10-Kan ಕೌರವೇಂದ್ರನ ಕೊಂದೆ ನೀನು

RMH

ಪದ್ಯ ಪಾಠ-4 ಕೌರವೇಂದ್ರನ ಕೊಂದೆ ನೀನು

ಒಂದು ಅಂಕದ ಪ್ರಶ್ನೆಗಳು

ಉತ್ತರ : ಧರ್ಮರಾಯನ ಮಯನಿರ್ಮಿತ ಅರಮನೆಯಲ್ಲಿ ಕೌರವನು ಅವಮಾನಿತನಾಗುತ್ತಾನೆ.

ಉತ್ತರ : ಮಹಾಭಾರತವನ್ನು ವೇದವ್ಯಾಸರು ಸಂಸ್ಕೃತದಲ್ಲಿ ರಚಿಸಿದರು.

ಉತ್ತರ : ಪಾಂಡವರು ದ್ಯೂತದ ಪಣದಂತೆ "ಹನ್ನೆರಡು ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸ"ವನ್ನು ಯಶ್ವಸಿಯಾಗಿ ಮುಗಿಸಿ ಬರುತ್ತಾರೆ.

ಉತ್ತರ : ಕೃಷ್ಣಸಂಧಾನವು ದುರ್ಯೋಧನನ ಹಠದಿಂದ ತಿರಸ್ಕೃತವಾಗುತ್ತದೆ.

ಉತ್ತರ : ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಗೆ ಜನ್ಮರಹಸ್ಯವನ್ನು ತಿಳಿಸುತ್ತಾನೆ.

ಉತ್ತರ : ಧರ್ಮರಾಯ ಕೃಷ್ಣನನ್ನು ಸಂಧಿಗಾಗಿ ಕಳುಹಿಸುತ್ತಾನೆ.

ಉತ್ತರ : ಶ್ರೀಕೃಷ್ಣನು ಸಂಧಿಗಾಗಿ ಮೊದಲು ವಿದುರನ ಬಳಿಗೆ ಬರುತ್ತಾನೆ.

ಉತ್ತರ : ಕೃಷ್ಣನು ಕರ್ಣನ ಸಂಗಡ ಸರಸವನ್ನು ಮಾಡಿ, ಕೈಹಿಡಿದು ಎಳೆದು ರಥದ ಪೀಠದಲ್ಲಿ ಕೂರಿಸಿಕೊಂಡು ಮೈದುನ ಎಂದು ಕರೆದನು.

ಉತ್ತರ : ಶ್ರೀಕೃಷ್ಣನು ಕರ್ಣನ ಕಿವಿಯಲ್ಲಿ ಉಭಯವನ್ನು ಭೀತ್ತದನು.

ಉತ್ತರ : ಅಶ್ವಿನೀದೇವತೆಗಳ ವರಬಲದಿಂದ ಜನಿಸಿದವರು ನಕುಲ ಮತ್ತು ಸಹದೇವ.

ಉತ್ತರ : ಕರ್ಣನು ಸೂರ್ಯದೇವನ ಅನುಗ್ರಹದಿಂದ ಜನಿಸಿದನು.

ಉತ್ತರ : ಧರ್ಮರಾಜನು ಯಮಧರ್ಮರಾಯನ ಅನುಗ್ರಹದಿಂದ ಜನಿಸಿದನು.

ಉತ್ತರ : ಭೀಮನು ವಾಯುದೇವನ ಅನುಗ್ರಹದಿಂದ ಜನಿಸಿದನು.

ಉತ್ತರ : ಅರ್ಜುನನು ಇಂದ್ರದೇವನ ಅನುಗ್ರಹದಿಂದ ಜನಿಸಿದನು.

ಉತ್ತರ : ಇನತನೂಜ ಎಂದರೆ ಕರ್ಣ.

ಉತ್ತರ : ಫಲುಗುಣ ಎಂದು ಅರ್ಜುನನ್ನು ಕರೆಯುತ್ತಾರೆ.

ಉತ್ತರ : ನಕುಲ ಸಹದೇವರ ತಾಯಿಯ ಹೆಸರು ‘ಮಾದ್ರಿ’.

ಉತ್ತರ : ಕರ್ಣನು ಕೃಷ್ಣನ ಬಳಿಯಲ್ಲಿ ತಾನು ತನ್ನ ಒಡೆಯನಿಗೆ ಆತನ ಶತ್ರುಗಳ ಶಿರವನ್ನು ತಂದು ಒಪಿಸುವ ಭರದ ಆವೇಶದಲ್ಲಿದ್ದೆ ನೆಂದು ತಿಳಿಸುವನು.

ಉತ್ತರ : ಕುಂತಿಯು ಪಡೆದ ಮೊದಲ ಮಂತ್ರದಲ್ಲಿ ಕರ್ಣನು ಜನಿಸಿದನು.

ಉತ್ತರ : ಧರ್ಮರಾಯ ( ಯುಧಿಷ್ಠಿರ ), ಭೀಮ, ಅರ್ಜುನ, ನಕುಲ ಮತ್ತು ಸಹದೇವರೇ ಪಾಂಡು ತನಯರು.

ಉತ್ತರ : ಕುಂತಿಯು ದುರ್ವಾಸ ಮುನಿಗಳಿಂದ ಐದು(5) ಮಂತ್ರ ಗಳನ್ನು ಪಡೆದಳು.

ಉತ್ತರ : ಕೃಷ್ಣನು ಕರ್ಣನಿಗೆ ಹಸ್ತಿನಾಪುರದ ರಾಜನನ್ನಾಗಿ ಮಾಡುವೆನೆಂದು ತಿಳಿಸುತ್ತಾನೆ.

ಉತ್ತರ : ರಾಜೀವಸಖನೆಂದರೇ ಸೂರ್ಯದೇವ.

ಉತ್ತರ:ಕರುಪತಿಗೆ ಕೆಡಾಯಿತೆಂದು ಮನದಲ್ಲಿ ಯೋಚಿಸಿದವರು ಕರ್ಣ

ಉತ್ತರ: ಕುಮಾರವ್ಯಾಸನಿಗಿರುವ ಬಿರುದು ರೂಪಕ ಸಾಮ್ರಾಜ್ಯ ಚಕ್ರವರ್ತಿ.

ಉತ್ತರ:.ನಾಳಿನ ಭಾರತ ಯುದ್ಧವು ಮಾರಿಗೆ ಔತಣವೆಂದು ಕರ್ಣ ಹೇಳುತ್ತಾನೆ

ಉತ್ತರ: ಹರಿಯ ಹಗೆಯ ಬಗ್ಗೆ ಕರ್ಣನಿಗಿರುವ ಭಯವೆಂದರೆ ಹರಿಯ ‘ಹಗೆ ಹೋಗೆಯಾಗದೆ ಸಮ್ಮನೆ ಹೋಗದು’

ಉತ್ತರ :

ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )

ಉತ್ತರ : ಶ್ರೀಕೃಷ್ಣ ಸಂಧಿಯ ನೆಪದಲ್ಲಿ ದರ‍್ಯೋಧನನ ಬಲವನ್ನು ಕುಗ್ಗಿಸುವ ಸಲುವಾಗಿ ಮೊದಲು ವಿದುರನಲ್ಲಿಗೆ ಬರುತ್ತಾನೆ.
ಇದರಿಂದ ಕುಪಿತನಾದ ಕೌರವ ವಿದುರನನ್ನು ತುಂಬಿದ ಸಭೆಯಲ್ಲಿ ಹೀಗಳೆಯುತ್ತಾನೆ.
ಸಿಟ್ಟುಗೊಂಡ ವಿದುರ ಅಪ್ರತಿಮವಾದ ತನ್ನ ಬಿಲ್ಲನ್ನು ಮುರಿದು ಯುದ್ಧದಿಂದ ವಿಮುಖನಾಗುತ್ತಾನೆ.

ಉತ್ತರ : “ಕರ್ಣ ನಿಮಗೂ ಯಾದವ ಕೌರವರಿಗೂ ವಂಶ ಗೌರವದಲ್ಲಿ ಭೇದವಿಲ್ಲ. ನಿನ್ನಾಣೆ. ನೀನು ನಿಜವಾಗಿ ಭೂಮಿಯ ಒಡೆಯ. ಆದರೆ ನಿನಗೆ ಮನದಲ್ಲಿ ಅದರ ಅರಿವಿಲ್ಲ” ಎಂದು ಹೇಳುತ ಕೃಷ್ಣನು ಕರ್ಣನ ಕಿವಿಯಲ್ಲಿ ಉಭಯವನ್ನು (ದ್ವಂದ್ವವನ್ನು) ಬಿತ್ತಿದನು.

ಉತ್ತರ : ಕುಂತಿಯು ಸೂರ್ಯನ ಅನುಗ್ರಹದಿಂದ ಕರ್ಣನನ್ನು, ಯಮಧರ್ಮನ ಅನುಗ್ರಹದಿಂದ ಧರ್ಮರಾಯನನ್ನು, ವಾಯುವಿನ ಅನುಗ್ರಹದಿಂದ ಭೀಮನನ್ನು, ಇಂದ್ರನ ಅನುಗ್ರಹದಿಂದ ಅರ್ಜುನನ್ನು ಪಡೆದಳು. ಮಾದ್ರಿಯು ಅಶ್ವಿನೀದೇವತೆಗಳ ಅನುಗ್ರಹದಿಂದ ನಕುಲ ಸಹದೇವರನ್ನು ಪಡೆದಳು.

ಉತ್ತರ : ಕೃಷ್ಣನು ಕರ್ಣನಿಗೆ ಆಮಿಷಗಳನ್ನು ಒಡ್ಡಿದಾಗ ಕೊರಳಸೆರೆ ಹಿಗ್ಗಿದವು, ಕಂಬನಿಯು ರಭಸದಿಂದ ಮುಂದೆ ಬಂದು, ಅಧಿಕವಾಗಿ ಕರ್ಣನು ದುಃಖಗೊಂಡು ಮನದೊಳಗೆ “ಅಯ್ಯೋ, ದುರ್ಯೋಧನನಿಗೆ ಕೇಡಾದುದು” ಎಂದನು. ಹರಿಯ ಹಗೆತನವು ಹೊಗೆ ತೋರದೆ ಸುಟ್ಟುಹಾಕುವುದಲ್ಲದೆ; ಸುಮ್ಮನೆ ಹೋಗುವುದೆ. ಕೃಷ್ಣನು “ನನ್ನ ವಂಶÀದ ರಹಸÀ್ಯವನ್ನು ತಿಳಿಸಿ ನನ್ನನ್ನು ಕೊಂದನು” ಎಂದು ಮನದಲ್ಲ್ಲಿ ನೊಂದುಕೊಂಡನು.

ಉತ್ತರ : ಕರ್ಣನು ಕೃಷ್ಣನಿಗೆ “ನಾನು ರಾಜ್ಯದ ಸಿರಿಸಂಪತ್ತಿಗೆ ಸೋಲುವವನಲ್ಲ, ಪಾಂಡವರು ಕೌರವರು ಸೇವೆಯನ್ನು ಮಾಡುವುದು ನನಗೆ ಇಷ್ಟವಿಲ್ಲ. ಆದರೆ ನನ್ನನ್ನು ಕಾಪಾಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುವ ಉತ್ಸಾಹದಲ್ಲಿ ಇದ್ದೆನು. ಆದರೆ ನೀನು ನನ್ನ ಜನ್ಮ ರಹಸ್ಯವನ್ನು ತಿಳಿಸಿ ದುರ್ಯೋಧನನನ್ನು ಕೊಂದೆ” ಎಂದನು.

ಉತ್ತರ : ಕರ್ಣನು ಕೃಷ್ಣನನ್ನು ಕುರಿತು “ನಾಳಿನ ಕೌರವರ ಮತ್ತು ಪಾಂಡವರ ಚತುರಂಗ ಬಲದ ನಡುವಿನ ಯುದ್ಧವು ಮೃತ್ಯುದೇವತೆಗೆ ಭೋಜನ ಕೂಟ ಆಗುವುದು. ನಾನು ಕೌರವನ ಉಪಕಾರದ ಋಣ ತೀರಿಸುವಂತೆ ಹೋರಾಡಿ, ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರನು ಕೊಂದು, ನನ್ನ ಒಡೆಯನಿಗಾಗಿ ಪ್ರಾಣವನ್ನು ಬಿಡುವೆನು. ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೆನು” ಎಂದನು.

ಉತ್ತರ : ಕೃಷ್ಣನು ಕರ್ಣನಿಗೆ “ನೀನು ರಾಜನಾದರೆ, ಎಡದ ಪಕ್ಕದಲ್ಲ್ಲಿ ಕೌರವ ರಾಜರ ಸಮೂಹ, ಬಲದಲ್ಲಿ ಪಾಂಡು ಮಕ್ಕಳ ಸಮೂಹ, ಎದುರಿನಲ್ಲಿ ಮಾದ್ರ ಮಾಗಧ ಯಾದವ ಮೊದಲಾದವರು ಇರುತ್ತಾರೆ. ಇವರ ನಡುವೆ ನೀನು ರಾಜಸಭೆಯಲ್ಲಿ ಸಿಂಹಾಸನದಲ್ಲಿ ಕುಳಿತು ಅತಿಯಾದ ಸೊಬಗಿನಿಂದ ಶೊಭಿ¸ಬಹುದೆಂದು ತಿಳಿಸುತ್ತಾನೆ.

ಉತ್ತರ : ಕೃಷ್ಣನು ಅಸಹಾಯಕನಾದ ಸ್ಥಿತಿಯಲ್ಲಿ ನೋವು, ಸಂಕಟದಿಂದ ಬಳಲುವ ಕರ್ಣನನ್ನು ಕುರಿತು “ಏನು ಹೇಳು ಕರ್ಣ ನಿನ್ನ ಮನೋವೇದನೆ ಯಾವುದು? ನಿನಗೆ ಕುಂತಿಯ ಮಕ್ಕಳಿಂದ ಕೆಲಸ ಮಾಡಿಸಿಕೊಳ್ಳುವುದು ಇಷ್ಟವಿಲ್ಲವೇ? ಎನ್ನಾಣೆಗೂ ನಿನಗೆ ಯಾವುದೇ ನಷ್ಟವಿಲ್ಲ, ಮಾತನಾಡು ಮೌನವು ಏತಕೆ? ಭ್ರಮೆಗೊಳಗಾಗುವುದು ಬೇಡ. ನಾನು ನಿನ್ನ ದುರ್ದೆಸೆಯನ್ನು ಬಯಸುವನಲ್ಲ, ನನ್ನ ಮಾತನ್ನು ಕೇಳು” ಎಂದು ಪ್ರಶ್ನಿಸುವನು.

ಉತ್ತರ :

ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ (3 ಅಂಕ)

ಆಯ್ಕೆ : ಈ ವಾಕ್ಯವನ್ನು ‘ಕುಮಾರವ್ಯಾಸ’ನೆಂದುಪ್ರಸಿದ್ಧನಾದ ಕವಿ ಗದುಗಿನ ನಾರಾಣಪ್ಪನು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬಮಹಾಕಾವ್ಯದಲ್ಲಿನ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.

ಸಂದರ್ಭ : ಕೃಷ್ಣನು ಪಾಂಡವರ ಮತ್ತು ಕೌರವರ ನಡುವೆ ಸಂಧಿ ಮಾಡಲು ಹೋಗುತ್ತಾನೆ. ಆದರೆ ದುರ್ಯೋಧನನ ಹಠದಿಂದ ಕೃಷ್ಣಸಂಧಾನವು ತಿರಸ್ಕೃತವಾಗುತ್ತದೆ. ಆಗ ಯುದ್ಧ ಅನಿವರ‍್ಯವೆನಿಸಿ ಭೇದತಂತ್ರವನ್ನು ಬಳಸಲು ಕೃಷ್ಣನು ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು, ಮೈದುನತನದ ಸರಸದಲ್ಲಿ ಮಾತನಾಡಿಸುತ್ತಾನೆ ಆ ಸಂದರ್ಭವನ್ನು ಕುರಿತು ಈ ಮಾತನ್ನು ಕವಿಯು ಹೇಳುತ್ತಾನೆ.

ಸ್ವಾರಸ್ಯ :- “ಕರ್ಣ ನಿಮ್ಮಲ್ಲಿ, ಯಾದವರು ಕೌರವರಲ್ಲಿ ಭೇದವಿಲ್ಲ. ಹೇಳುವುದಾದರೆ ವಂಶದಲ್ಲಿ ಮೊದಲೆರಡಿಲ್ಲ ನಿನ್ನಾಣೆ. ರಾಜ ನೀನು, ಮನದಲ್ಲಿ ನಡೆದುದರ ಅರಿವಿಲ್ಲ” ಎಂದು ಹೇಳುತ ಕೃಷ್ಣನು ಕರ್ಣನ ಕಿವಿಯಲ್ಲಿ ಉಭಯವನ್ನು (ದ್ವಂದ್ವವನ್ನು) ಬಿತ್ತಿದನು ಎಂಬುದು ಕವಿಯ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿತವಾಗಿದೆ.

ಆಯ್ಕೆ : ಈ ವಾಕ್ಯವನ್ನು ‘ಕುಮಾರವ್ಯಾಸ’ನೆಂದುಪ್ರಸಿದ್ಧನಾದ ಕವಿ ಗದುಗಿನ ನಾರಾಣಪ್ಪನು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬಮಹಾಕಾವ್ಯದಲ್ಲಿನ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.

ಸಂದರ್ಭ : ಕೃಷ್ಣನು ಪಾಂಡವರ ಮತ್ತು ಕೌರವರ ನಡುವೆ ಸಂಧಿ ಮಾಡಲು ಹೋಗುತ್ತಾನೆ. ಆದರೆ ದುರ್ಯೋಧನನ ಹಠದಿಂದ ಕೃಷ್ಣಸಂಧಾನವು ತಿರಸ್ಕೃತವಾಗುತ್ತದೆ. ಆಗ ಯುದ್ಧ ಅನಿವರ‍್ಯವೆನಿಸಿ ಭೇದತಂತ್ರವನ್ನು ಬಳಸಲು ಕೃಷ್ಣನು ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು, ರಥದಲ್ಲಿ ಕೈ ಹಿಡಿದು ಎಳೆದು ಕುಳ್ಳರಿಸಿ ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳುತ್ತಾನೆ.

ಸ್ವಾರಸ್ಯ : “ಕರ್ಣ ನೀನು ಹಸ್ತಿನಾಪುರದ ರಾಜನಾದರೆ ನಿನಗೆ ಕೌರವರು ಮತ್ತು ಪಾಂಡವರು ಸೇವೆಯನ್ನು ಮಾಡುವರು ಅದನ್ನು ಬಿಟ್ಟು ನೀನು ದುರ್ಯೋಧನನ ಬಾಯೆಂಜಲಿಗೆ ಕೈಯೊಡ್ಡುವುದು ಸರಿಯೇ” ಎಂದು ಕೃಷ್ಣನು ಸ್ವಾರಸ್ಯಪೂರ್ಣವಾಗಿ ಈ ಮಾತನ್ನು ಹೇಳಿರುವನು.

ಆಯ್ಕೆ : ಈ ವಾಕ್ಯವನ್ನು ‘ಕುಮಾರವ್ಯಾಸ’ನೆಂದುಪ್ರಸಿದ್ಧನಾದ ಕವಿ ಗದುಗಿನ ನಾರಾಣಪ್ಪನು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬಮಹಾಕಾವ್ಯದಲ್ಲಿನ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.

ಸಂದರ್ಭ : ಕೃಷ್ಣನು ಪಾಂಡವರ ಮತ್ತು ಕೌರವರ ನಡುವೆ ಸಂಧಿ ಮಾಡಲು ಹೋಗುತ್ತಾನೆ. ಆದರೆ ದುರ್ಯೋಧನನ ಹಠದಿಂದ ಕೃಷ್ಣಸಂಧಾನವು ತಿರಸ್ಕೃತವಾಗುತ್ತದೆ. ಆಗ ಯುದ್ಧ ಅನಿವರ‍್ಯವೆನಿಸಿ ಭೇದತಂತ್ರವನ್ನು ಬಳಸಲು ಕೃಷ್ಣನು ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು, ರಥದಲ್ಲಿ ಕೈ ಹಿಡಿದು ಎಳೆದು ಕುಳ್ಳರಿಸಿ ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳುತ್ತಾನೆ.

ಸ್ವಾರಸ್ಯ : “ಕರ್ಣ ನಿನ್ನ ಎಡಗಡೆ ಕೌರವರು, ಬಲಗಡೆ ಪಾಂಡವರು, ಎದುರಿನಲ್ಲಿ ಮಾದ್ರ, ಮಾಗಧ ಯಾದವಾದಿಗಳು ಇರುವಾಗ, ನೀನು ಓಲಗದಲ್ಲಿ ವಿಲಾಸದಿಂದ ಮೆರೆಯುವುದನ್ನು ಬಿಟ್ಟು, ಕೌರವನಿಗೆ ಜೀಯ ಹಸಾದವೆಂಬುದು ಕಷ್ಟವಾಗುವುದಿಲ್ಲವೇ?” ಎಂದು ಸ್ವಾರಸ್ಯಪೂರ್ಣವಾಗಿ ಕೃಷ್ಣನು ಹೇಳಿರುವನು.

ಆಯ್ಕೆ : ಈ ವಾಕ್ಯವನ್ನು ‘ಕುಮಾರವ್ಯಾಸ’ನೆಂದುಪ್ರಸಿದ್ಧನಾದ ಕವಿ ಗದುಗಿನ ನಾರಾಣಪ್ಪನು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬಮಹಾಕಾವ್ಯದಲ್ಲಿನ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.

ಸಂದರ್ಭ : ಕೃಷ್ಣನು ಪಾಂಡವರ ಮತ್ತು ಕೌರವರ ನಡುವೆ ಸಂಧಿ ಮಾಡಲು ಹೋಗುತ್ತಾನೆ. ಆದರೆ ದುರ್ಯೋಧನನ ಹಠದಿಂದ ಕೃಷ್ಣಸಂಧಾನವು ತಿರಸ್ಕೃತವಾಗುತ್ತದೆ. ಆಗ ಯುದ್ಧ ಅನಿವರ‍್ಯವೆನಿಸಿ ಭೇದತಂತ್ರವನ್ನು ಬಳಸಲು ಕೃಷ್ಣನು ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು, ರಥದಲ್ಲಿ ಕೈ ಹಿಡಿದು ಎಳೆದು ಕುಳ್ಳರಿಸಿ ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳುತ್ತಾನೆ.

ಸ್ವಾರಸ್ಯ : ತನ್ನ ಜನ್ಮ ರಹಸ್ಯವನ್ನು ಅರಿತು ಕರ್ಣನು ಮನದಲ್ಲಿ ಚಿಂತಿತನಾಗಿ ಮೌನವಾದಾಗ, ಕೃಷ್ಣನು ಈ ಮಾತನ್ನು ಹೇಳುವುದರ ಮೂಲಕ ಕರ್ಣನನ್ನು ಸಮಾಧಾನಪಡಿಸಿದ್ದು ಸ್ವಾರಸ್ಯಪೂರ್ಣವಾಗಿದೆ.

ಆಯ್ಕೆ : ಈ ವಾಕ್ಯವನ್ನು ‘ಕುಮಾರವ್ಯಾಸ’ನೆಂದುಪ್ರಸಿದ್ಧನಾದ ಕವಿ ಗದುಗಿನ ನಾರಾಣಪ್ಪನು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬಮಹಾಕಾವ್ಯದಲ್ಲಿನ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.

ಸಂದರ್ಭ : ಕೃಷ್ಣನು ಪಾಂಡವರ ಮತ್ತು ಕೌರವರ ನಡುವೆ ಸಂಧಿ ಮಾಡಲು ಹೋಗುತ್ತಾನೆ. ಆದರೆ ದುರ್ಯೋಧನನ ಹಠದಿಂದ ಕೃಷ್ಣಸಂಧಾನವು ತಿರಸ್ಕೃತವಾಗುತ್ತದೆ. ಆಗ ಯುದ್ಧ ಅನಿವರ‍್ಯವೆನಿಸಿ ಭೇದತಂತ್ರವನ್ನು ಬಳಸಲು ಕೃಷ್ಣನು ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು, ರಥದಲ್ಲಿ ಕೈ ಹಿಡಿದು ಎಳೆದು ಕುಳ್ಳರಿಸಿ ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕರ್ಣನು ಕೃಷ್ಣನಿಗೆ ಹೇಳುತ್ತಾನೆ.

ಸ್ವಾರಸ್ಯ : ಮುಂದೆ ನಡೆಯುವ ಮಹಾಭಾರತ ಕುರುಕ್ಷೇತ್ರ ಯುದ್ಧದ ಭೀಕರತೆ ಬಹು ಸ್ವಾರಸ್ಯಪೂರ್ಣವಾಗಿ ಕರ್ಣನ ಈ ಮಾತಿನಲ್ಲಿ ಅಭಿವ್ಯಕ್ತಗೊಡಿದೆ.

ಆಯ್ಕೆ : ಈ ವಾಕ್ಯವನ್ನು ‘ಕುಮಾರವ್ಯಾಸ’ನೆಂದುಪ್ರಸಿದ್ಧನಾದ ಕವಿ ಗದುಗಿನ ನಾರಾಣಪ್ಪನು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬಮಹಾಕಾವ್ಯದಲ್ಲಿನ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.

ಸಂದರ್ಭ : ಸೂರ್ಯನ ಮಗನಾದ ಕರ್ಣನ ಸಂಗಡ ಕೃಷ್ಣನು ಮೈದುನನ ರೀತಿಯ ಸರಸವನ್ನು ಮಾಡಿ, ಕೈಹಿಡಿದು ಎಳೆದು ರಥದಲ್ಲಿ ಪೀಠದ ಮೇಲೆ ಕುಳ್ಳರಿಸುವನು. ಆಗ ನನಗೆ ನಿಮ್ಮ ಪಾದಗಳ ಬಳಿ ಸಮನಾದ ಗೌರವವೇ! ದೇವ ಮುರಾರಿ ನನಗೆ ಹೆದರಿಕೆಯಾಗುತ್ತಿದೆ ಎಂದು ಈ ಮಾತನ್ನು ಕರ್ಣನು ಕೃಷ್ಣನಿಗೆ ಹೇಳುತ್ತಾನೆ.

ಸ್ವಾರಸ್ಯ : ಪ್ರಸ್ತುತ ಮಾತಿನಲ್ಲಿ ಕರ್ಣನು ತಾನು ದೇವ ಸ್ವರೂಪಿಯಾದ ಕೃಷ್ಣನ ಸರಿ ಸಮಾನನಲ್ಲ, ಆತನ ಪಕ್ಕವಲ್ಲ, ಪಾದದ ಬಳಿಯೂ ಕೂಡುವಷ್ಟು ತಾನು ಅರ್ಹನಲ್ಲವೆಂದು ತಿಳಿಸುವಲ್ಲಿ ಹಿರಿಯರೂ, ಗೌರವಾರ್ಹರೊಂದಿಗೆ ನಡೆದು ಕೊಳ್ಳುವ ಕರ್ಣನ ಶ್ರೇಷ್ಠ ವ್ಯಕ್ತಿತ್ವ ಪರಿಚಯವಾಗುವದು.

ಆಯ್ಕೆ : ಈ ವಾಕ್ಯವನ್ನು ‘ಕುಮಾರವ್ಯಾಸ’ನೆಂದುಪ್ರಸಿದ್ಧನಾದ ಕವಿ ಗದುಗಿನ ನಾರಾಣಪ್ಪನು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬಮಹಾಕಾವ್ಯದಲ್ಲಿನ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.

ಸಂದರ್ಭ : ಕೃಷ್ಣನು ಕರ್ಣನಿಗೆ ಆತನ ಜನ್ಮರಹಸ್ಯವನ್ನು ಕುರಿತು, “ಕುಂತಿಯು ಪಡೆದ ಐದು ಮಂತ್ರಗಳಲ್ಲಿ ಮೊದಲಿಗ ನೀನು, ನಿನ್ನಯ ನಂತರ ಧರ್ಮರಾಯ, ಮೂರನೆಯಾತ ಪರಾಕ್ರಮಿಯಾದ ಭೀಮ. ಅರ್ಜುನನು ನಾಲ್ಕನೆಯ ಮಂತ್ರದಲ್ಲಿ ಜನಿಸಿದನು. ಬಳಿಕ ಐದನೆಯ ಮಂತ್ರದಲ್ಲಿ ಮಾದ್ರಿಯಲ್ಲಿ ನಕುಸಹದೇವರು ಇಬ್ಬರು ಹುಟ್ಟಿದರು” ಎಂದು ತಿಳಿಸುವಾಗ ಈ ಮಾತು ಬಂದಿದೆ.

ಸ್ವಾರಸ್ಯ : ಕೃಷ್ಣನು ಸ್ವಾಮಿನಿಷ್ಠೆಗೆ ಬದ್ಧನಾದ ಕರ್ಣನಿಗೆ ಜನ್ಮ ರಹಸ್ಯವನ್ನು ತಿಳಿಸುವ ಮೂಲಕ ಕರ್ಣನ ಆವೇಶದ ಬಲವನ್ನು ಕ್ಷೀಣಿಸಿ, ಪಾಂಡವರ ಬಗ್ಗೆ ಆತನಲ್ಲಿ ಅನುಕಂಪ ಹುಟ್ಟುವಂತೆ ಹಾಗೂ ಕರ್ಣನನ ಮನಸ್ಸನ್ನು ಅವನಲ್ಲಿನ ನಿಷ್ಠೆಯನ್ನು ಭೇದ ತಂತ್ರದಿAದ ಒಡೆದಿರುವುದು ಮೇಲಿನ ಮಾತಿನಲ್ಲಿ ಅರ್ಥಪೂರ್ಣವಾಗಿ ಬಿತ್ತರಗೊಂಡಿದೆ.

ಆಯ್ಕೆ : ಈ ವಾಕ್ಯವನ್ನು ‘ಕುಮಾರವ್ಯಾಸ’ನೆಂದುಪ್ರಸಿದ್ಧನಾದ ಕವಿ ಗದುಗಿನ ನಾರಾಣಪ್ಪನು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬಮಹಾಕಾವ್ಯದಲ್ಲಿನ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.

ಸಂದರ್ಭ : ಕೃಷ್ಣನ ಆಮಿಷ, ಕರ್ಣನನಿಗೆ ಕೃಷ್ಣ ತಿಳಿಸುವ ಜನ್ಮ ರಹಸ್ಯದಿಂದ ಕರ್ಣನ ಕೊರಳಿನ ರಕ್ತನಾಳಗಳು ಹಿಗ್ಗಿದವು, ಕಂಬನಿಯು ರಭಸದಿಂದ ಮುನ್ನುಗ್ಗಿ ಬಂದು ಅಧಿಕವಾಗಿ ಕರ್ಣನು ನೊಂದನು. ಕರ್ಣನು ಮನದೊಳಗೆ “ಅಯ್ಯೋ, ದುರ್ಯೋಧನನಿಗೆ ಕೇಡುಂಟಾಯಿತಲ್ಲಾ” ಎಂದು ಸಂಕಟಪಟ್ಟನು. ಹರಿಯ ಹಗೆತನ ಹೊಗೆ ಕಾಣಿಸಿಕೊಳ್ಳದೆ, ಸುಡದೆ ಬಿಡುತ್ತದೆಯೇ? ಎಂದು ಈ ಮೇಲಿನ ಮಾತನ್ನು ತನ್ನೊಳಗೆ ಪ್ರಶ್ನಿಸಿಕೊಳ್ಳುವನು.

ಸ್ವಾರಸ್ಯ : ಅಸಹಾಯಕನಾದ ಸ್ಥಿತಿಯಲ್ಲಿ ನೋವು, ಸಂಕಟದಿಂದ ಬಳಲುವ ಕರ್ಣನ ವ್ಯಕ್ತಿತ್ವದ ಹಿರಿಮೆ ಹಾಗೂ ಕೃಷ್ಣನ ದ್ವೇಷ ಕಾಣಿಸದೇ ನಾಶಮಾಡುವುದಾಗಿದೆ ಎಂಬ ಧ್ವನಿ ಪ್ರಸುತ ಮಾತಿನಲ್ಲಿ ಅರ್ಥಪೂರ್ಣವಾಗಿ ಮೂಡಿಬಂದಿದೆ.

ಆಯ್ಕೆ : ಈ ವಾಕ್ಯವನ್ನು ‘ಕುಮಾರವ್ಯಾಸ’ನೆಂದುಪ್ರಸಿದ್ಧನಾದ ಕವಿ ಗದುಗಿನ ನಾರಾಣಪ್ಪನು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬಮಹಾಕಾವ್ಯದಲ್ಲಿನ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.

ಸಂದರ್ಭ : ಕೃಷ್ಣನ ಮಾತುಗಳನ್ನು ಸಮಾಧಾನದಿಂದ ಆಲಿಸಿದ ಕರ್ಣನು ಕೃಷ್ಣನಿಗೆ “ಮರುಳು ಮಾಧವ, ನಾನು ರಾಜ್ಯದ ಸಿರಿಸಂಪತ್ತಿಗೆ ಸೋಲುವವನಲ್ಲ. ಪಾಂಡವರು, ಕೌರವರು ಸೇವೆಯನ್ನು ನನಗೆ ಮಾಡುವಲ್ಲಿ, ಅವರಿಂದ ಸೇವೆಯನ್ನು ಮಾಡಿಸಿಕೊಳ್ಳುವಲ್ಲಿ ನನಗೆ ಮನಸ್ಸು ಇಲ್ಲ. ಆದರೆ ನನ್ನನ್ನು ಕಾಪಾಡಿದ, ಆಶ್ರಯ ನೀಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುತ್ತೇನೆಂಬ ಅತೀ ಉತ್ಸಾಹದಿಂದ ಇದ್ದೆನು. ಆದರೆ ನೀನು ನನ್ನ ಜನ್ಮ ರಹಸ್ಯವನ್ನು ತಿಳಿಸಿ ದುರ್ಯೋಧನನ್ನು ಕೊಂದೆ” ಎಂದು ಈ ಮೇಲಿನ ಮಾತನ್ನು ಹೇಳುತ್ತಾನೆ.

ಸ್ವಾರಸ್ಯ : ಅಸಾಮಾನ್ಯನೂ ಶರ‍್ಯಕ್ಕೆ, ದಾನಕ್ಕೆ, ಉದಾತ್ತತೆಗೆ, ಕರುಣೆಗೆ ಹೆಸರಾಗಿದ್ದ ಕರ್ಣ ಅಸಹಾಯಕನಾದ ಸ್ಥಿತಿಯಲ್ಲಿಯೂ, ನೋವು, ಸಂಕಟದಿಂದ ಬಳಲುವ ಸಂದರ್ಭದಲ್ಲೂ ಉದಾತ್ತ ವ್ಯಕ್ತಿತ್ವದ ಕರ್ಣನ ಸ್ವಾಮಿನಿಷ್ಠೆಯು ಪ್ರಸ್ತುತ ಮಾತಿನಲ್ಲಿ ವ್ಯಕ್ತಗೊಂಡಿದೆ.

ಆಯ್ಕೆ : ಈ ವಾಕ್ಯವನ್ನು ‘ಕುಮಾರವ್ಯಾಸ’ನೆಂದುಪ್ರಸಿದ್ಧನಾದ ಕವಿ ಗದುಗಿನ ನಾರಾಣಪ್ಪನು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬಮಹಾಕಾವ್ಯದಲ್ಲಿನ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.

ಸಂದರ್ಭ : ಕರ್ಣನು ತನ್ನ ಮನೋನಿರ್ಧಾರವನ್ನು ಕೃಷ್ಣನಿಗೆ ತಿಳಿಸುತ್ತ, ನನ್ನ ಒಡೆಯನಾದ ಧುರ್ಯೋಧನನ ಶತ್ರುಗಳು ನನಗೆ ಶತ್ರುಗಳಾಗಿದಾರೆ. ಅವನ ಹೊಗಳಿಕೆಯೊಂದಿದ್ದರೇ ಸಾಕು ನನಗೆ, ದುರ್ಯೋಧನನಿಗೆ ಏನಾಗುವುದೋ ಅದು ನನಗಾಗಲಿ. ಪರಾಕ್ರಮಿಯಾದ ವೀರ ದುರ್ಯೋಧನನೇ ನನಗೆ ಒಡೆಯನು ಎಂದು ಈ ಮಾತನ್ನು ಹೇಳುತ್ತಾನೆ.

ಸ್ವಾರಸ್ಯ : ಪ್ರಸ್ತುತ ಮಾತಿನಲ್ಲಿ ಅಸಾಮಾನ್ಯನೂ ಶರ‍್ಯಕ್ಕೆ, ದಾನಕ್ಕೆ, ಉದಾತ್ತತೆಗೆ, ಕರುಣೆಗೆ ಹೆಸರಾಗಿದ್ದ ಉದಾತ್ತ ವ್ಯಕ್ತಿತ್ವದ ಕರ್ಣನ ಸ್ವಾಮಿನಿಷ್ಠೆಯು ಸ್ವಾರಸ್ಯ ಪೂರ್ಣವಾಗಿ ವ್ಯಕ್ತಗೊಂಡಿದೆ.

ಲೇಖಕರ ಪರಿಚಯ(3 ಅಂಕ)

‘ಕುಮಾರವ್ಯಾಸ’ ಎಂದೇ ಪ್ರಸಿದ್ಧನಾಗಿರುವ ಗದುಗಿನ ನಾರಣಪ್ಪ ಅವರು ಕ್ರಿ. ಶ. ಸುಮಾರು 1430 ರಲ್ಲಿ ಗದಗ ಪ್ರಾಂತ್ಯದ ಕೋಳಿವಾಡದಲ್ಲಿ ಜನಿಸಿದರು.

ವೀರನಾರಾಯಣನ ಪರಮಭಕ್ತನಾದ ನಾರಣಪ್ಪನು ವ್ಯಾಸಕೃತ ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಕನ್ನಡದಲ್ಲಿ ರಚಿಸಿ ‘ಕುಮಾರವ್ಯಾಸ’ನೆಂಬ ಅಭಿದಾನಕ್ಕೆ ಪಾತ್ರರಾಗವುದರ ಜೊತೆಗೆ ಕೇವಲ ಪಂಡಿತರಿಗೆ ಮಾತ್ರವಲ್ಲದೆ, ‘ಪಾಮರರಿಗೂ ಕಾಮಧೇನು’ ಎಂಬ ಗೌರವಕ್ಕೆ ಪಾತ್ರನಾಗಿದ್ದಾನೆ.

ಭಾಗವತ ಸಂಪ್ರದಾಯವನ್ನು ಸರಳ, ಸುಂದರ ಹಾಗೂ ರಂಜನೀಯವಾಗಿ ಪರಿಚಯಿಸಿ ಜನಪ್ರಿಯಗೊಳಿಸಿದ ಕುಮಾರವ್ಯಾಸನು ಕನ್ನಡ ಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂಬ ಹೆಸರನ್ನು ಹೊಂದಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬ ಕಾವ್ಯವನ್ನು ಮತ್ತು ‘ಐರಾವತ’ ಎಂಬ ಕೃತಿಯನ್ನು ರಚಿಸಿದ್ದಾನೆ.

ಈತನು ರೂಪಕಾಲಂಕಾರವನ್ನು ನಿರರ್ಗಳವಾಗಿ ಪ್ರಯೋಗಿಸಿ ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂಬ ಬಿರುದನ್ನು ಪಡೆದಿದ್ದಾನೆ.

ಕುಮಾರವ್ಯಾಸ ವಿರಚಿತ ಕರ್ಣಾಟ ಭಾರತ ಕಥಾಮಂಜರಿ ಕಾವ್ಯದ ಉದ್ಯೋಗಪರ್ವದಿಂದ ‘ಕೌರವೇಂದ್ರನ ಕೊಂದೆ ನೀನು’ ಕಾವ್ಯಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. -

ಎಂಟು-ಹತ್ತು ವಾಕ್ಯದಲ್ಲಿ ಉತ್ತರ ಬರೆಯಿರಿ(4 ಅಂಕ)

ಉತ್ತರ : “ಕರ್ಣ ನಿಮಗೂ ಯಾದವ ಕೌರವರಿಗೂ ವಂಶ ಗೌರವದಲ್ಲಿ ಭೇದವಿಲ್ಲ. ನಿನ್ನಾಣೆ. ನೀನು ನಿಜವಾಗಿ ಭೂಮಿಯ ಒಡೆಯ. ಆದರೆ ನಿನಗೆ ಮನದಲ್ಲಿ ಅದರ ಅರಿವಿಲ್ಲ” ಎಂದು ಹೇಳುತ ಕೃಷ್ಣನು ಕರ್ಣನ ಕಿವಿಯಲ್ಲಿ ಭಯವನ್ನು ಬಿತ್ತಿದನು.
ಕುಂತಿಯು ಪಡೆದ ಐದು ಮಂತ್ರಗಳಲ್ಲಿ ಮೊದಲಿಗ ನೀನು, ನಿನ್ನಯ ನಂತರ ಧರ್ಮರಾಯ, ಮೂರನೆಯಾತ ಕಲಿಭೀಮ, ಅರ್ಜುನನು ನಾಲ್ಕನೆಯ ಮಂತ್ರದಲ್ಲಿ ಜನಿಸಿದರು. ಬಳಿಕ ಐದನೆಯ ಮಂತ್ರದಲ್ಲ್ಲಿ ಮಾದ್ರಿಯಲ್ಲಿ ನಕುಲ ಸಹದೇವರು ಇಬ್ಬರು ಹುಟ್ಟಿದರು.
ನಿನ್ನನ್ನು ಹಸ್ತಿನಾಪುರದ ರಾಜ್ಯದ ರಾಜನನ್ನಾಗಿ ಮಾಡುವೆನು.
ಪಾಂಡವ ಕೌರವ ರಾಜರು ನಿನ್ನನ್ನು ಓಲೈಸುವರು. ನಿನಗೆ ಎರಡು ವಂಶವು ಮರುಮಾತನಾಡದೆ ಸೇವೆಯನ್ನು ಮಾಡುವುವು.
ನೀನು ದುರ್ಯೋಧನನ ಬಾಯೆಂಜಲಿಗೆ ಕೈಯೊಡ್ಡುವುದೇ ಹೇಳು. ಎಡಭಾಗದಲ್ಲಿ ಕೌರವೇಂದ್ರ ಸಮೂಹ, ಬಲಭಾಗದಲ್ಲಿ ಪಾಂಡು ಮಕ್ಕಳ ಸಮೂಹ, ಮುಂದುಗಡೆ ಮಾದ್ರ ಮಾಗಧ ಯಾದವಾದಿಗಳು ಮಧ್ಯದಲ್ಲಿ ನೀನು ರಾಜಸಭೆಯಲ್ಲಿ ಪ್ರಕಾಶಿಸುವ ವಿಶೇಷ ಸೊಬಗನ್ನು ತೊರೆದು, ದುರ್ಯೋಧನ ನುಡಿಸಲು ‘ಒಡೆಯ ಅನುಗ್ರಹವಾಗಲಿ’ ಎಂಬುದು ನಿನಗೆ ಕಷ್ಟವಾಗುವುದಿಲ್ಲವೇ?”ಎಂದು ಆಮಿಷ ಒಡ್ಡಿದನು.

ಉತ್ತರ : ಕೃಷ್ಣನು ಕರ್ಣನಿಗೆ ಆಮಿಷಗಳನ್ನು ಒಡ್ಡಿದಾಗ ಕೊರಳಸೆರೆ ಹಿಗ್ಗಿದವು, ಕಂಬನಿಯು ರಭಸದಿಂದ ಮುಂದೆ ಬಂದು, ಅಧಿಕವಾಗಿ ಕರ್ಣನು ದುಃಖಗೊಂಡು ಮನದೊಳಗೆ “ಅಯ್ಯೋ, ದುರ್ಯೋಧನನಿಗೆ ಕೇಡಾದುದು” ಎಂದನು. ಹರಿಯ ಹಗೆತನವು ಹೊಗೆ ತೋರದೆ ಸುಟ್ಟುಹಾಕುವುದಲ್ಲದೆ; ಸುಮ್ಮನೆ ಹೋಗುವುದೆ. ಕೃಷ್ಣನು “ನನ್ನ ವಂಶದ ರಹಸ್ಯವನ್ನು ತಿಳಿಸಿ ನನ್ನನ್ನು ಕೊಂದನು” ಎಂದು ಮನದಲ್ಲಿ ನೊಂದುಕೊAಡನು. “ನಾನು ರಾಜ್ಯದ ಸಿರಿಸಂಪತ್ತಿಗೆ ಸೋಲುವವನಲ್ಲ, ಪಾಂಡವರು ಕೌರವರು ಸೇವೆಯನ್ನು ಮಾಡುವುದು ನನಗೆ ಇಷ್ಟವಿಲ್ಲ. ಆದರೆ ನನ್ನನ್ನು ಕಾಪಾಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುವ ಆವೇಶದಲ್ಲಿ ಇದ್ದೆನು. ಆದರೆ ನೀನು ನನ್ನ ಜನ್ಮ ರಹಸ್ಯವನ್ನು ತಿಳಿಸಿ ದುರ್ಯೋಧನನ ಕೊಂದೆ. ವೀರ ದುರ್ಯೋಧನನೇ ಒಡೆಯನು. ಆತನ ಹಗೆಯೆ ಹಗೆ, ಅಭಿಮಾನವೇ ಅಭಿಮಾನವು, ದುರ್ಯೋಧನ ಆದಂತೆ ಆಗುವೆನು. ಕೃಷ್ಣ ಕೇಳು, ನಾಳೆ ಸಮರದ ವಿಷಯದಲ್ಲಿ ಪಾಂಡವರಲ್ಲಿ ನಿಜ ಪರಾಕ್ರಮದ ಶ್ರೇಷ್ಠತನವನ್ನು ತೋರುವೆನು. ನಾಳಿನ ಕೌರವರ ಮತ್ತು ಪಾಂಡವರ ಚತುರಂಗ ಬಲದ ನಡುವಿನ ಯುದ್ಧವು ಮೃತ್ಯುದೇವತೆಗೆ ಭೋಜನ ಕೂಟ ಆಗುವುದು. ನಾನು ಕೌರವನ ಉಪಕಾರದ ಋಣ ತೀರಿಸುವಂತೆ ಹೋರಾಡಿ, ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರ ಕೊಂದು, ನನ್ನ ಒಡೆಯನಿಗಾಗಿ ಪ್ರಾಣವನ್ನು ಬಿಡುವೆನು. ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೆನು” ಎಂದನು.

ಉತ್ತರ : ಕೃಷ್ಣನು ಕರ್ಣನ ಜನ್ಮ ರಹಸ್ಯವನ್ನು ತಿಳಿಸುತ್ತಾ ಆತನನ್ನು ಸಕಲ ಸಾಮ್ರಾಜ್ಯಕ್ಕೆ ಚರ್ಕವರ್ತಿಯನ್ನಾಗಿ ಮಾಡುವುದಾಗಿ ತಿಳಿಸುತ್ತಾನೆ. ಸರ‍್ಯನ ಅನುಗ್ರಹದಿಂದ ಜನಿಸಿದ ಕರ್ಣನನ್ನು ಮಗುವಾಗಿದ್ದಾಗ ಕುಂತಿಯು ನೀರಿನಲ್ಲಿ ತೇಲಿಬಿಟ್ಟದ್ದರಿಂದ ಅಂಬಿಗನ ಮನೆಯಲ್ಲಿ ಮಾತೃವಾತ್ಸಲ್ಯದಿಂದ ವಂಚಿತನಾಗಿ ಸೂತಪುತ್ರನಾಗಿ ಬೆಳೆಯ ಬೇಕಾಯಿತು. ಸೂತಪುತ್ರನೆಂದು ಸಮಾಜದಲ್ಲಿ ಆತನ ಶಕ್ತಿ ಸಾಮರ್ಥ್ಯಕ್ಕೆ ಸೂಕ್ತವಾದ ಸ್ಥಾನಮಾನ ದೊರೆಯಲಿಲ್ಲ.ಅಂತಹ ಸಂದರ್ಭದಲ್ಲಿ ದುರ್ಯೋಧನ ಕರ್ಣನನ್ನು ಗೆಳೆಯನಾಗಿ ಸ್ವೀಕರಿಸಿ ಅಂಗರಾಜ್ಯದ ಅಧಿಪತಿಯನ್ನಾಗಿಸುತ್ತಾನೆ. ಆತನಿಗೆ ಒಂದು ಸ್ಥಾನ, ಗೌರವಗಳನ್ನು ದೊರಕಿಸಿಕೊಡುತ್ತಾನೆ. ಈ ಕಾರಣಗಳಿಂದ ಕರ್ಣನು ದುರ್ಯೋಧನನೇ ತನಗೆ ಒಡೆಯ, ಆತನ ಹಗೆಗಳು ನನಗೂ ಹಗೆಗಳೇ, ಆತನ ಅಭಿಮಾನ ನನ್ನ ಅಭಿಮಾನ, ದುರ್ಯೋಧನನ ಹಾದಿಯನ್ನೇ ಅನುಸರಿಸುತ್ತೇನೆ. ಯುದ್ಧದಲ್ಲಿ ನಿಜ ಪರಾಕ್ರಮದ ಶ್ರೇಷ್ಠತನ ತೋರಿಸುತ್ತೇನೆ ಎನ್ನುವುದು ಕರ್ಣನ ಜಾಯಮಾನಕ್ಕೆ ಸರಿಯಾಗಿಯೇ ಇದೆ. ಕೌರವನು ತನಗೆ ಮಾಡಿದ ಉಪಕಾರವನ್ನು ಯುದ್ಧರಂಗದಲ್ಲಿ ತೀರಿಸುತ್ತೇನೆ. ತಮ್ಮಂದಿರನ್ನು ನೋಯಿಸದೆ, ಸೈನ್ಯಬಲವನ್ನು ಮಾರಿಗೆ ಔತಣವನ್ನಾಗಿ ನೀಡಿ, ಅನ್ನದಾತನ ಋಣವನ್ನು ಮುಗಿಸಿ, ಶರೀರವನ್ನು ತ್ಯಜಿಸುತ್ತೇನೆ ಎಂಬ ಕರ್ಣನ ಮಾತು ಆತನ ಸ್ವಾಮಿ ಭಕ್ತಿಗೆ ಸಾಕ್ಷಿಯಾಗಿದೆ.ಸ್ಥಾನ, ಗೌರವ ಹಾಗೂ ಕೀರ್ತಿ ದೊರಕಿಸಿಕೊಟ್ಟ ಒಡೆಯನಿಗೆ ತನ್ನ ಪ್ರಾಣವನ್ನು ಸಮರ್ಪಿಸುವುದು ಧರ್ಮವೇ ಆಗಿದೆ ಎಂಬ ಕರ್ಣನ ನಿರ್ಧಾರ ಸರಿಯಾಗಿದೆ.

ಕಂಠಪಾಠ ಪದ್ಯಗಳು(4 ಅಂಕ)

ಉತ್ತರ
ಕೊರಳ ಸೆರೆ ಹಿಗ್ಗಿದವು ದೃಗುಜಲ
ಉರವಣಿಸಿ ಕಡು ನೊಂದನಕಟಾ
ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ ||
ಹರಿಯ ಹಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ ||
ಕೌರವೇಂದ್ರನ ಕೊಂದೆ ನೀನು - ಕುಮಾರವ್ಯಾಸ

ಉತ್ತರ
ಮಾರಿಗೌತಣವಾಯ್ತು ನಾಳಿನ
ಭಾರತವು ಚತುರಂಗ ಬಲದಲಿ
ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು ||
ತೀರಿಸಿಯೆ ಪತಿಯವಸರಕ್ಕೆ ಶ
ರೀರವನು ನೂಕುವೆನು ನಿನ್ನಯ
ವೀರರೈವರ ನೋಯಿಸೆನು
ರಾಜೀವಸಖನಾಣೆ ||

ಕೌರವೇಂದ್ರನ ಕೊಂದೆ ನೀನು - ಕುಮಾರವ್ಯಾಸ

ಕೆಳಗಿನ ಪದ್ಯಭಾಗವನ್ನು ಓದಿ ಅರ್ಥಮಾಡಿಕೊಂಡು, ಅಡಕವಾಗಿರುವ ಮೌಲ್ಯವನ್ನಾಧರಿಸಿ ಸಾರಾಂಶ ಬರೆಯಿರಿ. (4 ಅಂಕ)

- ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದ ಬದುಕು ಅಪೇಕ್ಷಣೀಯ. ಅದು ಸಾಧ್ಯವಾಗದೆ ಮತ್ಸರ, ಛಲ ಪ್ರಧಾನವಾದರೆ ಸಂಘರ್ಷ ಅನಿವರ‍್ಯವಾಗುತ್ತದೆ. ಒಬ್ಬರನ್ನೊಬ್ಬರು ನಾಶಮಾಡುವವರೆಗೂ ಅದು ಬೆಳೆಯುತ್ತದೆ. ಅದರ ಪರಿಣಾಮ ಘೋರವಾದುದು ಎಂಬ ಅರಿವಿರುವುದಾದರೂ ಪ್ರತಿಷ್ಠೆಯಿಂದ ಹಠ ಸಾಧಿಸಿದಾಗ ಗೆಲ್ಲಲು, ಉಳಿಯಲು ವಿವಿಧ ತಂತ್ರಗಳನ್ನು ಬಳಸುವುದು ಸಹಜ. ಶತ್ರುವಿನೊಂದಿಗೆ ಸಮರಕ್ಕಿಳಿದು ಕಾದಾಡುವ ಮುನ್ನ ಶತ್ರುಬಲದ ವಿವಿಧ ಆಯಾಮಗಳನ್ನು ಶಮನಗೊಳಿಸಿದಾಗ ಗೆಲವು ಸಾಧ್ಯ ಎಂಬುದು ಒಂದು ರಾಜತಂತ್ರ.

ಮಹಾಭಾರತದಲ್ಲಿ ಪಾಂಡವರ ಪಾಲಿನ ರಾಜ್ಯವನ್ನು ನೀಡಲು ಕೌರವನು ನಿರಾಕರಿಸುತ್ತಾನೆ. ಸಂಧಾನದ ಮುಖೇನ ರಾಜ್ಯವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಧರ್ಮರಾಯ ಕೃಷ್ಣನನ್ನು ಸಂಧಿಗಾಗಿ ಕಳುಹಿಸುತ್ತಾನೆ. ಕೃಷ್ಣಸಂಧಾನವು ದುರ್ಯೋಧನನ ಹಠದಿಂದ ತಿರಸ್ಕೃತವಾಗುತ್ತದೆ. ಯುದ್ಧ ಅನಿವರ‍್ಯವೆಂದಾದಾಗ ಧರ್ಮಪಕ್ಷಪಾತಿಯಾದ ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಂದ ಪಾಂಡವರಿಗೆ ಅಪಾಯವಾಗದಂತೆ ಮಾಡುವುದು ಕವಿ ಕುಮಾರವ್ಯಾಸನ ಕಾವ್ಯ ‘ಕರ್ಣಾಟಭಾರತ ಕಥಾಮಂಜರಿ’ ಇಂದ ಆಯ್ದ ಪದ್ಯಭಾಗ ‘ಕೌರವೇಂದ್ರನ ಕೊಂದೆ ನೀನು’ ಪದ್ಯಪಾಠದಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.

ಸೂರ್ಯನ ಮಗನಾದ ಕರ್ಣನ ಸಂಗಡ ಕೃಷ್ಣನು ಮೈದುನನ ರೀತಿಯ ಸರಸವನ್ನು ಮಾಡಿ, ಕೈಹಿಡಿದು ಎಳೆದು ರಥದಲ್ಲಿ ಪೀಠದ ಮೇಲೆ ಕುಳ್ಳರಿಸುವನು. ಆಗ ನನಗೆ ನಿಮ್ಮ ಪಾದಗಳ ಬಳಿ ಸಮನಾದ ಗೌರವವೇ! ದೇವ ಮುರಾರಿ ನನಗೆ ಹೆದರಿಕೆಯಾಗುತ್ತಿದೆ ಎಂದನು ಕರ್ಣನು. ಆಗ ಕೃಷ್ಣನು ತೊಡೆ ತಾಗುವಂತೆ ಕರ್ಣನ ಹತ್ತಿರ ಬಂದು ಕರ್ಣನಿಗೆ ಹಲವು ಆಮಿಷ ಒಡ್ಡುವನು.

ಪ್ರಕೃತ ಕಾವ್ಯ ಭಾಗದಲ್ಲಿ ಕೌರವನ ಸೇನೆಯಲ್ಲಿ ಪಾಂಡವರನ್ನು ಕೊಲ್ಲಬಲ್ಲ ಇನ್ನೋರ್ವ ಬಲಶಾಲಿ ಕರ್ಣನಿಂದ ಪಾಂಡವರನ್ನು ರಕ್ಷಿಸಬೇಕೆಂದು ನಿರ್ಧರಿಸಿದ ಕೃಷ್ಣ ಅದಕ್ಕಾಗಿ ವೇದಿಕೆ ಸಿದ್ಧಪಡಿಸಿ ಕರ್ಣನನ್ನು ತನ್ನ ಬಳಿ ಕರೆದರೂ, ಕರ್ಣನು ತಾನು ದೇವ ಸ್ವರೂಪಿಯಾದ ಕೃಷ್ಣನ ಸರಿ ಸಮಾನನಲ್ಲ, ಆತನ ಪಕ್ಕವಲ್ಲ, ಪಾದದ ಬಳಿಯೂ ಕೂಡುವಷ್ಟು ತಾನು ಅರ್ಹನಲ್ಲವೆಂದು ತಿಳಿಸುವಲ್ಲಿ ಹಿರಿಯರೂ, ಗೌರವಾರ್ಹರೊಂದಿಗೆ ನಡೆದು ಕೊಳ್ಳುವ ಕರ್ಣನ ಶ್ರೇಷ್ಠ ವ್ಯಕ್ತಿತ್ವ ಪರಿಚಯವಾಗುವದು.

- ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದ ಬದುಕು ಅಪೇಕ್ಷಣೀಯ. ಅದು ಸಾಧ್ಯವಾಗದೆ ಮತ್ಸರ, ಛಲ ಪ್ರಧಾನವಾದರೆ ಸಂಘರ್ಷ ಅನಿವರ‍್ಯವಾಗುತ್ತದೆ. ಒಬ್ಬರನ್ನೊಬ್ಬರು ನಾಶಮಾಡುವವರೆಗೂ ಅದು ಬೆಳೆಯುತ್ತದೆ. ಅದರ ಪರಿಣಾಮ ಘೋರವಾದುದು ಎಂಬ ಅರಿವಿರುವುದಾದರೂ ಪ್ರತಿಷ್ಠೆಯಿಂದ ಹಠ ಸಾಧಿಸಿದಾಗ ಗೆಲ್ಲಲು, ಉಳಿಯಲು ವಿವಿಧ ತಂತ್ರಗಳನ್ನು ಬಳಸುವುದು ಸಹಜ. ಶತ್ರುವಿನೊಂದಿಗೆ ಸಮರಕ್ಕಿಳಿದು ಕಾದಾಡುವ ಮುನ್ನ ಶತ್ರುಬಲದ ವಿವಿಧ ಆಯಾಮಗಳನ್ನು ಶಮನಗೊಳಿಸಿದಾಗ ಗೆಲವು ಸಾಧ್ಯ ಎಂಬುದು ಒಂದು ರಾಜತಂತ್ರ.

ಮಹಾಭಾರತದಲ್ಲಿ ಪಾಂಡವರ ಪಾಲಿನ ರಾಜ್ಯವನ್ನು ನೀಡಲು ಕೌರವನು ನಿರಾಕರಿಸುತ್ತಾನೆ. ಸಂಧಾನದ ಮುಖೇನ ರಾಜ್ಯವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಧರ್ಮರಾಯ ಕೃಷ್ಣನನ್ನು ಸಂಧಿಗಾಗಿ ಕಳುಹಿಸುತ್ತಾನೆ. ಕೃಷ್ಣಸಂಧಾನವು ದುರ್ಯೋಧನನ ಹಠದಿಂದ ತಿರಸ್ಕೃತವಾಗುತ್ತದೆ. ಯುದ್ಧ ಅನಿವರ‍್ಯವೆಂದಾದಾಗ ಧರ್ಮಪಕ್ಷಪಾತಿಯಾದ ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಂದ ಪಾಂಡವರಿಗೆ ಅಪಾಯವಾಗದಂತೆ ಮಾಡುವುದು ಕವಿ ಕುಮಾರವ್ಯಾಸನ ಕಾವ್ಯ ‘ಕರ್ಣಾಟಭಾರತ ಕಥಾಮಂಜರಿ’ ಇಂದ ಆಯ್ದ ಪದ್ಯಭಾಗ ‘ಕೌರವೇಂದ್ರನ ಕೊಂದೆ ನೀನು’ ಪದ್ಯಪಾಠದಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.

ಎಲೈ ಕರ್ಣನೇ ನಿಮ್ಮಲ್ಲಿ, ಯಾದವರು ಕೌರವರಲ್ಲಿ ಭೇದವಿಲ್ಲ. ಚೆನ್ನಾಗಿ ವಿಚಾರ ಮಾಡಿ ಹೇಳುವುದಾದರೆ ವಂಶÀದ ಮೂಲದಲ್ಲಿ ಎರಡಿಲ್ಲ. ನಿನ್ನಾಣೆ, ರಾಜ್ಯದ ಒಡೆಯ ನೀನು. ಹಿಂದೆ ನಡೆದು ಹೋದ ಸಂಗತಿಯ ತಿಳುವಳಿಕೆ ನಿನಗಿಲ್ಲ ಎಂಬುದಾಗಿ ದಾನವ ಧ್ವಂಸಿಯಾದ ಕೃಷ್ಣನು ಸೂರ್ಯಪೂತ್ರನಾದ ಕರ್ಣನ ಕಿವಿಯಲ್ಲಿ ಅವನ ಜನ್ಮ ವೃತ್ತಾಂತವನ್ನು ತಿಳಿಸುತ್ತಾ ಅವನಲ್ಲಿ ಉಭಯವನ್ನು (ದ್ವಂದ್ವವನ್ನು) ಬಿತ್ತಿದನು.

ಪ್ರಕೃತ ಕಾವ್ಯಭಾಗದಲ್ಲಿ ಪಾಂಡವರ ರಕ್ಷಣೆಗೆ ನಿಂತ ಕೃಷ್ಣನು ಸ್ವಾಮಿನಿಷ್ಠೆಗೆ ಬದ್ಧನಾದ ಕರ್ಣನಿಗೆ ಜನ್ಮ ರಹಸ್ಯವನ್ನು ತಿಳಿಸುತ್ತ, ಆತನಿಗೆ ವಿವಿಧ ಆಮಿಷಗಳನ್ನು ಒಡ್ಡುವ ಮುಖೇನ ಕರ್ಣನಲ್ಲಿ ಉಭಯ ಸಂಕಟವನ್ನು ತಂದೊಡ್ಡಿರುವುದು ಸ್ವಾರಸ್ಯಪೂರ್ಣವಾಗಿ ಬಿತ್ತರಗೊಂಡಿದೆ.

- ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದ ಬದುಕು ಅಪೇಕ್ಷಣೀಯ. ಅದು ಸಾಧ್ಯವಾಗದೆ ಮತ್ಸರ, ಛಲ ಪ್ರಧಾನವಾದರೆ ಸಂಘರ್ಷ ಅನಿವರ‍್ಯವಾಗುತ್ತದೆ. ಒಬ್ಬರನ್ನೊಬ್ಬರು ನಾಶಮಾಡುವವರೆಗೂ ಅದು ಬೆಳೆಯುತ್ತದೆ. ಅದರ ಪರಿಣಾಮ ಘೋರವಾದುದು ಎಂಬ ಅರಿವಿರುವುದಾದರೂ ಪ್ರತಿಷ್ಠೆಯಿಂದ ಹಠ ಸಾಧಿಸಿದಾಗ ಗೆಲ್ಲಲು, ಉಳಿಯಲು ವಿವಿಧ ತಂತ್ರಗಳನ್ನು ಬಳಸುವುದು ಸಹಜ. ಶತ್ರುವಿನೊಂದಿಗೆ ಸಮರಕ್ಕಿಳಿದು ಕಾದಾಡುವ ಮುನ್ನ ಶತ್ರುಬಲದ ವಿವಿಧ ಆಯಾಮಗಳನ್ನು ಶಮನಗೊಳಿಸಿದಾಗ ಗೆಲವು ಸಾಧ್ಯ ಎಂಬುದು ಒಂದು ರಾಜತಂತ್ರ.

ಮಹಾಭಾರತದಲ್ಲಿ ಪಾಂಡವರ ಪಾಲಿನ ರಾಜ್ಯವನ್ನು ನೀಡಲು ಕೌರವನು ನಿರಾಕರಿಸುತ್ತಾನೆ. ಸಂಧಾನದ ಮುಖೇನ ರಾಜ್ಯವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಧರ್ಮರಾಯ ಕೃಷ್ಣನನ್ನು ಸಂಧಿಗಾಗಿ ಕಳುಹಿಸುತ್ತಾನೆ. ಕೃಷ್ಣಸಂಧಾನವು ದುರ್ಯೋಧನನ ಹಠದಿಂದ ತಿರಸ್ಕೃತವಾಗುತ್ತದೆ. ಯುದ್ಧ ಅನಿವರ‍್ಯವೆಂದಾದಾಗ ಧರ್ಮಪಕ್ಷಪಾತಿಯಾದ ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಂದ ಪಾಂಡವರಿಗೆ ಅಪಾಯವಾಗದಂತೆ ಮಾಡುವುದು ಕವಿ ಕುಮಾರವ್ಯಾಸನ ಕಾವ್ಯ ‘ಕರ್ಣಾಟಭಾರತ ಕಥಾಮಂಜರಿ’ ಇಂದ ಆಯ್ದ ಪದ್ಯಭಾಗ ‘ಕೌರವೇಂದ್ರನ ಕೊಂದೆ ನೀನು’ ಪದ್ಯಪಾಠದಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.

ಕೃಷ್ಣನು ಕರ್ಣನಿಗೆ ಆತನ ಜನ್ಮರಹಸ್ಯವನ್ನು ಕುರಿತು, “ಕುಂತಿಯು ಪಡೆದ ಐದು ಮಂತ್ರಗಳಲ್ಲಿ ಮೊದಲಿಗ ನೀನು, ನಿನ್ನಯ ನಂತರ ಧರ್ಮರಾಯ, ಮೂರನೆಯಾತ ಪರಾಕ್ರಮಿಯಾದ ಭೀಮ. ಅರ್ಜುನನು ನಾಲ್ಕನೆಯ ಮಂತ್ರದಲ್ಲಿ ಜನಿಸಿದನು. ಬಳಿಕ ಐದನೆಯ ಮಂತ್ರದಲ್ಲಿ ಮಾದ್ರಿಯಲ್ಲಿ ನಕುಸಹದೇವರು ಇಬ್ಬರು ಹುಟ್ಟಿದರು” ಎಂದು ತಿಳಿಸುವನು.

ಪ್ರಕೃತ ಕಾವ್ಯಭಾಗದಲ್ಲಿ ಪಾಂಡವರ ರಕ್ಷಣೆಗೆ ನಿಂತ ಕೃಷ್ಣನು ಸ್ವಾಮಿನಿಷ್ಠೆಗೆ ಬದ್ಧನಾದ ಕರ್ಣನಿಗೆ ಜನ್ಮ ರಹಸ್ಯವನ್ನು ತಿಳಿಸುವ ಮೂಲಕ ಕರ್ಣನ ಆವೇಶದ ಬಲವನ್ನು ಕ್ಷೀಣಿಸಿ, ಪಾಂಡವರ ಬಗ್ಗೆ ಆತನಲ್ಲಿ ಅನುಕಂಪ ಹುಟ್ಟುವಂತೆ ಹಾಗೂ ಕರ್ಣನನ ಮನಸ್ಸನ್ನು ಅವನಲ್ಲಿನ ನಿಷ್ಠೆಯನ್ನು ಭೇದ ತಂತ್ರದಿAದ ಒಡೆದಿರುವುದು ಅರ್ಥಪೂರ್ಣವಾಗಿ ಬಿತ್ತರಗೊಂಡಿದೆ.

- ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದ ಬದುಕು ಅಪೇಕ್ಷಣೀಯ. ಅದು ಸಾಧ್ಯವಾಗದೆ ಮತ್ಸರ, ಛಲ ಪ್ರಧಾನವಾದರೆ ಸಂಘರ್ಷ ಅನಿವರ‍್ಯವಾಗುತ್ತದೆ. ಒಬ್ಬರನ್ನೊಬ್ಬರು ನಾಶಮಾಡುವವರೆಗೂ ಅದು ಬೆಳೆಯುತ್ತದೆ. ಅದರ ಪರಿಣಾಮ ಘೋರವಾದುದು ಎಂಬ ಅರಿವಿರುವುದಾದರೂ ಪ್ರತಿಷ್ಠೆಯಿಂದ ಹಠ ಸಾಧಿಸಿದಾಗ ಗೆಲ್ಲಲು, ಉಳಿಯಲು ವಿವಿಧ ತಂತ್ರಗಳನ್ನು ಬಳಸುವುದು ಸಹಜ. ಶತ್ರುವಿನೊಂದಿಗೆ ಸಮರಕ್ಕಿಳಿದು ಕಾದಾಡುವ ಮುನ್ನ ಶತ್ರುಬಲದ ವಿವಿಧ ಆಯಾಮಗಳನ್ನು ಶಮನಗೊಳಿಸಿದಾಗ ಗೆಲವು ಸಾಧ್ಯ ಎಂಬುದು ಒಂದು ರಾಜತಂತ್ರ.

ಮಹಾಭಾರತದಲ್ಲಿ ಪಾಂಡವರ ಪಾಲಿನ ರಾಜ್ಯವನ್ನು ನೀಡಲು ಕೌರವನು ನಿರಾಕರಿಸುತ್ತಾನೆ. ಸಂಧಾನದ ಮುಖೇನ ರಾಜ್ಯವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಧರ್ಮರಾಯ ಕೃಷ್ಣನನ್ನು ಸಂಧಿಗಾಗಿ ಕಳುಹಿಸುತ್ತಾನೆ. ಕೃಷ್ಣಸಂಧಾನವು ದುರ್ಯೋಧನನ ಹಠದಿಂದ ತಿರಸ್ಕೃತವಾಗುತ್ತದೆ. ಯುದ್ಧ ಅನಿವರ‍್ಯವೆಂದಾದಾಗ ಧರ್ಮಪಕ್ಷಪಾತಿಯಾದ ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಂದ ಪಾಂಡವರಿಗೆ ಅಪಾಯವಾಗದಂತೆ ಮಾಡುವುದು ಕವಿ ಕುಮಾರವ್ಯಾಸನ ಕಾವ್ಯ ‘ಕರ್ಣಾಟಭಾರತ ಕಥಾಮಂಜರಿ’ ಇಂದ ಆಯ್ದ ಪದ್ಯಭಾಗ ‘ಕೌರವೇಂದ್ರನ ಕೊಂದೆ ನೀನು’ ಪದ್ಯಪಾಠದಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.

ಕೃಷ್ಣನು ಪುನಃ ಕರ್ಣನಿಗೆ ಆಮೀಷ ಒಡ್ಡತ್ತಾ, “ನಿನ್ನನ್ನು ಹಸ್ತಿನಾಪುರಕ್ಕೆ ರಾಜನನ್ನಾಗಿ ಮಾಡುತ್ತೇನೆ. ಪಾಂಡವರಾಜರೂ ಕೌರವರಾಜರೂ ನಿನ್ನ ಗದ್ದುಗೆಯನ್ನು ಓಲೈಸುವರು. ನಿನಗೆ ಎರಡು ಸಂತತಿಯವರು ಮರುಮಾತನಾಡದೆ ಸೇವೆಯನ್ನು ಮಾಡುವರು. ಇದನ್ನು ಬಿಟ್ಟು ನೀನು ದುರ್ಯೋಧನನ ಬಾಯೆಂಜಲಿಗೆ ಕೈಯೊಡ್ಡುವುದೇ” ಎಂದು ಹೇಳುತ್ತಾನೆ.

ಪ್ರಕೃತ ಕಾವ್ಯಭಾಗದಲ್ಲಿ ಕೃಷ್ಣನು ಕರ್ಣನಿಗೆ ರಾಜ್ಯದ ಅಧಿಕಾರದ ಗದ್ದುಗೆಯ ಆಮಿಷ ಒಡ್ಡಿ ಕರ್ಣನ ಮನಗೆಲ್ಲಲು ಪ್ರಯತ್ನಿಸಿರುವುದು ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.

- ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದ ಬದುಕು ಅಪೇಕ್ಷಣೀಯ. ಅದು ಸಾಧ್ಯವಾಗದೆ ಮತ್ಸರ, ಛಲ ಪ್ರಧಾನವಾದರೆ ಸಂಘರ್ಷ ಅನಿವರ‍್ಯವಾಗುತ್ತದೆ. ಒಬ್ಬರನ್ನೊಬ್ಬರು ನಾಶಮಾಡುವವರೆಗೂ ಅದು ಬೆಳೆಯುತ್ತದೆ. ಅದರ ಪರಿಣಾಮ ಘೋರವಾದುದು ಎಂಬ ಅರಿವಿರುವುದಾದರೂ ಪ್ರತಿಷ್ಠೆಯಿಂದ ಹಠ ಸಾಧಿಸಿದಾಗ ಗೆಲ್ಲಲು, ಉಳಿಯಲು ವಿವಿಧ ತಂತ್ರಗಳನ್ನು ಬಳಸುವುದು ಸಹಜ. ಶತ್ರುವಿನೊಂದಿಗೆ ಸಮರಕ್ಕಿಳಿದು ಕಾದಾಡುವ ಮುನ್ನ ಶತ್ರುಬಲದ ವಿವಿಧ ಆಯಾಮಗಳನ್ನು ಶಮನಗೊಳಿಸಿದಾಗ ಗೆಲವು ಸಾಧ್ಯ ಎಂಬುದು ಒಂದು ರಾಜತಂತ್ರ.

ಮಹಾಭಾರತದಲ್ಲಿ ಪಾಂಡವರ ಪಾಲಿನ ರಾಜ್ಯವನ್ನು ನೀಡಲು ಕೌರವನು ನಿರಾಕರಿಸುತ್ತಾನೆ. ಸಂಧಾನದ ಮುಖೇನ ರಾಜ್ಯವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಧರ್ಮರಾಯ ಕೃಷ್ಣನನ್ನು ಸಂಧಿಗಾಗಿ ಕಳುಹಿಸುತ್ತಾನೆ.ಕೃಷ್ಣಸಂಧಾನವು ದುರ್ಯೋಧನನ ಹಠದಿಂದ ತಿರಸ್ಕೃತವಾಗುತ್ತದೆ. ಯುದ್ಧ ಅನಿವರ‍್ಯವೆಂದಾದಾಗ ಧರ್ಮಪಕ್ಷಪಾತಿಯಾದ ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಂದ ಪಾಂಡವರಿಗೆ ಅಪಾಯವಾಗದಂತೆ ಮಾಡುವುದು ಕವಿ ಕುಮಾರವ್ಯಾಸನ ಕಾವ್ಯ ‘ಕರ್ಣಾಟಭಾರತ ಕಥಾಮಂಜರಿ’ ಇಂದ ಆಯ್ದ ಪದ್ಯಭಾಗ ‘ಕೌರವೇಂದ್ರನ ಕೊಂದೆ ನೀನು’ ಪದ್ಯಪಾಠದಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.

ಕೃಷ್ಣನು ಕರ್ಣನಿಗೆ ರಾಜ್ಯದ ಅಧಿಕಾರದ ಗದ್ದುಗೆಯ ಆಮಿಷವನ್ನು ಒಡ್ಡುತ್ತಾ “ನೀನು ರಾಜನಾದರೆ, ಎಡದ ಪಕ್ಕದಲ್ಲ್ಲಿ ಕೌರವ ರಾಜರ ಸಮೂಹ, ಬಲದಲ್ಲಿ ಪಾಂಡು ಮಕ್ಕಳ ಸಮೂಹ, ಎದುರಿನಲ್ಲಿ ಮಾದ್ರ ಮಾಗಧ ಯಾದವ ಮೊದಲಾದವರು, ಇವರ ನಡುವೆ ನೀನು ರಾಜಸಭೆಯಲ್ಲಿ ಸಿಂಹಾಸನದಲ್ಲಿ ಶೊಭಿಸುವ ವಿಶೇಷ ಸಂಭ್ರಮವನ್ನು ಬಿಟ್ಟು, ದುರ್ಯೋಧನ ಆಜ್ಞಾಪಿಸಲು ಪ್ರಭು, ತಮ್ಮ ಅನುಗ್ರಹ, ಆಗಲಿ ಎಂಬುದು ನಿನಗೆ ಬಹಳ ಕಷ್ಟಕರವಾದುದು” ಎಂದನು.

ಪ್ರಕೃತ ಕಾವ್ಯಭಾಗದಲ್ಲಿ ಪಾಂಡವರ ರಕ್ಷಣೆಗೆ ನಿಂತ ಕೃಷ್ಣನು ಸ್ವಾಮಿನಿಷ್ಠೆಗೆ ಬದ್ಧನಾದ ಕರ್ಣನಿಗೆ ನೀನು ರಾಜನಾದರೆ ಎಲ್ಲರೂ ಒಪ್ಪುವರು. ಅವರ ಮಧ್ಯದಲ್ಲಿ ಸಿಂಹಾಸನದಲ್ಲಿ ಕುಳಿತು ನೀನು ಅತ್ಯಂತ ಸಂತೋಷದಿAದ ರಾಜ್ಯಭಾರ ಮಾಬಹುದು ಎಂದು ಕರ್ಣನ ಮನ ಗೆಲ್ಲಲು ಹೂಡಿದ ತಂತ್ರ ಚೆನ್ನಾಗಿ ವ್ಯಕ್ತಗೊಂಡಿದೆ.

- ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದ ಬದುಕು ಅಪೇಕ್ಷಣೀಯ. ಅದು ಸಾಧ್ಯವಾಗದೆ ಮತ್ಸರ, ಛಲ ಪ್ರಧಾನವಾದರೆ ಸಂಘರ್ಷ ಅನಿವರ‍್ಯವಾಗುತ್ತದೆ. ಒಬ್ಬರನ್ನೊಬ್ಬರು ನಾಶಮಾಡುವವರೆಗೂ ಅದು ಬೆಳೆಯುತ್ತದೆ. ಅದರ ಪರಿಣಾಮ ಘೋರವಾದುದು ಎಂಬ ಅರಿವಿರುವುದಾದರೂ ಪ್ರತಿಷ್ಠೆಯಿಂದ ಹಠ ಸಾಧಿಸಿದಾಗ ಗೆಲ್ಲಲು, ಉಳಿಯಲು ವಿವಿಧ ತಂತ್ರಗಳನ್ನು ಬಳಸುವುದು ಸಹಜ. ಶತ್ರುವಿನೊಂದಿಗೆ ಸಮರಕ್ಕಿಳಿದು ಕಾದಾಡುವ ಮುನ್ನ ಶತ್ರುಬಲದ ವಿವಿಧ ಆಯಾಮಗಳನ್ನು ಶಮನಗೊಳಿಸಿದಾಗ ಗೆಲವು ಸಾಧ್ಯ ಎಂಬುದು ಒಂದು ರಾಜತಂತ್ರ.

ಮಹಾಭಾರತದಲ್ಲಿ ಪಾಂಡವರ ಪಾಲಿನ ರಾಜ್ಯವನ್ನು ನೀಡಲು ಕೌರವನು ನಿರಾಕರಿಸುತ್ತಾನೆ. ಸಂಧಾನದ ಮುಖೇನ ರಾಜ್ಯವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಧರ್ಮರಾಯ ಕೃಷ್ಣನನ್ನು ಸಂಧಿಗಾಗಿ ಕಳುಹಿಸುತ್ತಾನೆ. ಕೃಷ್ಣಸಂಧಾನವು ದುರ್ಯೋಧನನ ಹಠದಿಂದ ತಿರಸ್ಕೃತವಾಗುತ್ತದೆ. ಯುದ್ಧ ಅನಿವರ‍್ಯವೆಂದಾದಾಗ ಧರ್ಮಪಕ್ಷಪಾತಿಯಾದ ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಂದ ಪಾಂಡವರಿಗೆ ಅಪಾಯವಾಗದಂತೆ ಮಾಡುವನು. ಸಾಮಾನ್ಯನಿಗೆ ಅತಿಯಾದ ಸಂತೋಷವನ್ನು ನೀಡಬಹುದಾದ ಸಂಗತಿ, ಕರ್ಣನಿಗೆ ಎಂತಹ ಸಂಕಟವನ್ನು ಉಂಟುಮಾಡಿತು ಎಂಬುದು ಕವಿ ಕುಮಾರವ್ಯಾಸನ ಕಾವ್ಯ ‘ಕರ್ಣಾಟಭಾರತ ಕಥಾಮಂಜರಿ’ ಇಂದ ಆಯ್ದ ಪದ್ಯಭಾಗ ‘ಕೌರವೇಂದ್ರನ ಕೊಂದೆ ನೀನು’ ಪದ್ಯಪಾಠದಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.

ಕೃಷ್ಣನ ಆಮಿಷ, ಕರ್ಣನನಿಗೆ ಕೃಷ್ಣ ತಿಳಿಸುವ ಜನ್ಮ ರಹಸ್ಯದಿಂದ ಕರ್ಣನ ಕೊರಳಿನ ರಕ್ತನಾಳಗಳು ಹಿಗ್ಗಿದವು, ಕಂಬನಿಯು ರಭಸದಿಂದ ಮುನ್ನುಗ್ಗಿ ಬಂದು ಅಧಿಕವಾಗಿ ಕರ್ಣನು ನೊಂದನು. ಕರ್ಣನು ಮನದೊಳಗೆ “ಅಯ್ಯೋ, ದುರ್ಯೋಧನನಿಗೆ ಕೇಡುಂಟಾಯಿತಲ್ಲಾ” ಎಂದು ಸಂಕಟಪಟ್ಟನು. ಹರಿಯ ಹಗೆತನ ಹೊಗೆ ಕಾಣಿಸಿಕೊಳ್ಳದೆ, ಸುಡದೆ ಬಿಡುತ್ತದೆಯೇ ? ನನ್ನ ವಂಶÀವನು ತಿಳಿಸಿ ಕೊಂದನು. ಹೆಚ್ಚಿಗೆ ಹೇಳುವುದು ಇನ್ನೇನಿದೆ ಎಂದು ಚಿಂತಿಸಿದನು.

ಪ್ರಕೃತ ಕಾವ್ಯಭಾಗದಲ್ಲಿ ಪಾಂಡವರ ರಕ್ಷಣೆಗೆ ನಿಂತ ಕೃಷ್ಣ ಒಂದು ಕಡೆ, ಸ್ವಾಮಿನಿಷ್ಠೆಗೆ ಬದ್ಧನಾದ ಅಸಾಮಾನ್ಯನೂ ಶರ‍್ಯಕ್ಕೆ, ದಾನಕ್ಕೆ, ಉದಾತ್ತತೆಗೆ, ಕರುಣೆಗೆ ಹೆಸರಾಗಿದ್ದ ಕರ್ಣ ಇನ್ನೊಂದು ಕಡೆಗೆ ಪ್ರಲೋಭನೆಗೆ ಒಳಗಾಗದೆ ಅಸಹಾಯಕನಾದ ಸ್ಥಿತಿಯಲ್ಲಿ ನೋವು, ಸಂಕಟದಿAದ ಬಳಲುವ ಕರ್ಣನ ವ್ಯಕ್ತಿತ್ವದ ಹಿರಿಮೆ ಇಲ್ಲಿ ಬಿತ್ತರಗೊಂಡಿದೆ.

- ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದ ಬದುಕು ಅಪೇಕ್ಷಣೀಯ. ಅದು ಸಾಧ್ಯವಾಗದೆ ಮತ್ಸರ, ಛಲ ಪ್ರಧಾನವಾದರೆ ಸಂಘರ್ಷ ಅನಿವರ‍್ಯವಾಗುತ್ತದೆ. ಒಬ್ಬರನ್ನೊಬ್ಬರು ನಾಶಮಾಡುವವರೆಗೂ ಅದು ಬೆಳೆಯುತ್ತದೆ. ಅದರ ಪರಿಣಾಮ ಘೋರವಾದುದು ಎಂಬ ಅರಿವಿರುವುದಾದರೂ ಪ್ರತಿಷ್ಠೆಯಿಂದ ಹಠ ಸಾಧಿಸಿದಾಗ ಗೆಲ್ಲಲು, ಉಳಿಯಲು ವಿವಿಧ ತಂತ್ರಗಳನ್ನು ಬಳಸುವುದು ಸಹಜ. ಶತ್ರುವಿನೊಂದಿಗೆ ಸಮರಕ್ಕಿಳಿದು ಕಾದಾಡುವ ಮುನ್ನ ಶತ್ರುಬಲದ ವಿವಿಧ ಆಯಾಮಗಳನ್ನು ಶಮನಗೊಳಿಸಿದಾಗ ಗೆಲವು ಸಾಧ್ಯ ಎಂಬುದು ಒಂದು ರಾಜತಂತ್ರ.

ಮಹಾಭಾರತದಲ್ಲಿ ಪಾಂಡವರ ಪಾಲಿನ ರಾಜ್ಯವನ್ನು ನೀಡಲು ಕೌರವನು ನಿರಾಕರಿಸುತ್ತಾನೆ. ಸಂಧಾನದ ಮುಖೇನ ರಾಜ್ಯವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಧರ್ಮರಾಯ ಕೃಷ್ಣನನ್ನು ಸಂಧಿಗಾಗಿ ಕಳುಹಿಸುತ್ತಾನೆ. ಕೃಷ್ಣಸಂಧಾನವು ದುರ್ಯೋಧನನ ಹಠದಿಂದ ತಿರಸ್ಕೃತವಾಗುತ್ತದೆ. ಯುದ್ಧ ಅನಿವರ‍್ಯವೆಂದಾದಾಗ ಧರ್ಮಪಕ್ಷಪಾತಿಯಾದ ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಂದ ಪಾಂಡವರಿಗೆ ಅಪಾಯವಾಗದಂತೆ ಮಾಡುವುದು ಕವಿ ಕುಮಾರವ್ಯಾಸನ ಕಾವ್ಯ ‘ಕರ್ಣಾಟಭಾರತ ಕಥಾಮಂಜರಿ’ ಇಂದ ಆಯ್ದ ಪದ್ಯಭಾಗ ‘ಕೌರವೇಂದ್ರನ ಕೊಂದೆ ನೀನು’ ಪದ್ಯಪಾಠದಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.

ಅಸಹಾಯಕನಾದ ಸ್ಥಿತಿಯಲ್ಲಿ ನೋವು, ಸಂಕಟದಿಂದ ಬಳಲುವ ಕರ್ಣನನ್ನು ಕೃಷ್ಣನು ಪುನಃ ಕುರಿತು “ಏನು ಹೇಳು ಕರ್ಣ ನಿನ್ನ ಮನೋವೇದನೆ ಯಾವುದು? ನಿನಗೆ ಕುಂತಿಯ ಮಕ್ಕಳಿಂದ ಕೆಲಸ ಮಾಡಿಸಿಕೊಳ್ಳುವುದು ಇಷ್ಟವಿಲ್ಲವೇ? ನಷ್ಟವಿಲ್ಲ ಎನ್ನಾಣೆ ; ನುಡಿನುಡಿ ಮೌನವು ಏತಕೆ? ಭ್ರಮೆಗೊಳಗಾಗುವುದು ಬೇಡ. ನಾನು ನಿನ್ನ ದುರ್ದೆಸೆಯನ್ನು ಬಯಸುವನಲ್ಲ ನನ್ನ ಮಾತನ್ನು ಕೇಳು” ಎಂದು ಹೇಳುವನು.

ಪ್ರಕೃತ ಕಾವ್ಯಭಾಗದಲ್ಲಿ ಸ್ವಾಮಿನಿಷ್ಠೆಗೆ ಬದ್ಧನಾದ ಅಸಾಮಾನ್ಯನೂ ಶರ‍್ಯಕ್ಕೆ, ದಾನಕ್ಕೆ, ಉದಾತ್ತತೆಗೆ, ಕರುಣೆಗೆ ಹೆಸರಾಗಿದ್ದ ಕರ್ಣ ಪ್ರಲೋಭನೆಗೆ ಒಳಗಾಗದೆ ಅಸಹಾಯಕನಾದ ಸ್ಥಿತಿಯಲ್ಲಿ ನೋವು, ಸಂಕಟದಿAದ ಬಳಲುವ ಸಂದರ್ಭದಲ್ಲಿ ಪಾಂಡವರ ರಕ್ಷಣೆಗೆ ನಿಂತ ಕೃಷ್ಣ ಪುನಃ ತನ್ನ ಮಾತಿನ ಮೋಡಿಯಿಂದ ಕರ್ಣನನ್ನು ಗೊಂದಲಕ್ಕಿಡು ಮಾಡುವುದು ಬಿತ್ತರಗೊಂಡಿದೆ.

- ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದ ಬದುಕು ಅಪೇಕ್ಷಣೀಯ. ಅದು ಸಾಧ್ಯವಾಗದೆ ಮತ್ಸರ, ಛಲ ಪ್ರಧಾನವಾದರೆ ಸಂಘರ್ಷ ಅನಿವರ‍್ಯವಾಗುತ್ತದೆ. ಒಬ್ಬರನ್ನೊಬ್ಬರು ನಾಶಮಾಡುವವರೆಗೂ ಅದು ಬೆಳೆಯುತ್ತದೆ. ಅದರ ಪರಿಣಾಮ ಘೋರವಾದುದು ಎಂಬ ಅರಿವಿರುವುದಾದರೂ ಪ್ರತಿಷ್ಠೆಯಿಂದ ಹಠ ಸಾಧಿಸಿದಾಗ ಗೆಲ್ಲಲು, ಉಳಿಯಲು ವಿವಿಧ ತಂತ್ರಗಳನ್ನು ಬಳಸುವುದು ಸಹಜ. ಶತ್ರುವಿನೊಂದಿಗೆ ಸಮರಕ್ಕಿಳಿದು ಕಾದಾಡುವ ಮುನ್ನ ಶತ್ರುಬಲದ ವಿವಿಧ ಆಯಾಮಗಳನ್ನು ಶಮನಗೊಳಿಸಿದಾಗ ಗೆಲವು ಸಾಧ್ಯ ಎಂಬುದು ಒಂದು ರಾಜತಂತ್ರ.

ಮಹಾಭಾರತದಲ್ಲಿ ಪಾಂಡವರ ಪಾಲಿನ ರಾಜ್ಯವನ್ನು ನೀಡಲು ಕೌರವನು ನಿರಾಕರಿಸುತ್ತಾನೆ. ಸಂಧಾನದ ಮುಖೇನ ರಾಜ್ಯವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಧರ್ಮರಾಯ ಕೃಷ್ಣನನ್ನು ಸಂಧಿಗಾಗಿ ಕಳುಹಿಸುತ್ತಾನೆ. ಕೃಷ್ಣಸಂಧಾನವು ದುರ್ಯೋಧನನ ಹಠದಿಂದ ತಿರಸ್ಕೃತವಾಗುತ್ತದೆ. ಯುದ್ಧ ಅನಿವರ‍್ಯವೆಂದಾದಾಗ ಧರ್ಮಪಕ್ಷಪಾತಿಯಾದ ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಂದ ಪಾಂಡವರಿಗೆ ಅಪಾಯವಾಗದಂತೆ ಮಾಡುವನು. ಸಾಮಾನ್ಯನಿಗೆ

ಅತಿಯಾದ ಸಂತೋಷವನ್ನು ನೀಡಬಹುದಾದ ಸಂಗತಿ, ಕರ್ಣನಿಗೆ ಎಂತಹ ಸಂಕಟವನ್ನು ಉಂಟುಮಾಡಿತು ಎಂಬುದು ಕವಿ ಕುಮಾರವ್ಯಾಸನ ಕಾವ್ಯ ‘ಕರ್ಣಾಟಭಾರತ ಕಥಾಮಂಜರಿ’ ಇಂದ ಆಯ್ದ ಪದ್ಯಭಾಗ ‘ಕೌರವೇಂದ್ರನ ಕೊಂದೆ ನೀನು’ ಪದ್ಯಪಾಠದಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.

ಕೃಷ್ಣನ ಮಾತುಗಳನ್ನು ಸಮಾಧಾನದಿಂದ ಆಲಿಸಿದ ಕರ್ಣನು ಕೃಷ್ಣನಿಗೆ “ಮರುಳು ಮಾಧವ, ನಾನು ರಾಜ್ಯದ ಸಿರಿಸಂಪತ್ತಿಗೆ ಸೋಲುವವನಲ್ಲ. ಪಾಂಡವರು, ಕೌರವರು ಸೇವೆಯನ್ನು ನನಗೆ ಮಾಡುವಲ್ಲಿ, ಅವರಿಂದ ಸೇವೆಯನ್ನು ಮಾಡಿಸಿಕೊಳ್ಳುವಲ್ಲಿ ನನಗೆ ಮನಸ್ಸು ಇಲ್ಲ. ಆದರೆ ನನ್ನನ್ನು ಕಾಪಾಡಿದ, ಆಶ್ರಯ ನೀಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುತ್ತೇನೆಂಬ ಅತೀ ಉತ್ಸಾಹದಿಂದ ಇದ್ದೆನು. ಆದರೆ ನೀನು ನನ್ನ ಜನ್ಮ ರಹಸ್ಯವನ್ನು ತಿಳಿಸಿ ದುರ್ಯೋಧನನ್ನು ಕೊಂದೆ” ಎಂದನು.

ಪ್ರಕೃತ ಕಾವ್ಯಭಾಗದಲ್ಲಿ ಸ್ವಾಮಿನಿಷ್ಠೆಗೆ ಬದ್ಧನಾದ ಅಸಾಮಾನ್ಯನೂ ಶರ‍್ಯಕ್ಕೆ, ದಾನಕ್ಕೆ, ಉದಾತ್ತತೆಗೆ, ಕರುಣೆಗೆ ಹೆಸರಾಗಿದ್ದ ಕರ್ಣ ಅಸಹಾಯಕನಾದ ಸ್ಥಿತಿಯಲ್ಲಿಯೂ, ನೋವು, ಸಂಕಟದಿAದ ಬಳಲುವ ಸಂದರ್ಭದಲ್ಲೂ ಪಾಂಡವರ ರಕ್ಷಣೆಗೆ ನಿಂತ ಕೃಷ್ಣ ಪುನಃ ಒಡ್ಡಿದ ಪ್ರಲೋಭನೆ ಒಳಗಾಗದೆ ತನ್ನ ಮನೋನಿರ್ಧಾರವನ್ನು ಕೃಷ್ಣನಿಗೆ ತಿಳಿಸಿರುವಲ್ಲಿ ಉದಾತ್ತ ವ್ಯಕ್ತಿತ್ವದ ಕರ್ಣನ ಸ್ವಾಮಿನಿಷ್ಠೆಯ ಮುಂದೆ ಕೃಷ್ಣನ ಆಮೀಷ ಹೇಗೆ ವ್ಯರ್ಥಗೊಂಡಿತೆAಬುದು ಬಿತ್ತರಗೊಂಡಿದೆ.

- ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದ ಬದುಕು ಅಪೇಕ್ಷಣೀಯ. ಅದು ಸಾಧ್ಯವಾಗದೆ ಮತ್ಸರ, ಛಲ ಪ್ರಧಾನವಾದರೆ ಸಂಘರ್ಷ ಅನಿವರ‍್ಯವಾಗುತ್ತದೆ. ಒಬ್ಬರನ್ನೊಬ್ಬರು ನಾಶಮಾಡುವವರೆಗೂ ಅದು ಬೆಳೆಯುತ್ತದೆ. ಅದರ ಪರಿಣಾಮ ಘೋರವಾದುದು ಎಂಬ ಅರಿವಿರುವುದಾದರೂ ಪ್ರತಿಷ್ಠೆಯಿಂದ ಹಠ ಸಾಧಿಸಿದಾಗ ಗೆಲ್ಲಲು, ಉಳಿಯಲು ವಿವಿಧ ತಂತ್ರಗಳನ್ನು ಬಳಸುವುದು ಸಹಜ. ಶತ್ರುವಿನೊಂದಿಗೆ ಸಮರಕ್ಕಿಳಿದು ಕಾದಾಡುವ ಮುನ್ನ ಶತ್ರುಬಲದ ವಿವಿಧ ಆಯಾಮಗಳನ್ನು ಶಮನಗೊಳಿಸಿದಾಗ ಗೆಲವು ಸಾಧ್ಯ ಎಂಬುದು ಒಂದು ರಾಜತಂತ್ರ.

ಮಹಾಭಾರತದಲ್ಲಿ ಪಾಂಡವರ ಪಾಲಿನ ರಾಜ್ಯವನ್ನು ನೀಡಲು ಕೌರವನು ನಿರಾಕರಿಸುತ್ತಾನೆ. ಸಂಧಾನದ ಮುಖೇನ ರಾಜ್ಯವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಧರ್ಮರಾಯ ಕೃಷ್ಣನನ್ನು ಸಂಧಿಗಾಗಿ ಕಳುಹಿಸುತ್ತಾನೆ. ಕೃಷ್ಣಸಂಧಾನವು ದುರ್ಯೋಧನನ ಹಠದಿಂದ ತಿರಸ್ಕೃತವಾಗುತ್ತದೆ. ಯುದ್ಧ ಅನಿವರ‍್ಯವೆಂದಾದಾಗ ಧರ್ಮಪಕ್ಷಪಾತಿಯಾದ ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಂದ ಪಾಂಡವರಿಗೆ ಅಪಾಯವಾಗದಂತೆ ಮಾಡುವನು. ಸಾಮಾನ್ಯನಿಗೆ ಅತಿಯಾದ ಸಂತೋಷವನ್ನು ನೀಡಬಹುದಾದ ಸಂಗತಿ, ಕರ್ಣನಿಗೆ ಎಂತಹ ಸಂಕಟವನ್ನು ಉಂಟುಮಾಡಿತು ಎಂಬುದು ಕವಿ ಕುಮಾರವ್ಯಾಸನ ಕಾವ್ಯ ‘ಕರ್ಣಾಟಭಾರತ ಕಥಾಮಂಜರಿ’ ಇಂದ ಆಯ್ದ ಪದ್ಯಭಾಗ ‘ಕೌರವೇಂದ್ರನ ಕೊಂದೆ ನೀನು’ ಪದ್ಯಪಾಠದಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.

ಕರ್ಣನು ಕೃಷ್ಣನನ್ನು ಕುರಿತು “ಪರಾಕ್ರಮಿಯಾದ ವೀರ ದುರ್ಯೋಧನನೇ ಒಡೆಯನು. ಆತನ ಶತ್ರು ನನಗೆ ಶತ್ರು. ಅವನ ಹೊಗಳಿಕೆಯೆ ನನಗೆ ಹೊಗಳಿಕೆ. ದುರ್ಯೋಧನ ಆದಂತೆ ಆಗುವೆನು. ಕೃಷ್ಣನೇ ಕೇಳು, ನಾಳೆ ಬರಲಿರುವ ಸಮರದಲ್ಲಿ ನನ್ನ ಭುಜಬಲದ ಪರಾಕ್ರಮದ ಶ್ರೇಷ್ಠತನವನ್ನು ಪಾಂಡವರ ಮೇಲೆ ತೋರುವೆನು” ಎಂದನು.

ಪ್ರಕೃತ ಕಾವ್ಯಭಾಗದಲ್ಲಿ ಸ್ವಾಮಿನಿಷ್ಠೆಗೆ ಬದ್ಧನಾದ ಅಸಾಮಾನ್ಯನೂ ಶರ‍್ಯಕ್ಕೆ, ದಾನಕ್ಕೆ, ಉದಾತ್ತತೆಗೆ, ಕರುಣೆಗೆ ಹೆಸರಾಗಿದ್ದ ಕರ್ಣ ಅಸಹಾಯಕನಾದ ಸ್ಥಿತಿಯಲ್ಲಿಯೂ, ನೋವು, ಸಂಕಟದಿAದ ಬಳಲುವ ಸಂದರ್ಭದಲ್ಲೂ ಪಾಂಡವರ ರಕ್ಷಣೆಗೆ ನಿಂತ ಕೃಷ್ಣ ಪುನಃ ಒಡ್ಡಿದ ಪ್ರಲೋಭನೆ ಒಳಗಾಗದೆ ತನ್ನ ಮನೋನಿರ್ಧಾರವನ್ನು ಕೃಷ್ಣನಿಗೆ ತಿಳಿಸಿರುವಲ್ಲಿ ಉದಾತ್ತ ವ್ಯಕ್ತಿತ್ವದ ಕರ್ಣನ ಸ್ವಾಮಿನಿಷ್ಠೆಯ ಮುಂದೆ ಕೃಷ್ಣನ ಆಮೀಷ ಹೇಗೆ ವ್ಯರ್ಥಗೊಂಡಿತೆAಬುದು ಬಿತ್ತರಗೊಂಡಿದೆ. ಅಲ್ಲದೇ ತಾನೂ ಯುದ್ಧ ಮಾಡಿಯೇ ತಿರುತ್ತೇನೇ, ಅಲ್ಲಿ ತನ್ನ ಪರಾಕ್ರಮದ ಪರಾಕಾಷ್ಠೆಯನ್ನು ತೋರಿಸುವುದಾಗಿ ಹೇಳಿರುವುದು ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.

- ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದ ಬದುಕು ಅಪೇಕ್ಷಣೀಯ. ಅದು ಸಾಧ್ಯವಾಗದೆ ಮತ್ಸರ, ಛಲ ಪ್ರಧಾನವಾದರೆ ಸಂಘರ್ಷ ಅನಿವರ‍್ಯವಾಗುತ್ತದೆ. ಒಬ್ಬರನ್ನೊಬ್ಬರು ನಾಶಮಾಡುವವರೆಗೂ ಅದು ಬೆಳೆಯುತ್ತದೆ. ಅದರ ಪರಿಣಾಮ ಘೋರವಾದುದು ಎಂಬ ಅರಿವಿರುವುದಾದರೂ ಪ್ರತಿಷ್ಠೆಯಿಂದ ಹಠ ಸಾಧಿಸಿದಾಗ ಗೆಲ್ಲಲು, ಉಳಿಯಲು ವಿವಿಧ ತಂತ್ರಗಳನ್ನು ಬಳಸುವುದು ಸಹಜ. ಶತ್ರುವಿನೊಂದಿಗೆ ಸಮರಕ್ಕಿಳಿದು ಕಾದಾಡುವ ಮುನ್ನ ಶತ್ರುಬಲದ ವಿವಿಧ ಆಯಾಮಗಳನ್ನು ಶಮನಗೊಳಿಸಿದಾಗ ಗೆಲವು ಸಾಧ್ಯ ಎಂಬುದು ಒಂದು ರಾಜತಂತ್ರ.

ಮಹಾಭಾರತದಲ್ಲಿ ಪಾಂಡವರ ಪಾಲಿನ ರಾಜ್ಯವನ್ನು ನೀಡಲು ಕೌರವನು ನಿರಾಕರಿಸುತ್ತಾನೆ. ಸಂಧಾನದ ಮುಖೇನ ರಾಜ್ಯವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಧರ್ಮರಾಯ ಕೃಷ್ಣನನ್ನು ಸಂಧಿಗಾಗಿ ಕಳುಹಿಸುತ್ತಾನೆ. ಕೃಷ್ಣಸಂಧಾನವು ದುರ್ಯೋಧನನ ಹಠದಿಂದ ತಿರಸ್ಕೃತವಾಗುತ್ತದೆ. ಯುದ್ಧ ಅನಿವರ‍್ಯವೆಂದಾದಾಗ ಧರ್ಮಪಕ್ಷಪಾತಿಯಾದ ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಂದ ಪಾಂಡವರಿಗೆ ಅಪಾಯವಾಗದಂತೆ ಮಾಡುವನು. ಸಾಮಾನ್ಯನಿಗೆ ಅತಿಯಾದ ಸಂತೋಷವನ್ನು ನೀಡಬಹುದಾದ ಸಂಗತಿ, ಕರ್ಣನಿಗೆ ಎಂತಹ ಸಂಕಟವನ್ನು ಉಂಟುಮಾಡಿತು ಎಂಬುದು ಕವಿ ಕುಮಾರವ್ಯಾಸನ ಕಾವ್ಯ ‘ಕರ್ಣಾಟಭಾರತ ಕಥಾಮಂಜರಿ’ ಇಂದ ಆಯ್ದ ಪದ್ಯಭಾಗ ‘ಕೌರವೇಂದ್ರನ ಕೊಂದೆ ನೀನು’ ಪದ್ಯಪಾಠದಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.

ಕರ್ಣನು ಕೃಷ್ಣನನ್ನು ಕುರಿತು “ನಾಳಿನ ಕೌರವರ ಮತ್ತು ಪಾಂಡವರ ಯುದ್ಧವು ಆನೆ, ಕುದುರೆ, ರಥ ಮತ್ತು ಯೋಧರಿಂದ ಕೂಡಿದ ಚತುರಂಗ ಸೈನ್ಯಬಲದಲ್ಲಿ ಮೃತ್ಯುದೇವತೆಗೆ ಭೋಜನ ಕೂಟ ಆಗುವುದು. ಕೌರವನ ಉಪಕಾರ ಸಂದುಹೋಗುವAತೆ ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ಕೋಟಿಗಟ್ಟಲೇ ವೀರಯೋಧರನ್ನು ಕೊಂದು, ಒಡೆಯನ ಅವಶ್ಯಕತೆಗೆ ಶರೀರವನು ತ್ಯಜಿಸುವೆನು. ಸೂರ್ಯನ ಸಾಕ್ಷಿಯಾಗಿ ನಿನ್ನ(ಪ್ರಾಣಪ್ರಿಯರಾದ)ಯ ವೀರರಾದ ಪಾಂಡವರೈವರನ್ನು ನೋಯಿಸುವುದಿಲ್ಲ” ಎಂದನು.

ಪ್ರಕೃತ ಕಾವ್ಯಭಾಗದಲ್ಲಿ ಸ್ವಾಮಿನಿಷ್ಠೆಗೆ ಬದ್ಧನಾದ ಕರ್ಣ ತಾನೂ ಯುದ್ಧ ಮಾಡಿಯೇ ತಿರುತ್ತೇನೆ. ಯುದ್ಧಭೂಮಿಯಲ್ಲಿ ತನ್ನ ಪರಾಕ್ರಮದಿಂದ ಮಾರಣಹೋಮವಾಗುವುದು, ಮೃತ್ಯದೇವತೆಗೆ ಔತಣ ನೀಡಿ ಒಡೆಯನ ಋಣ ತಿರಿಸುವುದಾಗಿ ಹೇಳಿರುವಲ್ಲಿ ಯದ್ಧದ ಗಂಭೀರತೆ, ಆತನ ಸ್ವಾಮಿನಿಷ್ಠೆ ಹಾಗೂ ಪಾಂಡವರಿಗೆ ತಾನೂ ತೊಂದರೆ ಕೊಡುವುದಿಲ್ಲ ಎಂಬಲ್ಲಿ ಕರ್ಣನ ಉದಾತ್ತ ವ್ಯಕ್ತಿತ್ವದ ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.

« BACK ಮುಂದಿನ ಅಧ್ಯಾಯ

THANK U
RMH-9731734068

4 ಕಾಮೆಂಟ್‌ಗಳು: