10-Kan ಹಕ್ಕಿ ಹಾರುತಿದೆ ನೋಡಿದಿರಾ ?

RMH

ಪದ್ಯ ಪಾಠ-2 ಹಕ್ಕಿ ಹಾರುತಿದೆ ನೋಡಿದಿರಾ ?

ಒಂದು ಅಂಕದ ಪ್ರಶ್ನೆಗಳು

ಉತ್ತರ : ಕವಿ ಬೇಂದ್ರೆ ಅವರು ಕಾಲದ ಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನ ಮಾಡಿದ್ದಾರೆ.

ಉತ್ತರ : ಹಕ್ಕಿಯು ಎವೆ ತೆರೆದಿಕ್ಕುವ ಹೊತ್ತಿನೊಳಗೆ ಅಂದರೆ ಕಣ್ಣು ರೆಪ್ಪೆ ಮಿಟಿಕಿಸುವಷ್ಟು ಸಮಯದಲ್ಲಿ (ನಿಮಿಷದಲ್ಲಿ) ಗಾವುದ ಗಾವುದ ಗಾವುದ ಮುಂದೆ ಹಾರುತ್ತಿದೆ.

ಉತ್ತರ : ಹಕ್ಕಿಯ ಪುಚ್ಚದ ಬಣ್ಣ ಕಪ್ಪು.

ಉತ್ತರ : ಹಕ್ಕಿಯ ಗರಿಯಲ್ಲಿ ಬಿಳಿಯ ಹೊಳೆಯುವ ಬಣ್ಣಗಳಿವೆ.

ಉತ್ತರ : ಹಕ್ಕಿಯ ಪಕ್ಕದಲ್ಲಿರುವ ರೆಕ್ಕೆಗಳೆರಡೂ ಕೆಂಪು ಮಿಶ್ರಿತ ಬಂಗಾರದ (ಕೆನ್ನನ ಮತ್ತು ಹೊನ್ನಿನ) ಬಣ್ಣಗಳಿಂದ ಕೂಡಿವೆ.

ಉತ್ತರ : ಹಕ್ಕಿಯು ಚಿಕ್ಕೆಯ ಮಾಲೆಯನ್ನು ಸಿಕ್ಕಿಸಿಕೊಂಡಿದೆ.

ಉತ್ತರ : ಸೂರ್ಯ ಚಂದ್ರರು ಹಕ್ಕಿಯ ಕಣ್ಣುಗಳು.

ಉತ್ತರ : ಹಕ್ಕಿಯು ರಾಜ್ಯ ಮತ್ತು ಸಾಮ್ರಾಜ್ಯದ ತೆನೆಯನ್ನು ಒಕ್ಕಿದೆ.

ಉತ್ತರ : ಹಕ್ಕಿಯು ಸಾರ್ವಭೌಮರ ನೆತ್ತಿಯನ್ನು ಕುಕ್ಕಿದೆ.

ಉತ್ತರ : ಹಕ್ಕಿಯು ಖಂಡ-ಖಂಡಗಳನ್ನು ತೇಲಿಸಿ ಮುಳುಗಿಸಿದೆ.

ಉತ್ತರ : ಹಕ್ಕಿಯು ಯುಗಯುಗಗಳ ಹಣೆ ಬರೆಹವನ್ನು ಒರೆಸಿದೆ.

ಉತ್ತರ : ಹಕ್ಕಿಯು ಮನ್ನಂತರಗಳ ಭಾಗ್ಯವನ್ನು ತೆರೆಸಿದೆ.

ಉತ್ತರ : ಹಕ್ಕಿಯು ಹೊಸಗಾಲದ ಹಸುಮಕ್ಕಳನ್ನು ಹರಸಿದೆ.

ಉತ್ತರ : ಹಕ್ಕಿಯು ಕಾಲಪಕ್ಷಿಯ ಸಂಕೇತವಾಗಿದೆ.

ಉತ್ತರ : ಕವಿ ಶುಕ್ರಗ್ರಹ (ಶುಕ್ರ)ವನ್ನು ಹಳ್ಳಿಗೆ ಹೋಲಿಸಿದ್ದಾರೆ.

ಉತ್ತರ : ಹಕ್ಕಿಯು ಬೆಳ್ಳಿಯ ಹಳ್ಳಿಯ ಮೇರೆಯನ್ನು ಮೀರಿದೆ.

ಉತ್ತರ : ಹಕ್ಕಿಯು ಚಂದ್ರಲೋಕದಲ್ಲಿನ (ತಿಂಗಳೂರಿನ) ನೀರನ್ನು ಹೀರಿದೆ.

ಉತ್ತರ : ಹಕ್ಕಿಯು ಮಂಗಳಲೋಕದ ಅಂಗಳಕೇರಿದೆ.

ಉತ್ತರ : ಹಕ್ಕಿಯ ಚುಂಚಗಳು ದಿಗ್ಮಂಡಲಗಳ ಆಚೆಯವರೆಗೂ ಚಾಚಿವೆ.

ಉತ್ತರ : ಹಕ್ಕಿಯು ಬ್ರಹ್ಮಾಂಡವನ್ನು ಒಡೆಯಲು ಹೋಂಚು ಹಾಕಿ ನಿಂತಿದೆ.

ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )

ಉತ್ತರ : ತರತಮರಹಿತ ಸಮದೃಷ್ಟಿಯಿಂದ ಕೂಡಿದ ನೀಲಮೇಘಮಂಡಲ - ಸಮಬಣ್ಣದಂತೆ, ಅನಂತ ಆಕಾಶದಲ್ಲಿರುವ ಮುಗಿಲಿಗೆ ರೆಕ್ಕೆಗಳು ಮೂಡಿದಂತೆ, ನಕ್ಷತ್ರ ಮಾಲೆಯನ್ನು ಧರಿಸಿಕೊಂಡು, ಸೂರ್ಯ ಚಂದ್ರರನ್ನು ಕಣ್ಣಾಗಿಸಿಕೊಂಡು ಹಕ್ಕಿಯು ಹಾರಾಡುತ್ತಿರುವ ನೋಟ ಅದ್ಭುತವಾದುದು ಎಂದು ಕವಿಗಳು ವರ್ಣಿಸುತ್ತಾರೆ.

ಉತ್ತರ : ಹಕ್ಕಿಯು (ಕಾಲಪಕ್ಷಿಯು) ಯುಗಯುಗಗಳ ಆಗುಹೋಗುಗಳನ್ನು ಹಿಂದಕ್ಕೆ ತಳ್ಳುತ್ತ, ಹೊಸ ಮನ್ವಂತರದ ಪರಿವರ್ತನೆಗೆ / ಪ್ರಗತಿಗೆ ಕಾರಣವಾಗಿದೆ. ಹಕ್ಕಿಯು (ಕಾಲಪಕ್ಷಿಯು) ತನ್ನ ಹಗಲು ರಾತ್ರಿಗಳೆಂಬ ರೆಕ್ಕೆಗಳನ್ನು ಬೀಸುವ ಮೂಲಕ ಭೂಮಂಡಲದ ಜೀವಿಗಳಿಗೆ ಚೈತನ್ಯ ನೀಡಿ, ಹೊಸಗಾಲದ ಹಸುಮಕ್ಕಳನ್ನು ಹರಸಿ, ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತಿದೆ ಎಂದು ಕವಿಗಳು ವರ್ಣಿಸುತ್ತಾರೆ.

ಉತ್ತರ : ಕಾಲ ಪಕ್ಷಿಯು ಹಾರುತ್ತಾ, ಆಡುತ್ತಾ, ಹಾಡುತ್ತಾ, ಶುಕ್ರಗ್ರಹ ಎಂಬ ಹಳ್ಳಿಯ ಮೇರೆಯನ್ನು ಮೀರಿ ಹಾರುತ್ತಿದೆ. ತಿಂಗಳೂರಿನ(ಚಂದ್ರಲೋಕದ) ನೀರನ್ನು ಸಂತೋಷದಿಂದ ಹೀರುತ್ತ, ಮಂಗಳಲೋಕದ ಅಂಗಳವನ್ನು ಸಹ ಏರಿ ಆಡುತ್ತಿದೆ. ಮಾನವನು ಭೂಮಿಯಿಂದ ಇತರ ಗ್ರಹ, ಉಪಗ್ರಹಗಳಿಗೆ ಸಂಚರಿಸಬಹುದಾದ ದಾರ್ಶನಿಕ ಹಾಗೂ ವೈಜ್ಞಾನಿಕ ಪ್ರಗತಿಯ ಮುನ್ನೋಟ ಇಲ್ಲಿದೆ.

ಉತ್ತರ : ಪುಚ್ಚ ಅಂದರೆ ಅದು ಪಕ್ಷಿಯ ಬಾಲ. ಇದು ಹಿಂದಿರುತ್ತದೆ. ಇದು ಭೂತಕಾಲ. ಆದುದರಿಂದ ಇದರ ಬಣ್ಣವು ಕರಿ. ಇನ್ನು ಕಣ್ಣಿಗೆ ಕಾಣುತ್ತಿರುವ ಹೊಳೆಯುತ್ತಿರುವ ಗರಿಯ ಬಣ್ಣ ಬಿಳಿ. ಆದುದರಿಂದ ಇದು ವರ್ತಮಾನಕಾಲ. ನಮ್ಮ ಮುಂದೆ ಕಾಣುವುದು ಭವಿಷ್ಯತ್ ಕಾಲ. ಇದು ಉದಯಿಸುತ್ತಿರುವ ಸೂರ್ಯನಂತೆ ಕೆಂಪಾಗಿ ಬಂಗಾರದ ಬಣ್ಣದ್ದಾಗಿರುತ್ತದೆ. ಹೀಗೆ ಪ್ರಸು ್ತತ ನುಡಿಯಲ್ಲಿ ಬೇಂದ್ರೆಯವರು ಕಾಲವು ಚಲನಶಿಲವಾದುದು. ಚಲನಶೀಲತೆ ಜೀವಂತಿಕೆಯ ಗುಣ. ನಿಸರ್ಗದ ಹೊಂದಾಣಿಕೆಯಂತೆ ಕಾಲ ಉರುಳುತ್ತದೆ. ಅದಕ್ಕೆ ತಡೆ ಎಂಬುದಿಲ್ಲ. ಅದಕ್ಕೆ ಹೊಂದಿಕೊಳ್ಳಬೇಕು ಎಂದು ಕಾಲದ ಮೂರು ಅವಸ್ಥೆಗಳನ್ನು ಬಣ್ಣಗಳ ಹೋಲಿಕೆಯ ಮುಖಾಂತರ ಬಹುಸ್ವಾರಸ್ಯಯುತ ಮತ್ತು ಮೌಲ್ಯಯುತವಾಗಿ ವರ್ಣಿಸಿದ್ದಾರೆ.

ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ (3 ಅಂಕ)

ಆಯ್ಕೆ : ಈ ವಾಕ್ಯವನ್ನು ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕವಿ ‘ಶ್ರೀ ದ. ರಾ. ಬೇಂದ್ರೆ’ ವಿರಚಿತ ‘ಗರಿ’ ಕವನ ಸಂಕಲನದಲ್ಲಿನ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ಕವಿ ದ. ರಾ. ಬೇಂದ್ರೆ ಅವರು ಚಲನಶೀಲವಾದ ಕಾಲದ ಗತಿಯನ್ನು ಹಾರುವ ಹಕ್ಕಿಗೆ ಸಮೀಕರಿಸಿ ವರ್ಣಿಸುತ್ತ, ವೇಗವಾಗಿ ಸಾಗುವ ಕಾಲಪಕ್ಷಿಗೆ ಕರಿಯ ಬಣ್ಣದ ಪುಚ್ಚಗಳು (ಬಾಲ) ಇವೆ. ಬಿಳಿಯ ಬಣ್ಣದ ಗರಿಗಳಿವೆ. ಕೆಂಪಾದ ಹೊನ್ನಿನ ಬಣ್ಣದ ರೆಕ್ಕೆಗಳು ಎರಡೂ ಪಕ್ಕದಲ್ಲಿ ಇವೆ ಎಂದು ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ : ಕಾಲದ ಮೂರು ಅವಸ್ಥೆಗಳಾದ ಭೂತ, ವರ್ತಮಾನ ಮತ್ತು ಭವಿಷತ್ ಕಾಲಗಳನ್ನು ಬಣ್ಣಗಳ ಹೋಲಿಕೆಯ ಮುಖಾಂತರ ವರ್ಣಿತವಾಗಿರುವುದು ಕವಿ ಈ ಮಾತಿನಲ್ಲಿ ಬಹುಸ್ವಾರಸ್ಯವಾಗಿ ವ್ಯಕ್ತಗೊಂಡಿದೆ.

ಆಯ್ಕೆ : ಈ ವಾಕ್ಯವನ್ನು ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕವಿ ‘ಶ್ರೀ ದ. ರಾ. ಬೇಂದ್ರೆ’ ವಿರಚಿತ ‘ಗರಿ’ ಕವನ ಸಂಕಲನದಲ್ಲಿನ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ಕವಿ ದ. ರಾ. ಬೇಂದ್ರೆ ಅವರು ಚಲನಶೀಲವಾದ ಕಾಲದ ಗತಿಯನ್ನು ಹಾರುವ ಹಕ್ಕಿಗೆ ಸಮೀಕರಿಸಿ ವರ್ಣಿಸುತ್ತ, ಕಾಲಪಕ್ಷಿಯು ತನ್ನ ಪಯಣದಲ್ಲಿ ಅನೇಕ ಸಣ್ಣಸಣ್ಣ ರಾಜಮನೆತನಗಳನ್ನು ಹಾಗೂ ದೊಡ್ಡದೊಡ್ಡ ಸಾಮ್ರಾಜ್ಯಗಳನ್ನು ಕಟ್ಟಿ ಅವುಗಳ ಪ್ರಗತಿ ಮತ್ತು ವಿನಾಶಕ್ಕೆ ಕಾರಣವಾಗಿದೆ. ಅಲ್ಲದೇ ಗತಕಾಲದಲ್ಲಿನ ಭೂಮಂಡಲದ ಮೇಲೆ ಸಾರ್ವಭೌಮರೆಂದು ಮೆರೆಯುತ್ತಿದ್ದ ಸಾಮ್ರಾಟರ ನೆತ್ತಿಯನ್ನು ಕುಕ್ಕಿ ಅವರ ಅಹಂಕಾರವನ್ನು ಮೆಟ್ಟಿ ನಿಂತಿದೆ ಎಂದು ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ : ಕಾಲದ ಗತಿಯಲ್ಲಿ ವೈಭವದಿಂದ, ಅಹಂಕಾರದಿಂದ ಮೆರೆದ ಸಾರ್ವಭೌಮರೆಲ್ಲರೂ ನಾಮಾವಶೇಷವಾಗಿದ್ದಾರೆ ಎಂಬುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತಗೊಂಡಿದೆ.

ಆಯ್ಕೆ : ಈ ವಾಕ್ಯವನ್ನು ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕವಿ ‘ಶ್ರೀ ದ. ರಾ. ಬೇಂದ್ರೆ’ ವಿರಚಿತ ‘ಗರಿ’ ಕವನ ಸಂಕಲನದಲ್ಲಿನ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ಕವಿ ದ. ರಾ. ಬೇಂದ್ರೆ ಅವರು ಚಲನಶೀಲವಾದ ಕಾಲದ ಗತಿಯನ್ನು ಹಾರುವ ಹಕ್ಕಿಗೆ ಸಮೀಕರಿಸಿ ವರ್ಣಿಸುತ್ತ, ವಿಶ್ವಗಳು ಅನೇಕ ವಿರಬಹುದು, ಆ ವಿಶ್ವದಿಕ್ಕುಗಳು ಅನಂತವಿರಬಹುದು ಆದರೆ ಈ ಕಾಲಪಕ್ಷಿಯು ಈ ಎಲ್ಲ ಮಂಡಲಗಳ ಅಂಚನ್ನು ಮುಟ್ಟಿದೆ. ಇಷ್ಟೆ ಅಲ್ಲ ಈ ಅನಂತತೆಯ ಆಚೆಯು ಕಾಲಪಕ್ಷಿಯ ಮನೋಗತ ಅರ್ಥವಾಗುವುದು ಅಸಾಧ್ಯವಾದುದು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ : ಕಾಲ ಪಕ್ಷಿಯು ಸೃಷ್ಟಿಕತೃವಿನ ಬ್ರಹ್ಮಾಂಡವನ್ನೆ ಒಡೆಯುವ ಸಂಚು ಹಾಗೂ ಹೊಸಸೃಷ್ಟಿಯ ನಿರ್ಮಾಣದ ಬೆರಗು ಈ ಮಾತಿನಲ್ಲಿ ಸಾರಸ್ಯ ಪೂರ್ಣವಾಗಿ ವ್ಯಕ್ತಗೊಂಡಿದೆ.

ಆಯ್ಕೆ : ಈ ವಾಕ್ಯವನ್ನು ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕವಿ ‘ಶ್ರೀ ದ. ರಾ. ಬೇಂದ್ರೆ’ ವಿರಚಿತ ‘ಗರಿ’ ಕವನ ಸಂಕಲನದಲ್ಲಿನ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ಕವಿ ದ. ರಾ. ಬೇಂದ್ರೆ ಅವರು ಚಲನಶೀಲವಾದ ಕಾಲದ ಗತಿಯನ್ನು ಹಾರುವ ಹಕ್ಕಿಗೆ ಸಮೀಕರಿಸಿ ವರ್ಣಿಸುತ್ತ ಕಾಲಪಕ್ಷಿಯು ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಭೂಮಂಡಲದ ಮೇಲಿನ ಜೀವಿಗಳಿಗೆ ಚೈತನ್ಯ ನೀಡಿ, ಹೊಸ ಪೀಳಿಗೆಯ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತಿದೆ ಎಂದು ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ : ಕಾಲಪಕ್ಷಿಯು ಯುಗಯುಗದಲ್ಲೂ ಜನರಿಗೆ ಚೈತನ್ಯವನ್ನು ತುಂಬಿ ಮುಂದಿನ ಜನಾಂಗವನ್ನು ಹರಸುತ್ತಿದೆ ಎಂಬುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.

ಆಯ್ಕೆ : ಈ ವಾಕ್ಯವನ್ನು ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕವಿ ‘ಶ್ರೀ ದ. ರಾ. ಬೇಂದ್ರೆ’ ವಿರಚಿತ ‘ಗರಿ’ ಕವನ ಸಂಕಲನದಲ್ಲಿನ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ಕವಿ ದ. ರಾ. ಬೇಂದ್ರೆ ಅವರು ಚಲನಶೀಲವಾದ ಕಾಲದ ಗತಿಯನ್ನು ಹಾರುವ ಹಕ್ಕಿಗೆ ಸಮೀಕರಿಸಿ ವರ್ಣಿಸುತ್ತ ಕಾಲದ ಓಟದಲ್ಲಿ ಬೆಳ್ಳಿ ಅಂದರೆ ಶುಕ್ರಗ್ರಹವು ಮನುಷ್ಯನಿಗೆ ಕೇವಲ ಹಳ್ಳಿಯಾಗಬಹುದು. ಚಂದ್ರಲೋಕವು ಬರಿ ಊರಾಗಬಹುದು. ಹಾಗೂ ಮಂಗಳ ಲೋಕವು ಭೂಮಿಗೆ ಬರಿ ಅಂಗಳವಾಗಬಹುದು. ಈ ಆಕಾಶಕಾಯಗಳು ಮಾನವನಿಗೆ ಆಡಲು, ಹಾಡಲು ಹಾಗೂ ಹಾರಾಡಲು ಅಂಗಳ ಆಗಬಹುದು ಎಂದು ತಿಳಿಸುವ ಸಂದರ್ಭದಲಿ ್ಲ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ : ಮಾನವನು ಭೂಮಿಯಿಂದ ಇತರಗ್ರಹ, ಉಪಗ್ರಹಗಳಿಗೆ ಸಂಚರಿಸಬಹುದಾದ ದಾರ್ಶನಿಕ ಮುನ್ನೋಟ, ಮಾನವ ಪ್ರಪಂಚದಲ್ಲಾಗುವ ವೈಚಿತ್ರ್ಯದ ವಿಸ್ಮಯದ ಸ್ವಾರಸ್ಯವು ಈ ಮಾತಿನಲ್ಲಿ ಸ್ಪಷ್ಟವಾಗಿ ವ್ಯಕ್ತಗೊಂಡಿದೆ.

ಲೇಖಕರ ಪರಿಚಯ(3 ಅಂಕ)

ದ. ರಾ. ಬೇಂದ್ರೆ : ನವೋದಯ ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ‘ವರಕವಿ’ ಮತ್ತು ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾದ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಕ್ರಿ. ಶ. 1896ರಲಿ ್ಲ ಧಾರವಾಡದಲ್ಲಿ ಜನಿಸಿದರು. ಪ್ರೌಢಶಾಲಾ ಅಧ್ಯಾಪಕರಾಗಿ, ಸೊಲ್ಹಾಪುರದ ರಾಜಾರಾಮ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಹಾಗೂ ಧಾರವಾಡದ ಬಾನುಲಿ ಕೇಂದ್ರದ ಸಲಹೆಗಾರರಾಗಿ ಸೇವೆ ಸಲ್ಲಿಸಿರುವ ಶಬ್ದಗಾರುಡಿಗ ದ. ರಾ. ಬೇಂದ್ರೆಯವರು ಗರಿ, ನಾಕುತಂತಿ, ನಾದಲೀಲೆ, ಕೃಷ್ಣಕುಮಾರಿ, ಉಯ್ಯಾಲೆ, ಸಖೀಗೀತ, ನಾದಲೀಲೆ, ಮೇಘದೂತ, ಗಂಗಾವತರಣ, ಸೂರ್ಯಪಾನ, ನಗೆಯ ಹೊಗೆ, ಅರಳು-ಮರಳು, ಸಾಹಿತ್ಯವಿರಾಟ್ ಸ್ವರೂಪ ಮೊದಲಾದ ಪ್ರಸಿದ್ಧ ಕೃತಿಗಳನ್ನು ರಚಿಸಿದ್ದಾರೆ. ಶಿ ್ರೀಯುತರ ‘ನಾಕುತಂತಿ’ ಕೃತಿಗೆ ಭಾರತದ ಅತ್ಯುನ್ನತ ‘ಭಾರತೀಯ ಜ್ಞಾನಪೀಠ ಪ್ರಶಸ್ತಿ’, ‘ಅರಳು-ಮರಳು’ ಕವನ ಸಂಕಲನಕ್ಕೆ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಲಭಿಸಿವೆ. ಭಾರತ ಸರ್ಕಾರದ ‘ಪದ್ಮಶ್ರೀ’ ಪುರಸ್ಕಾರಕ್ಕೆ ಭಾಜನರಾಗಿರುವ ಬೇಂದ್ರೆಯವರಿಗೆ 1943ರಲ್ಲಿ ಶಿವಮೊಗ್ಗದಲ್ಲಿ ನಡೆದ 27ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯ ಗೌರವ ಸಂಧಿದೆ. ದ.ರಾ.ಬೇಂದ್ರೆ ವಿರಚಿತ ‘ಗರಿ’ ಕವನಸಂಕಲನದಿಂದ ಹಕ್ಕಿ ಹಾರುತಿದೆ ನೋಡಿದಿರಾ ಕವಿತೆಯನ್ನು ಆಯ್ಕೆ ಮಾಡಲಾಗಿದೆ.

ಎಂಟು-ಹತ್ತು ವಾಕ್ಯದಲ್ಲಿ ಉತ್ತರ ಬರೆಯಿರಿ(4 ಅಂಕ)

ಉತ್ತರ : : ದ. ರಾ. ಬೇಂದ್ರೆ ಅವರು ‘ಹಕ್ಕಿ ಹಾರುತ್ತಿದೆ ನೋಡಿದಿರಾ’ ಕವನದಲ್ಲಿ ಚಲನಶೀಲವಾದ ಕಾಲವನ್ನು ಹಾರುತ್ತಿರುವ ಹಕ್ಕಿಗೆ ಹೋಲಿಸಿ ವರ್ಣಿಸಿದ್ದಾರೆ. ಇರುಳು ಇರುಳು ಅಳಿದು ದಿನ ದಿನ ಬೆಳಗೆ ಸುತ್ತಮುತ್ತಲೂ ಮೇಲೆ ಕೆಳಗೆ ಕಣು ್ಣ ರೆಪ್ಪೆ ಮಿಟಿಕಿಸುವಷ್ಟು ಸಮಯದಲ್ಲಿ (ನಿಮಿಷದಲ್ಲಿ) ಕಾಲಪಕ್ಷಿಯು ಗಾವುದ ಗಾವುದ ಗಾವುದ ಮುಂದೆ ಸಾಗುತ್ತಿರುತ್ತದೆ. ಕಾಲಪಕ್ಷಿಗೆ ಕರಿನರೆ ಬಣ್ಣದ ಪುಚ್ಚಗಳು (ಬಾಲ) ಉಂಟು, ಬಿಳಿಹೊಳೆ ಬಣ್ಣದ ಗರಿ ಗರಿ ಉಂಟು, ಕೆನ್ನನ ಹೊನ್ನನ ಬಣ್ಣ-ಬಣ್ಣಗಳ ರೆಕ್ಕೆಗಳು ಎರಡೂ ಪಕ್ಕದಲಿ ಉಂಟು ಅಂದರೆ ಇಲ್ಲಿ ಕವಿಗಳು ಕಾಲದ ಮೂರು ಅವಸ್ಥೆಗಳನ್ನು ಬಣ್ಣಗಳ ಹೋಲಿಕೆಯ ಮುಖಾಂತರ ಬಹುಸ್ವಾರಸ್ಯವಾಗಿ ವರ್ಣಿಸುತ್ತಾರೆ. ತರತಮರಹಿತ ಸಮದೃಷ್ಟಿಯಿಂದ ಕೂಡಿದ ನೀಲಮೇಘಮಂಡಲ - ಸಮಬಣ್ಣದಂತೆ, ಅನಂತ ಆಕಾಶದಲ್ಲಿರುವ ಮುಗಿಲಿಗೆ ರೆಕ್ಕೆಗಳು ಮೂಡಿದಂತೆ, ನಕ್ಷv್ರÀ ಮಾಲೆಯನ್ನು ಧರಿಸಿಕೊಂಡು, ಸೂರ್ಯ ಚಂದ್ರರನ್ನು ಕಣ್ಣಾಗಿಸಿಕೊಂಡು ಹಕ್ಕಿಯು ಹಾರಾಡುತ್ತಿರುವ ನೋಟ ಅದ್ಭುತವಾದುದು ಎಂದು ಕವಿಗಳು ವರ್ಣಿಸುತ್ತಾರೆ. ಕಾಲಪಕ್ಷಿಯು ತನ್ನ ಪಯಣದಲ್ಲಿ ಅನೇಕ ಸಣ್ಣಸಣ್ಣ ರಾಜಮನೆತನಗಳನ್ನು ಹಾಗೂ ದೊಡ್ಡದೊಡ್ಡ ಸಾಮ್ರಾಜ್ಯಗಳನ್ನು ಹುಟ್ಟಿಸಿ, ಬೆಳೆಯಿಸಿ, ಅವುಗಳ ಫಲಿತವನ್ನು ಕೊಯ್ಲು ಮಾಡಿದೆ. ಅದೇ ರೀತಿ ಅನೇಕ ಸಾಮ್ರಾಜ್ಯಗಳನ್ನು, ರಾಜ್ಯಗಳನ್ನು, ಕೋಟೆಕೊತ್ತಲಗಳನ್ನು ನಾಶಗೊಳಿಸಿದೆ. ಕಾಲಪಕ್ಷಿಯು ತನ್ನ ಪಯಣದಲ್ಲಿ ಭೂಮಂಡಲದ ಮೇಲಿರುವ ಖಂಡಗಳನ್ನು ತೇಲಿಸಿ, ಮುಳುಗಿ ಪ್ರಾಕೃತಿಕ (ಪ್ರಗತಿ ಮತ್ತು ವಿನಾಶ) ಬದಲಾವಣೆಗಳಿಗೂ ಕಾರಣವಾಗಿದೆ. ಕಾಲಪಕ್ಷಿಯು ಸಾರ್ವಭೌಮರೆಂದು ಮೆರೆಯುತ್ತಿದ್ದ ಸಾಮ್ರಾಟರ ನೆತ್ತಿಯನ್ನ ಕುಕ್ಕಿ ಅವರ ಅಹಂಕಾರವನ್ನು ಮೆಟ್ಟಿ ನಿಂತಿದೆ ಎಂದು ಕವಿಗಳು ವರ್ಣಿಸುತ್ತಾರೆ. ಕಾಲಪಕ್ಷಿಯು ಯುಗಯುಗಗಳ ಆಗುಹೋಗುಗಳನ್ನು ಹಿಂದಕ್ಕೆ ತಳ್ಳುತ್ತ, ಹೊಸ ಮನ್ವಂತರದ ಪರಿವರ್ತನೆಗೆ / ಪ್ರಗತಿಗೆ ಕಾರಣವಾಗಿದೆ. ಕಾಲಪಕ್ಷಿಯು ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಭೂಮಂಡಲದ ಜೀವಿಗಳಿಗೆ ಚೈತನ್ಯ ನೀಡಿ, ಮುಂದಿನ ಜನಾಂಗದ ಮಕ್ಕಳನ್ನು ಹರಸಿ, ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತಿದೆ. ಶುಕ್ರ, ಚಂದ್ರ, ಮಂಗಳ ಲೋಕ ಸಂಚಾರ ಕಾಲದ ಒಂದು ಭೌತಿಕ ಲಕ್ಷಣ. ಬ್ರಿಟೀಷರ ಸಾಮ್ರಾಜ್ಯಶಾಹಿಯಿಂದ ಪಾರಾಗುವ ಸ್ವಾತಂತ್ರ್ಯ ಚಿಂತನದ ಕಲ್ಪನಾ ಪಕ್ಷಿಯ ಹಾರಾಟವು ಇನ್ನೊಂದು ಲಕ್ಷಣ. ಅಂತೆಯೇ ಕಾಲದ ಓಟದಲ್ಲಿ ಬೆಳ್ಳಿ ಅಂದರೆ ಶುಕ್ರಗ್ರಹವು ಮನುಷ್ಯನಿಗೆ ಕೇವಲ ಹಳ್ಳಿಯಾಗಬಹುದು. ಚಂದ್ರಲೋಕವು ಬರಿ ಊರಾಗಬಹುದು. ಹಾಗೂ ಮಂಗಳ ಲೋಕವು ಭೂಮಿಗೆ ಬರಿ ಅಂಗಳವಾಗಬಹುದು. ಮಾನವನು ಭೂಮಿಯಿಂದ ಇತರ ಗ್ರಹ ಉಪಗ್ರಹಗಳಿಗೆ ಸಂಚರಿಸಬಹುದು. ವಿಶ್ವಗಳು ಅನೇಕ ವಿರಬಹುದು, ಆ ವಿಶ್ವದಿಕ್ಕುಗಳು ಅನಂತವಿರಬಹುದು ಆದರೆ ಈ ಕಾಲಪಕ್ಷಿಯು ಈ ಎಲ್ಲ ಮಂಡಲಗಳ ಅಂಚನ್ನು ಮುಟ್ಟಿದೆ. ಇಷ್ಟೆ ಅಲ್ಲ ಈ ಅನಂತತೆಯ ಆಚೆಯು ಕಾಲಪಕ್ಷಿಯ ಮನೋಗತ ಅರ್ಥವಾಗುವುದು ಅಸಾಧ್ಯವಾದುದು. ಸೃಷ್ಟಿಕತೃವಿನ ಈ ಬ್ರಹ್ಮಾಂಡವನ್ನೆ ಕಾಲಪಕ್ಷಿಯು ಒಡೆಯಲು ಹೊಂಚುಕಹಾಕುತ್ತಿದೆ ಎಂದು ಕವಿಗಳು ವರ್ಣಿಸುತ್ತಾರೆ.

ಕೆಳಗಿನ ಪದ್ಯಭಾಗವನ್ನು ಓದಿ ಅರ್ಥಮಾಡಿಕೊಂಡು, ಅಡಕವಾಗಿರುವ ಮೌಲ್ಯವನ್ನಾಧರಿಸಿ ಸಾರಾಂಶ ಬರೆಯಿರಿ. (4 ಅಂಕ)

‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ವರಕವಿ, ಶಬ್ದಗಾರುಡಿಗ ದ. ರಾ. ಬೇಂದ್ರೆಯವರು ನವೋದಯ ಕಾಲಘಟ್ಟದಲ್ಲಿ ಬರೆದ ಕವನಗಳಲ್ಲಿ ‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂಬುದು ಪ್ರಮುಖ ಕವನವಾಗಿದೆ. ಬೇಂದ್ರೆಯವರು ಪ್ರಸ್ತುತ ಕವನದಲ್ಲಿ ಕಾಲದ ಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನ ಮಾಡಿದ್ದಾರೆ. ಕವಿ ಬೇಂದ್ರೆಯವರ ಕಲ್ಪನೆ ಅಗಾಧವಾದುದು. ಕಾಲಪಕ್ಷಿಯ ವರ್ಣನೆ, ಅದರ ಕಾರ್ಯಸೂಚಿಯನ್ನು ಬೇಂದ್ರೆಯವರು ಹೆಣೆದ ಪರಿಯನ್ನು ನೋಡಿದರೆ ಅವರ ಕಲ್ಪನಾ ಸಾಮಥ್ರ್ಯ ಅರಿವಾಗುವುದು. ಇಂತಹ ಅಪಾರವಾದ ಕಲ್ಪನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹೆಣೆಯುತ್ತ ಪ್ರಸ್ತುತ ಕವನದ ಹೊಳಪನ್ನು ಕಾಯ್ದುಕೊಂಡಿರುವುದು ಸೋಜಿಗವೆನಿಸುತ್ತದೆ.
‘ಇರುಳು ಇರುಳು ಅಳಿದು ದಿನ ದಿನ ಬೆಳಗೆ’ ಅನ್ನುವುದು ಕಾಲಮಾನದ ಪುನರಾವರ್ತನೆಯಾಗಿದೆ. ಕಾಲವು ಚಲನಾಶೀಲವಾದುದು. ಅದು ವಿಶ್ವವ್ಯಾಪಿಯಾದುದು. ಈ ಕಾಲಪಕ್ಷಿಯು ಕೇವಲ ಗತಿಶೀಲವಾಗದೆ ಪ್ರಗತಿಶಿಲವೂ ಆಗಿದೆ ಎನ್ನುತ್ತಾರೆ ಕವಿ ಬೇಂದ್ರೆ. ಗಾವುದ ದೂರವನ್ನು ಸಂಚರಿಸಲು ಈ ಕಾಲಪಕ್ಷಿಗೆ ಬೇಕಾಗುವ ಸಮಯ ಮಾತ್ರ ‘ಎವೆ ತೆರೆದಿಕ್ಕುವ ಹೊತ್ತು’. ಅಂದರೇ ನಿಮಿಷ ಮಾತ್ರ. ಅತಿ ಚಿಕ್ಕ ಕಾಲಮಾನದಲ್ಲಿ, ಕೇವಲ ಕಣು ್ಣ ಮಿಟುಕಿಸುವ ಸಮಯದಲ್ಲಿ ಈ ಕಾಲ ಪಕ್ಷಿಯು ಗಾವುದ ದೂರ ಗಮಿಸಬಲ್ಲದು. ಬೇಂದ್ರೆಯವರು ಪರಿಚಯಿಸುವ ಕಾಲಪಕ್ಷಿ ಕೇವಲ ಸಮಯ ಪಕ್ಷಿಯಲ್ಲ. ವಿಶ್ವವನ್ನೇ ತನ್ನ ಚಲನೆಯಲ್ಲಿ ಬದಲಾಯಿಸುವ ಬೃಹತ್ ಚೈತನ್ಯ ಪಕ್ಷಿ. ಇತಂಹ ಪಕ್ಷಿಯನ್ನು ನೀವು ನೋಡಿದಿರಾ? ಎಂದು ಸಹೃದಯರನ್ನು ಪ್ರಶ್ನಿಸುತ್ತಾರೆ ವರಕವಿ ಬೇಂದ್ರೆ.
ಹೀಗೆ ಕವಿ ಬೇಂದ್ರೆಯವರು ಮೊದಲ ನುಡಿಯಲ್ಲಿಯೇ ಕಾಲ ಪಕ್ಷಿಯನ್ನು ಪರಿಚಯಿಸುವ ವಿಧಾನ ತುಂಬಾ ಸ್ವಾರಸ್ಯಕರವಾಗಿದೆ. ಕಲ್ಪನೆಯಂತೆ ಕಾಣುವ ಪದದಲ್ಲಿ ವಾಸ್ತವತೆಯನ್ನು ಹಿಡಿದಿಡುವ, ಚಮತ್ಕಾರಿಕವಾಗಿ ಬಳಸುವ ಬೇಂದ್ರೆ ಪ್ರತಿಭೆಯ, ರಸಸ್ವಾದನೆಯ ಮೌಲ್ಯವನ್ನು ಕಾಣಬಹುದು.

‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ವರಕವಿ, ಶಬ್ದಗಾರುಡಿಗ ದ. ರಾ. ಬೇಂದ್ರೆಯವರು ನವೋದಯ ಕಾಲಘಟ್ಟದಲ್ಲಿ ಬರೆದ ಕವನಗಳಲ್ಲಿ ‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂಬುದು ಪ್ರಮುಖ ಕವನವಾಗಿದೆ. ಬೇಂದ್ರೆಯವರು ಪ್ರಸ್ತುತ ಕವನದಲ್ಲಿ ಕಾಲದ ಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನ ಮಾಡಿದ್ದಾರೆ. ಕವಿ ಬೇಂದ್ರೆಯವರ ಕಲ್ಪನೆ ಅಗಾಧವಾದುದು. ಕಾಲಪಕ್ಷಿಯ ವರ್ಣನೆ, ಅದರ ಕಾರ್ಯಸೂಚಿಯನ್ನು ಬೇಂದ್ರೆಯವರು ಹೆಣೆದ ಪರಿಯನ್ನು ನೋಡಿದರೆ ಅವರ ಕಲ್ಪನಾ ಸಾಮಥ್ರ್ಯ ಅರಿವಾಗುವುದು. ಇಂತಹ ಅಪಾರವಾದ ಕಲ್ಪನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹೆಣೆಯುತ್ತ ಪ್ರಸ್ತುತ ಕವನದ ಹೊಳಪನ್ನು ಕಾಯ್ದುಕೊಂಡಿರುವುದು ಸೋಜಿಗವೆನಿಸುತ್ತದೆ.
ಕವಿ ಬೇಂದ್ರೆಯವರು ಇಲ್ಲಿ ಚೈತನ್ಯರೂಪಿ ಕಾಲಪಕ್ಷಿಯ ಭೌತಿಕ ವಿವರಗಳನ್ನು ಈ ನುಡಿಯಲ್ಲಿ ವಿವರಿಸಿದ್ದಾರೆ. ಪುಚ್ಚ ಅಂದರೆ ಅದು ಪಕ್ಷಿಯ ಬಾಲ. ಇದು ಹಿಂದಿರುತ್ತದೆ. ಇದು ಭೂತಕಾಲ. ಆದುದರಿಂದ ಇದರ ಬಣ್ಣವು ಕರಿ. ಇನ್ನು ಕಣ್ಣಿಗೆ ಕಾಣುತ್ತಿರುವ ಹೊಳೆಯುತ್ತಿರುವ ಗರಿಯ ಬಣ್ಣ ಬಿಳಿ. ಆದುದರಿಂದ ಇದು ವರ್ತಮಾನಕಾಲ. ನಮ್ಮ ಮುಂದೆ ಕಾಣುವುದು ಭವಿಷ್ಯತ್ ಕಾಲ. ಇದು ಉದಯಿಸುತ್ತಿರುವ ಸೂರ್ಯನಂತೆ ಕೆಂಪಾಗಿ ಬಂಗಾರದ ಬಣ್ಣದ್ದಾಗಿರುತ್ತದೆ. ಈ ಮೂರು ಕಾಲಗಳು ಚಲನೆಯ ಅಂಶಗಳು. ಇಂತಹ ಒಂದು ಬೃಹತ್ ಪಕ್ಷಿ ನೀವು ನೋಡಿದಿರಾ? ಎಂದು ಸಹೃದಯರನ್ನು ಪ್ರಶ್ನಿಸುತ್ತಾರೆ ವರಕವಿ ಬೇಂದ್ರೆ.
ಹೀಗೆ ಪ್ರಸ್ತುತ ನುಡಿಯಲ್ಲಿ ಬೇಂದ್ರೆಯವರು ಕಾಲವು ಚಲನಶಿಲವಾದುದು. ಚಲನಶೀಲತೆ ಜೀವಂತಿಕೆಯ ಗುಣ. ನಿಸರ್ಗದ ಹೊಂದಾಣಿಕೆಯಂತೆ ಕಾಲ ಉರುಳುತ್ತದೆ. ಅದಕ್ಕೆ ತಡೆ ಎಂಬುದಿಲ್ಲ. ಅದಕ್ಕೆ ಹೊಂದಿಕೊಳ್ಳಬೇಕು ಎಂದು ಕಾಲದ ಮೂರು ಅವಸ್ಥೆಗಳನ್ನು ಬಣ್ಣಗಳ ಹೋಲಿಕೆಯ ಮುಖಾಂತರ ಬಹುಸ್ವಾರಸ್ಯಯುತ ಮತ್ತು ಮೌಲ್ಯಯುತವಾಗಿ ವರ್ಣಿಸಿದ್ದಾರೆ.

‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ವರಕವಿ, ಶಬ್ದಗಾರುಡಿಗ ದ. ರಾ. ಬೇಂದ್ರೆಯವರು ನವೋದಯ ಕಾಲಘಟ್ಟದಲ್ಲಿ ಬರೆದ ಕವನಗಳಲ್ಲಿ ‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂಬುದು ಪ್ರಮುಖ ಕವನವಾಗಿದೆ. ಬೇಂದ್ರೆಯವರು ಪ್ರಸ್ತುತ ಕವನದಲ್ಲಿ ಕಾಲದ ಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನ ಮಾಡಿದ್ದಾರೆ. ಕವಿ ಬೇಂದ್ರೆಯವರ ಕಲ್ಪನೆ ಅಗಾಧವಾದುದು. ಕಾಲಪಕ್ಷಿಯ ವರ್ಣನೆ, ಅದರ ಕಾರ್ಯಸೂಚಿಯನ್ನು ಬೇಂದ್ರೆಯವರು ಹೆಣೆದ ಪರಿಯನ್ನು ನೋಡಿದರೆ ಅವರ ಕಲ್ಪನಾ ಸಾಮಥ್ರ್ಯ ಅರಿವಾಗುವುದು. ಇಂತಹ ಅಪಾರವಾದ ಕಲ್ಪನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹೆಣೆಯುತ್ತ ಪ್ರಸ್ತುತ ಕವನದ ಹೊಳಪನ್ನು ಕಾಯ್ದುಕೊಂಡಿರುವುದು ಸೋಜಿಗವೆನಿಸುತ್ತದೆ.
ಕಾಲದ ದೃಷ್ಟಿ ವೈಶಾಲ್ಯತೆಯುಳ್ಳ ಹಾಗೂ ತರತಮರಹಿತವಾದ ಸಮದೃಷ್ಟಿ ಆಕಾಶವು ಅನಂತವಾದುದು. ಅದರ ಬಣ್ಣ ಕಾಲ ಪಕ್ಷಿಯ ಬಣ್ಣ. ಅಂದರೇ ಕಾಲ ಪಕ್ಷಿಯೂ ಸಹ ಅನಂತವಾದುದು. ಅನಂತವಾದ ಆಕಾಶಕ್ಕೆ ರೆಕ್ಕೆ ಮೂಡಿ, ಚಿಕ್ಕೆಯ ಮಾಲೆಯನ್ನು ಹಾಕಿಕೊಂಡು ಹಾರುತ್ತಿದೆ. ನಾವು ಕಾಲ ಗಣನೆಗೆ ಬಳಸುವ, ಪ್ರಭಾಬಿಂಬಗಳಾದ ಸೂರ್ಯ ಚಂದ್ರರನ್ನೆ ತನ್ನ ಕಣ್ಣಾಗಿಸಿಕೊಂಡಿದೆ ಎಂದು ಅರ್ಥವತ್ತಾಗಿ ನುಡಿದಿರುವರು ಕವಿ ಬೇಂದ್ರೆ.
ಹೀಗೆ ಪ್ರಸ್ತುತ ನುಡಿಯಲ್ಲಿ ಕವಿ ಬೇಂದ್ರೆಯವರು ಕಾಲಪಕ್ಷಿಯು ತರತಮರಹಿತ ಸಮದೃಷ್ಟಿಯಿಂದ ಕೂಡಿದ ನೀಲಮೇಘಮಂಡಲ - ಸಮಬಣ್ಣದಂತೆ, ಅನಂತ ಆಕಾಶದಲ್ಲಿರುವ ಮುಗಿಲಿಗೆ ರೆಕ್ಕೆಗಳು ಮೂಡಿದಂತೆ, ನಕ್ಷv್ರÀ ಮಾಲೆಯನ್ನು ಧರಿಸಿಕೊಂಡು, ಸೂರ್ಯ ಚಂದ್ರರನ್ನು ಕಣ್ಣಾಗಿಸಿಕೊಂಡು ಅದು ಹಾರಾಡುತ್ತಿರುವ ನೋಟ ಅದ್ಭುತವಾದುದು ಎಂದು ಸ್ವಾರಸ್ಯಪೂರ್ಣವಾಗಿ ವ್ಯಕ್ತಪಡಿಸಿರುವರು.

‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ವರಕವಿ, ಶಬ್ದಗಾರುಡಿಗ ದ. ರಾ. ಬೇಂದ್ರೆಯವರು ನವೋದಯ ಕಾಲಘಟ್ಟದಲ್ಲಿ ಬರೆದ ಕವನಗಳಲ್ಲಿ ‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂಬುದು ಪ್ರಮುಖ ಕವನವಾಗಿದೆ. ಬೇಂದ್ರೆಯವರು ಪ್ರಸ್ತುತ ಕವನದಲ್ಲಿ ಕಾಲದ ಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನ ಮಾಡಿದ್ದಾರೆ. ಕವಿ ಬೇಂದ್ರೆಯವರ ಕಲ್ಪನೆ ಅಗಾಧವಾದುದು. ಕಾಲಪಕ್ಷಿಯ ವರ್ಣನೆ, ಅದರ ಕಾರ್ಯಸೂಚಿಯನ್ನು ಬೇಂದ್ರೆಯವರು ಹೆಣೆದ ಪರಿಯನ್ನು ನೋಡಿದರೆ ಅವರ ಕಲ್ಪನಾ ಸಾಮಥ್ರ್ಯ ಅರಿವಾಗುವುದು. ಇಂತಹ ಅಪಾರವಾದ ಕಲ್ಪನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹೆಣೆಯುತ್ತ ಪ್ರಸ್ತುತ ಕವನದ ಹೊಳಪನ್ನು ಕಾಯ್ದುಕೊಂಡಿರುವುದು ಸೋಜಿಗವೆನಿಸುತ್ತದೆ.
ಕಾಲಪಕ್ಷಿಯು ತನ್ನ ಪಯಣದಲ್ಲಿ ಅನೇಕ ಸಣ್ಣಸಣ್ಣ ರಾಜಮನೆತನಗಳನ್ನು ಹಾಗೂ ದೊಡ್ಡದೊಡ್ಡ ಸಾಮ್ರಾಜ್ಯಗಳನ್ನು ಹುಟ್ಟಿಸಿ, ಬೆಳೆಯಿಸಿ, ಅವುಗಳ ಫಲಿತವನ್ನು ಕೊಯ್ಲು ಮಾಡಿದೆ. ಅದೇ ರೀತಿ ಅನೇಕ ಸಾಮ್ರಾಜ್ಯಗಳನ್ನು, ರಾಜ್ಯಗಳನ್ನು, ಕೋಟೆಕೊತ್ತಲಗಳನ್ನು ನಾಶಗೊಳಿಸಿದೆ. ಕಾಲಪಕ್ಷಿಯು ತನ್ನ ಪಯಣದಲ್ಲಿ ಭೂಮಂಡಲದ ಮೇಲಿರುವ ಖಂಡಗಳನ್ನು ತೇಲಿಸಿ, ಮುಳುಗಿ ಪ್ರಾಕೃತಿಕ (ಪ್ರಗತಿ ಮತ್ತು ವಿನಾಶ) ಬದಲಾವಣೆಗಳಿಗೂ ಕಾರಣವಾಗಿದೆ. ಕಾಲಪಕ್ಷಿಯು ಸಾರ್ವಭೌಮರೆಂದು ಮೆರೆಯುತ್ತಿದ್ದ ಸಾಮ್ರಾಟರ ನೆತ್ತಿಯನ್ನು ಕುಕ್ಕಿ ಅವರ ಅಹಂಕಾರವನ್ನು ಮೆಟ್ಟಿ ನಿಂತಿದೆ ಎಂದು ಕವಿ ಬೇಂದ್ರೆಯವರು ವರ್ಣಿಸಿದ್ದಾರೆ.
ಹೀಗೆ ಪ್ತಸ್ತುತ ಪದ್ಯದಲ್ಲಿ ಕವಿ ಬೇಂದ್ರೆಯವರು ಚಲನಶೀಲತೆ ಎಂಬುದು ಬದುಕಿನ ಜೀವಂತಿಕೆಯ ಗುಣವಾಗಿದೆ. ನಿಸರ್ಗದ ಹೊಂದಾಣಿಕೆಯಂತೆ ಕಾಲ ಉರುಳುತ್ತದೆ. ಅದಕ್ಕೆ ತಡೆ ಎಂಬುದಿಲ್ಲ. ಎಂತಹ ಪ್ರಭಾವಶಾಲಿಯಾದರೂ ನಿಸರ್ಗದತ್ತವಾದ ಕಾಲಚಕ್ರದ ಎದುರಿನಲಿ ್ಲ ತಲೆಬಾಗಲೇಬೇಕು. ಅದಕ್ಕೆ ಹೊಂದಿಕೊಳ್ಳಬೇಕು. ಆಯಾ ಕಾಲದಲ್ಲಿ ನಡೆದ ಪ್ರತಿಯೊಂದು ಘಟನೆಯೂ ಕಾಲ ಉರುಳಿದಂತೆ ಇತಿಹಾಸವಾಗುತ್ತಾ ಹೋಗುತ್ತದೆ ಎಂಬ ಮೌಲ್ಯವನ್ನು ವ್ಯಕ್ತಪಡಿಸಿರುವರು.

‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ವರಕವಿ, ಶಬ್ದಗಾರುಡಿಗ ದ. ರಾ. ಬೇಂದ್ರೆಯವರು ನವೋದಯ ಕಾಲಘಟ್ಟದಲ್ಲಿ ಬರೆದ ಕವನಗಳಲ್ಲಿ ‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂಬುದು ಪ್ರಮುಖ ಕವನವಾಗಿದೆ. ಬೇಂದ್ರೆಯವರು ಪ್ರಸ್ತುತ ಕವನದಲ್ಲಿ ಕಾಲದ ಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನ ಮಾಡಿದ್ದಾರೆ. ಕವಿ ಬೇಂದ್ರೆಯವರ ಕಲ್ಪನೆ ಅಗಾಧವಾದುದು. ಕಾಲಪಕ್ಷಿಯ ವರ್ಣನೆ, ಅದರ ಕಾರ್ಯಸೂಚಿಯನ್ನು ಬೇಂದ್ರೆಯವರು ಹೆಣೆದ ಪರಿಯನ್ನು ನೋಡಿದರೆ ಅವರ ಕಲ್ಪನಾ ಸಾಮಥ್ರ್ಯ ಅರಿವಾಗುವುದು. ಇಂತಹ ಅಪಾರವಾದ ಕಲ್ಪನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹೆಣೆಯುತ್ತ ಪ್ರಸ್ತುತ ಕವನದ ಹೊಳಪನ್ನು ಕಾಯ್ದುಕೊಂಡಿರುವುದು ಸೋಜಿಗವೆನಿಸುತ್ತದೆ.
ಕಾಲಪಕ್ಷಿಯು ಯುಗಯುಗಗಳ ಆಗುಹೋಗುಗಳನ್ನು ಹಿಂದಕ್ಕೆ ತಳ್ಳುತ್ತ, ಹೊಸ ಮನ್ವಂತರದ ಪರಿವರ್ತನೆಗೆ / ಪ್ರಗತಿಗೆ ಕಾರಣವಾಗಿದೆ. ಕಾಲಪಕ್ಷಿಯು ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಭೂಮಂಡಲದ ಜೀವಿಗಳಿಗೆ ಚೈತನ್ಯ ನೀಡಿ, ಮುಂದಿನ ಜನಾಂಗದ ಮಕ್ಕಳನ್ನು ಹರಸಿ, ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತಿದೆ ಎನ್ನುವರು ಕವಿ ಬೇಂದ್ರೆ. ಇದನ್ನೆಲ್ಲ ಪರಿವೀಕ್ಷಿಸುವ ಕಣ್ಣು ನಮಗೆ ಬೇಕು. ಅಂತೆಲೇ ಕವಿ ಬೇಂದ್ರೆಯವರು ನಮ್ಮನ್ನು ಕೇಳುತ್ತಿದ್ದಾರೆ “ಹಕ್ಕಿ ಹಾರುತಿದೆ ನೋಡಿದಿರಾ?” ಎಂದು. ಮಾನವ ದೃಷ್ಟಿ ತತ್ಕಾಲಕ್ಕೆ ಸೀಮಿತವಾಗಿರುತ್ತದೆ. ಆದರೆ ಕವಿಯ ನೋಟ ಕಾಲಾತೀತ, ದೇಶಾತೀತ.
ಇಲ್ಲಿ ಕಾಲಪಕ್ಷಿಯ ಕೆಲಸ ಕೇವಲ ವಿನಾಶಕಾರಿಯಲ್ಲ. ಹೊಸ ಮನ್ವಂತರದ ಶುಭೋದಯವಾಗುವುದು ಈ ಕಾಲ ಪಕ್ಷಿಯಿಂದಲೇ. ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಪ್ರಾಣ ವಾಯುವನ್ನು ಕೊಟ್ಟು ನಿರ್ಜೀವ ಮನ್ವಂತರಗಳನ್ನು ಸಜೀವಗೊಳಿಸುವುದು ಈ ಕಾಲಪಕ್ಷಿ. ಭೂಮಂಡಲದಲ್ಲಿ ಜರುಗಿದ ಸಾಂಸ್ಕøತಿಕ ಬದಲಾವಣೆಗಳು, ಪುನಶ್ಚೇತನಗಳು ಕಾಲಪಕ್ಷಿಯ ಮಹಿಮೆಯಿಂದಲೇ ಎಂಬ ಮೌಲ್ಯಯುತ ಸಂದೇಶ ನೀಡಿರುವರು ವರಕವಿ ಬೇಂದ್ರೆಯವರು.

‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ವರಕವಿ, ಶಬ್ದಗಾರುಡಿಗ ದ. ರಾ. ಬೇಂದ್ರೆಯವರು ನವೋದಯ ಕಾಲಘಟ್ಟದಲ್ಲಿ ಬರೆದ ಕವನಗಳಲ್ಲಿ ‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂಬುದು ಪ್ರಮುಖ ಕವನವಾಗಿದೆ. ಬೇಂದ್ರೆಯವರು ಪ್ರಸ್ತುತ ಕವನದಲ್ಲಿ ಕಾಲದ ಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನ ಮಾಡಿದ್ದಾರೆ. ಕವಿ ಬೇಂದ್ರೆಯವರ ಕಲ್ಪನೆ ಅಗಾಧವಾದುದು. ಕಾಲಪಕ್ಷಿಯ ವರ್ಣನೆ, ಅದರ ಕಾರ್ಯಸೂಚಿಯನ್ನು ಬೇಂದ್ರೆಯವರು ಹೆಣೆದ ಪರಿಯನ್ನು ನೋಡಿದರೆ ಅವರ ಕಲ್ಪನಾ ಸಾಮಥ್ರ್ಯ ಅರಿವಾಗುವುದು. ಇಂತಹ ಅಪಾರವಾದ ಕಲ್ಪನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹೆಣೆಯುತ್ತ ಪ್ರಸ್ತುತ ಕವನದ ಹೊಳಪನ್ನು ಕಾಯ್ದುಕೊಂಡಿರುವುದು ಸೋಜಿಗವೆನಿಸುತ್ತದೆ.
ಶುಕ್ರ, ಚಂದ್ರ, ಮಂಗಳ ಲೋಕ ಸಂಚಾರ ಕಾಲದ ಒಂದು ಭೌತಿಕ ಲಕ್ಷಣ. ಬ್ರಿಟೀಷರ ಸಾಮಾ ್ರಜ್ಯಶಾಹಿಯಿಂದ ಪಾರಾಗುವ ಸ್ವಾತಂತ್ರ್ಯ ಚಿಂತನದ ಕಲ್ಪನಾ ಪಕ್ಷಿಯ ಹಾರಾಟವು ಇನ್ನೊಂದು ಲಕ್ಷಣ. ಅಂತೆಯೇ ಕಾಲದ ಓಟದಲ್ಲಿ ಬೆಳ್ಳಿ ಅಂದರೆ ಶುಕ್ರಗ್ರಹವು ಮನುಷ್ಯನಿಗೆ ಕೇವಲ ಹಳ್ಳಿಯಾಗಬಹುದು. ಚಂದ್ರಲೋಕವು ಬರಿ ಊರಾಗಬಹುದು. ಹಾಗೂ ಮಂಗಳ ಲೋಕವು ಭೂಮಿಗೆ ಬರಿ ಅಂಗಳವಾಗಬಹುದು. ಹೀಗೆ ಮಾನವನಿಗೆ ಈ ಆಕಾಶಕಾಯಗಳು ಆಡಲು, ಹಾಡಲು ಹಾಗೂ ಹಾರಾಡಲು ಅಂಗಳ ಆಗಬಹುದು ! ಇಲ್ಲಿ ಮಂಗಳ ಲೋಕದ ಅಂಗಳಕ್ಕೆ ಮಾನವನು ಏರುವ ಸೂಚನೆಯನ್ನು ಸಾರಿದ ಕವನ ಇದಾಗಿದೆ ಎನ್ನುವುದು ಗಮನಾರ್ಹ.
ಪ್ರಸ್ತುತ ನುಡಿಯಲ್ಲಿ ಮಾನವನು ಭೂಮಿಯಿಂದ ಇತರಗ್ರಹ, ಉಪಗ್ರಹಗಳಿಗೆ ಸಂಚರಿಸಬಹುದಾದ ದಾರ್ಶನಿಕ ಮುನ್ನೋಟ, ಮಾನವ ಪ್ರಪಂಚದಲ್ಲಾಗುವ ವೈಚಿತ್ರ್ಯದ ವಿಸ್ಮಯ ಮೌಲ್ಯಯುತವಾಗಿ ವ್ಯಕ್ತಗೊಂಡಿದೆ.

‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ವರಕವಿ, ಶಬ್ದಗಾರುಡಿಗ ದ. ರಾ. ಬೇಂದ್ರೆಯವರು ನವೋದಯ ಕಾಲಘಟ್ಟದಲ್ಲಿ ಬರೆದ ಕವನಗಳಲ್ಲಿ ‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂಬುದು ಪ್ರಮುಖ ಕವನವಾಗಿದೆ. ಬೇಂದ್ರೆಯವರು ಪ್ರಸ್ತುತ ಕವನದಲ್ಲಿ ಕಾಲದ ಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನ ಮಾಡಿದ್ದಾರೆ. ಕವಿ ಬೇಂದ್ರೆಯವರ ಕಲ್ಪನೆ ಅಗಾಧವಾದುದು. ಕಾಲಪಕ್ಷಿಯ ವರ್ಣನೆ, ಅದರ ಕಾರ್ಯಸೂಚಿಯನ್ನು ಬೇಂದ್ರೆಯವರು ಹೆಣೆದ ಪರಿಯನ್ನು ನೋಡಿದರೆ ಅವರ ಕಲ್ಪನಾ ಸಾಮಥ್ರ್ಯ ಅರಿವಾಗುವುದು. ಇಂತಹ ಅಪಾರವಾದ ಕಲ್ಪನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹೆಣೆಯುತ್ತ ಪ್ರಸ್ತುತ ಕವನದ ಹೊಳಪನ್ನು ಕಾಯ್ದುಕೊಂಡಿರುವುದು ಸೋಜಿಗವೆನಿಸುತ್ತದೆ.
ವಿಶ್ವಗಳು ಅನೇಕ ವಿರಬಹುದು, ಆ ವಿಶ್ವದಿಕ್ಕುಗಳು ಅನಂತವಿರಬಹುದು ಆದರೆ ಈ ಕಾಲಪಕ್ಷಿಯು ಈ ಎಲ್ಲ ಮಂಡಲಗಳ ಅಂಚನ್ನು ಮುಟ್ಟಿದೆ. ಇಷ್ಟೆ ಅಲ್ಲ ಈ ಅನಂತತೆಯ ಆಚೆಗೂ ಸಹ ಇದು ತನ್ನ ಚುಂಚನ್ನು ಚಾಚಿದೆ. ಕಾಲಪಕ್ಷಿಯ ಮನೋಗತ ಅರ್ಥವಾಗುವುದು ಅಸಾಧ್ಯವಾದುದು. ಸೃಷ್ಟಿಕತೃವಿನ ಈ ಬ್ರಹ್ಮಾಂಡವನ್ನೆ ಕಾಲಪಕ್ಷಿಯು ಒಡೆಯಲು ಹೊಂಚು ಹಾಕುತ್ತಿದೆ. ಅಂಡವು ಒಡೆದಾಗಲೇ ಹೊಸಸೃಷ್ಟಿ ಹೊರಗೆ ಬರುವುದು ಎಂಬುದು ಇಲ್ಲಿನ ಭಾವ. ಇಂತಹ ಪಕ್ಷಿ ಹಾರುತ್ತಿರುವುದನ್ನು ನೀವು ನೋಡಿದಿರಾ? ಎನ್ನುವ ವರಕವಿಗೆ ಮಾತ್ರ ಈ ಕಾಣ್ಕೆ, ಈ ನೋಟ ಮಾತ್ರ ಸಾಧ್ಯ.
ಪ್ರಸ್ತುತ ಪದ್ಯವು ಶಂಕರಾಚಾರ್ಯರ ಹೇಳಿಕೆ “ಮಾಯಾ ಕಲ್ಪಿತ ದೇಶ ಕಾಲಕಲನಾ (ದೇಶ ಮತ್ತು ಕಾಲ ಇವು ಕೇವಲ ಭ್ರಮೆ)” ಎಂಬುದನ್ನು ಪುಷ್ಟಿಕರಿಸುವಂತೆ, ಅನಂತತೆಯ ಆಚೆಯು ಕಾಲಪಕ್ಷಿಯ ಮನೋಗತ ಅರ್ಥವಾಗುವುದು ಅಸಾಧ್ಯವಾದುದು. ಕಾಲ ಪಕ್ಷಿಯ ಹೊಡೆತಕ್ಕೆ ಮಾನವ ಪ್ರಪಂಚದಲ್ಲಾಗುವ ವೈಚಿತ್ರ್ಯದ ವಿಸ್ಮಯದಲ್ಲಿ ಒಂದು ಉದ್ಗಾರವಿದೆ ಎಂಬುದನ್ನು ಮೌಲ್ಯಯುತವಾಗಿ ಅರ್ಥೈಸಿದೆ.

« BACK ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ