10-Kan Hasuru

RMH

ಪದ್ಯ ಪಾಠ-5 ಹಸುರು

ಒಂದು ಅಂಕದ ಪ್ರಶ್ನೆಗಳು

ಉತ್ತರ: ಹಸುರು ಎಂಬುದು ಕವಿಗೆ ಅಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯ ಹಚ್ಚಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ

ಉತ್ತರ: ಕವಿ ಕುವೇಂಪುರವರು ಹೇಳುವಂತೆ ಆಗಸ ಹಸುರು ಬಣ್ಣದಿಂದ ಕೂಡಿದೆ

ಉತ್ತರ: ಕವಿ ಕುವೇಂಪುರವರು ಹೇಳುವಂತೆ ಹೂವಿನ ಕಂಪು ಹಸುರು ಬಣ್ಣದಿಂದ ಕೂಡಿದೆ

ಉತ್ತರ: ಕವಿಯ ಆತ್ಮ ಶ್ಯಾಮಲ ವನದಿಯಲಿ ಹಸುರಾಗಿದೆ

ಉತ್ತರ : ಕವಿಯು ನೋಡಿದ ಅಡಕೆಯ ತೋಟ ವನದಂಚಿನಲ್ಲಿದೆ.

ಉತ್ತರ: ಅಶ್ವಯುಜ ಮಾಸದ ಗದ್ದೆಯ ಬಣ್ಣ ಗಿಳಿಯ ಎದೆಯ ಹಸುರಿನಂತಿದೆ

ಉತ್ತರ: ಕವಿಯ ಪ್ರಕಾರ ʼಹಸುರುʼ ಇಳೆಯ ಉಸಿರು

ಉತ್ತರ; ಕವಿ ಕುವೇಂಪುರವರು ಹೊಸ ಹೂವಿನ ಕಂಪು ಹಸುರು ಎಂದಿದ್ದಾರೆ

ಉತ್ತರ; ಕುವೇಂಪುರವರಿಗೆ ಹುಲ್ಲಿನ ಹಾಸು ಮಕಮಲ್ಲಿನ ಹೊಸಪಚ್ಚೆಯ ಜಮಖಾನೆಯಂತೆ ಕಂಡಿದೆ

ಉತ್ತರ; ಕವಿ ಕುವೇಂಪುರವರು ಎಲರಿನ ತಂಪು ಹಸುರು ಎಂದಿದ್ದಾರೆ

ಉತ್ತರ: ಕವಿ ಕುವೇಂಪುರವರು ಹಕ್ಕಿಯ ʼಕೊರಲ ಇಂಪುʼ ಹಸುರು ಎಂದಿದ್ದಾರೆ

ಉತ್ತರ: ಹಚ್ಚ ಹಸುರಿನಲ್ಲಿ ಒಂದಾದ ಕವಿಯ ಒಡಲಿನ ರಕ್ತದ ಬಣ್ಣ ಹಸುರು.

ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )

ಉತ್ತರ: ಅಶ್ವಿಜ ಮಾಸ (ಸಪ್ಟಂಬರ್-ಅಕ್ಟೋಬರ್) ದಲ್ಲಿ ಮಳೆ ಕಡಿಮೆಯಾಗಿ ತೆನೆ ಹೊತ್ತು ನಿಂತ ಬತ್ತದ ಗದ್ದೆಯ ಬಣ್ಣ ಗಿಳಿ ಎದೆಯ ಬಣ್ಣದಂತೆ ತಿಳಿ ಹಸುರಾಗಿ ಕಾಣುತ್ತದೆ. ಅದರ ಪಕ್ಕದಲ್ಲಿ ವನದ ಅಂಚಿನಲ್ಲಿರುವ ಗೊನೆಗಳನ್ನು ಹೊತ್ತುನಿಂತ ಅಡಿಕೆಯ ತೋಟ, ಕವಿಯ ಸಮಸ್ತಾನುಭವವೂ ಹಸುರಾಗಿದೆ. ಎಂದು ವರ್ಣಿಸಿದ್ದಾರೆ

ಉತ್ತರ: ಇಲ್ಲಿ ಕವಿಯ ಸಮಸ್ತ ಸೃಷ್ಟಿಗೆ ತನ್ನ ಹಸುರು ಬಣ್ಣ ನೀಡಿದ ಹಸುರಿನ ವರ್ಣನೆ ಮೂಡಿದೆ. ಅದರ ಸೊಬಗು ತನ್ನ ಮೇಲುಂಟು ಮಾಡಿದ ಗಾಡವಾದ ಪ್ರಭಾವವನ್ನೂ ಅದೇ ತಾನಾದ ಅನುಭವವನ್ನೂ ನೇರವಾಗಿ ಕೊಡುವರು. ಎಲ್ಲೆಲ್ಲೂ ಹಬ್ಬಿದ ಹಸುರು, ಶಾಂತಿಯನ್ನು ಸಾರುತ್ತ, ಆಗಸದಲ್ಲಿನ ಮುಗಿಲ ಬಣ್ಣವೂ ಹಸುರು, ಬದುಗಳಿಂದ ಕೂಡಿದ ಬತ್ತದ ಗದೆಯ ಬಯಲಿನಲ್ಲಿ ಸೊಂಪಾಗಿ ಬೆಳೆದ, ಬತ್ತದ ಪೈರು ಹಸುರಿನ ಮೇಲೆ ಹಸುರು ಹೊದಿಸಿದಂತೆ ಕಾಣುತ್ತದೆ. ಮಲೆಯಲ್ಲಿ (ಬೆಟ್ಟದಲ್ಲಿ), ಕಣಿವೆಯಲ್ಲಿ (ಬೆಟ್ಟಗಳ ನಡುವಿನ ತಗ್ಗು ಪ್ರದೇಶ) ದಟ್ಟವಾಗಿ ಬೆಳೆದ ಗಿಡಮರಗಳೆಲ್ಲ ಹಸುರಾಗಿ ಕಾಣುತ್ತಿರುವುದರಿಂದ ಸಂಜೆಯ ಬಿಸಿಲೂ ಕೂಡಾ ಪ್ರಕೃತಿಯಲಿ ಒಂದಾಗಿ ಹಸುರಾಗಿ ಕಾಣುತ್ತಿದೆ. ‘ದೃಷ್ಟಿಗೆ ತಕ್ಕಂತೆ ಸೃಷ್ಟಿ’ ಎನ್ನುವ ಹಾಗೆ ಸಕಲವೂ ಹಸುರು ಆಗಿ ಕಾಣುತ್ತಿದೆ.

ಉತ್ತರ: ಕವಿಯ ಆತ್ಮ ಮತ್ತು ದೇಹದಲ್ಲಿರುವ ರಕ್ತವೂ ಹಸುರುಮಯವಾಗಿ ಬೆರೆತಿದೆ. ಕಡಲಾಗಿ ಹಬ್ಬಿದ ಹಸುರು ರಸಸೃಷ್ಟಿಯ ದರ್ಶನಕೆ ಹೊಸ ಅನುಭವದ ರಸಪಾನ ಸ್ನಾನ ಮಾಡಿಸಿ ಕವಿಯಾತ್ಮವೂ ಹಸುರಾಗಿದೆ. ಈ ಕವನದ ಪ್ರಾರಂಭದಿಂದ ಅಂತ್ಯದವರೆಗೆ ಹಸುರಿನ ಸಾಮ್ರಾಜ್ಯವೇ ಕಂಡುಬರುವುದು. ಕವನದ ಕೇಂದ್ರಬಿಂದುವಾದ ಹಸುರು ಇಲ್ಲಿ ಸರ್ವಸ್ವ. ಮೊದಮೊದಲು ಸೌಂದರ್ಯರೂಪಿಯಾಗಿ ಕಾಣುವ ಹಸುರು ಬರುಬರುತ್ತ ಸಕಲೇಂದ್ರಿಯಾಗಳಿಗೂ ವ್ಯಾಪಿಸಿ, ವ್ಯಷ್ಟಿ-ಸಮಷ್ಟಿಯೆಲ್ಲವೂ ಹಸುರಾಗಿ ದೃಗೇಂದ್ರಿಯಾಗಳನ್ನು ದಾಟಿ, ತಾದಾತ್ಮ್ಯಾನುಭೂತಿಯ ಶಿಖರಕ್ಕೆ ತಲುಪಿ ಕವಿಯಾತ್ಮ ರಸಸಮಾಧಿಯಲ್ಲದ್ದಿದೆ. ತರ್ಕಬದ್ದ ಉಪದೇಶವಿಲ್ಲದೆ ಕೊನೆಗೊಳ್ಳುವ ಈ ಕವನ ಕವಿಯ ಯಶಸ್ವೀ ಕವನಗಳಲ್ಲಿ ಒಂದಾಗಿದೆ.

ಉತ್ತರ: ಅಶ್ವಯುಜ ಮಾಸದ ನವರಾತ್ರಿಯಲ್ಲಿ ಹಚ್ಚಹಸುರಿನಿಂದ ಪ್ರೇರಿತವಾದ ಕವಿಗೆ ಪ್ರಕೃತಿ ಮಾತೆಗೆ ಜೀವಕಳೆಯನ್ನು ತಂದ ಹೊಸಹೂಗಳ ಪರಿಮಳ ಹಸುರು, ಆ ಪರಿಮಳವನ್ನು ಹೊತ್ತು ತರುವ ತಂಪಾದ ಗಾಳಿಯೂ ಹಸುರು, ಪಕ್ಷಿಗಳ ಕೊರಳಿಂದ ಹೊರಟ ಇಂಚರವೂ ಕೂಡಾ ಹಸುರಾಗಿ ಭೂತಾಯಿಗೆ ಹಸುರು ಉಸಿರಾದುದರಿಂದ ಹಸುರು ಹಸುರಾಗಿ ಕವಿಗೆ ಆತ್ಮಾನಂದವನ್ನು ನೀಡುತ್ತದೆ. ಹೀಗೆ ಗಿಡ, ಮರ, ಬಳ್ಳಿ, ಪಶು ಪಕ್ಷಿಗಳ ಉಸಿರು ಹಸುರಾಗಿದೆ. ಕಣ್ಣಿಗೆ ಕಾಣದ ಹೂವಿನ ಪರಿಮಳ ಗಾಳಿಯ ತಂಪು ಹಕ್ಕಿಯ ಕೊರಲಿಂಪಿನ ಹಸುರಿನಲ್ಲಿ ಮುಳುಗಿದ ಕವಿಯ ಪಂಚೇಂದ್ರಿಯಗಳು ಹಸುರನ್ನು ಅನುಭವಿಸುತ್ತಿವೆ.

ಉತ್ತರ: ಹಸುರು ಸೊಬಗಿನ ನೆಲೆವಿಡಾದ ‘ಕವಿಶೈಲ’ ದಿಂದ (ಕುವೇಂಪುರವರ ಕಾವ್ಯ ಹುಟ್ಟಲು ಪ್ರೇರಣೆಯಾದ; ಕವಿ ಕುಳಿತು ಕೊಳ್ಳುವ ಸ್ಥಳ) ಪಕ್ಕಕ್ಕೆ ನೋಡಿದರೆ ಪ್ರಕೃತಿ ಮಾತೆ, ಸೌಂದರ್ಯ ದೇವತೆಯಾಗಿ ಕಾಣುತ್ತಾಳೆ. ಅಲ್ಲಿರುವ ಹುಲ್ಲಿನ ಹಾಸಿಗೆಗೆ (ಹೊದಿಕೆ) ನಯವಾದ ವೆಲ್ವೇಟ್ (ಮಕಮಲ್ಲು) ಹಚ್ಚಹಸುರಿನ ಬಟ್ಟೆಯ ಜಮಖಾನೆಯನ್ನು ಹರಡಿ ಭೂತಾಯಿಯ ಮೈಮುಚ್ಚಿರುವುದರಿಂದ ಬೇರೆ ಯಾವ ಬಣ್ಣವೂ ಕಾಣದೆ, ಮಲೆನಾಡಿನ ಪ್ರಕೃತಿ ಮಾತೆಯ ಕೂಸಾದ ಕವಿಗೆ ಅದೂ ಕೂಡಾ ಹಸುರುಮಯವಾಗಿದೆ. ನೆಲದ ಮೈ ಮುಚ್ಚಿ ಹಸುರು ಹೊಚ್ಚಹೊಸ ಜಮಖಾನೆಯಂತೆ ಕಾಣುತ್ತದೆ

ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ (3 ಅಂಕ)

ಆಯ್ಕೆ :- ಈ ವಾಕ್ಯವನ್ನು ಕುವೆಂಪು ಅವರ “ಪಕ್ಷಿಕಾಶಿ” ಕವನ ಸಂಕಲನದಿಂದ ಆರಿಸಲಾಗಿರುವ “ಹಸುರು” ಎಂಬ ಪದ್ಯದಿಂದ ಆರಿಸಲಾಗಿದೆ. ಸಂದರ್ಭ :- ನವರಾತ್ರಿಯ ನವಧಾತ್ರಿಯ ಈ ಶ್ಯಾಮಲ ವರ್ಣದ ಕಡಲಿನಲ್ಲೂ ಕವಿಯ ಆತ್ಮ ಹಸುರಾಯಿತು, ರಸಪಾನದಲ್ಲಿ ಮಿಂದಿತು ಎಂದು ಪ್ರಕೃತಿಯಲ್ಲಿ ವ್ಯಾಪಿಸಿರುವ ಹಸುರಿನ ಬಗ್ಗೆ ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ. ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ ಕುಪ್ಪಳ್ಳಿಯ ʼಕವಿಶೈಲʼ ದಲ್ಲಿ ಅವರಿಗುಂಟಾದ ಸೌಂದರ್ಯಾನುಭವ, ಪ್ರಕೃತಿ, ಅಲ್ಲಿಯ ಹಸುರುಗಳೊಂದಿಗೆ ಕುವೆಂಪು ಹೊಂದಿದ್ದ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ. ಸ್ವಾರಸ್ಯ :- ನವರಾತ್ರಿಯ ಕಪ್ಪು ಕಡಲಿನಲ್ಲೂ ಹಸುರನ್ನು ಕಾಣುವ ಕುವೆಂಪು ಅವರ ಕವಿಯಾತ್ಮದ ಪ್ರಕೃತಿಯ ರಸಾಸ್ವಾದನೆ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.

ಆಯ್ಕೆ :- ಈ ವಾಕ್ಯವನ್ನು ಕುವೆಂಪು ಅವರ “ಪಕ್ಷಿಕಾಶಿ” ಕವನ ಸಂಕಲನದಿಂದ ಆರಿಸಲಾಗಿರುವ “ಹಸುರು” ಎಂಬ ಪದ್ಯದಿಂದ ಆರಿಸಲಾಗಿದೆ. ಸಂದರ್ಭ :- ಅಶ್ವೀಜ ಮಾಸದಲ್ಲಿ ಬತ್ತದ ಗದ್ದೆಗೆ ಮುತ್ತುವ ಗಿಳಿಗಳ ಹಸುರು ಬಣ್ಣದ ನೋಟ; ಅದರ ಪಕ್ಕದಲ್ಲೇ ಕಾಡಂಚಿನಲ್ಲಿ ಫಲಭರಿತ ಅಡಕೆಯ ತೋಟ; ಹುಲ್ಲಿನ ಮಕಮಲ್ಲಿನ ಹೊಸ ಪಚ್ಚೆಯ ಜಮಖಾನೆ ಹರಡಿದಂತೆ ಭೂಮಿಯ ಹಸುರಿನಿಂದ ಮೈಮುಚ್ಚಿರುವ ಬಗೆಯನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ. ಸ್ವಾರಸ್ಯ :- ಭೂಮಿಯ ಮೇಲೆ ಎಲ್ಲೆಂದರಲ್ಲಿ ವಿವಿಧ ರೂಪದಲ್ಲಿ ಹಸುರು ಪಸರಿಸಿರುವುದನ್ನು ನೋಡಿ ರಸಾನಂದ ಹೊಂದಿದ ಕವಿ “ಬೇರೆ ಬಣ್ಣಗಳೇ ಕಾಣದಾದವು” ಎಂದು ಹೇಳಿರುವಲ್ಲಿ ಅವರ ರಸಸ್ವಾದನೆಯ ಔನ್ನತ್ಯವನ್ನು ಪೂರ್ಣವಾಗಿ ಅಭಿವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ.

ಆಯ್ಕೆ :- ಈ ವಾಕ್ಯವನ್ನು ಕುವೆಂಪು ಅವರ “ಪಕ್ಷಿಕಾಶಿ” ಕವನ ಸಂಕಲನದಿಂದ ಆರಿಸಲಾಗಿರುವ “ಹಸುರು” ಎಂಬ ಪದ್ಯದಿಂದ ಆರಿಸಲಾಗಿದೆ. ಸಂದರ್ಭ :- ಹೊಸ ಹೂವಿನ ಕಂಪು , ಬೀಸುವ ಗಾಳಿಯ ತಂಪು, ಹಕ್ಕಿಯ ಕೊರಲಿನಿಂದ ಹೊರಟ ಗಾನದ ಇಂಪು, ಅಲ್ಲದೆ ಇಡೀ ಭೂಮಿಯ ಶ್ವಾಸವೆಲ್ಲಾ ಹಸುರುಮಯವಾಗಿದೆ. ಎಂದು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ. ಇಲ್ಲಿ ಹೂವು- ಗಾಳಿ ಹಕ್ಕಿಯ ಗಾನಗಳಲ್ಲಿ ಬೇರೆ ಬೇರೆ ಅನುಭವವಿದ್ದರೂ ಕವಿಯ ಏಕತಾ ದೃಷ್ಟಿಯಲ್ಲಿ ಎಲ್ಲದರಲ್ಲೂ ಹಸುರೇ ಕಾಣುತ್ತದೆ. ಸ್ವಾರಸ್ಯ :- ಹಸುರು ಸವೇಂದ್ರಿಯಗಳನ್ನೂ ವ್ಯಾಪಿಸಿದೆ. ಎಂದು ವರ್ಣಿಸಿರುವ ಕವಿಯ ಕಲ್ಪನೆ ಇಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.

ಆಯ್ಕೆ :- ಈ ವಾಕ್ಯವನ್ನು ಕುವೆಂಪು ಅವರ “ಪಕ್ಷಿಕಾಶಿ” ಕವನ ಸಂಕಲನದಿಂದ ಆರಿಸಲಾಗಿರುವ “ಹಸುರು” ಎಂಬ ಪದ್ಯದಿಂದ ಆರಿಸಲಾಗಿದೆ. ಸಂದರ್ಭ :- ಅತ್ತ-ಇತ್ತ-ಎತ್ತಲೂ ಹಸುರೇ ಆವರಿಸಿರುವುದನ್ನು ಕವಿ ದೃಷ್ಟಿಯಿಂದ ನೋಡಿದ ಕುವೆಂಪು ಅವರು ʼಕಡಲಿನಲ್ಲಿ ಎಲ್ಲೆಲ್ಲೂ ಹಸುರೇ ಹಸುರು. ಕವಿಯ ಆತ್ಮ ಹಸುರು ನೆತ್ತರಿನಿಂದ ಹಸುರುಗಟ್ಟಿತುʼ ಎಂದು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ. ಎಲ್ಲೆಲ್ಲೂ ಹಸುರನ್ನು ಕಂಡ ಕವಿಯಾತ್ಮವು ಹಸುರುಗಟ್ಟಿತಲ್ಲದೆ ಅವರ ದೇಹದಲ್ಲಿನ ರಕ್ತವೂ ಹಸುರೇ! ಎಂದು ವರ್ಣಿಸಿದ್ದಾರೆ. ಸ್ವಾರಸ್ಯ :- ಹಸುರು ಕೇವಲ ಸಸ್ಯವರ್ಗಕ್ಕೆ ಮಾತ್ರ ಸೀಮಿತವಲ್ಲ ಇಡೀ ಇಡೀ ಪ್ರಕೃತಿಯ ಚೈತನ್ಯಕ್ಕೆ ಅದೇ ಕಾರಣ. ಪ್ರಕೃತಿಗಷ್ಟೇ ಅಲ್ಲದೆಽ ರಕ್ತದಲ್ಲೂ ಹಸುರು ವ್ಯಾಪಿಸಿದೆ ಎಂದು ಸ್ವಾರಸ್ಯಪೂರ್ಣವಾಗಿದೆ

ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಬರೆಯಿರಿ

ಲೇಖಕರ ಪರಿಚಯ(3 ಅಂಕ)

ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಕ್ರಿ.ಶ. 1904 ಡಿಸೆಂಬರ್ 29 ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು. ಆಧುನಿಕ ಕನ್ನಡ ಸಾಹಿತ್ಯದ ಕವಿಗಳಲ್ಲಿ ಅಗ್ರಗಣ್ಯರಾದ ಕುವೆಂಪು ಅವರು ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ತಪೋನಂದನ, ರಸೋವೈಸ:, ಅಮಲನ ಕಥೆ, ಮೋಡಣ್ಣನ ತಮ್ಮ, ಬೊಮ್ಮನಹಳ್ಳಿಯ ಕಿಂದರಿಜೋಗಿ, ಜಲಗಾರ, ಯಮನ ಸೋಲು, ಬೆರಳ್ಗೆ ಕೊರಳ್ – ನೆನಪಿನ ದೋಣಿಯಲ್ಲಿ (ಆತ್ಮಕಥನ) ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ , ರಾಷ್ಟ್ರಕವಿ, ಪಂಪ ಪ್ರಶಸ್ತಿ, ಪದ್ಮವಿಭೂಷಣ ಪ್ರಶಸ್ತಿಗಳು ಲಭಿಸಿವೆ.

ಎಂಟು-ಹತ್ತು ವಾಕ್ಯದಲ್ಲಿ ಉತ್ತರ ಬರೆಯಿರಿ(4 ಅಂಕ)

ಉತ್ತರ: ‘ಹಸುರು’ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ. ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ ಕುಪ್ಪಳ್ಳಿಯ ‘ ಕವಿಶೈಲ’ ದಲ್ಲಿ ಅವರಿಗುಂಟಾದ ಸೌಂದರ್ಯಾನುಭವ. ಪ್ರಕೃತಿ, ಅಲ್ಲಿಯ ಹಸುರುಗಳೊಂದಿಗೆ ಕುವೆಂಪು ಹೊಂದಿದ್ದ ಸಮೀಪ ಸಂಬಂಧವನ್ನು ತೋರಿಸುತ್ತದೆ. ಸಸ್ಯ ಸಮೃದ್ಧಿಯ ಹಸುರೇ ಆಗಸ, ಹಾಗೂ ಮುಗಿಲ ಬಣ್ಣವೂ ಕೂಡ ಹಸುರಾಗಿ ಕಾಣುತ್ತದೆ. ಗದ್ದೆ ಬಯಲು, ಅಲ್ಲಿನ ಬೆಟ್ಟಗುಡ್ಡಗಳು, ಕಣಿವೆಗಳು ಹಸುರಾಗಿರುವುದರಿಂದ ಕವಿಯ ಕಣ್ಣಿಗೆ ಅಲ್ಲಿನ ಸಂಜೆಯ ಬಿಸಿಲೂ ಕೂಡಾ ಹಸುರಾಗಿದೆ. ತೆನೆ ಹೊತ್ತು ನಿಂತ ಬತ್ತದ ಗದ್ದೆಯ ಬಣ್ಣ ಗಿಳಿ ಎದೆಯ ಬಣ್ಣದಂತೆ ತಿಳಿ ಹಸುರಾಗಿ ಕಾಣುತ್ತದೆ. ಅದರ ಪಕ್ಕದಲ್ಲಿ ವನದ ಅಂಚಿನಲ್ಲಿರುವ ಗೊನೆಗಳನ್ನು ಹೊತ್ತುನಿಂತ ಅಡಿಕೆಯ ತೋಟ, ಕವಿಯ ಸಮಸ್ತಾನುಭವವೂ ಹಸುರಾಗಿದೆ. ಹಸುರು ಸೊಬಗಿನ ನೆಲೆವಿಡಾದ ಕವಿಶೈಲದಿಂದ ಪಕ್ಕಕ್ಕೆ ನೋಡಿದರೆ ಪ್ರಕೃತಿ ಮಾತೆ, ಸೌಂದರ್ಯ ದೇವತೆಯಾಗಿ ಕಾಣುತ್ತಾಳೆ. ಅಲ್ಲಿರುವ ಹುಲ್ಲಿನ ಹೊದಿಕೆ ನಯವಾದ ವೆಲ್ವೇಟ್ (ಮಕಮಲ್ಲು) ಹಚ್ಚಹಸುರಿನ ಬಟ್ಟೆಯ ಜಮಖಾನೆಯನ್ನು ಹರಡಿ ಭೂತಾಯಿಯ ಮೈಮುಚ್ಚಿರುವುದರಿಂದ ಬೇರೆ ಯಾವ ಬಣ್ಣವೂ ಕಾಣದೆ, ಮಲೆನಾಡಿನ ಪ್ರಕೃತಿ ಮಾತೆಯ ಕೂಸಾದ ಕವಿಗೆ ಅದೂ ಕೂಡಾ ಹಸುರುಮಯವಾಗಿದೆ.
ಪ್ರಕೃತಿ ಮಾತೆಗೆ ಜೀವಕಳೆಯನ್ನು ತಂದ ಹೊಸಹೂಗಳ ಪರಿಮಳ ಹಸುರು, ಆ ಪರಿಮಳವನ್ನು ಹೊತ್ತು ತರುವ ತಂಪಾದ ಗಾಳಿಯೂ ಹಸುರು, ಪಕ್ಷಿಗಳ ಕೊರಳಿಂದ ಹೊರಟ ಇಂಚರವೂ ಕೂಡಾ ಹಸುರಾಗಿ ಭೂತಾಯಿಗೆ ಹಸುರು ಉಸಿರಾದುದರಿಂದ ಹಸುರು ಹಸುರಾಗಿ ಕವಿಗೆ ಆತ್ಮಾನಂದವನ್ನು ನೀಡುತ್ತದೆ. ಹೀಗೆ ಗಿಡ, ಮರ, ಬಳ್ಳಿ, ಪಶು ಪಕ್ಷಿಗಳ ಉಸಿರು ಹಸುರಾಗಿದೆ. ಕಣ್ಣಿಗೆ ಕಾಣದ ಹೂವಿನ ಪರಿಮಳ ಗಾಳಿಯ ತಂಪು ಹಕ್ಕಿಯ ಕೊರಲಿಂಪಿನ ಹಸುರಿನಲ್ಲಿ ಮುಳುಗಿದ ಕವಿಯ ಪಂಚೇಂದ್ರಿಯಗಳು ಹಸುರನ್ನು ಅನುಭವಿಸುತ್ತಿವೆ. ಹಸುರಿನ ಸೌಂದರ್ಯದ ಸೊಬಗು ಸವಿಯುತ್ತಿರುವ ಕವಿಯ ಸಕಲೇಂದ್ರಿಯಗಳೂ ಹಸುರಿನ ಕಡಲಿನಲ್ಲಿ ಅದ್ದಿದಂತಹ ರೋಮಾಂಚನಕಾರಿ ಅನುಭವಕ್ಕೆ ಎಡೆ ಮಾಡಿಕೊಟ್ಟು, ಕವಿಯಾತ್ಮ ಅದರಲ್ಲಿ ಲೀನವಾಗಿ ಕವಿಯ ಆತ್ಮ ಮತ್ತು ದೇಹದಲ್ಲಿರುವ ರಕ್ತವೂ ಹಸುರುಮಯವಾಗಿ ಬೆರೆತಿದೆ. ಕಡಲಾಗಿ ಹಬ್ಬಿದ ಹಸುರು ರಸಸೃಷ್ಟಿಯ ದರ್ಶನಕೆ ಹೊಸ ಅನುಭವದ ರಸಪಾನ ಸ್ನಾನ ಮಾಡಿಸಿ ಕವಿಯಾತ್ಮವೂ ಹಸುರಾಗಿದೆ. ಈ ಕವನದ ಪ್ರಾರಂಭದಿಂದ ಅಂತ್ಯದವರೆಗೆ ಹಸುರಿನ ಸಾಮ್ರಾಜ್ಯವೇ ಕಂಡುಬರುವುದು. ಕವನದ ಕೇಂದ್ರಬಿಂದುವಾದ ಹಸುರಿನಲ್ಲಿ ಕವಿ ತಲ್ಲೀನರಾಗಿರುವುದನ್ನು ಈ ಕವನದ ಮುಖಾಂತರ ಗುರುತಿಸಬಹುದಾಗಿದೆ.

ಕಂಠಪಾಠ ಪದ್ಯಗಳು(4 ಅಂಕ)

ಉತ್ತರ
ಹಸುರಾಗಸ ; ಹಸುರು ಮುಗಿಲು,
ಹಸುರು ಗದ್ದೆಯಾ ಬಯಲು,
ಹಸುರಿನ ಮಲೆ;ಹಸುರು ಕಣಿವೆ;
ಹಸುರು ಸಂಜೆಯೀ ಬಿಸಿಲೂ!

ಉತ್ತರ
ಹೊಸಹೂವಿನ ಕಂಪು ಹಸುರು,
ಎಲರಿನ ತಂಪೂ ಹಸುರು!
ಹಕ್ಕಿಯ ಕೊರಲಿಂಪು ಹಸುರು!
ಹಸುರು ಹಸುರಿಳೆಯುಸಿರೂ

ಕೆಳಗಿನ ಪದ್ಯಭಾಗವನ್ನು ಓದಿ ಅರ್ಥಮಾಡಿಕೊಂಡು, ಅಡಕವಾಗಿರುವ ಮೌಲ್ಯವನ್ನಾಧರಿಸಿ ಸಾರಾಂಶ ಬರೆಯಿರಿ. (4 ಅಂಕ)

ಸಾರಾಂಶ : ನವರಾತ್ರಿಯ ಕಾಲದಲ್ಲಿ ಭತ್ತದ ಹೊಲ ವನದಂತೆ ಮೈತಳೆದು ನಿಂತ ನೋಟ, ಕವಿಗಾದ ಅನುಭವದ ಜೊತೆಗೆ ಎಲ್ಲೆಡೆಗೂ ಮೈಕೊಡವಿ ಬಿದ್ದ ಹಸುರಿನ ಪರಿಚಯವಾಗುವುದು. ನಿತ್ಯ ಪರಿವರ್ತನಾಶೀಲಳಾದ ಪ್ರಕೃತಿ ಅದುವರೆಗಿನ ಮಳೆಯಿಂದ ಮುಕ್ತಳಾಗಿ, ಅಶ್ವಿಜ ಮಾಸ (ಸಪ್ಟಂಬರ್-ಅಕ್ಟೋಬರ್) ದಲ್ಲಿ ಹೊಚ್ಚಹೊಸ ಬಣ್ಣ ತಳೆದು ವಿರಾಜಿಸುತ್ತಿರುವಳು. ಕಡಲಾಗಿ ಹಬ್ಬಿದ ಹಸುರು ರಸಸೃಷಿಯ ದರ್ಶನಕೆ ಹೊಸ ಅನುಭವದ ರಸಪಾನ ಸ್ನಾನ ಮಾಡಿಸಿ ಕವಿಯಾತ್ಮವೂ ಹಸುರಾಗಿದೆ. ಇಲ್ಲಿ ಕವಿಯ ದೃಷ್ಟಿಗೆ ಹಸುರಿನ ಸೌಂದರ್ಯ ಬರಿಯ ಇಂದ್ರೀಯ ಸೌಂದರ್ಯವಾಗಿ ಮಾತ್ರ ಗೋಚರವಾಗಿಲ್ಲ, ಕವಿ ಕಾಣುತ್ತಿರುವುದು ಬರಿಯ ಸುಂದರವಾದ, ಆಕರ್ಷಕವಾದ ಹಸುರನಲ್ಲಿ, ಬರಿ ಹಾಗಾಗಿದ್ದರೆ ಕವಿಯಾತ್ಮ ಹಸುರಾಗುತ್ತಿರಲಿಲ್ಲ. ಕವಿಯ ಆತ್ಮ ಹಸುರಾದುದು ಕಾಣುವ ಹಸುರಿನ ಆತ್ಮದಲ್ಲಿ. ಎಂದರೆ ರಸದಲ್ಲಿ ಒಂದಾದುದರಿಂದ. ಕವಿಗೆ ಇಲ್ಲಿ ಕಂಡದ್ದು ಹಸುರಲ್ಲಿ ಹಸುರಾಗಿ ಮೈದೋರಿರುವ ರಸ. ಸೃಷ್ಟಿ ಶಕ್ತಿರೂಪಿಯಾದ ಮೂಲಸೌಂದರ್ಯ ಸೃಷ್ಟಿಯ ರಸ ಸೌಂದರ್ಯವಾಗಿ ಹೊಮ್ಮಿ ಹರಿಯುವುದನ್ನು ಅನುಭವಿಸಿದ ಕವಿಯ ಆತ್ಮ ಆ ರಸಪಾನ ಸ್ನಾನದಿಂದ ಹಸುರು ಆಗಿದೆ. ಈ ಅನುಭವದಲ್ಲಿ ಕವಿ ಮತ್ತು ಆ ದೃಶ್ಯ ಅಭಿನ್ನ. ಏಕೆಂದರೆ ಈ ಅನುಭವ ಕವಿಯ ವ್ಯಕ್ತಿ ಚೇತನದ ಮತ್ತು ಆ ಸನ್ನಿವೇಶದ ಅನೂನ್ಯತೆಯಿಂದ ಆವಿರ್ಭವಿಸಿದುದು. ಅದು ದೃಶ್ಯ ಮತ್ತು ವ್ಯಕ್ತಿತ್ವದ ಸಂಯೋಗದಿಂದ ಆಗಿರುವ ನಿಷ್ಪತ್ತಿ. ವ್ಯಕ್ತಿ ತಾ ವೈಶಿಷ್ಟವಾದ ಆ ರಸಾನುಭೂತಿಯನ್ನು ಪ್ರತ್ಯೇಕಿಸುವುದು ಸಾಧ್ಯವಲ್ಲ. ಹಾಗೆ ಪ್ರತ್ಯೇಕಿಸಿದರೆ ಅದು ಇರುವುದೂ ಇಲ್ಲಾ. ಆ ಒಂದು ತಾದಾತ್ಮ್ಯ ಅನುಭವವೇ ಇಲ್ಲಿ ಹಸುರಾದುದು ಕವಿಯಾತ್ಮ ರಸಪಾನ ಸ್ನಾನದಲಿ ಎಂಬ ಮಾತಿನಲ್ಲಿ ಮೂಡಿಬಂದಿದೆ.

ಇಲ್ಲಿ ಕವಿಯ ಸಮಸ್ತ ಸೃಷ್ಟಿಗೆ ತನ್ನ ಹಸುರು ಬಣ್ಣ ನೀಡಿದ ಹಸುರಿನ ವರ್ಣನೆ ಮೂಡಿದೆ. ಅದರ ಸೊಬಗು ತನ್ನ ಮೇಲುಂಟು ಮಾಡಿದ ಗಾಡವಾದ ಪ್ರಭಾವವನ್ನೂ ಅದೇ ತಾನಾದ ಅನುಭವವನ್ನೂ ನೇರವಾಗಿ ಕೊಡುವರು. ಎಲ್ಲೆಲ್ಲೂ ಹಬ್ಬಿದ ಹಸುರು, ಶಾಂತಿಯನ್ನು ಸಾರುತ್ತ, ಆಗಸದಲ್ಲಿನ ಮುಗಿಲ ಬಣ್ಣವೂ ಹಸುರು ಬದುಗಳಿಂದ ಕೂಡಿದ ಬತ್ತದ ಗದೆಯ ಬಯಲಿನಲ್ಲಿ ಸೊಂಪಾಗಿ ಬೆಳೆದ, ಬತ್ತದ ಪೈರು ಹಸುರಿನ ಮೇಲೆ ಹಸುರು ಹೊದಿಸಿದಂತೆ ಕಾಣುತ್ತದೆ. ಮಲೆಯಲ್ಲಿ (ಬೆಟ್ಟದಲ್ಲಿ), ಕಣಿವೆಯಲ್ಲಿ (ಬೆಟ್ಟಗಳ ನಡುವಿನ ತಗ್ಗು ಪ್ರದೇಶ) ದಟ್ಟವಾಗಿ ಬೆಳೆದ ಗಿಡಮರಗಳೆಲ್ಲ ಹಸುರಾಗಿ ಕಾಣುತ್ತಿರುವುದರಿಂದ ಸಂಜೆಯ ಬಿಸಿಲೂ ಕೂಡಾ ಪ್ರಕೃತಿಯಲಿ ಒಂದಾಗಿ ಹಸುರಾಗಿ ಕಾಣುತ್ತಿದೆ. ‘ದೃಷ್ಟಿಗೆ ತಕ್ಕಂತೆ ಸೃಷ್ಟಿ’ ಎನ್ನುವ ಹಾಗೆ ಸಕಲವೂ ಹಸುರು ಆಗಿದೆ.

ಅಶ್ವಿಜ ಮಾಸ (ಸಪ್ಟಂಬರ್-ಅಕ್ಟೋಬರ್)ದಲ್ಲಿ ಮಳೆ ಕಡಿಮೆಯಾಗಿ ತೆನೆ ಹೊತ್ತು ನಿಂತ ಬತ್ತದ ಗದ್ದೆಯ ಬಣ್ಣ ಗಿಳಿ ಎದೆಯ ಬಣ್ಣದಂತೆ ತಿಳಿ ಹಸುರಾಗಿ ಕಾಣುತ್ತದೆ. ಅದರ ಪಕ್ಕದಲ್ಲಿ ವನದ ಅಂಚಿನಲ್ಲಿರುವ ಗೊನೆಗಳನ್ನು ಹೊತ್ತುನಿಂತ ಅಡಿಕೆಯ ತೋಟ, ಕವಿಯ ಸಮಸ್ತಾನುಭವವೂ ಹಸುರಾಗಿದೆ.

ಹಸುರು ಸೊಬಗಿನ ನೆಲೆವಿಡಾದ ಕವಿಶೈಲದಿಂದ ( ಕುವೇಂಪುರವರ ಕಾವ್ಯ ಹುಟ್ಟಲು ಪ್ರೇರಣೆಯಾದ; ಕವಿ ಕುಳಿತು ಕೊಳ್ಳುವ ಸ್ಥಳ) ಪಕ್ಕಕ್ಕೆ ನೋಡಿದರೆ ಪ್ರಕೃತಿ ಮಾತೆ, ಸೌಂದರ್ಯ ದೇವತೆಯಾಗಿ ಕಾಣುತ್ತಾಳೆ. ಅಲ್ಲಿರುವ ಹುಲ್ಲಿನ ಹಾಸಿಗೆಗೆ (ಹೊದಿಕೆ) ನಯವಾದ ವೆಲ್ವೇಟ್ (ಮಕಮಲ್ಲು) ಹಚ್ಚಹಸುರಿನ ಬಟ್ಟೆಯ ಜಮಖಾನೆಯನ್ನು ಹರಡಿ ಭೂತಾಯಿಯ ಮೈಮುಚ್ಚಿರುವುದರಿಂದ ಬೇರೆ ಯಾವ ಬಣ್ಣವೂ ಕಾಣದೆ, ಮಲೆನಾಡಿನ ಪ್ರಕೃತಿ ಮಾತೆಯ ಕೂಸಾದ ಕವಿಗೆ ಅದೂ ಕೂಡಾ ಹಸುರುಮಯವಾಗಿದೆ. (ನೆಲದ ಮೈ ಮುಚ್ಚಿ ಹಸುರು ಹೊಚ್ಚಹೊಸ ಜಮಖಾನೆಯಂತೆ ಕಾಣುತ್ತದೆ)

ಪ್ರಕೃತಿ ಮಾತೆಗೆ ಜೀವಕಳೆಯನ್ನು ತಂದ ಹೊಸಹೂಗಳ ಪರಿಮಳ ಹಸುರು, ಆ ಪರಿಮಳವನ್ನು ಹೊತ್ತು ತರುವ ತಂಪಾದ ಗಾಳಿಯೂ ಹಸುರು, ಪಕ್ಷಿಗಳ ಕೊರಳಿಂದ ಹೊರಟ ಇಂಚರವೂ ಕೂಡಾ ಹಸುರಾಗಿ ಭೂತಾಯಿಗೆ ಹಸುರು ಉಸಿರಾದುದರಿಂದ ಹಸುರು ಹಸುರಾಗಿ ಕವಿಗೆ ಆತ್ಮಾನಂದವನ್ನು ನೀಡುತ್ತದೆ. ಹೀಗೆ ಗಿಡ, ಮರ, ಬಳ್ಳಿ, ಪಶು ಪಕ್ಷಿಗಳ ಉಸಿರು ಹಸುರಾಗಿದೆ. ಕಣ್ಣಿಗೆ ಕಾಣದ ಹೂವಿನ ಪರಿಮಳ ಗಾಳಿಯ ತಂಪು ಹಕ್ಕಿಯ ಕೊರಲಿಂಪಿನ ಹಸುರಿನಲ್ಲಿ ಮುಳುಗಿದ ಕವಿಯ ಪಂಚೇಂದ್ರಿಯಗಳು ಹಸುರನ್ನು ಅನುಭವಿಸುತ್ತಿವೆ.

ಶಬ್ದಸ್ಪರ್ಷ ರೂಪ ರಸಗಂಧಗಳ ಮುಖಾಂತರ ಹಸುರಿನ ಸೌಂದರ್ಯದ ಸೊಬಗು ಸವಿಯುತ್ತಿರುವ ಕವಿಯ ಸಕಲೇಂದ್ರಿಯಗಳೂ ಹಸುರಿನ ಕಡಲಿನಲ್ಲಿ ಅದ್ದಿದಂತಹ ರೋಮಾಂಚನಕಾರಿ ಅನುಭವಕ್ಕೆ ಎಡೆ ಮಾಡಿಕೊಟ್ಟು, ಕವಿಯಾತ್ಮ ಅದರಲ್ಲಿ ಲೀನವಾಗಿ ತಾನು ಪರಿಭಾವಿಸುವ ವಸ್ತುವಿನಲ್ಲಿ ಕ್ರಮೇಣ ಕರಗಿದ ಕವಿ, ಹಾಲು-ಜೇನಾಗಿ, ಹಾಲು ಸಕ್ಕರೆಯಾಗಿ, ಹಾಲಿನೊಳಗಿನ ತುಪ್ಪವಾಗಿ, ಬೇರ್ಪಡಿಸಲಾಗದ ಪರಮಾನಂದದಲ್ಲಿ ಒಂದಾಗಿರುವರು. ಕವಿಯ ಆತ್ಮ ಮತ್ತು ದೇಹದಲ್ಲಿರುವ ರಕ್ತವೂ ಹಸುರುಮಯವಾಗಿ ಬೆರೆತಿದೆ. ಕಡಲಾಗಿ ಹಬ್ಬಿದ ಹಸುರು ರಸಸೃಷ್ಟಿಯ ದರ್ಶನಕೆ ಹೊಸ ಅನುಭವದ ರಸಪಾನ ಸ್ನಾನ ಮಾಡಿಸಿ ಕವಿಯಾತ್ಮವೂ ಹಸುರಾಗಿದೆ. ಈ ಕವನದ ಪ್ರಾರಂಭದಿಂದ ಅಂತ್ಯದವರೆಗೆ ಹಸುರಿನ ಸಾಮ್ರಾಜ್ಯವೇ ಕಂಡುಬರುವುದು. ಕವನದ ಕೇಂದ್ರಬಿಂದುವಾದ ಹಸುರು ಇಲ್ಲಿ ಸರ್ವಸ್ವ. ಮೊದಮೊದಲು ಸೌಂದರ್ಯರೂಪಿಯಾಗಿ ಕಾಣುವ ಹಸುರು ಬರುಬರುತ್ತ ಸಕಲೇಂದ್ರಿಯಾಗಳಿಗೂ ವ್ಯಾಪಿಸಿ, ವ್ಯಷ್ಟಿ-ಸಮಷ್ಟಿಯೆಲ್ಲವೂ ಹಸುರಾಗಿ ದೃಗೇಂದ್ರಿಯಾಗಳನ್ನು ದಾಟಿ, ತಾದಾತ್ಮ್ಯಾನುಭೂತಿಯ ಶಿಖರಕ್ಕೆ ತಲುಪಿ ಕವಿಯಾತ್ಮ ರಸ-ಸಮಾಧಿಯಲ್ಲದ್ದಿದೆ. ತರ್ಕಬದ್ದ ಉಪದೇಶವಿಲ್ಲದೆ ಕೊನೆಗೊಳ್ಳುವ ಈ ಕವನ ಕವಿಯ ಯಶಸ್ವೀ ಕವನಗಳಲ್ಲಿ ಒಂದಾಗಿದೆ. ಅಶ್ವಿಜದ ಹಸುರಿನ ಸೊಬಗು ಒಂದು ತೆರನಾದರೆ, ಭಾದ್ರಪದ ಮಾಸದ ಹಸುರಿನ ಸೊಬಗು ಇನ್ನೊಂದು ಬಗೆಯದು.

« BACK ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ