ಪದ್ಯ ಪಾಠ-6 ಛಲಮನೆ ಮೆರೆವೆಂ
ಒಂದು ಅಂಕದ ಪ್ರಶ್ನೆಗಳು
ಉತ್ತರ:- ಭೀಷ್ಮರು ರಣರಂಗದಲ್ಲಿ ಶರಶಯ್ಯೆಯ ಮೇಲೆ ಮಲಗಿದ್ದರು.
ಉತ್ತರ:- ದುರ್ಯೋಧನನ ಛಲದ ಗುಣ ಮುಖ್ಯವಾಗುಳ್ಳವನು.
ಉತ್ತರ:- ಸಾಹಸ ಭೀಮ ವಿಜಯ ಕೃತಿಯನ್ನು ರನ್ನ ಸಿಂಹಾವಲೋಕನ ಕ್ರಮದಲ್ಲಿ ಬರೆದಿರುವನೆಂದು ಹೇಳಿಕೊಂಡಿದ್ದಾನೆ.
ಉತ್ತರ:- ಕನ್ನಡಸಾಹಿತ್ಯದ ಸುವರ್ಣಯುಗ ಎಂದು 10ನೇ ಶತಮಾನವನ್ನು ಕರೆಯುತ್ತಾರೆ.
ಉತ್ತರ:- ದುರ್ಯೋಧನ ಭೀಷ್ಮರ ಮಾತನ್ನು ಕೇಳಿ ಮುಗುಳ್ನಗೆ ನಕ್ಕ.
ಉತ್ತರ:- ದುರ್ಯೋದನ ಪಾಡುಸುತರೊಡನೆ ಈನೆಲ ಪಾಳುನೆಲ ಎನ್ನುತ್ತಾನೆ.
ಉತ್ತರ:- ಭೀಷ್ಮ ಪಾಂಡವರೊಂದಿಗೆ ಸಂಧಿ ಮಾಡಿಕೊಳ್ಳಲು ದುರ್ಯೋಧನನಿಗೆ ಹೇಳುತ್ತಾನೆ.
ಉತ್ತರ:- ದುರ್ಯೋಧನ ಪಾಂಡವರೊಂದಿಗೆ ಛಲವನ್ನೇ ಮೆರೆಯುವೆನಂದು ಹೇಳುತ್ತಾನೆ.
ಉತ್ತರ:- ದುರ್ಯೋಧನ ಪಾರ್ಥ-ಭೀಮರನ್ನು ಕೊಂಧು ನಂತರ ಸಂಧಿ ಮಾಡಿಕೊಳ್ಳುತ್ತೇನೆಂದ.
ಉತ್ತರ: ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೇ ಎಂದು ದುಯೋಧನ ಭೀಷ್ಮನಿಗೆ ಹೇಳುತ್ತಾನೆ
ಉತ್ತರ: ದಿನಪಸುತ ಎಂದರೆ ಕರ್ಣ (ಸೂರ್ಯನ ಮಗ / ವರಬಲದಿಂದ ಜನಿಸಿದವನು)
ಉತ್ತರ: ಪಾರ್ಥ, ಭೀಮರನ್ನು ಕೊಂದಬಳಿಕ ಸಂಧಿಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ
ಉತ್ತರ: ದುರ್ಯೋಧನ ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದನು
ಉತ್ತರ: ಅಂತಕಾತ್ಮಜ ಎಂದರೆ ಯುದಿಷ್ಟರ ( ಧರ್ಮರಾಜ )
ಉತ್ತರ: ದುರ್ಯೋಧನನ ಹೇಳುವಂತೆ ಪ್ರೀತಿಯ ತಮ್ಮ ಎಂದರೆ ದುಶ್ಯಾಸನ
ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )
ಉತ್ತರ:- ಶರಶೈಯಯಲ್ಲಿ ಮಲಗಿದ್ದ ತಾತ ಭೀಷ್ಮರನ್ನು ಕಂಡು ಸಲಹೆ ಪಡೆಯಲು ಬಂದಿದ್ದ ದುರ್ಯೋದನನಿಗೆ ಭೀಷ್ಮರು ಪಾಂಡವರನ್ನು ನಾನು ಸಂಧಿಗೆ ಒಪ್ಪಿಸುವೆ, ಅವರು ನನ್ನ ಮಾತು ಮೀರುವರಲ್ಲ, ನೀನು ಅವರೊಂದಿಗೆ ಸಂಧಿಯನ್ನು ಮಾಡಿಕೊಳ್ಳಲು ಒಪ್ಪಿಕೊ ಮೊದಲಿನಂತೆ ನೀವಿಬ್ಬರು ಕೂಡಿ ಬದುಕುವಂತೆ ಮಾಡುತ್ತೇನೆ ಎಂದಾಗ ಅವರ ಈಮಾತನ್ನು ಕೇಳಿ ದುರ್ಯೋಧನ ಮುಗುಳ್ನಗೆ ನಕ್ಕ.
ಉತ್ತರ:- ದುರ್ಯೋಧನ ತಾನು ಪಾರ್ಥ-ಭೀಮರು ಇರುವವರೆಗೆ ಸಂಧಿ ಮಾಡಿಕೊಳ್ಳುವುದಿಲ್ಲ, ನನ್ನ ಆತ್ಮೀಯ ಗೆಳೆಯ ಕರ್ಣ, ಆತ್ಮೀಯ ಸಹೋದರ ದುಶ್ಯಾಸನರನ್ನು ಕೊಂದ ಪಾರ್ಥ-ಭೀಮರನ್ನು ಕೊಂದು, ತದನಂತರ ಬೇಕಾದರೆ ಧರ್ಮರಾಯನೊಡನೆ ಸಂಧಿ ಮಾಡಿಕೋಳ್ಳುವೆನು. ಎಂದು ಹೇಳುತ್ತಾನೆ.
ಉತ್ತರ:- ಯುದ್ಧದ ಬಗ್ಗೆ ದುರ್ರೋಧನನ ಅಂತಿಮವಾಗಿ ಯುದ್ಧಮಾಡದೇ ಇರೆನು ಅಜ್ಜ ಇಂದಿನ ಸಮರದ ಸಾರದಲ್ಲಿ ಪಾಂಡವರಾರು ಇಲ್ಲವೇ ಕೌರವರಾದರು. ಇಂದಿನ ಯುದ್ಧದಲ್ಲಿ ಈಭೂಮಿ ಪಾಂಡವರಿಗೆ ಆಗಬೇಕು ಇಲ್ಲ ಕೌರವರಿಗೆ ಈ ಭೂಮಿ ಎಂದು ತನ್ನ ಅಂತಿಮ ನಿರ್ಧಾರ ತಿಳಿಸುತ್ತಾನೆ.
ಉತ್ತರ: ದುರ್ಯೋಧನನು ಅಜ್ಜ ಭೀಷ್ಮರಿಗೆ “ ನಾನು ಪಾಂಡವರ ಸಂಗಡ (ಜೊತೆಗೆ) ಯುದ್ಧ ಮಾಡುವುದು ರಾಜ್ಯಕ್ಕಾಗಿ ಎಂದು ಭಾವಿಸಿದಿರಾ ? ನಾನು ಕಾದುವುದು ಛಲಕ್ಕೋಸ್ಕರ, ನೆಲಕ್ಕೊಸ್ಕರ ಅಲ್ಲಾ. ಪಾಡವರೊಡನೆ ಹಂಚಿಕೊಂಡು ಆಳುವ ಈ ನೆಲ, ಇದು ನನ್ನ ಪಾಲಿಗೆ ಹಾಳು ಭೂಮಿ. ಮಿತ್ರನಾದ ಕರ್ಣನನ್ನು ಕೊಲಿಸಿದ ನೆಲನೊಡನೆ ಅಂದರೆ ಭೂಮಿ ಕರ್ಣನ ರಥವನ್ನು ನುಂಗಿ ಅವನ ಕೊಲೆಗೆ ಕಾರಣವಾಯಿತು. ತನ್ನ ಪ್ರೀಯ ಮಿತ್ರನನ್ನು ಕೊಲಿಸಿದ ಇಂಥ ದ್ರೋಹಿಯಾದ ಭೂಮಿಯೊಡನೆ ಮತ್ತೆ ಬಾಳುವುದು ಹೇಗೆ? ಅಂದರೆ ಈ ಭೂಮಿಗೆ ಪತಿಯಾಗಿ ಅದನ್ನು ಆಳುವುದು ನನ್ನಿಂದ ಸಾಧ್ಯವಿಲ್ಲ ಎಂಬುದು ದುರ್ಯೋಧನನ ದೃಢೋಕ್ತಿ.
ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ (3 ಅಂಕ)
ಆಯ್ಕೆ:- ಪ್ರಸ್ತುತ ವಾಕ್ಯವನ್ನು ಶಕ್ತಿಕವಿ ರನ್ನ ಬರೆದ “ಸಾಹಸ ಭೀಮವಿಜಯಂ” ಕಾವ್ಯದಿಂದ ಆಯ್ದ “ಛಲಮನೆ ಮೆರೆವಂ” ಎಂಬ ಪದ್ಯದಿಂದ ಆಯ್ದಕೊಳ್ಳಲಾಗಿದೆ.
ಸಂದರ್ಭ:- ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಎಲ್ಲರನ್ನೂ ಕಳೆದುಕೊಂಡ ದುರ್ಯೋಧನನು ಏಕಾಂಗಿ, ಶರಶೆಯ್ಯೆಯಲ್ಲಿ ಮಲಗಿದ ಭೀಷ್ಮರನ್ನು ಕಾಣಲು ಬಂದ ಸಮಯದಲ್ಲಿ ಭೀಷ್ಮರು ದುರ್ಯೋಧನನಿಗೆ “ ನಾನು ಪಾಂಡವರನ್ನು ಸಂಧಿಗೆ ಒಪ್ಪುವಂತೆ ಮಾಡುತ್ತೇನೆ. ಅವರು ನನ್ನ ಮಾತನ್ನು ಮೀರುವುದಿಲ್ಲ. ನೀನು ನನ್ನ ಮಾತನ್ನು ಕೇಳಿ ಸಂಧಿಗೆ ಒಪ್ಪು” ಎಂದಾಗ ದುರ್ಯೋಧನನು ಅಜ್ಜ ಭೀಷ್ಮರಿಗೆ ಈ ಮೇಲಿನ ಮಾತನ್ನು ಹೇಳುತ್ತಾನೆ
ಸ್ವಾರಸ್ಯ:-ಎಲ್ಲರನ್ನೂ ಎಲ್ಲವನ್ನೂ ಕಳೆದುಕೊಂಡ ದುರ್ಯೋಧನ, ಸಂಧಿ ಪ್ರಸ್ತಾಪ ಬಂದಾಗ ನೆಲಕ್ಕಿಂತ ಛಲವೇ ಮುಖ್ಯ ಎಂದು ಹೇಳಿದ ಮಾತು ಅವನ ಛಲದಗುಣವನ್ನು ವ್ಯಕ್ತಪಡಿಸುತ್ತದೆ.
ಆಯ್ಕೆ:- ಪ್ರಸ್ತುತ ವಾಕ್ಯವನ್ನು ಶಕ್ತಿಕವಿ ರನ್ನ ಬರೆದ “ಸಾಹಸ ಭೀಮವಿಜಯಂ” ಕಾವ್ಯದಿಂದ ಆಯ್ದ “ಛಲಮನೆ ಮೆರೆವಂ” ಎಂಬ ಪದ್ಯದಿಂದ ಆಯ್ದಕೊಳ್ಳಲಾಗಿದೆ.
ಸಂದರ್ಭ: ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಎಲ್ಲರನ್ನೂ ಕಳೆದುಕೊಂಡ ದುರ್ಯೋಧನನು ಏಕಾಂಗಿ, ಶರಶೆಯ್ಯೆಯಲ್ಲಿ ಮಲಗಿದ ಭೀಷ್ಮರನ್ನು ಕಾಣಲು ಬಂದ ಸಮಯದಲ್ಲಿ ಭೀಷ್ಮರು ದುರ್ಯೋಧನನಿಗೆ “ ನಾನು ಪಾಂಡವರನ್ನು ಸಂಧಿಗೆ ಒಪ್ಪುವಂತೆ ಮಾಡುತ್ತೇನೆ. ಅವರು ನನ್ನ ಮಾತನ್ನು ಮೀರುವುದಿಲ್ಲ. ನೀನು ನನ್ನ ಮಾತನ್ನು ಕೇಳಿ ಸಂಧಿಗೆ ಒಪ್ಪು” ಎಂದಾಗ ದುರ್ಯೋಧನನು ಅಜ್ಜ ಭೀಷ್ಮರಿಗೆ ಈ ಮೇಲಿನ ಮಾತನ್ನು ಹೇಳುತ್ತಾನೆ
ಸ್ವಾರಸ್ಯ:- ಎಲ್ಲರನ್ನೂ ಎಲ್ಲವನ್ನೂ ಕಳೆದುಕೊಂಡ ದುರ್ಯೋಧನ, ಸಂಧಿ ಪ್ರಸ್ತಾಪ ಬಂದಾಗ ನೆಲಕ್ಕಿಂತ ಛಲವೇ ಮುಖ್ಯ. ಪಾಂಡವರೊಡನೆ ಯುದ್ಧವನ್ನು ಮಾಡಿಯೇ ತೀರುತ್ತೇನೆ.ಎಂದು ಹೇಳಿದ ಮಾತು ಅವನಿಗೆ ಯುದ್ಧದ ಬಗೆಗೆ ಇದ್ದ ಉತ್ಸಾಹ ಹಾಗೂ ಛಲದಗುಣವನ್ನು ವ್ಯಕ್ತಪಡಿಸುತ್ತದೆ.
ಆಯ್ಕೆ:- ಪ್ರಸ್ತುತ ವಾಕ್ಯವನ್ನು ಶಕ್ತಿಕವಿ ರನ್ನ ಬರೆದ “ಸಾಹಸ ಭೀಮವಿಜಯಂ” ಕಾವ್ಯದಿಂದ ಆಯ್ದ “ಛಲಮನೆ ಮೆರೆವಂ” ಎಂಬ ಪದ್ಯದಿಂದ ಆಯ್ದಕೊಳ್ಳಲಾಗಿದೆ.
ಸಂದರ್ಭ: ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಎಲ್ಲರನ್ನೂ ಕಳೆದುಕೊಂಡ ದುರ್ಯೋಧನನು ಏಕಾಂಗಿ, ಶರಶೆಯ್ಯೆಯಲ್ಲಿ ಮಲಗಿದ ಭೀಷ್ಮರನ್ನು ಕಾಣಲು ಬಂದ ಸಮಯದಲ್ಲಿ ಭೀಷ್ಮರು ದುರ್ಯೋಧನನಿಗೆ “ ನಾನು ಪಾಂಡವರನ್ನು ಸಂಧಿಗೆ ಒಪ್ಪುವಂತೆ ಮಾಡುತ್ತೇನೆ. ಅವರು ನನ್ನ ಮಾತನ್ನು ಮೀರುವುದಿಲ್ಲ. ನೀನೂ ಸಹ ನನ್ನ ಮಾತನ್ನು ಕೇಳಿ ಸಂಧಿಗೆ ಒಪ್ಪು” ಎಂದಾಗ ದುರ್ಯೋಧನನು ಅಜ್ಜ ಭೀಷ್ಮರಿಗೆ ಈ ಮೇಲಿನ ಮಾತನ್ನು ಹೇಳುತ್ತಾನೆ
ಸ್ವಾರಸ್ಯ:- ಎಲ್ಲರನ್ನೂ ಎಲ್ಲವನ್ನೂ ಕಳೆದುಕೊಂಡ ದುರ್ಯೋಧನ, ಸಂಧಿ ಪ್ರಸ್ತಾಪ ಬಂದಾಗ ನೆಲಕ್ಕಿಂತ ಛಲವೇ ಮುಖ್ಯ. ಪಾಂಡವರೊಡನೆ ಯುದ್ಧವನ್ನು ಮಾಡಿಯೇ ತೀರುತ್ತೇನೆ. ಎಂದು ಹೇಳಿದ ಮಾತು ಅವನಿಗೆ ಯುದ್ಧದ ಬಗೆಗೆ ಇದ್ದ ಉತ್ಸಾಹ ಹಾಗೂ ಛಲದಗುಣವನ್ನು ವ್ಯಕ್ತಪಡಿಸುತ್ತದೆ.
ಆಯ್ಕೆ:- ಪ್ರಸ್ತುತ ವಾಕ್ಯವನ್ನು ಶಕ್ತಿಕವಿ ರನ್ನ ಬರೆದ “ಸಾಹಸ ಭೀಮವಿಜಯಂ” ಕಾವ್ಯದಿಂದ ಆಯ್ದ “ಛಲಮನೆ ಮೆರೆವಂ” ಎಂಬ ಪದ್ಯದಿಂದ ಆಯ್ದಕೊಳ್ಳಲಾಗಿದೆ.
ಸಂದರ್ಭ: ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಎಲ್ಲರನ್ನೂ ಕಳೆದುಕೊಂಡ ದುರ್ಯೋಧನನು ಏಕಾಂಗಿ, ಶರಶೆಯ್ಯೆಯಲ್ಲಿ ಮಲಗಿದ ಭೀಷ್ಮರನ್ನು ಕಾಣಲು ಬಂದ ಸಮಯದಲ್ಲಿ ಭೀಷ್ಮರು ದುರ್ಯೋಧನನಿಗೆ “ ನಾನು ಪಾಂಡವರನ್ನು ಸಂಧಿಗೆ ಒಪ್ಪುವಂತೆ ಮಾಡುತ್ತೇನೆ. ಅವರು ನನ್ನ ಮಾತನ್ನು ಮೀರುವುದಿಲ್ಲ. ನೀನು ನನ್ನ ಮಾತನ್ನು ಕೇಳಿ ಸಂಧಿಗೆ ಒಪ್ಪು” ಎಂದಾಗ ದುರ್ಯೋಧನನು ಅಜ್ಜ ಭೀಷ್ಮರಿಗೆ “ಈ ಭೂಮಿಯನ್ನು ನಾನು ಆಳಬೇಕು ಇಲ್ಲ ಪಾಂಡವರು ಆಳಬೇಕು” ಎಂದು ಹೇಳುವಾಗ ಮೇಲಿನ ಮಾತು ಬರುತ್ತದೆ.
ಸ್ವಾರಸ್ಯ:- ಎಲ್ಲರನ್ನೂ ಎಲ್ಲವನ್ನೂ ಕಳೆದುಕೊಂಡ ದುರ್ಯೋಧನ, ಸಂಧಿ ಪ್ರಸ್ತಾಪ ಬಂದಾಗ “ನೆಲಕ್ಕಿಂತ ಛಲವೇ ಮುಖ್ಯ. ಪಾಂಡವರೊಡನೆ ಯುದ್ಧವನ್ನು ಮಾಡಿಯೇ ತೀರುತ್ತೇನೆ” ಎಂದು ಹೇಳಿದ ಮಾತು ಅವನಿಗೆ ಯುದ್ಧದ ಬಗೆಗೆ ಇದ್ದ ಉತ್ಸಾಹ, ಭೂಮಿಯ ಬಗೆಗೆ ಇದ್ದ ತಾತ್ಸಾರ ಹಾಗೂ ಛಲದಗುಣವನ್ನು ವ್ಯಕ್ತಪಡಿಸುತ್ತದೆ.
***
ಕವಿ ಪರಿಚಯ (3 ಅಂಕ)
ರೌದ್ರರಸಪ್ರಿಯ ರನ್ನ ಮಹಾಕವಿ ಕ್ರಿ.ಶ.ಸುಮಾರು 949 ರಲ್ಲಿ (10 ನೇ ಶತಮಾನ) ಬಾಗಲಕೋಟೆ ಜಿಲ್ಲೆಯ ಮುಧೋಳ ಗ್ರಾಮದವನು ಬಳೆಗಾರ ವಂಶದಲ್ಲಿ ಜನಿಸಿದ ಈತನ ತಂದೆ ಜಿನವಲ್ಲಭ, ತಾಯಿ ಅಬ್ಬಲಬ್ಬೆ. ಇವನ ಸಹೋದರರು ದೃಢಬಾಹು ಮತ್ತು ರೇಚಣ ಮಾರಮಯ್ಯ. ರನ್ನನಿಗೆ ಇಬ್ಬರು ಪತ್ನಿಯರು ಶಾಂತಿಯಬ್ಬೆ ಮತ್ತು ಜಕ್ಕಿಯಬ್ಬೆ. ಇವರಿಗೆ ರಾಯ ಮತ್ತು ಅತ್ತಿಮಬ್ಬೆ ಎಂಬ ಇಬ್ಬರು ಮಕ್ಕಳು.
ರನ್ನ ಕವಿಯು ನಮಗೆಲ್ಲ ಸ್ಪೂರ್ತಿ ಏಕೆಂದರೆ, ತನ್ನ ಹದಿನಾರನೇ ವಯಸ್ಸಿನವರೆಗೂ ಯಾವ ವಿದ್ಯೆಯನ್ನು ತಿಳಯದ ಆತ ತನ್ನ ವೃತ್ತಿಯಾದ ಬಳೆಗಾರಿಕೆಯನ್ನು ಬಿಟ್ಟು ತಲಕಾಡಿನತ್ತ ನೆಡೆದು ತದನಂತರ ವಿದ್ಯೆ ಪಡೆದ ಆತ ಪ್ರಸಿದ್ದ ಕವಿಯಾಗುತ್ತಾನೆ.
ರನ್ನನು ಚಂಪು ಕವಿಗಳಲ್ಲಿ ಸುಪ್ರಸಿದ್ದ. ಈತನ ಗುರು ಅಜಿತಸೇನಾಚಾರ್ಯರು, ಹಾಗೂ ಇವನ ಆಶ್ರಯದಾತ ಚಾಲುಕ್ಯಚಕ್ರವರ್ತಿ ತೈಲಪ. ಹಾಗೆಯೆ ರನ್ನನ ಅಭ್ಯುದಯಕ್ಕೆ ಕಾರಣರಾದ ಇಬ್ಬರು ಅತ್ತಿಮಬ್ಬೆ ಮತ್ತು ಗಂಗ ಮಂತ್ರಿ ಚಾವುಂಡರಾಯ.
ರನ್ನನ ಪ್ರಮುಖ ಕೃತಿಗಳು ‘ಸಾಹಸ ಭೀಮ ವಿಜಯ’ (ಗಧಾಯುದ್ಧ) ‘ಅಜಿತತೀರ್ಥಂಕರಪುರಾಣತಿಲಕಂ’, ‘ಪರುಶುರಾಮಚರಿತಂ’, ‘ಚಕ್ರೇಶ್ವರಚರಿತಂ’ ಹಾಗೂ ‘ರನ್ನಕಂದ’ (ನಿಘಂಟು) ಕೃತಿಗಳನ್ನು ಬರೆದಿದ್ದಾನೆಂದು ತಿಳಿದುಬರುತ್ತದೆ. ಇವನು ತನ್ನ ಕೃತಿಗಳನ್ನು ಸಿಂಹಾವಲೋಕನ ಕ್ರಮದಿಂದ ಬರೆದಿದ್ದಾನೆಂದು ಹೇಳಿದ್ದಾನೆ. ಇಂತಹಾ ಕವಿಗೆ ಕವಿಚಕ್ರವರ್ತಿ, ಶಕ್ತಿಕವಿ ಎಂಬ ಬಿರುದುಗಳಿದ್ದವು. ರನ್ನಕವಿಯ ಗಧಾಯುದ್ದ ಆಕಾರದಲ್ಲಿ ಚಿಕ್ಕದಾಗಿದ್ದರೂ ಶೈಲಿಯಲ್ಲಿ ಅದ್ಬುತವಾದದ್ದು. ಅವನಿಗೆ ತನ್ನ ವಿದ್ವತ್ತಿನಮೇಲೆ ಅಪಾರ ವಿಶ್ವಾಸ, ತನ್ನ ಕಾವ್ಯವನ್ನು ಸಿಂಹಾವಲೋಕನ ಕ್ರಮದಲ್ಲಿ ಬರೆದಿರುವೆ, ತನ್ನ ಕಾವ್ಯವನ್ನು ಪರೀಕ್ಷಿಸಲು ಎಂಟೆದೆ ಇರಬೇಕಂದು ಹೇಳುತ್ತಾನೆ, ಅಷ್ಟು ಅಭಿಮಾನ ತನ್ನ ಕಾವ್ಯದಮೇಲೆ ಅವನಿಗೆ.
ಪ್ರಸ್ತುತ ಕಾವ್ಯಭಾಗವನ್ನು ಪ್ರೊ| ಹಂಪ. ನಾಗರಾಜಯ್ಯ ಅವರು ಸಂಪಾದಿಸಿರುವ ’ರನ್ನ ಸಂಪುಟ’ದ ರನ್ನ ಮಹಾಕವಿಯ ‘ಗಧಾಯುದ್ದ’ ಕಾವ್ಯದಿಂದ (ಪಂಚಮಾಶ್ವಾಸದಿಂದ) ಆಯ್ದುಕೊಳ್ಳಲಾಗಿದೆ.
ಎಂಟು-ಹತ್ತು ವಾಕ್ಯದಲ್ಲಿ ಉತ್ತರ ಬರೆಯಿರಿ(4 ಅಂಕ)
ಉತ್ತರ :
ಕಂಠಪಾಠ ಪದ್ಯಗಳು(4 ಅಂಕ)
ಉತ್ತರ
ನೆಲಕಿರುವೆನೆಂದು ಬಗೆದಿರೆ
ಚಲಕಿರಿವೆಂ ಪಾಂಡುಸುತರೊಳೀನಲನಿದು ಪಾ
ಳ್ನೆಲನೆನಗೆ ದಿನಪಸುತನಂ
ಕೊಲಿಸಿದ ನೆಲನೊಡನೆ ಮತ್ತೆ ಪುದುವಾಳ್ದಪೆನೆ
ಉತ್ತರ
ಪುಟ್ಟಿದ ನೂರ್ವರುಮೆನ್ನೊಡ
ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ
ಪುಟ್ಟಿ ಪೊದಳ್ದುದು ಸತ್ತರ್
ಪುಟ್ಟರೆ ಪಾಂಡವರೊಳಿರಿದು ಛಲಮನೆ ಮೆರೆವೆಂ
ಕೆಳಗಿನ ಪದ್ಯಭಾಗವನ್ನು ಓದಿ ಅರ್ಥಮಾಡಿಕೊಂಡು, ಅಡಕವಾಗಿರುವ ಮೌಲ್ಯವನ್ನಾಧರಿಸಿ ಸಾರಾಂಶ ಬರೆಯಿರಿ. (4 ಅಂಕ)
ಆಯ್ಕೆ:- ಪ್ರಸ್ತುತ ಪದ್ಯಭಾಗವನ್ನು ಶಕ್ತಿಕವಿ ರನ್ನ ಬರೆದ “ಸಾಹಸ ಭೀಮವಿಜಯಂ” ಕಾವ್ಯದಿಂದ ಆಯ್ದ “ಛಲಮನೆ ಮೆರೆವಂ” ಎಂಬ ಪದ್ಯದಿಂದ ಆಯ್ದಕೊಳ್ಳಲಾಗಿದೆ.
ಸಾರಾಂಶ :ಭೀಷ್ಮರು ದುರ್ಯೋಧನನಗೆ ‘ನೀನು ಒಪ್ಪುವದಾದರೆ ಪಾಂಡವರನ್ನು ಸಂಧಿಗೆ ಒಪ್ಪುವಂತೆ ಮಾಡುತ್ತೇನೆ’ ಎಂದಾಗ ದುರ್ಯೋಧನನು ಮುಗುಳ್ನಗೆ ಬೀರಿ ಭೀಷ್ಮರಿಗೆ “ ನಿಮಗೆ ನಮಸ್ಕರಿಸಿ, ಆಶಿರ್ವಾದವನ್ನು ಪಡೆದು ನಿರ್ಧಾರಮಾಡಿ ಬಂದಿದ್ದೇನೆಯೇ ಹೊರತು, ಶತ್ರುಗಳೊಡನೆ ಸಂಧಿಯ ಒಪ್ಪಂದವನ್ನು ಎರ್ಪಡಿಸಲಿಯೆಂದು ಕೇಳಲು ಬಂದಿರುವೆನೇ? ಮುಂದೆ ನಡೆವ ಯುದ್ಧದಲ್ಲಿ ನನ್ನ ಕಾರ್ಯ ಯಾವುದೆಂದು ತಾವು ತಿಳಿಸ ಬೇಕು ಸಂಧಿಯ ಮಾತನ್ನು ಎತ್ತಬೇಡಿ” ಎಂದನು
ಪ್ರಸ್ತುತ ಪದ್ಯಭಾಗದಲ್ಲಿ ರನ್ನಕವಿ ದುರ್ಯೋಧನನ ಛಲದಗುಣವನ್ನು ವರ್ಣಿಸುತ್ತಾ ಭಿಷ್ಮರ ಮಾತಿಗೊಪ್ಪದೆ, ಸಂಧಿಯನ್ನು ತಿರಸ್ಕರಿಸಿ ತನ್ನ ಸಹೋದರರನ್ನು ಹಾಗೂ ಕರ್ಣನನ್ನು ಕೊಂದ ಪಾಡವರೊಡನೆ ಯುದ್ಧ ಮಾಡಿಯೇ ತೀರುತ್ತೇನೆಂಬ ಅವನ ಸ್ವಭಾವವನ್ನು ಸ್ವಾರಸ್ಯಕರವಾಗಿ ವರ್ಣೀಸಿದ್ದಾನೆ.
ಮೌಲ್ಯ:- ಈ ಮೇಲಿನ ಪದ್ಯದಲ್ಲಿ ದುರ್ಯೋಧನ ಸಂಧಿಗೊಪ್ಪದೆ ಯುದ್ಧವನ್ನೇ ಮಾಡಿ ತೀರುತ್ತೇನೆಂದು ಹೇಳುವ ಆತನಲ್ಲಿ ಪ್ರಕಟಗೊಳ್ಳುವ ಅವನ ಛಲದಗುಣ, ಅವನ ಸ್ವಭಾವಕ್ಕೆ ತಕ್ಕುದಾಗಿ ನಿಲ್ಲುವ ಮೌಲ್ಯವನ್ನು ಪ್ರಕಟಿಸುತ್ತದೆ.
ಆಯ್ಕೆ:- ಪ್ರಸ್ತುತ ಪದ್ಯಭಾಗವನ್ನು ಶಕ್ತಿಕವಿ ರನ್ನ ಬರೆದ “ಸಾಹಸ ಭೀಮವಿಜಯಂ” ಕಾವ್ಯದಿಂದ ಆಯ್ದ “ಛಲಮನೆ ಮೆರೆವಂ” ಎಂಬ ಪದ್ಯದಿಂದ ಆಯ್ದಕೊಳ್ಳಲಾಗಿದೆ.
ಸಾರಾಂಶ: ದುರ್ಯೋಧನನು ಅಜ್ಜ ಭೀಷ್ಮರಿಗೆ “ ನಾನು ಪಾಂಡವರ ಸಂಗಡ(ಜೊತೆಗೆ) ಯುದ್ಧ ಮಾಡುವುದು ರಾಜ್ಯಕ್ಕಾಗಿ ಎಂದು ಭಾವಿಸಿದಿರಾ ? ನಾನು ಕಾದುವುದು ಛಲಕ್ಕೋಸ್ಕರ, ನೆಲಕ್ಕೊಸ್ಕರ ಅಲ್ಲಾ. ಪಾಡವರೊಡನೆ ಹಂಚಿಕೊಂಡು ಆಳುವ ಈ ನೆಲ ನನ್ನ ಪಾಲಿಗೆ ಹಾಳು ಭೂಮಿ. ಮಿತ್ರನಾದ ಕರ್ಣನನ್ನು ಕೊಲಿಸಿದ ನೆಲನೊಡನೆ (ಯುದ್ಧ ಕಾಲದಲ್ಲಿ ಕರ್ಣನ ರಥದ ಚಕ್ರವನ್ನು ಭೂಮಿ ಹಿಡಿದುಕೊಂಡಿತು. ಸಾರಥಿಯಾಗಿದ್ದ ಶಲ್ಯನು ಆ ಮೊದಲೇ ಜಗಳವಾಡಿ ಹೊರಟುಹೋಗಿದ್ದನು. ರಥದ ಚಕ್ರವನ್ನು ಮೇಲೆತ್ತುವುದಕ್ಕೆ ಕರ್ಣನಿಗೆ ಅವಕಾಶ ಕೊಡದೆ ಕೃಷ್ಣನ ಪ್ರೇರಣೆಯಿಂದ ಅರ್ಜುನ ಅಸ್ತ್ರವನ್ನು ಪ್ರಯೋಗಿಸಿ ಕರ್ಣನನ್ನು ಕೊಂದನು) ಗೆ ಭೂಮಿ ಕರ್ಣನ ರಥವನ್ನು ನುಂಗಿ ಅವನ ಕೊಲೆಗೆ ಕಾರಣವಾಯಿತು. ತನ್ನ ರೀಯ ಮಿತ್ರನನ್ನು ಕೊಲಿಸಿದ ಇಂಥ ದ್ರೋಹಿಯಾದ ಭೂಮಿಯೊಡನೆ ಮತ್ತೆ ಬಾಳುವುದು ಹೇಗೆ? ಅಂದರೆ ಈ ಭೂಮಿಗೆ ಪತಿಯಾಗಿ ಅದನ್ನು ಆಳುವುದು ನನ್ನಿಂದ ಸಾಧ್ಯವಿಲ್ಲ ಎಂಬುದು ದುರ್ಯೋಧನನ ದೃಢೋಕ್ತಿ
ಪ್ರಸ್ತುತ ಪದ್ಯಭಾಗದಲ್ಲಿ ರನ್ನಕವಿ ದುರ್ಯೋಧನನ ಛಲದಗುಣವನ್ನು ವರ್ಣಿಸುತ್ತಾ ಭಿಷ್ಮರ ಮಾತಿಗೊಪ್ಪದೆ, ಸಂಧಿಯನ್ನು ತಿರಸ್ಕರಿಸಿ ತನ್ನ ಕರ್ಣನನ್ನು ಕೊಂದ ಪಾಡವರೊಡನೆ ಯುದ್ಧ ಮಾಡಿಯೇ ತೀರುತ್ತೇನೆಂಬ ಅವನ ಸ್ವಭಾವವನ್ನು ಸ್ವಾರಸ್ಯಕರವಾಗಿ ವರ್ಣಿಸಿದ್ದಾನೆ.
ಮೌಲ್ಯ:- ಈ ಮೇಲಿನ ಪದ್ಯದಲ್ಲಿ ದುರ್ಯೋಧನ ಸಂಧಿಗೊಪ್ಪದೆ ಯುದ್ಧವನ್ನೇ ಮಾಡಿ ತೀರುತ್ತೇನೆಂದು ಹೇಳುವ ಆತನಲ್ಲಿ ಪ್ರಕಟಗೊಳ್ಳುವ ಅವನ ಛಲದಗುಣ, ಅವನ ಸ್ವಭಾವಕ್ಕೆ ತಕ್ಕುದಾಗಿ ನಿಲ್ಲುವ ಮೌಲ್ಯವನ್ನು ಪ್ರಕಟಿಸುತ್ತದೆ.
ಆಯ್ಕೆ:- ಪ್ರಸ್ತುತ ಪದ್ಯಭಾಗವನ್ನು ಶಕ್ತಿಕವಿ ರನ್ನ ಬರೆದ “ಸಾಹಸ ಭೀಮವಿಜಯಂ” ಕಾವ್ಯದಿಂದ ಆಯ್ದ “ಛಲಮನೆ ಮೆರೆವಂ” ಎಂಬ ಪದ್ಯದಿಂದ ಆಯ್ದಕೊಳ್ಳಲಾಗಿದೆ.
ಸಾರಾಂಶ: ದುರ್ಯೋಧನನು ಅಜ್ಜ ಭೀಷ್ಮರಿಗೆ ನನ್ನ ಪ್ರೀತಿಯ ಬಂಟನಾದ ಕರ್ಣನನ್ನು ಹಾಗೂ ಸಹೋದರ ದುಶ್ಯಾಸನನನ್ನು ಕೊಂದ ಪಾರ್ಥ, ಭೀಮರು ಜೀವಸಹಿತ ಇರುವವರೆಗೂ ಹಾಗೂ ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ನಾನು ಸಂಧಿಗೆ ಒಪ್ಪುವುದಿಲ್ಲ. ಮೊದಲು ಅವರಿಬ್ಬರನ್ನು ಕೊಲ್ಲುತ್ತೇನೆ, ಆಮೇಲೆ ಸಂಧಿಮಾಡಿಕೊಳ್ಳುತ್ತೇನೆ. ನನ್ನ ಮನದಾಸೆಯನ್ನು ತೀರಸಿಕೊಂಡ ಬಳಿಕ ಅಂತಕಾತ್ಮಜನಾದ ಯುದಿಷ್ಟರನೊಂದಿಗೆ ಸಂಧಿ ಆಗವುದಿಲ್ಲ ಎಂದು ಹೇಳೆನು” ಎನ್ನುತ್ತಾನೆ.
ಪ್ರಸ್ತುತ ಪದ್ಯಭಾಗದಲ್ಲಿ ರನ್ನಕವಿ ದುರ್ಯೋಧನನ ಛಲದಗುಣವನ್ನು ವರ್ಣಿಸುತ್ತಾ ಭಿಷ್ಮರ ಮಾತಿಗೊಪ್ಪದೆ, ಸಂಧಿಯನ್ನು ತಿರಸ್ಕರಿಸಿ ತನ್ನ ಸಹೋದರರನ್ನು ಹಾಗೂ ಕರ್ಣನನ್ನು ಕೊಂದ ಪಾಡವರೊಡನೆ ಯುದ್ಧ ಮಾಡಿಯೇ ತೀರುತ್ತೇನೆಂಬ ಅವನ ಸ್ವಭಾವವನ್ನು ಸ್ವಾರಸ್ಯಕರವಾಗಿ ವರ್ಣೀಸಿದ್ದಾನೆ.
ಮೌಲ್ಯ:- ಈ ಮೇಲಿನ ಪದ್ಯದಲ್ಲಿ ದುರ್ಯೋಧನ ಸಂಧಿಗೊಪ್ಪದೆ ಯುದ್ಧವನ್ನೇ ಮಾಡಿ ತೀರುತ್ತೇನೆಂದು ಹೇಳುವ ಆತನಲ್ಲಿ ಪ್ರಕಟಗೊಳ್ಳುವ ಅವನ ಛಲದಗುಣ, ಅವನ ಸ್ವಭಾವಕ್ಕೆ ತಕ್ಕುದಾಗಿ ನಿಲ್ಲುವ ಮೌಲ್ಯವನ್ನು ಪ್ರಕಟಿಸುತ್ತದೆ.
ಆಯ್ಕೆ:- ಪ್ರಸ್ತುತ ಪದ್ಯಭಾಗವನ್ನು ಶಕ್ತಿಕವಿ ರನ್ನ ಬರೆದ “ಸಾಹಸ ಭೀಮವಿಜಯಂ” ಕಾವ್ಯದಿಂದ ಆಯ್ದ “ಛಲಮನೆ ಮೆರೆವಂ” ಎಂಬ ಪದ್ಯದಿಂದ ಆಯ್ದಕೊಳ್ಳಲಾಗಿದೆ.
ಸಾರಾಂಶ: ದುರ್ಯೋಧನನು ಅಜ್ಜ ಭೀಷ್ಮರನ್ನು ಕುರಿತು “ನನ್ನ ನೂರುಜನ ತಮ್ಮಂದಿರು ಹಾಗೂ ನನ್ನ ನೂರುಜನ ಮಕ್ಕಳು ಯುದ್ಧವನ್ನು ಮಾಡಿ ಸತ್ತರು. ಸತ್ತವರು ಹುಟ್ಟುವುದಿಲ್ಲವೇ? ಮನುಷ್ಯನಿಗೆ ಇರುವುದು ಒಂದೇ ಜನ್ಮವೇ? ಜೀವನದ ಮೇಲಿನ ಆಸೆಯಿಂದ ನಾನು ಹೇಡಿಯಾಗಲಾರೆ, ಸತ್ತರ್ ಪುಟ್ಟರೆ? ಎಂಬುವುದಕ್ಕೆ ಸತ್ತವರು ಮತ್ತೆ ಹುಟ್ಟುವುದೇ ಇಲ್ಲ. ಎಂದರೆ ಸತ್ತುಹೋದ ನನ್ನ ಮಕ್ಕಳು, ಸಹೋದರರು ಮತ್ತೆ ಹುಟ್ಟುವುದೇ ಇಲ್ಲ. ಎಂಬ ಅರ್ಥವೂ ಇಲ್ಲಿ ಸಾಧ್ಯ ಅವರನ್ನು ಕಳೆದುಕೊಂಡ ಮೇಲೆ ನನಗೆ ಸಂಧಿ ಏಕೆ ? ಯುದ್ಧವನ್ನೇ ಪಟ್ಟು ಹಿಡಿಯುತ್ತೇನೆ” ಎನ್ನುತ್ತಾನೆ.
ಪ್ರಸ್ತುತ ಪದ್ಯಭಾಗದಲ್ಲಿ ರನ್ನಕವಿ ದುರ್ಯೋಧನನ ಛಲದಗುಣವನ್ನು ವರ್ಣಿಸುತ್ತಾ ಭಿಷ್ಮರ ಮಾತಿಗೊಪ್ಪದೆ, ಸಂಧಿಯನ್ನು ತಿರಸ್ಕರಿಸಿ ತನ್ನ ಮಕ್ಕಳನ್ನು, ಸಹೋದರರನ್ನು ಹಾಗೂ ಕರ್ಣನನ್ನು ಕೊಂದ ಪಾಡವರೊಡನೆ ಯುದ್ಧ ಮಾಡಿಯೇ ತೀರುತ್ತೇನೆಂಬ ಅವನ ಸ್ವಭಾವವನ್ನು ಸ್ವಾರಸ್ಯಕರವಾಗಿ ವರ್ಣೀಸಿದ್ದಾನೆ.
ಮೌಲ್ಯ:- ಈ ಮೇಲಿನ ಪದ್ಯದಲ್ಲಿ ದುರ್ಯೋಧನ ಸಂಧಿಗೊಪ್ಪದೆ ಯುದ್ಧವನ್ನೇ ಮಾಡಿ ತೀರುತ್ತೇನೆಂದು ಹೇಳುವ ಆತನಲ್ಲಿ ಪ್ರಕಟಗೊಳ್ಳುವ ಅವನ ಛಲದಗುಣ, ಅವನ ಸ್ವಭಾವಕ್ಕೆ ತಕ್ಕುದಾಗಿ ನಿಲ್ಲುವ ಮೌಲ್ಯವನ್ನು ಪ್ರಕಟಿಸುತ್ತದೆ.
ಆಯ್ಕೆ:- ಪ್ರಸ್ತುತ ಪದ್ಯಭಾಗವನ್ನು ಶಕ್ತಿಕವಿ ರನ್ನ ಬರೆದ “ಸಾಹಸ ಭೀಮವಿಜಯಂ” ಕಾವ್ಯದಿಂದ ಆಯ್ದ “ಛಲಮನೆ ಮೆರೆವಂ” ಎಂಬ ಪದ್ಯದಿಂದ ಆಯ್ದಕೊಳ್ಳಲಾಗಿದೆ.
ಸಾರಾಂಶ: ದುರ್ಯೋಧನನು ಅಜ್ಜ ಭೀಷ್ಮರಿಗೆ “ನಾನು ಪಾಂಡವರೊಡನೆ ಯುದ್ಧವನ್ನು ಮಾಡದೇ ಇರಲಾರೆ. ಇಂದಿನ ಯುದ್ಧದಲ್ಲಿ ನಾನೋ ಪಾಂಡವರೋ, ಇಬ್ಬರಲ್ಲಿ ಒಬ್ಬರು ಮಾತ್ರ ಉಳಿಯಬೇಕು. ಅಖಂಡವಾದ ಭೂಮಿ ನನಗೋ ಪಾಂಡವರಿಗೋ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಸೇರಬೇಕು; ಅದನ್ನು ಸಂಧಿಯ ಮೂಲಕ ಪಾಲುಮಾಡಿಕೊಂಡು ಆಳುವ ಮಾತೇ ಇಲ್ಲ.
ಪ್ರಸ್ತುತ ಪದ್ಯಭಾಗದಲ್ಲಿ ರನ್ನಕವಿ ದುರ್ಯೋಧನನ ಛಲದಗುಣವನ್ನು ವರ್ಣಿಸುತ್ತಾ ಭಿಷ್ಮರ ಮಾತಿಗೊಪ್ಪದೆ, ಸಂಧಿಯನ್ನು ತಿರಸ್ಕರಿಸಿ ತನ್ನ ಸಹೋದರರನ್ನು ಹಾಗೂ ಕರ್ಣನನ್ನು ಕೊಂದ ಪಾಡವರೊಡನೆ ಯುದ್ಧ ಮಾಡಿಯೇ ತೀರುತ್ತೇನೆ. ಭೂಮಿಯನ್ನು ಭಾಗಮಾಡಿಕೊಂಡು ಬದುಕಲಾರೆಯೆಂಬ ಅವನ ಸ್ವಭಾವವನ್ನು ಸ್ವಾರಸ್ಯಕರವಾಗಿ ವರ್ಣೀಸಿದ್ದಾನೆ.
ಮೌಲ್ಯ:- ಈ ಮೇಲಿನ ಪದ್ಯದಲ್ಲಿ ದುರ್ಯೋಧನ ಸಂಧಿಗೊಪ್ಪದೆ ಯುದ್ಧವನ್ನೇ ಮಾಡಿ ತೀರುತ್ತೇನೆಂದು ಹೇಳುವ ಆತನಲ್ಲಿ ಪ್ರಕಟಗೊಳ್ಳುವ ಅವನ ಛಲದಗುಣ, ಅವನ ಸ್ವಭಾವಕ್ಕೆ ತಕ್ಕುದಾಗಿ ನಿಲ್ಲುವ ಮೌಲ್ಯವನ್ನು ಪ್ರಕಟಿಸುತ್ತದೆ.
« BACK ಮುಂದಿನ ಅಧ್ಯಾಯ
THANK URMH-9731734068
Super sir its good way to find a answer its best way
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿ