10-Kan ಹಲಗಲಿಬೇಡರು

RMH

ಪದ್ಯ ಪಾಠ-3 ಹಲಗಲಿ ಬೇಡರು

ಒಂದು ಅಂಕದ ಪ್ರಶ್ನೆಗಳು

ಉತ್ತರ : ಶಿಷ್ಟಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ಮೂಲ ಪ್ರೇರಣೆಯಾಗಿದೆ.

ಉತ್ತರ : ಲಾವಣಿ ಗೀತೆಗೆ ‘ವೀರಗೀತೆ’ ಎಂದು ಕರೆಯುವುದು ವಾಡಿಕೆ ಇದೆ.

ಉತ್ತರ : ಬ್ರಿಟಿಷ್ ಸರ್ಕಾರ ಭಾರತೀಯರ ಮೇಲೆ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಶಸ್ತ್ರಾಸ್ತ್ರ ನಿಶಸ್ತ್ರೀಕರಣದ ಆದೇಶ ಹೊರಡಿಸಿತು.

ಉತ್ತರ : ಕುಂಪಣಿ ಸರ್ಕಾರದ ಅನುಮತಿ ಇಲ್ಲದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬ ಶಸ್ತ್ರಾಸ್ತ್ರ ನಿಶಸ್ತ್ರೀಕರಣದ ಆದೇಶ ಹೊರಡಿಸಿತು.

ಉತ್ತರ : ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ ಈ ನಾಲ್ವರು ಹಲಗಲಿಯ ಪ್ರಮುಖರು.

ಉತ್ತರ : ಹಲಗಲಿಯ ಬೇಡರು ಕಾರಕೂನನ ಕಪಾಳಕ್ಕೆ ಹೊಡೆದು ನೆಲಕ್ಕೆ ಉರುಳಿಸಿದರು.

ಉತ್ತರ : ಹಲಗಲಿಯ ಗ್ರಾಮದ ಹೆಬ್ಬಾಗಿಲಿನ ಬಳಿ ನಿಂತು ಹೆಬಲಕ್(ಹೆನ್ರಿ ಹ್ಯಾವಲಾಕ್) ಸಾಹೇಬನು ಬುದ್ಧಿ ಮಾತನ್ನು ಹೇಳುತ್ತಾನೆ.

ಉತ್ತರ : ಹೆಬಲಕ್ (ಹೆನ್ರಿ ಹ್ಯಾವಲಾಕ್) ಸಾಹೇಬನನ್ನು ಜಡಗನು ಗುಂಡಿಕ್ಕಿ ಕೊಂದನು.

ಉತ್ತರ : ಬ್ರಿಟಿಷ ಅಧಿಕಾರಿ ಕಾರಸಾಹೇಬನು (ಅಲೆಗ್ಜಾಂಡರ್ ವಿಲಿಯಂ ಕೆರ್ರೆ) ಹಲಗಲಿನ್ನು ಲೂಟಿ ಮಾಡಲು ಆದೇಶಿಸಿದನು.

ಉತ್ತರ : ಹಲಗಲಿಯ ಮೇಲೆ ಬ್ರಿಟಿಷ ಸರ್ಕಾರದ ದಂಡು ದಾಳಿ ಮಾಡಿ, ಬೆಂಕಿ ಹಚ್ಚಿದ್ದರಿಂದ ಹಲಗಲಿಯ ಗುರುತು ಉಳಿಯದಂತಾಯಿತು.

ಉತ್ತರ : ‘ಹಲಗಲಿಯ ಭಂಟರ ಹತಾರ ಕದನ’ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ.

ಉತ್ತರ : ಹಲಗಲಿ ಗ್ರಾಮವು ಮುಧೋಳ ಸಂಸ್ಥಾನದಲ್ಲಿದ್ದು ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ.

ಉತ್ತರ : ಲಾವಣಿಕಾರನು ಕುರ್ತಕೋಟಿ ಕಲ್ಮೇಶನ ದಯೆಯಿಂದ ಹಾಡಿದೆ ಎಂದು ಹೇಳುತ್ತಾನೆ.

ಉತ್ತರ : ಬ್ರಿಟೀಷರು ‘ಈಸ್ಟ್ ಇಂಡಿಯಾ ಕಂಪನಿ’ ಎಂಬ ಹೆಸರಿನ ಆಡಳಿತಾತ್ಮಕ ಕಂಪನಿಯನ್ನು ರಚಿಸಿದ್ದರು.

ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )

ಉತ್ತರ : ಕ್ರಿ. ಶ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷ ಸರ್ಕಾರ ಅನುಮತಿ ಇಲ್ಲದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬ ಆದೇಶವನ್ನು ನೀಡಿತು. ಶಸ್ತ್ರಾಸ್ತ್ರಗಳನ್ನು ನೀಡಿದರೆ ತಮ್ಮ ಮೂಲ ಕಸುಬಾದ ಬೇಟೆಗಾರಿಕೆಗೆ ತೊಂದರೆ ಎಂಬುದನ್ನು ಅರಿತು ಈ ಆದೇಶವನ್ನು ವಿರೋಧಿಸಿ ಹಲಗಲಿಯ ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ ಮೊದಲಾದ ವೀರರು ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆ ಇದ್ದದ್ದು ಹಲಗಲಿಯ ಬೇಡರು ದಂಗೆ ಏಳಲು ಕಾರಣವಾಯಿತು.

ಉತ್ತರ : ಹಲಗಲಿಯ ಬೇಡರಾದ ಪೂಜೇರಿ ಹನುಮ, ಬ್ಯಾಡರ ಬಾಲ, ರಾಮ, ಜಡಗ ಇವರುಗಳು ಬ್ರಿಟಿಷ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆ ದಂಗೆ ಎದ್ದರು. ಈ ದಂಗೆಯನ್ನು ಹತ್ತಿಕ್ಕಲು ಬಂದ ಕಾರಕೂನನ ಕಪಾಳಕ್ಕೆ ಹೊಡೆದು ಸಿಪಾಯಿಗಳನ್ನು ಹೊಡೆದುರುಳಿಸಿದರು. ಇದರಿಂದ ಕೋಪಗೊಂಡ ಕುಂಪಣಿ ಸರ್ಕಾರದ ಅಧಿಕಾರಿಗಳು ಹಲಗಲಿಯ ಬೇಡರ ದಂಗೆಯನ್ನು ಬಗ್ಗುಬಡಿಯಲು ದಂಡನ್ನು ಕರೆಯಿಸಿದರು.

ಉತ್ತರ : ನಿಶ್ಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ಬ್ರಿಟಿಷ್ ಸರ್ಕಾರದ ವಿರುದ್ಧ ದಂಗೆ ಎದ್ದ ಹಲಗಲಿಯ ಬೇಡರನ್ನು ಬಗ್ಗುಬಡಿಯಲು ಬ್ರಿಟಿಷರ ದಂಡು ಬಂದಿತು. ಬ್ರಿಟಿಳರ ದಂಡಿನ ಸಿಪಾಯಿಗಳು ಹಲಗಲಿಯ ಬೇಡರ ಬೆನ್ನು ಹತ್ತಿ ಕೊಂದರು. ಎದುರಿಗೆ ಸಿಕ್ಕಸಿಕ್ಕವರಿಗೆಲ್ಲ ಕರುಣೆ ಇಲ್ಲದೆ ಗುಂಡು ಹೊಡೆದು ಸಾಯಿಸಿದರು. ಬ್ರಿಟಿಷ್ ಸಿಪಾಯಿಗಳ ಗುಂಡಿಗೆ ಹೆದರಿ ಹಲಗಲಿಯ ಬೇಡರು ಗುಡ್ಡದ ಕಡೆಗೆ ಓಡಿ ತಲೆಮರೆಸಿಕೊಂಡರು.

ಉತ್ತರ : ಲಾವಣಿಗಳು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ಒಂದು ಘಟನೆಯನ್ನು ಆಧರಿಸಿ, ಕಥನಾತ್ಮಕವಾಗಿ ಕಟ್ಟಿದ ಹಾಡನ್ನು ಲಾವಣಿಗಳೆನ್ನುವರು. ಲಾವಣಿಗಳು ಸಾಮಾನ್ಯವಾಗಿ ವೀರತನ ಹಾಗೂ ಸಾಹಸವನ್ನು ವರ್ಣಿಸುವುದರಿಂದ ಅವುಗಳನ್ನು ವೀರಗೀತೆಗಳು ಎನ್ನುವರು.

ಉತ್ತರ : ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ ಲಾವಣಿಗಳು. ವೀರತನ, ಸಾಹಸವನ್ನು ವರ್ಣಿಸುವುದರಿಂದ ಲಾವಣಿಗೆ ‘ವೀರಗೀತೆ’ ಎಂದು ಕರೆಯುವುದು ವಾಡಿಕೆ ಇದೆ. ಕಥನಾತ್ಮಕ ಕಾವ್ಯಗಳೇ ಲಾವಣಿಗಳು. ಏಕ ಘಟನೆಯನ್ನಾಧರಿಸಿದ್ದು ಕಥಾನಾತ್ಮಕವಾಗಿರುವ ಲಾವಣಿಗಳು ಹಾಡಿನ ರೂಪದಲ್ಲಿ ಕಟ್ಟಿದ ಕತೆ. ಜನಸಾಮಾನ್ಯರು ರಚಿಸಿರುವ ಲಾವಣಿಗಳು ವಸ್ತುನಿಷ್ಠವಾಗಿರುತ್ತವೆ. ಹಿಂದಿನಿಂದ ವಾಕ್ಪರಂಪರೆಯಲ್ಲಿ ಉಳಿದು ಬಂದಿದ್ದು, ಐತಿಹಾಸಿಕ ಮಹತ್ವ ಪಡೆದಿವೆ. ಗದ್ಯದ ಹೊಳಹನ್ನು, ಭಾವಗೀತದ ಸತ್ವವನ್ನು ಹೊಂದಿರುವ ಲಾವಣಿಗಳು ಧ್ವನಿ ರಮ್ಯತೆಯನ್ನು ಅರ್ಥಸೌಂದರ್ಯವನ್ನು ಹೊಂದಿವೆ.

ಉತ್ತರ : ಭಾರತ ದೇಶದ ಆಡಳಿತ ಸೂತ್ರ ಹಿಡಿದ ಬ್ರಿಟಿಷರು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅನಂತರ ಭಾರತೀಯರ ಮೇಲೆ ನಿಶ್ಶಸ್ತ್ರೀಕರಣದ ಹುಕುಮನ್ನು ಹೊರಡಿಸಿದರು. ಈ ಶಾಸನದ ಪ್ರಕಾರ ಸರ್ಕಾರದ ಅನುಮತಿಯಿರದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬುದಾಗಿತ್ತು.

ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ (3 ಅಂಕ)

ಆಯ್ಕೆ : ಈ ವಾಕ್ಯವನ್ನು ‘ಡಾ. ಬಿ. ಎಸ್. ಗದ್ದಗಿಮಠ’ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಲ್ಲಿನ ಲಾವಣಿಗೀತೆ ‘ಹಲಗಲಿಯ ಬೇಡರು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ಕ್ರಿ. ಶ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷ ಸರ್ಕಾರ ಭಾರತೀಯರ ಮೇಲೆ ‘ನಿಶ್ಯಸ್ತ್ರೀಕರಣದ’ ಆದೇಶವನ್ನು ಹೊರಡಿಸಿತು.
ಈ ಆದೇಶದ ಅನ್ವಯ ಬ್ರಿಟಿಷ ಸರ್ಕಾರದ ಅನುಮತಿ ಇಲ್ಲದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕಾಗಿತ್ತು. ಹೀಗಾಗಿ ಈ ಆದೇಶವನ್ನು ವಿರೋಧಿಸಿ ಭಾರತದಲ್ಲಿ ಅಲ್ಲಲ್ಲಿ ದಂಗೆಗಳಾದವು. ಅವುಗಳಲ್ಲಿ ಹಲಗಲಿಯ ಬೇಡರ ಹೋರಾಟವು ಪ್ರಮುಖವಾದುದು. ಹೀಗೆ ಕಂಪನಿ ಸರ್ಕಾರವು ಜನರಿಂದ ಬಲವಂತವಾಗಿ ಆಯುಧಗಳನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ಭಾರತೀಯರ ಮೇಲಿನ ಬ್ರಿಟಿಷರ ದಬ್ಬಾಳಿಕೆ ಮತ್ತು ದೌರ್ಜನ್ಯ ತಿಳಿಸುವ ಈ ಮಾತು ಅರ್ಥವತ್ತಾಗಿ ಮೂಡಿಬಂದಿದೆ.

ಆಯ್ಕೆ : ಈ ವಾಕ್ಯವನ್ನು ‘ಡಾ. ಬಿ. ಎಸ್. ಗದ್ದಗಿಮಠ’ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಲ್ಲಿನ ಲಾವಣಿಗೀತೆ ‘ಹಲಗಲಿಯ ಬೇಡರು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ಬ್ರಿಟಿಷರು ಆಜ್ಞೆಯನ್ನು ಹೊರಡಿಸಿ, ಜನರಿಂದ ಆಯುಧಗಳನ್ನು ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನಿಸುತ್ತಾರೆ.
ಈ ಆದೇಶವನ್ನು ವಿರೋಧಿಸಿ ಹಲಗಲಿಯ ಗ್ರಾಮದ ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ ಮೊದಲಾದ ವೀರರು ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆ ಹೋರಾಟ ಮಾಡಲು ನಿರ್ಧರಿಸುತ್ತಾರೆ. ಅಲ್ಲದೇ ತಮ್ಮ ಬಳಿಯಲ್ಲಿರುವ ಆಯುಧಗಳನ್ನು ನೀಡಿದರೆ ತಾವು ಬದುಕಿದ್ದು ಸತ್ತಂತೆ ಎಂದು ಹೇಳಿಕೊಂಡ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ಹಲಗಲಿಯ ಬೇಡರು “ಆಯುಧಗಳು ತಮ್ಮ ಪ್ರಾಣಕ್ಕಿಂತ ಮಿಗಿಲಾದುದು ಎಂಬ ಭಾವನೆಯನ್ನು ಹೊಂದಿದ್ದರು” ಎಂಬುದು ಈ ಮೇಲಿನ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.

ಆಯ್ಕೆ : ಈ ವಾಕ್ಯವನ್ನು ‘ಡಾ. ಬಿ. ಎಸ್. ಗದ್ದಗಿಮಠ’ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಲ್ಲಿನ ಲಾವಣಿಗೀತೆ ‘ಹಲಗಲಿಯ ಬೇಡರು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ಹಲಗಲಿಯ ಬೇಡರು ನಿಶ್ಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ಬ್ರಿಟಿಷ ಸರ್ಕಾರದ ವಿರುದ್ಧ ದಂಗೆ ಎಳುತ್ತಾರೆ. ಹಲಗಲಿಯ ಬೇಡರನ್ನು ಬಗ್ಗುಬಡಿಯಲು ಬ್ರಿಟಿಷರ ದಂಡು ಬಂದು, ಹಲಗಲಿಯ ಬೇಡರ ಬೆನ್ನು ಹತ್ತಿ ಕೊಲ್ಲುತ್ತಾರೆ ಅಲ್ಲದೇ ಎದುರಿಗೆ ಸಿಕ್ಕಸಿಕ್ಕವರಿಗೆಲ್ಲ ಕರುಣೆ ಇಲ್ಲದೆ ಗುಂಡು ಹೊಡೆದು ಸಾಯಿಸಿದರು ಎಂದು ಹೇಳುವ ಸಂದರ್ಭದಲ್ಲಿ ಲಾವಣಿಕಾರನು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ : ಹಲಗಲಿಯ ಬೇಡರ ಮೇಲೆ ನಿಷ್ಕರುಣೆಯಿಂದ ಗುಂಡು ಹಾರಿಸಿಕೊಲ್ಲುವ ಬ್ರಿಟಿಷರ ಕ್ರೌರ್ಯದ ಪರಮಾವಧಿಯನ್ನು ಈ ಮೇಲಿನ ಮಾತಿನಲ್ಲಿ ಕಾಣಬಹುದಾಗಿದೆ.

ಆಯ್ಕೆ : ಈ ವಾಕ್ಯವನ್ನು ‘ಡಾ. ಬಿ. ಎಸ್. ಗದ್ದಗಿಮಠ’ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಲ್ಲಿನ ಲಾವಣಿಗೀತೆ ‘ಹಲಗಲಿಯ ಬೇಡರು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ಕ್ರಿ. ಶ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷ ಸರ್ಕಾರ ಭಾರತೀಯರ ಮೇಲೆ ‘ನಿಶ್ಯಸ್ತ್ರೀಕರಣದ’ ಆದೇಶವನ್ನು ಹೊರಡಿಸಿತು.
ಜನರಿಂದ ಆಯುಧಗಳನ್ನು ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನಿದ ಸಂದರ್ಭದಲ್ಲಿ ಹಲಗಲಿಯ ಬೇಡರು ಆದೇಶವನ್ನು ವಿರೋಧಿಸಿ ದಂಗೆ ಎಳುತ್ತಾರೆ. ದಂಗೆಯನ್ನು ಹತ್ತಿಕ್ಕಲು ಬಂದ ಬ್ರಿಟಿಷ ಅಧಿಕಾರಿಯನ್ನೇ ಹತ್ಯೆಗೈಯುತ್ತಾರೆ. ಇದರಿಂದ ಕೋಪಗೊಂಡ ಬ್ರಿಟಿಷ ಅಧಿಕಾರಿ ‘ಕಾರಸಾಹೇಬನು’ ಹಲಗಲಿ ಗ್ರಾಮಕ್ಕೆ ಮುತ್ತಿಗೆ ಹಾಕಿ ದ್ವಂಸ ಮಾಡಿ, ಗ್ರಾಮವು ಎಳ್ಳಷ್ಟು ಗುರ್ತು ಉಳಿಯದಂತೆ ಮಾಡಿದ ಕಥಾನಕ ಸಂದರ್ಭವನ್ನು ವರ್ಣಿಸುವ ಸಂದರ್ಭದಲ್ಲಿ ಲಾವಣಿಕಾರನು ಈ ಮಾತನ್ನು ಹೇಳುತ್ತಾನೆ
ಸ್ವಾರಸ್ಯ : ಬ್ರಿಟಿಷ ಅಧಿಕಾರಿಗಳ ದರ್ಪ, ದೌರ್ಜನ್ಯ, ತಿರುಗಿ ಬಿದ್ದವರ ಮೇಲೆ ಕೈಗೊಂಡ ಕ್ರಮ ಹಾಗೂ ಅದನ್ನು ವಿರೋಧಿಸಿ ಪ್ರತಿಭಟನೆ ಮಾಡಿದ ಹಲಗಲಿಯ ವೀರರ ಕೆಚ್ಚೆದೆ ಈ ಮೇಲಿನ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.

ಆಯ್ಕೆ : ಈ ವಾಕ್ಯವನ್ನು‘ಡಾ. ಬಿ. ಎಸ್. ಗದ್ದಗಿಮಠ’ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಲ್ಲಿನ ಲಾವಣಿಗೀತೆ ‘ಹಲಗಲಿಯ ಬೇಡರು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ಆಯುಧಗಳನ್ನು ಕೊಡಲೊಪ್ಪದ ಹಲಗಲಿಯ ಬೇಡರು ಬ್ರಿಟಿಷ ಗುಮಾಸ್ತನ ಕಪಾಳಕ್ಕೆ ಹೊಡೆದ ಹಾಗೂ ಪ್ರತಿರೋಧ ತೋರಿದ ಸೀಪಾಯಿಗಳನ್ನು ಸಾಯಿಸಿ ನೆಲಕ್ಕುರುಳಿಸಿದ ದುಃಖದ ಸುದ್ದಿ ಕೇಳಿದ ಸಾಹೇಬನು ಕ್ರೋಧಗೊಂಡು ತನ್ನ ಕೈಗಳನ್ನು ಕಿವಿಚಿಕೊಂಡು ಸೈ£ಕರಿಗೆ ಆದೇಶ £ೀಡಿದನು ಎಂಬ ಸಂದರ್ಭದಲಿ ್ಲ ಲಾವಣಿಕಾರನು ನುಡಿದ ಮಾತಿದು.
ಸ್ವಾರಸ್ಯ : ಆದೇಶವನ್ನು ತಿರಸ್ಕರಿಸಿದ ಹಲಗಲಿಯ ಬೇಡರ ಮೇಲೆ ಬ್ರಿಟಿಷ ಅಧಿಕಾರಿಗೆ ಬಂದ ಕೋಪದ ತೀವ್ರತೆ ಪ್ರಸ್ತುತ ಮಾತಿನಲ್ಲಿ ವ್ಯಕ್ತಗೊಂಡಿದೆ.
ಸ್ವಾರಸ್ಯ : ಹಲಗಲಿಯ ಬೇಡರ ಮೇಲೆ ನಿಷ್ಕರುಣೆಯಿಂದ ಗುಂಡು ಹಾರಿಸಿಕೊಲ್ಲುವ ಬ್ರಿಟಿಷರ ಕ್ರೌರ್ಯದ ಪರಮಾವಧಿಯನ್ನು ಈ ಮೇಲಿನ ಮಾತಿನಲ್ಲಿ ಕಾಣಬಹುದಾಗಿದೆ.

ಆಯ್ಕೆ : ಈ ವಾಕ್ಯವನ್ನು ‘ಡಾ. ಬಿ. ಎಸ್. ಗದ್ದಗಿಮಠ’ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಲ್ಲಿನ ಲಾವಣಿಗೀತೆ ‘ಹಲಗಲಿಯ ಬೇಡರು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ದಂಗೆ ಎದ್ದ ಹಲಗಲಿಯ ಬೇಡರನ್ನು ಬಗ್ಗುಬಡಿಯಲು ಬ್ರಿಟಿಷರ ದಂಡು ಹಲಗಲಿಗೆ ಬರುತ್ತಾರೆ. ಚಟೇಕಾರರು ಊರನ್ನು ಪಹರೆ ಕಾಯುವಾಗ ಹಲಗಲಿಯ ಬೇಡರು ಗುಡ್ಡದ ಕಡೆಗೆ ಓಡಿದರು. ಆಗ ಗ್ರಾಮದ ಅಗಸಿಗೆ ಬಂದ ಬ್ರಿಟಿಷ ಅಧಿಕಾರಿ ಹೆಬಲಕನು ಬೇಡರಿಗೆ ಬುದ್ಧಿಮಾತನ್ನು ಹೇಳುತ್ತ, ಶರಣಾಗಲು ತಿಳಿಸುವಾಗ ಮೇಲಿನ ಮಾತನ್ನು ಹಲಗಲಿಯ ಜನರನ್ನು ಉದ್ದೇಶಿಸಿ ಹೇಳುತ್ತಾನೆ.
ಸ್ವಾರಸ್ಯ : ಹೆಬಲಕ್ ಅಧಿಕಾರಿಯು ಮೋಸದ ಮಾತಿನಿಂದ ಬೇಡರನ್ನು ಸದೆಬಡೆಯವ ಹಾಗೂ ಎಚ್ಚರಿಸುವ ಮಾತು ಇಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.

ಎಂಟು-ಹತ್ತು ವಾಕ್ಯದಲ್ಲಿ ಉತ್ತರ ಬರೆಯಿರಿ(4 ಅಂಕ)

ಉತ್ತರ : ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ಆಡಳಿತ ಸೂತ್ರ ಹಿಡಿದರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅನಂತರ ಭಾರತೀಯರ ಮೇಲೆ ನಿಶ್ಶಸ್ತ್ರೀಕರಣದ ಹುಕುಮನ್ನು ಹೊರಡಿಸಿದರು.
ಈ ಶಾಸನದ ಪ್ರಕಾರ ಸರ್ಕಾರದ ಅನುಮತಿಯಿರದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬುದಾಗಿತ್ತು.
ಆಯುಧಗಳನ್ನು ಕೊಡಲೊಪ್ಪದ ಜನರ ಬಳಿ ಬಲಂತವಾಗಿ ಕಿತ್ತುಕೊಳ್ಳಿ ಎಂದು ಬ್ರಿಟಿಷ ‘ಈಸ್ಟ್ ಇಂಡಿಯಾ ಕಂಪನಿ’ ವಿದೇಶದಿಂದಲೇ ಆದೇಶ ಹೊರಡಿಸಿತು.
ಈ ಹುಕುಮನ್ನು ವಿರೋಧಿಸಿ ಹಲಗಲಿಯ ಬೇಡ ಜನಾಂಗ ಒಂದಾಗಿ ಹೋರಾಡಲು ತೀರ್ಮಾನಿಸಿದರು.
ಅದರಲ್ಲೂ ಆ ಗ್ರಾಮದ ಪ್ರಮುಖ ಶೂರರಾದ ಪೂಜಾರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ ನಾಲ್ಕು ಮಂದಿ ಒಂದಾಗಿ ನಮ್ಮ ಬಳಿಯಿರುವ ಜೀವನ ನಿರ್ವಹಣೆಗೆ ಅಗತ್ಯವಾಗಿರುವ ಆಯಧಗಳನ್ನು ಪ್ರಾಣ ಹೋದರೂ ಕೊಡಬಾರದು.
ಆಯಧಗಳಿಲ್ಲದ ಜೀವನ ಇದ್ದು ಸತ್ತಂತೆ ಎಂದು ಭಾವಿಸಿದರು. ಅಲ್ಲದೇ ತಮ್ಮ ಹಲಗಲಿ ಗ್ರಾಮದ ಎಲ್ಲ ಜನರನ್ನು ಒಟ್ಟು ಗೂಡಿಸಿ ತಮ್ಮ ನಿರ್ಧಾರ ತಿಳಿಸಿ, “ತಾವು ನಿಮ್ಮೊಂದಿಗೆ ಇದ್ದೇವೆ. ಯಾವುದೇ ಕಾರಣಕ್ಕೂ ಆಯುಧಗಳನ್ನು ಕಂಪನಿ ಸರ್ಕಾರಕ್ಕೆ ಒಪ್ಪಿಸಬಾರದು” ಎಂದು ಹೇಳಿ ಕಂಪನಿ ಸರ್ಕಾರದ ವಿರುದ್ಧ ದಂಗೆ ಎದ್ದರು.
ಆ ಸಂದರ್ಭದಲ್ಲಿ ಆಯುಧಗಳನ್ನು ಬಲವಂತವಾಗಿ ಕಸಿದು ಕೊಳ್ಳಲು ಬಂದ ಬ್ರಿಟಿಷ ಗುಮಾಸ್ತನ ಕಪಾಳಕ್ಕೆ ಹೊಡೆದರು.
ಆಗ ಹೆಚ್ಚಿನ ಸೈನ್ಯದೊಂದಿಗೆ ಗ್ರಾಮದ ಅಗಸಿಗೆ ಬಂದ ಬ್ರಿಟಿಷ ಅಧಿಕಾರಿ ಹೆಬಲಕನು ಬೇಡರಿಗೆ ಬುದ್ಧಿಮಾತನ್ನು ಹೇಳುತ್ತ, ಶರಣಾಗಲು ತಿಳಿಸುತ್ತಾನೆ.
ಜಡಗನು ವಿಶ್ವಾಸ ದ್ರೋಹಿಗಳಾಗಿರುವ ಇವರ ಮೇಲೆ ನಮಗೆ ನಂಬಿಕೆ ಸಾಲದು ಎಂದು ಹೇಳಿ ಹೆಬಲಕ್ ಸಾಹೇಬನ ಮೇಲೆ ಗುಂಡೊಂದನ್ನು ಹಾರಿಸಿ ಕೊಲ್ಲುತ್ತಾನೆ.
ಇದರಿಂದ ಕ್ರೋಧಗೊಂಡ ಕಂಪ£ ಸರ್ಕಾರದ ಮುಖ್ಯಸ್ಥ ಕಾರಸಾಹೇಬ ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿಯನ್ನು ಮುತ್ತಿ ದಂಗೆ ಎದ್ದವರನ್ನು ಬಗ್ಗುಬಡಿಯಲು ಮುತ್ತಿ ದಂಗೆ ಎದ್ದವರನ್ನು ಬಗ್ಗು ಬಡಿಯಲು ಹೇಳಿದ್ದಲ್ಲದೇ ಊರನ್ನು ಲೂಟಿ ಮಾಡಲು ಆದೇಶಿಸುವನು.
ಆಗ ಕ್ರೋಧಗೊಂಡ ಬ್ರಿಟಿಷ ಸೈನಿಕರು ಹಲಗಲಿಯ ಬೇಡರ ಮೇಲೆ ಸಿಡಿಲು ಸಿಡಿಯುವಂತೆ ಗುಂಡಿನ ಮಳೆಯನ್ನು ಸುರಿಸುತ್ತಾರೆ. ಹಲಗಲಿಯ ಬೇಡರ ಮೇಲೆ ವೀರ ಅಟ್ಟಹಾಸ ಪ್ರದರ್ಶಿಸಿದ ಬ್ರಿಟಿಷ ಸೈನಿಕರು ನಂತರ ಬೇಡರ ಕೃಷಿ ಉಪಕರಣಗಳನ್ನು ಆಹಾರ ಪದಾರ್ಥಗಳನ್ನು ಮತ್ತು ದಿನನೀತ್ಯ ಬಳಸುತ್ತಿದ್ದ ವಸ್ತುಗಳೆಲ್ಲವನ್ನು ದೋಚಿದರು. ಅಲ್ಲದೇ ಹಲಗಲಿ ಊರಿಗೆ ಬೆಂಕಿ ಇಟ್ಟು ಸುಟ್ಟು ಬೂದಿ ಮಾಡಿದರು.
ಹೀಗೆ ಹಲಗಲಿ ದಂಗೆಯನ್ನು ಸರ್ಕಾರ ನಿಯಂತ್ರಿಸಿತು.

ಉತ್ತರ : ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ಆಡಳಿತ ಸೂತ್ರ ಹಿಡಿದರು.
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅನಂತರ ಭಾರತೀಯರ ಮೇಲೆ ನಿಶ್ಶಸ್ತ್ರೀಕರಣದ ಹುಕುಮನ್ನು ಹೊರಡಿಸಿದರು.
ಈ ಶಾಸನದ ಪ್ರಕಾರ ಸರ್ಕಾರದ ಅನುಮತಿಯಿರದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬುದಾಗಿತ್ತು.
ಈ ಹುಕುಮನ್ನು ವಿರೋಧಿಸಿ ಹಲಗಲಿಯ ಬೇಡ ಜನಾಂಗ ಒಂದಾಗಿ ಹೋರಾಡಲು ತೀರ್ಮಾ£ಸಿದರು.
ಅದರಲ್ಲೂ ಆ ಗ್ರಾಮದ ಪ್ರಮುಖ ಶೂರರಾದ ಪೂಜಾರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ ನಾಲ್ಕು ಮಂದಿ ಒಂದಾಗಿ ನಮ್ಮ ಬಳಿಯಿರುವ ಜೀವನ ನಿರ್ವಹಣೆಗೆ ಅಗತ್ಯವಾಗಿರುವ ಆಯಧಗಳನ್ನು ಪ್ರಾಣ ಹೋದರೂ ಕೊಡಬಾರದು.
ಆಯಧಗಳಿಲ್ಲದ ಜೀವನ ಇದ್ದು ಸತ್ತಂತೆ ಎಂದು ಭಾವಿಸಿದರು. ಆ ಸಂದರ್ಭದಲ್ಲಿ ಆಯುಧಗಳನ್ನು ಬಲವಂತವಾಗಿ ಕಸಿದು ಕೊಳ್ಳಲು ಬಂದ ಬ್ರಿಟಿಷ ಗುಮಾಸ್ತನ ಕಪಾಳಕ್ಕೆ ಹೊಡೆದರು.
ಇದರಿಂದ ಪ್ರವಾಹೋಪಾದಿಯಲ್ಲಿ ಹೆಚ್ಚಿನ ಬ್ರಿಟಿಷ ಸೈನ್ಯ ಸನ್ನದ್ಧವಾಗಿ ಹಲಗಲಿಗೆ ಬಂದು ಬೇಡರನ್ನು ಬೆನ್ನು ಹತ್ತಿ, ತಿರು ತಿರುವಿ ಕಡಿದು ಹಾಕಿತು.
ಅಲ್ಲದೇ ಸಿಕ್ಕವರನ್ನು ನಡುವೆ ಹಾಕಿಕೊಂಡು ಕರುಣೆ ತೋರದೇ ಗುಂಡು ಹಾರಿಸಿ ಕೊಂದು ಹಾಕಿತು.
ಆಗ ಗ್ರಾಮದ ಅಗಸಿಗೆ ಬಂದ ಬ್ರಿಟಿಷ ಅಧಿಕಾರಿ ಹೆಬಲಕನು ಬೇಡರಿಗೆ ಬುದ್ಧಿಮಾತನ್ನು ಹೇಳುತ್ತ, ಶರಣಾಗಲು ತಿಳಿಸುತ್ತಾನೆ.
ಅಲ್ಲದೇ ನಿಮ್ಮ ಮಾತನ್ನು ಒಪ್ಪುತ್ತೇವೆ, ಸುಮ್ಮನೇ ಸತ್ತು ಹೋಗಬೇಡಿರಿ ಎನ್ನುತ್ತಾನೆ.
ಜಡಗನ್ನ ವಿಶ್ವಾಸ ದ್ರೋಹಿಗಳಾಗಿರುವ ಇವರ ಮೇಲೆ ನಮಗೆ ನಂಬಿಕೆ ಸಾಲದು ಎನ್ನುತ್ತಾನೆ.
ಅಲ್ಲದೇ ಒಳಸಂಚಿನಿಂದ ಮೋಸ ಮಾಡಿ ನಮ್ಮ ದೇಶವನ್ನು ಗೆದೆಯಲು ಬಂದಿರುವ ಇವರು ನಮಗೆ ಮುಂದೆ ತೊಂದರೆದಾಯಕರಾಗುವರು ಎಂದು ಹೇಳಿ ಹೆಬಲಕ್ ಸಾಹೇಬನ ಮೇಲೆ ಗುಂಡೊಂದನ್ನು ಹಾರಿಸುತ್ತಾನೆ.
ಆ ಒಂದು ಗುಂಡಿಗೆ ಸಾಹೇಬನು ಸತ್ತು ಹೋಗುವನು. ಇದರಿಂದ ಕ್ರೋಧಗೊಂಡ ಕಾರಸಾಹೇಬ ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿಯನ್ನು ಮುತ್ತಿ ದಂಗೆ ಎದ್ದವರನ್ನು ಬಗ್ಗು ಬಡಿಯಲು ಹೇಳಿದ್ದಲ್ಲದೇ ಊರನ್ನು ಲೂಟಿ ಮಾಡಲು ಆದೇಶಿಸುವನು.
ಆಗ ಕ್ರೋಧಗೊಂಡ ಬ್ರಿಟಿಷ ಸೈನಿಕರು ಹಲಗಲಿಯ ಬೇಡರ ಮೇಲೆ ಸಿಡಿಲು ಸಿಡಿಯುವಂತೆ ಗುಂಡಿನ ಮಳೆಯನ್ನು ಸುರಿಸುತ್ತಾರೆ.
ಹಲಗಲಿಯ ಬೇಡರ ಮೇಲೆ ವೀರ ಅಟ್ಟಹಾಸ ಪ್ರದರ್ಶಿಸಿದ ಬ್ರಿಟಿಷ ಸೈನಿಕರು ನಂತರ ಬೇಡರ ಕೃಷಿ ಉಪಕರಣಗಳನ್ನು, ಆಹಾರ ಪದಾರ್ಥಗಳನ್ನು ಮತ್ತು ದಿನನಿತ್ಯ ಬಳಸುತ್ತಿದ್ದ ವಸ್ತುಗಳೆಲ್ಲವನ್ನು ದೋಚಿದರು.
ಅಲ್ಲದೇ ಹಲಗಲಿ ಊರಿಗೆ ಬೆಂಕಿ ಇಟ್ಟು ಸುಟ್ಟು ಬೂದಿ ಮಾಡಿದರು.

ಕೆಳಗಿನ ಪದ್ಯಭಾಗವನ್ನು ಓದಿ ಅರ್ಥಮಾಡಿಕೊಂಡು, ಅಡಕವಾಗಿರುವ ಮೌಲ್ಯವನ್ನಾಧರಿಸಿ ಸಾರಾಂಶ ಬರೆಯಿರಿ. (4 ಅಂಕ)

- ಜನಪದ ಸಾಹಿತ್ಯ ಶ್ರೀಸಾಮಾನ್ಯನ ಅನುಭವ ಹಾಗೂ ಕ್ರಿಯೆಯೊಂದಿಗೆ ಸಹಜ ಸ್ಫೂರ್ತಿಯಿಂದ ಹೊರಹೊಮ್ಮಿದ ನುಡಿಮುತ್ತು.
ಶಿಷ್ಟಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ಮೂಲ ಪ್ರೇರಣೆ. ವಾಣಿಜ್ಯ ಮೂಲವನ್ನಿರಿಸಿಕೊಂಡು ಭಾರತಕ್ಕೆ ಆಗಮಿಸಿದ ಬ್ರಿಟಿಷರು ಸಿಪಾಯಿದಂಗೆಯ ಅನಂತರ ನಿಶ್ಶಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದರು.
ಸ್ವಾತಂತ್ರ್ಯ ಪ್ರಿಯರಾಗಿದ್ದ ಹಲಗಲಿಯ ಬೇಡರು ಕಾಯಿದೆಯನ್ನು ವಿರೋಧಿಸಿ ಹುತಾತ್ಮರಾದರು ಎಂಬ ಕಥಾನಕವೇ ಈ ಲಾವಣಿ. ಕತ್ತಿ ಹಿಡಿದು ಹೋರಾಡುವ ಸಿಟ್ಟಿನ ಜನ ಹಲಗಲಿಯ ಬೇಡರಿಗೆ ಹೋರಾಡುವ ಸಮಯ ಬಂದಿತು.
ಇಂತಹ ಹಲಗಲಿಯ ವೀರರು ಹೋರಾಡಿದರೂ ಅವರು ತಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ.
ನಿಶ್ಶಸ್ತ್ರೀಕರಣ ಶಾಸನದ ಪ್ರಕಾರ ಸರ್ಕಾರದ ಅನುಮತಿಯಿರದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬುದಾಗಿತ್ತು.
ಆಯುಧಗಳನ್ನು ಕೊಡಲೊಪ್ಪದ ಜನರ ಬಳಿ ಬಲಂತವಾಗಿ ಕಿತ್ತುಕೊಳ್ಳಿ ಎಂದು ಬ್ರಿಟಿಷ ‘ಈಸ್ಟ್ ಇಂಡಿಯಾ ಕಂಪನಿ’ ವಿದೇಶದಿಂದಲೇ ಆದೇಶ ಹೊರಡಿಸಿತು.
ಈ ಹುಕುಮನ್ನು ವಿರೋಧಿಸಿ ಹಲಗಲಿಯ ಬೇಡ ಜನಾಂಗ ಒಂದಾಗಿ ಹೋರಾಡಲು ತೀರ್ಮಾನಿಸಿದರು.
ಅದರಲ್ಲೂ ಆ ಗ್ರಾಮದ ಪ್ರಮುಖ ಶೂರರಾದ ಪೂಜಾರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ ನಾಲ್ಕು ಮಂದಿ ಒಂದಾಗಿ ನಮ್ಮ ಬಳಿಯಿರುವ ಜೀವನ ನಿರ್ವಹಣೆಗೆ ಅಗತ್ಯವಾಗಿರುವ ಆಯಧಗಳನ್ನು ಪ್ರಾಣ ಹೋದರೂ ಕೊಡಬಾರದು.
ಆಯಧಗಳಿಲ್ಲದ ಜೀವನ ಇದ್ದು ಸತ್ತಂತೆ ಎಂದು ಭಾವಿಸಿದರು. ಅಲ್ಲದೇ ತಮ್ಮ ಹಲಗಲಿ ಗ್ರಾಮದ ಎಲ್ಲ ಜನರನ್ನು ಒಟ್ಟು ಗೂಡಿಸಿ ತಮ್ಮ ನಿರ್ಧಾರ ತಿಳಿಸಿ, ತಾವು ನಿಮ್ಮೊಂದಿಗೆ ಇದ್ದೇವೆ. ಯಾವುದೇ ಕಾರಣಕ್ಕೂ ಆಯುಧಗಳನ್ನು ಕಂಪನಿ ಸರ್ಕಾರಕ್ಕೆ ಒಪ್ಪಿಸಬಾರದು,
ಆಯುಧಗಳನ್ನು ಕೇಳಲು ಬಂದವರೊಂದಿಗೆ ಜಗಳ ತೆಗೆಯಿರಿ ಎಂದು ಹೇಳಿದರು.
ಆ ಸಂದರ್ಭದಲ್ಲಿ ಆಯುಧಗಳನ್ನು ಬಲವಂತವಾಗಿ ಕಸಿದು ಕೊಳ್ಳಲು ಬಂದ ಬ್ರಿಟಿಷ ಗುಮಾಸ್ತನ ಕಪಾಳಕ್ಕೆ ಹೊಡೆದರು.
ಅದನ್ನು ನೋಡಿದ ಸಿಪಾಯಿ ಮೂರ್ಛೆ ಹೋಗಿ ನೆಲಕ್ಕೆ ಬಿದ್ದನು. ತಕ್ಷಣವೇ ಈ ದುಃಖದ ಸುದ್ದಿಯನ್ನು ಬ್ರಿಟಿಷ ಮೇಲಧಿಕಾರಿಗೆ ಮುಟ್ಟಿಸಲಾಯಿತು.
ಪ್ರಸ್ತುತ ಪದ್ಯದಲ್ಲಿ ಭಾರತೀಯರನ್ನು ನಿಶ್ಯಸ್ತ್ರೀಕರಣಗೊಳಿಸಬೇಕೆಂಬ ಬ್ರಿಟಿಷ ಕುಂಪಣಿ ಸರ್ಕಾರದ ದರ್ಪ, ಭಾರತೀಯರ ಮೇಲಿನ ದೌರ್ಜನ್ಯ ಮತ್ತು ಹಲಗಲಿಯ ಬೇಡರು ಜೀವನಾಧಾರವಾಗಿದ್ದ ಆಯುಧಗಳನ್ನೇ ಪ್ರಾಣವೆಂದು ನಂಬಿದ್ದ ಭಾವ ಹಾಗೂ ಬೇಡರ ಶಕ್ತಿಯ ವರ್ಣನೆ ಅರ್ಥಪೂರ್ಣವಾಗಿ ಮೂಡಿ ಬಂದಿದೆ.

- ಜನಪದ ಸಾಹಿತ್ಯ ಶ್ರೀಸಾಮಾನ್ಯನ ಅನುಭವ ಹಾಗೂ ಕ್ರಿಯೆಯೊಂದಿಗೆ ಸಹಜ ಸ್ಫೂರ್ತಿಯಿಂದ ಹೊರಹೊಮ್ಮಿದ ನುಡಿಮುತ್ತು.
ಶಿಷ್ಟಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ಮೂಲ ಪ್ರೇರಣೆ. ವಾಣಿಜ್ಯ ಮೂಲವನ್ನಿರಿಸಿಕೊಂಡು ಭಾರತಕ್ಕೆ ಆಗಮಿಸಿದ ಬ್ರಿಟಿಷರು ಸಿಪಾಯಿದಂಗೆಯ ಅನಂತರ ನಿಶ್ಶಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದರು.
ಸ್ವಾತಂತ್ರ್ಯ ಪ್ರಿಯರಾಗಿದ್ದ ಹಲಗಲಿಯ ಬೇಡರು ಕಾಯಿದೆಯನ್ನು ವಿರೋಧಿಸಿ ಹುತಾತ್ಮರಾದರು ಎಂಬ ಕಥಾನಕವೇ ಈ ಲಾವಣಿ.
ಆಯುಧಗಳನ್ನು ಕೊಡಲೊಪ್ಪದ ಹಲಗಲಿಯ ಬೇಡರು ಬ್ರಿಟಿಷ ಗುಮಾಸ್ತನ ಕಪಾಳಕ್ಕೆ ಹೊಡೆದ ಹಾಗೂ ಪ್ರತಿರೋಧ ತೋರಿದ ಸೀಪಾಯಿಗಳನ್ನು ಸಾಯಿಸಿ ನೆಲಕ್ಕುರುಳಿಸಿದ ದುಃಖದ ಸುದ್ದಿ ಕೇಳಿದ ಸಾಹೇಬನು ಕ್ರೋಧಗೊಂಡು ತನ್ನ ಕೈಗಳನ್ನು ಕಿವಿಚಿಕೊಂಡು ಸೈನಿಕರಿಗೆ ಆದೇಶ ನೀಡಿದನು.
ಆಗ ಬ್ರಿಟಿಷ ಅಶ್ವದಳ, ಕಾಲ್ದಳ ಹಲಗಲಿಯ ನೆಲವನ್ನು ಮುಟ್ಟಿತು.
ಇದನ್ನು ನೋಡಿದ ಹಲಗಲಿಯ ಜನರು ಊರ ಒಳಗಿನಿಂದಲೇ ಮುಂಗಾರಿನ ಸಿಡಿಲು ಸಿಡಿದ ಹಾಗೆ ಗುಂಡಿನ ಸುರಿಮಳೆಯನ್ನು ಬ್ರಿಟಿಷ ಸೈನಿಕರ ಮೇಲೆ ಸುರಿಸಿದರು.
ಇದರಿಂದ ಹೆದರಿದ ಊರ ಹೊರಗಿನ ಬ್ರಿಟಿಷ ಸೈನಿಕರು ಹಿಂದೆ ಸರಿದು ನಿಂತರು. ಅಲ್ಲದೇ ಇನ್ನೂ ಹೆಚ್ಚಿನ ಸೈನ್ಯ ಹಲಗಲಿಯ ಮೇಲೆ ದಾಳಿ ಮಾಡಲು ಬೇಕೆಂದು ಪತ್ರ ಬರೆದು ತನ್ನ ಮೇಲಿನ ಅಧಿಕಾರಿಗೆ ಕಳುಹಿಸಿದರು.
ಆಗ ಹೆಚ್ಚಿನ ಸೈನ್ಯ ಸನ್ನದ್ಧವಾಗಿ ಪ್ರವಾಹೋಪಾದಿಯಲ್ಲಿ ಹಲಗಲಿಗೆ ಬಂದಿತು.
ಪ್ರಸ್ತುತ ಪದ್ಯದಲ್ಲಿ ಬ್ರಿಷರಿಗೆ ಹೆದರದೇ ದಿಟ್ಟ ಉತ್ತರ ನೀಡಲು ಹಲಗಲಿಯ ಬೇಡರು ಹೋರಾಟಕ್ಕೆ ಮುಂದಾಗಿರುವ ಧರ್ಯದ ಭಾವದ ಮೌಲ್ಯವು ವ್ಯಕ್ತಗೊಂಡಿದೆ.

- ಜನಪದ ಸಾಹಿತ್ಯ ಶ್ರೀಸಾಮಾನ್ಯನ ಅನುಭವ ಹಾಗೂ ಕ್ರಿಯೆಯೊಂದಿಗೆ ಸಹಜ ಸ್ಫೂರ್ತಿಯಿಂದ ಹೊರಹೊಮ್ಮಿದ ನುಡಿಮುತ್ತು.
ಶಿಷ್ಟಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ಮೂಲ ಪ್ರೇರಣೆ. ವಾಣಿಜ್ಯ ಮೂಲವನ್ನಿರಿಸಿಕೊಂಡು ಭಾರತಕ್ಕೆ ಆಗಮಿಸಿದ ಬ್ರಿಟಿಷರು ಸಿಪಾಯಿದಂಗೆಯ ಅನಂತರ ನಿಶ್ಶಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದರು.
ಸ್ವಾತಂತ್ರ್ಯ ಪ್ರಿಯರಾಗಿದ್ದ ಹಲಗಲಿಯ ಬೇಡರು ಕಾಯಿದೆಯನ್ನು ವಿರೋಧಿಸಿ ಹುತಾತ್ಮರಾದರು ಎಂಬ ಕಥಾನಕವೇ ಈ ಲಾವಣಿ.
ಪ್ರವಾಹೋಪಾದಿಯಲ್ಲಿ ಹೆಚ್ಚಿನ ಬ್ರಿಟಿಷ ಸೈನ್ಯ ಸನ್ನದ್ಧವಾಗಿ ಹಲಗಲಿಗೆ ಬಂದು ಬೇಡರನ್ನು ಬೆನ್ನು ಹತ್ತಿ, ತಿರು ತಿರುವಿ ಕಡಿದು ಹಾಕಿತು.
ಅಲ್ಲದೇ ಸಿಕ್ಕವರನ್ನು ನಡುವೆ ಹಾಕಿಕೊಂಡು ಕರುಣೆ ತೋರದೇ ಗುಂಡು ಹಾರಿಸಿ ಕೊಂದು ಹಾಕಿತು.
ಚಟೇಕಾರರು ಊರನ್ನು ಪಹರೆ ಕಾಯುವಾಗ ಹಲಗಲಿಯ ಬೇಡರು ಗುಡ್ಡದ ಕಡೆಗೆ ಓಡಿದರು.
ಆಗ ಗ್ರಾಮದ ಅಗಸಿಗೆ ಬಂದ ಬ್ರಿಟಿಷ ಅಧಿಕಾರಿ ಹೆಬಲಕನು ಬೇಡರಿಗೆ ಬುದ್ಧಿಮಾತನ್ನು ಹೇಳುತ್ತ, ಶರಣಾಗಲು ತಿಳಿಸುತ್ತಾನೆ.
ಅಲ್ಲದೇ ನಿಮ್ಮ ಮಾತನ್ನು ಒಪ್ಪುತ್ತೇವೆ, ಸುಮ್ಮನೇ ಸತ್ತು ಹೋಗಬೇಡಿರಿ ಎನ್ನುತ್ತಾನೆ.
ಆಗ ಹನುಮನು ನಿಮ್ಮ ಮಾತಿನ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಮುಂದೆ ಬಂದು ನಿಲ್ಲುತ್ತಾನೆ.
ಪ್ರಸ್ತುತ ಪದ್ಯವು ಬಾರತೀಯರ ಮೇಲೆ ನಿಷ್ಕರುಣೆಯಿಂದ ನಡೆದುಕೊಂಡ ಬ್ರಿಟಿಷರ ದರ್ಪ, ದೌರ್ಜನ್ಯ ಹಾಗೂ ಕ್ರೌರ್ಯದ ಪರಮಾವಧಿಯನ್ನು ವ್ಯಕ್ತಪಡಿಸುವುದು.

- ಜನಪದ ಸಾಹಿತ್ಯ ಶ್ರೀಸಾಮಾನ್ಯನ ಅನುಭವ ಹಾಗೂ ಕ್ರಿಯೆಯೊಂದಿಗೆ ಸಹಜ ಸ್ಫೂರ್ತಿಯಿಂದ ಹೊರಹೊಮ್ಮಿದ ನುಡಿಮುತ್ತು.
ಶಿಷ್ಟಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ಮೂಲ ಪ್ರೇರಣೆ. ವಾಣಿಜ್ಯ ಮೂಲವನ್ನಿರಿಸಿಕೊಂಡು ಭಾರತಕ್ಕೆ ಆಗಮಿಸಿದ ಬ್ರಿಟಿಷರು ಸಿಪಾಯಿದಂಗೆಯ ಅನಂತರ ನಿಶ್ಶಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದರು.
ಸ್ವಾತಂತ್ರ್ಯ ಪ್ರಿಯರಾಗಿದ್ದ ಹಲಗಲಿಯ ಬೇಡರು ಕಾಯಿದೆಯನ್ನು ವಿರೋಧಿಸಿ ಹುತಾತ್ಮರಾದರು ಎಂಬ ಕಥಾನಕವೇ ಈ ಲಾವಣಿ.
ಹೆಬಲಕ್ ಅಧಿಕಾರಿಯ ಮಾತಿಗೆ ನಂಬಿಕೆ ಸಾಲದ ಹನುಮನು ಮುಂದೆ ಬಂದಾಗ ಜಡಗನು ಇವರು ಸಂಪೂರ್ಣ ದ್ರೋಹಿಗಳಾಗಿದ್ದಾರೆ, ವಿಶ್ವಾಸ ದ್ರೋಹಿಗಳಾಗಿರುವ ಇವರ ಮೇಲೆ ನಮಗೆ ನಂಬಿಕೆ ಸಾಲದು ಎನ್ನುತ್ತಾನೆ.
ಅಲ್ಲದೇ ಒಳಸಂಚಿನಿಂದ ಮೋಸ ಮಾಡಿ ನಮ್ಮ ದೇಶವನ್ನು ಗೆದೆಯಲು ಬಂದಿರುವ ಇವರು ನಮಗೆ ಮುಂದೆ ತೊಂದರೆದಾಯಕರಾಗುವರು ಎಂದು ಹೇಳಿ ಹೆಬಲಕ್ ಸಾಹೇಬನ ಮೇಲೆ ಗುಂಡೊಂದನ್ನು ಹಾರಿಸುತ್ತಾನೆ.
ಆ ಒಂದು ಗುಂಡಿಗೆ ಸಾಹೇಬನು ಸತ್ತು ಹೋಗುವನು.
ಇದರಿಂದ ಕ್ರೋಧಗೊಂಡ ಕಾರಸಾಹೇಬ ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿಯನ್ನು ಮುತ್ತಿ ದಂಗೆ ಎದ್ದವರನ್ನು ಬಗ್ಗು ಬಡಿಯಲು ಹೇಳಿದ್ದಲ್ಲದೇ ಊರನ್ನು ಲೂಟಿ ಮಾಡಲು ಆದೇಶಿಸುವನು.
ಆಗ ಕ್ರೋಧಗೊಂಡ ಬ್ರಿಟಿಷ ಸೈನಿಕರು ಹಲಗಲಿಯ ಬೇಡರ ಮೇಲೆ ಸಿಡಿಲು ಸಿಡಿಯುವಂತೆ ಗುಂಡಿನ ಮಳೆಯನ್ನು ಸುರಿಸುತ್ತಾರೆ.
ಆಗ ಹನುಮನು ಇವರನ್ನು ಕೆಡವಿ ನಾಶ ಮಾಡೋಣ ಬನ್ನಿ ಎಂದು ವೀರಾವೇಷದಿಂದ ಹೇಳುತ್ತಿರುವಾಗ ಮೂನ್ನುರೂ ಜನ ಸೈನಿಕರು ಅವನ ಮೇಲೆರಗಿ ಬರುತ್ತಾರೆ.
ಭೀಮನು ಐನೂರು ಮಂದಿಯನ್ನು ಎದುರಿಸಿ ನಿಲ್ಲುತ್ತಾನೆ.
ಬಾಲನು ಹತ್ತಿಪ್ಪತ್ತು ಕುದುರೆಗಳನ್ನು ಕಡಿದು ಹಾಕಿ ತನ್ನ ಕಸರತ್ತನ್ನು ಪ್ರದರ್ಶಿಸುತ್ತಾನೆ.
ರಾಮನು ರಕ್ತದ ಕಾಲುವೆಯನ್ನೇ ಹರಿಸುತ್ತಾನೆ.
ಹೀಗೆ ತುಂಬಿ ಬಂದ ಬ್ರಿಟಿಷ ಸಾವಿರಾರು ಸೈನಿಕರಿಗೆ ಒಬ್ಬನು ಕಡಿದು ಹಾಕೋಣ ಬನ್ನಿ ಎಂದು ಕೂಗುತ್ತಾ ವೀರಾವೇಷದ ಹೋರಾಟ ಮಾಡುತ್ತ ನಾಲ್ವರು ಬೇಡರು ವೀರ ಮರಣವನ್ನಪ್ಪಿದರು.
ಪ್ರಸ್ತುತ ಪದ್ಯದಲ್ಲಿ ನಂಬಿಕೆಗೆ ಅನರ್ಹರಾದ ಬ್ರಿಟಿಷರ ಕ್ರೌರ್ಯದ ಪರಮಾವಧಿ, ದಬ್ಬಾಳಿಕೆ ಹಾಗೂ ಹಲಗಲಿಯ ಶೂರರಾದ ಬೇಡರ ವೀರತನ, ಸ್ವಾತಂತ್ರ್ಯ ಪ್ರೇಮ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.

- ಜನಪದ ಸಾಹಿತ್ಯ ಶ್ರೀಸಾಮಾನ್ಯನ ಅನುಭವ ಹಾಗೂ ಕ್ರಿಯೆಯೊಂದಿಗೆ ಸಹಜ ಸ್ಫೂರ್ತಿಯಿಂದ ಹೊರಹೊಮ್ಮಿದ ನುಡಿಮುತ್ತು.
ಶಿಷ್ಟಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ಮೂಲ ಪ್ರೇರಣೆ. ವಾಣಿಜ್ಯ ಮೂಲವನ್ನಿರಿಸಿಕೊಂಡು ಭಾರತಕ್ಕೆ ಆಗಮಿಸಿದ ಬ್ರಿಟಿಷರು ಸಿಪಾಯಿದಂಗೆಯ ಅನಂತರ ನಿಶ್ಶಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದರು.
ಸ್ವಾತಂತ್ರ್ಯ ಪ್ರಿಯರಾಗಿದ್ದ ಹಲಗಲಿಯ ಬೇಡರು ಕಾಯಿದೆಯನ್ನು ವಿರೋಧಿಸಿ ಹುತಾತ್ಮರಾದರು ಎಂಬ ಕಥಾನಕವೇ ಈ ಲಾವಣಿ.
ಹಲಗಲಿಯ ಬೇಡರ ಮೇಲೆ ವೀರ ಅಟ್ಟಹಾಸ ಪ್ರದರ್ಶಿಸಿದ ಬ್ರಿಟಿಷ ಸೈನಿಕರು ನಂತರ ಬೇಡರ ಕೃಷಿ ಉಪಕರಣಗಳಾದ ಕೊಡಲಿ, ಕೋರೆ, ಕುಡ, ಕಬ್ಬಿಣ, ಆಹಾರ ಪದಾರ್ಥಗಳಾದ ಮೊಸರು, ಬೆಣ್ಣಿ, ಹಾಲು, ಉಪ್ಪು, ಎಣ್ಣಿ, ಅರಿಷಿಣ, ಜೀರಗಿ, ಅಕ್ಕಿ, ಸಕ್ಕರೆ, ಬೆಲ್ಲ, ದಿನನೀತ್ಯ ಬಳಸುತ್ತಿದ್ದ ವಸ್ತುಗಳಾದ ಗಂಗಳ, ಚೆರಗಿ, ಮಂಗಳ ಸೂತ್ರ, ಬೀಸುವಕಲ್ಲು ಹೀಗೆ ಸಿಕ್ಕ ಸಿಕ್ಕ ವಸ್ತುಗಳೆಲ್ಲವನ್ನು ದೋಚಿದರು.
ಅಲ್ಲದೇ ಹಲಗಲಿ ಊರಿಗೆ ಬೆಂಕಿ ಇಟ್ಟು ಸುಟ್ಟು ಬೂದಿ ಮಾಡಿದರು.
ಇಂತಹ ಕರುಣಾ ಜನಕವಾದ ರಕ್ತರಂಜಿತ ಕಥೆಯನ್ನು ನನಗೆ ತಿಳಿದ ಹಾಗೆ ಕುರ್ತಕೋಟಿ ಕಲ್ಮೇಶನ ದಯದಿಂದ ವರ್ಣಿಸಿರುವೆನು ಎಂದು ಲಾವಣಿಕಾರನು ಕೊನೆಯ ಮಾತುಗಳನ್ನು ನುಡಿಯುವನು.
ಪ್ರಸ್ತುತ ಪದ್ಯವು ಕಠೋರ ಹೃದಯಿಗಳಾದ ಬ್ರಿಟಿಷ ಸೈನಿಕರ ನಿಷ್ಕರುಣೆಯತನ ಹಾಗೂ ಹಲಗಲಿಯ ಮೇಲೆ ಹಿಂಸಾತ್ಮಕವಾಗಿ ದಾಳಿ ಮಾಡಿ ಲೂಟಿ ಮಾಡಿರುವ ರೀತಿ ಹಾಗೂ ದೌರ್ಜನ್ಯ ವರ್ಣಿತಗೊಂಡಿದೆ.

« BACK ಮುಂದಿನ ಅಧ್ಯಾಯ

THANK U
RMH-9731734068

1 ಕಾಮೆಂಟ್‌: