರ: ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಎಂದು ಹೇಳುತ್ತದೆ.
ಯಾವುದೇ ಒಂದು ಜೀವಿಗೆ ಆಗುವ ದುಃಖ-ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತಾ ಎಲ್ಲ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೇನೊ.
ಈ ಅನುಕಂಪನ ಇಡೀ ಜೀವಸಂಕುಲವನ್ನೇ ಒಂದು ಎಂದು ಹೇಳುತ್ತದೆ.

ಉತ್ತರ: ವಚನಕಾರರು ತಮ್ಮ ಪ್ರಜ್ಞೆಯನ್ನೇ ದೇವರು ಅಂತ ಅಂದು ಕೊಂಡರೆ ಸುಡುವ ಬೆಂಕಿಯನ್ನು ನೆತ್ತಿ ಮೇಲೆ ಇಟ್ಟುಕೊಂಡAತಾಗುತ್ತದೆ.
ತಮ್ಮ ಪ್ರಜ್ಞೆ ಮುಂದೆ ಸುಳ್ಳು ಹೇಳಕ್ಕಾಗಲ್ಲ. ಅದೇ ಕಷ್ಟ ಆಗೋದು.
ಇತರೆ ದೇವರಿಗಾದರೆ ಯಾವುದೇ ಉಗ್ರ ದೇವತೆ ಇರಲಿ, ಏನೋ ಸ್ವಲ್ಪ ಹೊಟ್ಟೆ ಒಳಕ್ಕೆ ಹಾಕ್ಕೋಂತ ಸುಳ್ಳು ಪಳ್ಳು ಹೇಳಿ ಬಿಡಬಹುದು.
ಆದರೆ ಪ್ರಜ್ಞೆ ಮುಂದೆ ಇದು ನಡೆಯದು. ಈ ಇಕ್ಕಟ್ಟಿಗೆ ವಚನಕಾರರು ಮುಖಾಮುಖಿಯಾದರು

ಉತ್ತರ: ತಮ್ಮ ಕಷ್ಟ ಸುಖಾನ, ದುಃಖ ದುಮ್ಮಾನಾನ, ಏಳು ಬೀಳುಗಳನ್ನು ಅವರ ಉತ್ಕಟ ಇಕ್ಕಟ್ಟುಗಳನ್ನು
ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ. ಈ ಒದ್ದಾಟಕ್ಕೆ ಅವರು ನುಡಿ ಕೊಟ್ಟರು.

ಉತ್ತರ: ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ. ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನಗಳು ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೆನೊ.
ಈ ಅನುಕಂಪನ ಇಡೀ ಜೀವಸಂಕುಲವನ್ನೇ ಒಂದು ಎಂದು ಹೇಳುತ್ತದೆ.

ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ (3 ಅಂಕ)

ಆಯ್ಕೆ :-ಈ ವಾಕ್ಯವನ್ನು ಶ್ರೀ ದೇವನೂರು ಮಹಾದೇವ ಅವರು ರಚಿಸಿರುವ ‘ಎದೆಗೆ ಬಿದ್ದ ಅಕ್ಷರ’ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ’ ಎಂಬ ಗದ್ಯಪಾಠ ದಿಂದ ಆರಿಸಲಾಗಿದೆ.


ಸಂದರ್ಭ :- ಗ್ರಾಮದೇವತೆ ಮಂಚಮ್ಮನಿಗೆ ಗುಡಿ ಕಟ್ಟಲು ಜನ ಪ್ರಾರಂಭಿಸಿದ ಸಂದರ್ಭದಲ್ಲಿ ಒಬ್ಬನ ಮೈ ಮೇಲೆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು ಬಂದು ಜನರಿಗೆ ಈ ಪ್ರಶ್ನೆಯನ್ನು ಕೇಳುತ್ತಾಳೆ.


ಸ್ವಾರಸ್ಯ :- ಸ್ವತಃ ತಮಗೆ ಮನೆ ಇಲ್ಲದಿದ್ದರೂ ದೇವರಿಗೆ ಮನೆ ಕಟ್ಟಲು ಹೊರಟ ಜನರ ಮುಗ್ಧತೆಯನ್ನು ಪ್ರಶ್ನಿಸುವ ಮೂಲಕ ಮಂಚಮ್ಮ ಕಾರುಣ್ಯ ಮತ್ತು ಸಮಾನತೆ ದೇವತೆಯಂತೆ ಕಾಣುವುದು ಈ ಮಾತಿನ ಸ್ವಾರಸ್ಯವಾಗಿದೆ.

ಆಯ್ಕೆ :-ಈ ವಾಕ್ಯವನ್ನು ಶ್ರೀ ದೇವನೂರು ಮಹಾದೇವ ಅವರು ರಚಿಸಿರುವ ‘ಎದೆಗೆ ಬಿದ್ದ ಅಕ್ಷರ’ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ’ ಎಂಬ ಗದ್ಯಪಾಠ ದಿಂದ ಆರಿಸಲಾಗಿದೆ.


ಸಂದರ್ಭ :- ಗ್ರಾಮದೇವತೆ ಮಂಚಮ್ಮನಿಗೆ ಗುಡಿ ಕಟ್ಟಲು ಜನ ಪ್ರಾರಂಭಿಸಿದಾಗ, ಒಬ್ಬನ ಮೈ ಮೇಲೆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು ಬಂದು ಜನರೊಡನೆ ಮಾತನಾಡುವ ಸಂದರ್ಭದಲ್ಲಿ ಈ ಮಾತನ್ನು ಗ್ರಾಮದೇವತೆ ಮಂಚಮ್ಮ ಜನರಿಗೆ ಹೇಳುತ್ತಾಳೆ.


ಸ್ವಾರಸ್ಯ :- ತನ್ನ ಭಕ್ತರಿಗೆ ಮನೆ ಇಲ್ಲದ ಮೇಲೆ ನನಗೂ ಮನೆ ಬೇಡ ಎಂಬ ಮಂಚಮ್ಮ ದೇವತೆಯ ಮಾತು ಕಾರುಣ್ಯ ಮತ್ತು ಸಮಾನತೆಯ ದ್ಯೋತಕವಾಗಿರುವುದು ಈ ಮಾತಿನ ಸ್ವಾರಸ್ಯವಾಗಿದೆ.

ಆಯ್ಕೆ :-ಈ ವಾಕ್ಯವನ್ನು ಶ್ರೀ ದೇವನೂರು ಮಹಾದೇವ ಅವರು ರಚಿಸಿರುವ ‘ಎದೆಗೆ ಬಿದ್ದ ಅಕ್ಷರ’ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ’ ಎಂಬ ಗದ್ಯಪಾಠ ದಿಂದ ಆರಿಸಲಾಗಿದೆ.


ಸಂದರ್ಭ :- ಲೇಖಕರಾದ ದೇವನೂರು ಮಹಾದೇವ ಅವರು ಡಾ. ಅಶೋಕ ಪೈ ಅವರ ಒಂದು ಸಂಶೋಧನಾ ಸತ್ಯಕತೆಯನ್ನು ಉದಾಹರಣೆ ನೀಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.


ಸ್ವಾರಸ್ಯ :- “ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ, ಎಲ್ಲಾ ಜೀವಿಗಳಲ್ಲೂ ಕಂಪನ ಉಂಟುಮಾಡುತ್ತಿರುತ್ತದೆ” ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.

ಆಯ್ಕೆ :-ಈ ವಾಕ್ಯವನ್ನು ಶ್ರೀ ದೇವನೂರು ಮಹಾದೇವ ಅವರು ರಚಿಸಿರುವ ‘ಎದೆಗೆ ಬಿದ್ದ ಅಕ್ಷರ’ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ’ ಎಂಬ ಗದ್ಯಪಾಠ ದಿಂದ ಆರಿಸಲಾಗಿದೆ.


ಸಂದರ್ಭ :- ಲೇಖಕರಾದ ದೇವನೂರು ಮಹಾದೇವ ಅವರು “ಕೊಲೆ. ಸುಲಿಗೆ, ದ್ವೇಷ, ಅಸೂಯೆಗಳಿಂದ ಕ್ಷೆÆÃಭೆಗೊಂಡು ನರಳುತ್ತಿರುವ ಜಗತ್ತು ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನು ಘಾಸಿಗೊಳಿಸುತ್ತಿದೆ” ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.


ಸ್ವಾರಸ್ಯ :- “ಜಾಗತೀಕರಣದ ಸಂದರ್ಭದಲ್ಲಿ ಮನುಷ್ಯರಾದ ನಾವು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ” ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.

ಆಯ್ಕೆ :-ಈ ವಾಕ್ಯವನ್ನು ಶ್ರೀ ದೇವನೂರು ಮಹಾದೇವ ಅವರು ರಚಿಸಿರುವ ‘ಎದೆಗೆ ಬಿದ್ದ ಅಕ್ಷರ’ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ’ ಎಂಬ ಗದ್ಯಪಾಠ ದಿಂದ ಆರಿಸಲಾಗಿದೆ.


ಸಂದರ್ಭ :- ಲೇಖಕರಾದ ದೇವನೂರು ಮಹಾದೇವ ಅವರು “ಕೊಲೆ. ಸುಲಿಗೆ, ದ್ವೇಷ, ಅಸೂಯೆಗಳಿಂದ ಕ್ಷೆÆÃಭೆಗೊಂಡು ನರಳುತ್ತಿರುವ ಜಗತ್ತು ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನು ಘಾಸಿಗೊಳಿಸುತ್ತಿದೆ” ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.


ಸ್ವಾರಸ್ಯ :- ಸಮಷ್ಟಿ ಮನಸ್ಸಿನಲ್ಲಿ ಎಲ್ಲರೂ ಇರುವುದರಿಂದ ಕಾರುಣ್ಯ ಹಾಗೂ ಸರ್ವಸಮಾನತೆ ಮನೋಭಾವ ಮೂಡಿಸಿಕೊಂಡು ಬದುಕಬೇಕು ಎಂಬುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.

ಉತ್ತರ:

ಲೇಖಕರ ಪರಿಚಯ(3 ಅಂಕ)

ಶ್ರೀ ದೇವನೂರು ಮಹಾದೇವ ಅವರು ಕ್ರಿ.ಶ. 1949 ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನಲ್ಲಿ ಜನಿಸಿದರು. ಇವರು ಎದೆಗೆ ಬಿದ್ದ ಅಕ್ಷರ.ಕುಸುಮಬಾಲೆ, ದ್ಯಾವನೂರು, ಒಡಲಾಳ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಗಿದೆ.

ಎಂಟು-ಹತ್ತು ವಾಕ್ಯದಲ್ಲಿ ಉತ್ತರ ಬರೆಯಿರಿ(4 ಅಂಕ)

ಉತ್ತರ: ಕವಿ ಸಿದ್ದಲಿಂಗಯ್ಯನವರು ಒಮ್ಮೆ ದೇವನೂರು ಮಹದೇವರಿಗೆ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಕತೆಯನ್ನು ಹೇಳುತ್ತಾರೆ.
ಆ ಕತೆಯಿಂದ ದೇವನೂರರ ‘ನನ್ನ ದೇವರು’ ಒಡಮೂಡಿದ ಪ್ರಸಂಗ ಹೀಗಿದೆ.
ಒಂದು ಸಾರಿ ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ.
ಹೀಗೆ ಚಾವಣಿಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ಮಂಚಮ್ಮ ಆವಾಹಿಸಿಕೊಂಡು “ ನಿಲ್ಸಿ ನನ್ ಮಕ್ಕಳಾ” ಎಂದು ಅಬ್ಬರ ಮಾಡುತ್ತಾಳೆ.
ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಜನರ ನಡುವೆ ಮಾತುಕತೆ ನಡೆಯುತ್ತದೆ.
‘ಏನ್ರಯ್ಯ ಏನ್ ಏನ್ ಮಾಡ್ತಾ ಇದ್ದೀರಿ?’
‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’
‘ಓಹೋ ನನಗೆ ಗುಡಿಮನೆ ಕಟ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ ?’
‘ನನಗಿಲ್ಲ ತಾಯಿ’-ಅಲ್ಲೊಬ್ಬ ಹೇಳ್ತಾನೆ.
‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ’ -
ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ! ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದೂ ಪೂಜಿತಳಾಗುತ್ತಿದ್ದಾಳೆ.

ಉತ್ತರ: ಮನೋವೈದ್ಯರಾದ ಡಾ ಅಶೋಕ ಪೈರವರು ಮೈಸೂರಿಗೆ ಬಂದಾಗ ಮನಸ್ಸಿನ ಬಗ್ಗೆ ನಡೆದ ಸಂಶೋಧನಾ ಸತ್ಯವನ್ನು ಹೇಳುತ್ತಾರೆ.
ಅದು ಯಾವುದೆಂದರೆ ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ.
ಇನ್ನೊAದಿಷ್ಟು ಜನ ಅದರ ಅರಿವಿಲ್ಲದೆ ಪಕ್ಕದ ಕೊಠಡಿಯಲ್ಲಿ ಏನೋ ಮಾತುಕತೆಯಾಡುತ್ತ ತಮ್ಮಿಷ್ಟಕ್ಕೆ ತಾವಿರುವರು ಎಂದಿಟ್ಟುಕೊಳ್ಳೊಣ.
ಆಗ ಟೆಲಿವಿಷನ್ ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ದುಃಖದ ಭಾವನೆಯು
ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳತ್ತದಂತೆ.
ಅದೇ ಟೆಲಿವಿಷನ್ ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ಖಷಿ ಭಾವನೆಯು
ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿನ ಮೇಲೂ ಪರಿಣಾಮ ಮಾಡಿ ಸ್ವಲ್ಪಮಟ್ಟಿಗೆ ಸಂತೋಷದ ಭಾವನೆ ಉಂಟಾಗುತ್ತದಂತೆ.
ಈ ನಿಜ ಏನನ್ನು ಹೇಳುತ್ತದೆ ? ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.
ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನಗಳು ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೆನೊ.
ಈ ಅನುಕಂಪನ ಇಡೀ ಜೀವಸಂಕುಲವನ್ನೇ ಒಂದು ಎಂದು ಹೇಳುತ್ತದೆ.

« BACK *............................. .............................* ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ