10-Kan ಸಂಕಲ್ಪಗೀತೆ

RMH

ಪದ್ಯ ಪಾಠ-1 ಸಂಕಲ್ಪಗೇತೆ

ಒಂದು ಅಂಕದ ಪ್ರಶ್ನೆಗಳು

ಉತ್ತರ : ಪ್ರೀತಿಯ ಹಣತೆಯನ್ನು ಸುತ್ತಲು ಕವಿದಿರುವ ಕತ್ತಲೆಯೊಳಗೆ ಹಚ್ಚಬೇಕು.

ಉತ್ತರ : ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲ್ಲಿ ಮುನ್ನಡೆಸಬೇಕು.

ಉತ್ತರ : ನದೀಜಲಗಳು ಕಲುಷಿತವಾಗಿವೆ.

ಉತ್ತರ : ಕಲುಷಿತವಾಗಿರುವ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು.

ಉತ್ತರ : ಕಾಡುಮೇಡುಗಳು ಬರಡಾಗಿವೆ.

ಉತ್ತರ : ವಸಂತವಾಗುತ ಬರಡಾಗಿರುವ ಕಾಡುಮೇಡುಗಳನ್ನು ಮುಟ್ಟಬೇಕಿದೆ.

ಉತ್ತರ : ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ ಕವಿ ಹೊಸಭರವಸೆಗಳ ಕಟ್ಟೋಣವೆಂದು ತಿಳಿಸುತ್ತಾರೆ.

ಉತ್ತರ : ಮನುಜರ ನಡುವಿನ ಅಡ್ಡಗೋಡೆಗಳ ಕೆಡವುತ ಸೇತುವೆಯಾಗಬೇಕೆಂದು ಕವಿ ತಿಳಿಸುತ್ತಾರೆ

ಉತ್ತರ : ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದೊಳು ಬದುಕಬೇಕಿದೆ.

ಉತ್ತರ : ಭಯ-ಸಂಶಯದಲ್ಲಿ ಕಂದಿದ ಕಣ್ಣಿನಲ್ಲಿ ನಾಳಿನ ಕನಸ್ಸನ್ನು ಬಿತ್ತಬೇಕು ಎಂದು ಕವಿ ಜಿ.ಎಸ್.ಶಿವರುದ್ರಪ್ಪ ನವರು ಹೇಳಿದ್ದಾರೆ.

ಉತ್ತರ : ‘ಸ್ವಾತಂತ್ರ್ಯ ನನ್ನ ಆಜನ್ಮಸಿದ್ಧ ಹಕ್ಕು’ ಎಂಬ ಘೋಷಣೆ ಬಾಲ ಗಂಗಾಧರ ತಿಲಕರದು.

ಉತ್ತರ : ಸ್ವಾತಂತ್ರ್ಯಗಳಿಸುವುದೇ ರಾಷ್ಟ್ರಪಿತ ಗಾಂಧೀಜಿಯವರ ಜೀವನದ ಏಕೈಕ ಸಂಕಲ್ಪವಾಗಿತ್ತು.

ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )

ಉತ್ತರ : ನಮ್ಮ ಬದುಕಿನ ಸುತ್ತಮುತ್ತಲು ಕವಿದಿರುವ ಕತ್ತಲೆಯನ್ನು ಕಳೆಯಲು ಪ್ರೀತಿಯೆಂಬ ಹಣತೆಯನ್ನು ಹಚ್ಚಬೇಕು. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಜ್ಞಾನದೀವಿಗೆಯ ಮೂಲಕ ಎಚ್ಚರಿಕೆಯಿಂದ ಮುನ್ನಡೆಸಬೇಕಿದೆ.

ಉತ್ತರ : “ಋತುಗಳ ರಾಜನಾದ ವಸಂತನು ಬರಡಾಗಿರುವ ಕಾಡುಮೇಡುಗಳನ್ನು ಹಚ್ಚಹಸಿರಿಂದ ಕಂಗೊಳಿಸುವಂತೆ ಮುಟ್ಟಬೇಕಿದೆ. ವಸಂತನ ಆಗಮನದಿಂದ ಬರಡಾಗಿರುವ ಕಾಡಿನಲ್ಲಿ ಮರಗಿಡಗಳು ಚಿಗುರಿ ಪ್ರಕೃತಿಗೆ ನವಚೈತನ್ಯ ಮೂಡಬೇಕಿದೆ” ಎಂಬುದು ಕವಿಯ ಆಶಯವಾಗಿದೆ.

ಉತ್ತರ : ಭಾಷೆ, ಜಾತಿ, ಮತಧರ್ಮಗಳ ಭೇದಭಾವದಿಂದ ಮನುಜರ ನಡುವೆ ಅಡ್ಡಗೋಡೆಗಳು ನಿರ್ಮಾಣವಾಗಿವೆ. ಸ್ನೇಹ, ಪ್ರೀತಿ, ನಂಬಿಕೆಯ ಮೂಲಕ ಮನುಜರ ನಡುವಿನ ಈ ಅಡ್ಡಗೋಡೆಗಳನ್ನು ಕೆಡವಬೇಕು. ಬದುಕಿನಲ್ಲಿ ಹೊಸ ಭರವಸೆಗಳನ್ನು ಮೂಡಿಸಿ ಮನುಜ ಮನುಜರ ನಡುವೆ ಸೇತುವೆಯಾಗಬೇಕಿದೆ.

ಉತ್ತರ : ಎಲ್ಲ ಮತಧರ್ಮಗಳು ದಾರಿ ತೋರಿಸುವ ದೀಪಗಳಾಗಿರುವುದರಿಂದ ಎಲ್ಲಾ ಮತಗಳನ್ನು ಪುರಸ್ಕರಿಸುವ ಎಚ್ಚರಿಕೆಯಲ್ಲಿ ನಾವು ಬದುಕಬೇಕು. ಭಯ ಮತ್ತು ಸಂಶಯಗಳಿಂದ ಮಸುಕಾಗಿರುವ ಮನದ ಕಣ್ಣಿನಲ್ಲಿ ಭವಿಷ್ಯದ ಕನಸನ್ನು ಬಿತ್ತುತ್ತ ಬದುಕು ನಡೆಸಬೇಕು.

ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ (3 ಅಂಕ)

ಆಯ್ಕೆ :- ಈ ವಾಕ್ಯವನ್ನು ರಾಷ್ತ್ರಕವಿ ಜಿ. ಎಸ್. ಶಿವರುದ್ರಪ್ಪ’ ವಿರಚಿತ ‘ಎದೆತುಂಬಿ ಹಾಡಿದೆನು’ ಕವನ ಸಂಕಲನದಲ್ಲಿನ ‘ಸಂಕಲ್ಪಗೀತೆ’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ಕವಿ ಜಿ. ಎಸ್. ಶಿವರುದ್ರಪ್ಪನವರು ನಾವು ಜೀವನದಲ್ಲಿ ಧನಾತ್ಮಕ ಮನೋಭಾವನೆಯ ಧೃಡಸಂಕಲ್ಪವನ್ನು ಹೊಂದಿರಬೇಕು. ಇಂದು ಜಗತ್ತಿನಲ್ಲಿ ಜಾತಿ, ಮತ, ಭಾಷೆ, ಬಣ್ಣ, ಅಜ್ಞಾನ, ಮೂಢನಂಬಿಕೆಗಳೆಂಬ ವಿಚಾರಗಳಿಂದ ಜನರ ಸುತ್ತಲೂ ದ್ವೇಷದ ಕತ್ತಲೆಯು ಕವಿದಿದೆ. ಈ ಕತ್ತಲೆಯನ್ನು ಹೊಡೆದೊಡಿಸಲು ಬೇಳಕಿನ ಅಗತ್ಯತೆ ಇದೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ : ನಾವು ಜೀವನದಲ್ಲಿ ಪ್ರೀತಿಯ ದೀಪವನ್ನು ಹಚ್ಚುವ ಸಂಕಲ್ಪ ಕೈಗೊಳ್ಳುವುದರಿಂದ ದ್ವೇಷರಹಿತ ಸಮಾಜವನ್ನು ನಿರ್ಮಾಣ ಮಾಡಬಹುದು ಎಂಬ ಸ್ವಾರಸ್ಯಪೂರ್ಣವಾದ ಭಾವನೆಯು ಕವಿಯ ಈ ಮೇಲಿನ ಮಾತಿನಲ್ಲಿ ಅಭಿವ್ಯಕ್ತಗೊಂಡಿದೆ.

ಆಯ್ಕೆ :- ಈ ವಾಕ್ಯವನ್ನು ರಾಷ್ತ್ರಕವಿ ಜಿ. ಎಸ್. ಶಿವರುದ್ರಪ್ಪ’ ವಿರಚಿತ ‘ಎದೆತುಂಬಿ ಹಾಡಿದೆನು’ ಕವನ ಸಂಕಲನದಲ್ಲಿನ ‘ಸಂಕಲ್ಪಗೀತೆ’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ನಿಷ್ಠೆಯಿಂದ ಕ್ರಿಯಾಶೀಲರಾಗಿ ನಾವು ಧನಾತ್ಮಕ ಭಾವನೆ ಹಾಗೂ ದೃಢ ಸಂಕಲ್ಪವನ್ನು ಹೊಂದಿದಾಗ ಯಶಸ್ಸನ್ನು ತಲುಪಬಹುದು. ಪರಿಸರ ಮಾಲಿನ್ಯದಿಂದ ಕಲುಷಿತವಾಗಿರುವ ನದೀಜಲಗಳಿಗೆ ಶುದ್ಧೀಕರಿಸುವ ಮುಂಗಾರಿನ ಮಳೆಯಂತಹ ಪರಿಸರಪ್ರೇಮಿ ನಾವಾಗಬೇಕು ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ : ನಾವು ಮುಂಗಾರಿನ ಮಳೆಯಂತೆ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳುವುದರಿಂದ ನದೀಜಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದೆಂಬುದು ಕವಿಯ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.

ಆಯ್ಕೆ :- ಈ ವಾಕ್ಯವನ್ನು ರಾಷ್ತ್ರಕವಿ ಜಿ. ಎಸ್. ಶಿವರುದ್ರಪ್ಪ’ ವಿರಚಿತ ‘ಎದೆತುಂಬಿ ಹಾಡಿದೆನು’ ಕವನ ಸಂಕಲನದಲ್ಲಿನ ‘ಸಂಕಲ್ಪಗೀತೆ’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ಇಂದು ಜನರಲ್ಲಿ ನಾನಾ ಕಾರಣಗಳಿಗಾಗಿ ನಂಬಿಕೆ ವಿಶ್ವಾಸ, ಹೊಂದಿ ಬಾಳುವ ಗುಣ ಮುಂತಾದ ಸುಖಭಾವದ ಸ್ಥಂಭಗಳೇ ಬಿದ್ದುಹೋಗಿವೆ. ಹೀಗಾಗಿ ಚೆನ್ನಾಗಿ ಬದುಕುತ್ತೇವೆ ಎಂಬ ಭರವಸೆಯೇ ಹೊರಟುಹೋಗುತ್ತಿದೆ. ಆದ್ದರಿಂದ ನಂಬಿಕೆ, ವಿಶ್ವಾಸ, ಪ್ರೀತಿ ಸ್ನೇಹಗಳೆಂಬ ಆಧಾರಸ್ಥಂಭಗಳನ್ನು ಮತ್ತೆ ಮೇಲೆಬ್ಬಿಸಿ ಮನದಲ್ಲಿ ಸ್ಥಿರವಾಗಿ ನಿಲ್ಲುವಂತೆ ಮಾಡುವ ಹೊಸ ಭರವಸೆಗಳನ್ನು ಕಟ್ಟೋಣ ಎಂದು ಹೇಳುವ ಸಂದರ್ಭದಲ್ಲಿ ಈ ಕವಿ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ : ನಾವು ಹೊಸ ಭರವಸೆಯನ್ನು ಮೂಡಿಸುವ ಸಂಕಲ್ಪ ಕೈಗೊಳ್ಳುವುದರಿಂದ ಸಮಾಜದ ನೈತಿಕ ಅಧಃಪತನವನ್ನು ತಡೆಯಬಹುದೆಂಬ ಸ್ವಾರಸ್ಯಪೂರ್ಣವಾದ ಭಾವನೆಯು ಕವಿಯ ಪ್ರಸ್ತುತ ಮಾತಿನಲ್ಲಿ ಅಭಿವ್ಯಕ್ತಗೊಂಡಿದೆ.

ಆಯ್ಕೆ :- ಈ ವಾಕ್ಯವನ್ನು ರಾಷ್ತ್ರಕವಿ ಜಿ. ಎಸ್. ಶಿವರುದ್ರಪ್ಪ’ ವಿರಚಿತ ‘ಎದೆತುಂಬಿ ಹಾಡಿದೆನು’ ಕವನ ಸಂಕಲನದಲ್ಲಿನ ‘ಸಂಕಲ್ಪಗೀತೆ’ ಎಂಬ ಪದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ : ವಿಶ್ವದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ರಾಷ್ಟçವೆಂದರೆ ಭಾರತವೊಂದೇ. ಇಲ್ಲಿ ಅನೇಕ ಧರ್ಮದವರಿದ್ದು ಅವರವರ ಆಚಾರ ವಿಚಾರಗಳು ಬೇರೆಬೇರೆಯಾಗಿವೆ. ದೇವನೊಬ್ಬ ನಾಮ ಹಲವು ಎನ್ನುವ ಹಾಗೆ, ಈ ಎಲ್ಲಾ ಧರ್ಮಗಳು ನಮ್ಮ ಆನಂದದ ಬದುಕಿಗೆ ಬೇಕಾದ ಸನ್ಮಾರ್ಗ ತೋರಿಸುವ ದಾರಿ ದೀವಿಗೆಗಳಾಗಬೇಕೆ ಹೊರತು, ದಾರಿ ತಪ್ಪಿಸುವಂತಾಗಬಾರದು ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ : ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದೆಂಬ ಎಂಬ ಸ್ವಾರಸ್ಯಪೂರ್ಣವಾದ ಭಾವನೆಯು ಕವಿಯ ಮಾತಿನಲ್ಲಿ ಅಭಿವ್ಯಕ್ತಗೊಂಡಿದೆ.

ಲೇಖಕರ ಪರಿಚಯ(3 ಅಂಕ)

ಜಿ. ಎಸ್. ಶಿವರುದ್ರಪ್ಪ : ‘ರಾಷ್ಟ್ರಕವಿ’ ಅಭಿಧಾನಕ್ಕೆ ಪಾತ್ರರಾದ ಆಧುನಿಕ ಕನ್ನಡದ ಪ್ರಸಿದ್ಧ ಕವಿ ಶ್ರೀ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರು ಕ್ರಿ. ಶ. 1926 ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ಮೈಸೂರು, ಉಸ್ಮಾನಿಯಾ ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಎದೆತುಂಬಿ ಹಾಡಿದೆನು, ಸಾಮಗಾನ, ಚೆಲುವು ಒಲವು, ದೇವಶಿಲ್ಪ, ದೀಪದಹೆಜ್ಜೆ, ಅನಾವರಣ, ವಿಮರ್ಶೆಯ ಪೂರ್ವಪಶ್ಚಿಮ, ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು, ಸೌಂದರ್ಯ ಸಮೀಕ್ಷೆ, ಕಾವ್ಯಾರ್ಥಚಿಂತನ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರ ‘ಕಾವ್ಯಾರ್ಥ ಚಿಂತನ’ ಕೃತಿಗೆ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಲಭಿಸಿದೆ.’ ಶ್ರೀಯುತರಿಗೆ ಪಂಪ ಪ್ರಶಸ್ತಿ, ಬೆಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳ ಗೌರವ ಡಿ. ಲಿಟ್ ಪದವಿಗಳಲ್ಲದೆ 1992ರಲ್ಲಿ ದಾವಣಗೆರೆಯಲ್ಲಿ ನಡೆದ 61ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯ ಗೌರವಗಳು ಸಂಧಿವೆ.

ಎಂಟು-ಹತ್ತು ವಾಕ್ಯದಲ್ಲಿ ಉತ್ತರ ಬರೆಯಿರಿ(4 ಅಂಕ)

ಉತ್ತರ : : “ನಮ್ಮ ಸುತ್ತಲೂ ಹಬ್ಬಿರುವ ದ್ವೇಷದ ಕತ್ತಲೆಯನ್ನು ಕಳೆಯಲು, ಪ್ರೀತಿಯ ದೀಪವನ್ನು ಹಚ್ಚುವ, ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಎಚ್ಚರದಲ್ಲಿ ಮುನ್ನಡೆಸುವ, ಪರಿಸರ ಮಾಲಿನ್ಯದಿಂದ ಕಲುಷಿತವಾಗಿರುವ ನದೀಜಲಗಳಿಗೆ ಶುದ್ಧೀಕರಿಸುವ ಮುಂಗಾರಿನ ಮಳೆಯಂತಹ ಪರಿಸರ ಪ್ರೇಮಿಯಾಗುವ, ಬರಡಾಗಿರುವ ಕಾಡುಮೇಡುಗಳು ಹಚ್ಚಹಸಿರಿನಿಂದ ಕಂಗೊಳಿಸಿ, ಸಮೃದ್ಧವಾಗುವಂತಹ ವಸಂತಕಾಲವಾಗುವ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ, ಅಸ್ಪೃಶ್ಯತೆ, ಅಸಮಾನತೆಗಳಿಂದ ಅಧಃಪತನಗೊಂಡಿರುವ ಸಮಾಜವನ್ನು ಹೊಸ ಭರವಸೆಗಳ ಮೂಲಕ ಮೇಲೆತ್ತುವ, ಭಾಷೆ, ಜಾತಿ, ಮತ, ಧರ್ಮಗಳ ಭೇದಭಾವದಿಂದ ಮನುಜ ಮನುಜರ ನಡುವೆ ಉಂಟಾಗಿರುವ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡಹಿ. ಸಮಾನತೆಯ ಮನೋಭಾವನೆಯನ್ನು ಮೂಡಿಸುವ ಸೇತುವೆಯಾಗುವ, ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ, ಭಯ ಹಾಗೂ ಸಂಶಯಗಳಿಂದ ಮಸುಕಾದ ಕಣ್ಣುಗಳಲ್ಲಿ ಭವಿಷ್ಯದ ಹೊಂಗನಸು ಕಾಣುವಂತೆ ಮಾಡುವ ದೃಢಸಂಕಲ್ಪವನ್ನು ಕೈಗೊಳ್ಳಬೇಕು” ಎಂಬುದು ಕವಿ ಜಿ.ಎಸ್. ಶಿವರುದ್ರಪ್ಪ ಅವರ ಆಶಯವಾಗಿದೆ.

ಉತ್ತರ : ಉತ್ತರ : ನಾವು ಜೀವನದಲ್ಲಿ ಪ್ರೀತಿಯ ದೀಪವನ್ನು ಹಚ್ಚುವ ಸಂಕಲ್ಪ ಕೈಗೊಳ್ಳುವುದರಿಂದ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು. ನಾವು ಬದುಕಿನಲ್ಲಿ ಎಚ್ಚರಿಕೆಯಿಂದ ಮುನ್ನಡೆಯುವ ಸಂಕಲ್ಪ ಕೈಗೊಳ್ಳುವುದರಿಂದ ಎಂತಹ ಸವಾಲುಗಳನ್ನು ಧೈರ್ಯವಾಗಿ ಎದುರಿಸಬಹುದು. ನಾವು ಮುಂಗಾರಿನ ಮಳೆಯಂತೆ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳುವುದರಿಂದ ನದೀಜಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು. ನಾವು ವನಸಂರಕ್ಷಣೆಯ ಸಂಕಲಕೈಗೊಳ್ಳುವುದರಿಂದ ಕಾಡುಗಳು ಹಚ್ಚಹಸುರಿಂದ ಸಂವೃದ್ಧವಾಗುವಂತೆ ಮಾಡಬಹುದು. ನಾವು ಹೊಸ ಭರವಸೆಯನ್ನು ಮೂಡಿಸುವ ಸಂಕಲ್ಪ ಕೈಗೊಳ್ಳುವುದರಿಂದ ಸಮಾಜದ ನೈತಿಕ ಅಧಃಪತನವನ್ನು ತಡೆಯಬಹುದು. ನಾವು ಸಮಾನತೆ ಮನೋಭಾವನೆಯುಳ್ಳವರಾಗುವ ಸಂಕಲ್ಪ ಕೈಗೊಳ್ಳುವುದರಿಂದ ಮನುಜ ಮನುಜರ ನಡುವಿನ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡುಹಬಹುದು. ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದು. ಭಯ ಹಾಗೂ ಸಂಶಯಗಳಿಂದ ಮುಕ್ತರಾಗುವ ಸಂಕಲ್ಪ ಕೈಗೊಳ್ಳುವುದರಿಂದ ಭವಿಷ್ಯದ ಹೊಂಗನಸನ್ನು ಕಾಣಬಹುದು. ಹೀಗೆ ಕವಿ ಶ್ರೀ ಜಿ. ಎಸ್. ಶಿವರುದ್ರಪ್ಪನವರು ಸಂಕಲ್ಪ ಮತ್ತು ಅನುಷ್ಠಾನವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಕೆಳಗಿನ ಪದ್ಯಭಾಗವನ್ನು ಓದಿ ಅರ್ಥಮಾಡಿಕೊಂಡು, ಅಡಕವಾಗಿರುವ ಮೌಲ್ಯವನ್ನಾಧರಿಸಿ ಸಾರಾಂಶ ಬರೆಯಿರಿ. (4 ಅಂಕ)

ಭಾವಾರ್ಥ : ಇಂದು ಜಗತ್ತಿನಲ್ಲಿ ಜಾತಿ, ಮತ, ಭಾಷೆ, ಬಣ್ಣ, ಅಜ್ಞಾನ, ಮೂಢನಂಬಿಕೆಗಳೆAಬ ವಿಚಾರಗಳಿಂದ ಜನರ ಸುತ್ತಲೂ ದ್ವೇಷದ ಕತ್ತಲೆಯು ಕವಿದಿದೆ. ಈ ಕತ್ತಲೆಯನ್ನು ಹೊಡೆದೊಡಿಸಲು ಬೇಳಕಿನ ಅಗತ್ಯತೆ ಇದೆ. ಅಂತೆಯೇ ನಾವು ಈ ದ್ವೇಷದ ಕತ್ತಲೆ ಹೊಡೆದೊಡಿಸಲು ಪ್ರೀತಿಯ ದೀಪವನ್ನು ಹಚ್ಚಬೇಕಿದೆ. ಆಗ ಮಾತ್ರ ಸ್ವಾಸ್ಥ್ಯ ಹಾಗೂ ದ್ವೇಷರಹಿತ ಸಮಾಜ ನಿಮಾಣವಾಗುತ್ತದೆ. ಇಂದು ಸಂಸಾರವೆAಬ ಹಡಗು ಅಜ್ಞಾನದ ಬಿರುಗಾಳಿಗೆ ಸಿಲುಕಿಹಾಕಿಕೊಂಡು ಹೊಯ್ದಾಡುತ್ತ ಎತ್ತೆತ್ತಲೋ ಸಾಗುತ್ತಿದೆ. ಆದ್ದರಿಂದ ನಾವು ಬಾಳನೌಕೆಯನ್ನು ಬಹು ಎಚ್ಚರಿಕೆಯಿಂದ ಗುರಿಯತ್ತ ಮುನ್ನಡೆಸಬೇಕು ಜೀವನದಲ್ಲಿ ಯಾವುದೇ ಸವಾಲುಗಳಿಗೆ ಅಂಜದೆ ಧೈರ್ಯದಿಂದ ನಾವು ಬದುಕು ಮುನ್ನಡೆಸಬೇಕು ಎಂದು ಕವಿ ಜಿ. ಎಸ್. ಶಿವರುದ್ರಪ್ಪ ಅವರು ಆಶಿಸುತ್ತಾರೆ. ‘ಎಲ್ಲರೂ ಪ್ರೀತಿಯಿಂದ, ಬಹು ಎಚ್ಚರಿಕೆಯಿಂದ ಬದುಕನ್ನು ಸಾಗಿಸಬೇಕು. ಇದು ಸ್ವಾಸ್ಥ್ಯಯುತ ಸಮಾಜ ನಿರ್ಮಾಣಕ್ಕೆ ಎಡೆ ಮಾಡುತ್ತದೆ’ ಎಂಬ ಮೌಲ್ಯಯುತ ಸಂದೇಶವನ್ನು ಪ್ರಸ್ತುತ ಪದ್ಯವು ತಿಳಿಸುತ್ತದೆ.

ಭಾವಾರ್ಥ : ನಿಷ್ಠೆಯಿಂದ ಕ್ರಿಯಾಶೀಲರಾಗಿ ನಾವು ಧನಾತ್ಮಕ ಭಾವನೆ ಹಾಗೂ ದೃಢ ಸಂಕಲ್ಪವನ್ನು ಹೊಂದಿದಾಗ ಯಶಸ್ಸನ್ನು ತಲುಪಬಹುದು. ಪರಿಸರ ಮಾಲಿನ್ಯದಿಂದ ಕಲುಷಿತವಾಗಿರುವ ನದೀಜಲಗಳಿಗೆ ಶುದ್ಧೀಕರಿಸುವ ಮುಂಗಾರಿನ ಮಳೆಯಂತಹ ಪರಿಸರಪ್ರೇಮಿ ನಾವಾಗಬೇಕು. ಇದರಿಂದ ವಸಂತಕಾಲ ಆಗಮನದಿಂದ ಬರಡಾಗಿರುವ ಕಾಡುಮೇಡುಗಳು ಹಚ್ಚಹಸಿರಿನಿಂದ ಕಂಗೊಳಿಸಿ ಸಮೃದ್ಧವಾಗುವಂತೆ, ಸ್ವಾಸ್ತ್ಯಯುತ ಹಾಗೂ ಐಕ್ಯತಾ ಸಮಾಜ ನಿರ್ಮಾಣ ಮಾಡಿ, ಸುಮನಸುಗಳು ಮೂಡಿಬಂದು, ಸುಂದರ ವಾತಾವರಣ ನೆಲೆಗೊಳ್ಳಲು ಅವಕಾಶವಿಯುತ್ತದೆ ಎಂದು ಕವಿ ಜಿ. ಎಸ್. ಶಿವರುದ್ರಪ್ಪ ಅವರು ಆಶಿಸುತ್ತಾರೆ. ‘ಮನೆಮನಗಳ ವೈಮನಸ್ಸನ್ನು ತೊರೆದು ಏಕತೆಯಿಂದ ಬದುಕು ಸಾಗಿಸುವ ದೃಢಸಂಕಲ್ಪ ಕೈಗೊಳ್ಳಬೇಕು’ ಎಂಬ ಮೌಲ್ಯಯುತ ಸಂದೇಶವನ್ನು ಪ್ರಸ್ತುತ ಪದ್ಯವು ತಿಳಿಸುತ್ತದೆ.

ಭಾವಾರ್ಥ : ಜನರಲ್ಲಿ ಇಂದು ನಾನಾ ಕಾರಣಗಳಿಗಾಗಿ ನಂಬಿಕೆ ವಿಶ್ವಾಸ, ಹೊಂದಿ ಬಾಳುವ ಗುಣ ಮುಂತಾದ ಸುಖಭಾವದ ಸ್ಥಂಭಗಳೇ ಬಿದ್ದುಹೋಗಿವೆ. ಹೀಗಾಗಿ ಚೆನ್ನಾಗಿ ಬದುಕುತ್ತೇವೆ ಎಂಬ ಭರವಸೆಯೇ ಹೊರಟುಹೋಗುತ್ತಿದೆ. ಆದ್ದರಿಂದ ನಂಬಿಕೆ, ವಿಶ್ವಾಸ, ಪ್ರೀತಿ ಸ್ನೇಹಗಳೆಂಬ ಆಧಾರಸ್ಥಂಭಗಳನ್ನು ಮತ್ತೆ ಮೇಲೆಬ್ಬಿಸಿ ಮನದಲ್ಲಿ ಸ್ಥಿರವಾಗಿ ನಿಲ್ಲುವಂತೆ ಮಾಡುವ ಹೊಸ ಭರವಸೆಗಳನ್ನು ಕಟ್ಟೋಣ. ಭಾಷೆ, ಜಾತಿ, ಮತ, ಧರ್ಮಗಳಲ್ಲಿನ ಭೇದಭಾವಗಳಿಂದ ಜನರಲ್ಲಿ ಅಸಮಾನತೆ, ಅಪನಂಬಿಕೆ, ಅಸ್ಪೃಶ್ಯತೆ ಮೊದಲಾದ ಅಡ್ಡಗೋಡೆಗಳು ನಿರ್ಮಾಣವಾಗಿವೆ. ಅವನ್ನು ಸಮಾನತೆ, ಸ್ನೇಹ, ಪ್ರೀತಿ, ಒಳ್ಳೆಯ ಚಿಂತನೆಗಳ ಮೂಲಕ ಮನುಜರ ನಡುವಿನ ಅಡ್ಡಗೋಡೆಗಳನ್ನು ಕೆಡವಿ ಪರಸ್ಪರರಲ್ಲಿ ನಂಬಿಕೆ ಮೂಡಿಸುವ ಸಹಬಾಳ್ವೆಗೆ ಸೇತುವೆಯಾಗುವ ಸಂಕಲ್ಪ ತೊಡಬೇಕೆಂದು ಕವಿ ಜಿ. ಎಸ್. ಶಿವರುದ್ರಪ್ಪ ಅವರು ಆಶಿಸುತ್ತಾರೆ. ‘ಎಲ್ಲರೂ ಪ್ರೀತಿ ವಿಶ್ವಾಗಳಿಂದ ಬದುಕಬೇಕು’ ಎಂಬ ಮೌಲ್ಯಯುತ ಸಂದೇಶವನ್ನು ಪ್ರಸ್ತುತ ಪದ್ಯವು ತಿಳಿಸುತ್ತದೆ.

ಭಾವಾರ್ಥ : ವಿಶ್ವದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ರಾಷ್ಟçವೆಂದರೆ ಭಾರತವೊಂದೇ. ವೇಷ, ಭಾಷೆ, ಜಾತಿ, ಮತ ಆಚಾರ, ವಿಚಾರ ವಿಚಾರ ಮುಂತಾವುಗಳಲ್ಲಿ ಭಿನ್ನತೆಯಿದ್ದರೂ ನಾವೆಲ್ಲ ಒಂದು. ನಾವು ಭಾರತೀಯರು, ದೇವನೊಬ್ಬ ನಾಮ ಹಲವು ಎನ್ನುವ ಹಾಗೆ, ಎಲ್ಲಾ ಧರ್ಮಗಳು ನಮ್ಮ ಆನಂದದ ಬದುಕಿಗೆ ಬೇಕಾದ ಸನ್ಮಾರ್ಗ ತೋರಿಸುವ ದಾರಿ ದೀವಿಗೆಗಳಾಗಬೇಕೆ ಹೊರತು, ದಾರಿ ತಪ್ಪಿಸುವಂತಾಗಬಾರದು. ನಾವು ಧರ್ಮಗಳ ಹೆಸರಿನಲ್ಲಿ ಏಳುವ ಗಲಭೆಗಳನ್ನು ಹತ್ತಿಕ್ಕಬೇಕು. ಇಂತಹ ಗೊಂದಲಗಳ ಗೊಳಾಟದ ನಡುವೆ ಬಾಳುವ ಜನರಿಗೆ ಮುಂದಿನ ಭವಿಷ್ಯ ತಿಳಿಯದೆ ಮುಂದೇನು? ಎಂಬ ಭಯ ಭೀತಿಯಿಂದ ಬದುಕುತ್ತಾ ನಾಳಿನ ಬದುಕನ್ನು ಸಂಶಯದಿಂದ ನೋಡುತ್ತಿರುವ ಜನರಲ್ಲಿ ಇವುಗಳಿಂದ ಮುಕ್ತರಾಗುವ ಸಂಕಲ್ಪ ಕೈಗೊಂಡು ಭವಿಷ್ಯದ ಹೊಂಗನಸನ್ನು, ಭವ್ಯ ಭಾರತ ನಿರ್ಮಾಣದ ಕನಸನ್ನು ಬಿತ್ತುವ ಮೂಲಕ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಬಹುದೆಂದು ಎಂದು ಕವಿ ಜಿ. ಎಸ್. ಶಿವರುದ್ರಪ್ಪನವರು ಆಶಿಸುತ್ತಾರೆ. ‘ಸಮಾನತೆಯ ತತ್ವ ಮತ್ತು ಭರವಸೆಯ ಬದುಕಿನ’ ಮೌಲ್ಯಯುತ ಸಂದೇಶವನ್ನು ಪ್ರಸ್ತುತ ಪದ್ಯವು ತಿಳಿಸುತ್ತದೆ.

« BACK ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ