10-Kan ಶಬರಿ

RMH

ಗದ್ಯ ಪಾಠ-2 ಶಬರಿ

ಒಂದು ಅಂಕದ ಪ್ರಶ್ನೆಗಳು

ಉತ್ತರ : ಶಬರಿ ಗದ್ಯಪಾಠದ ಸಾಹಿತ್ಯಿಕ ಪ್ರಕಾರ ಗೀತನಾಟಕ.

ಉತ್ತರ : ನಾಟಕವು ಅಭಿನಯ, ದೃಶ್ಯ, ಸಂಭಾಷಣೆ, ಸಂಗೀತಗಳಿಂದ ಪ್ರೇಕ್ಷಕ ಸಹೃದಯರಿಗೆ ಆನಂದವನ್ನು ನೀಡುತ್ತದೆ.

ಉತ್ತರ : ಗದ್ಯ ಪದ್ಯಗಳಿಂದ ಕೂಡಿದ ಗೀತನಾಟಕದಲ್ಲಿ ಗೀತೆಗಳಿಗೆ ಹೆಚ್ಚು ಪ್ರಾಧಾನ್ಯ.

ಉತ್ತರ : ಶಬರಿ ಗೀತನಾಟಕ ರಾಮಾಯಣ ಮಹಾಕಾವ್ಯವನ್ನು ಆಧರಿಸಿದೆ.

ಉತ್ತರ : ಮತಂಗ ಋಷಿಯು ಋಷ್ಯಮೂಕ ಪರ್ವತದ ಬಳಿ ತಪಸ್ಸು ಮಾಡಿಕೊಂಡಿದ್ದರು.

ಉತ್ತರ : ವಾಲಿಯು ದುಂದುಭಿಯೆಂಬ ರಕ್ಕಸನನ್ನು ಕೊಂದು ಮದೋನ್ಮತ್ತನಾಗಿ ಕಳೇಬರವನ್ನು ಆಶ್ರಮಕ್ಕೆ ಎಸೆದಾಗ ಋಷ್ಯಾಶ್ರಮವು ಕಲುಷಿತಗೊಂಡಿತು.

ಉತ್ತರ : ಮತಂಗ ಋಷಿಯು ‘‘ವಾಲಿಯು ಈ ಆಶ್ರಮವನ್ನು ಪ್ರವೇಶ ಮಾಡಿದರೆ ಸಾವು ಸಂಭವಿಸಲಿ’’ ಎಂದು ಶಪಿಸಿದನು.

ಉತ್ತರ : ವಾಲಿಯಿಂದ ಭಯಗ್ರಸ್ತನಾಗಿದ್ದವನು ಸುಗ್ರೀವ.

ಉತ್ತರ : ಜನಕ ರಾಜನಸ್ಥಳ ಮಿಥಿಲೆ.

ಉತ್ತರ: ಜನಕಮಹಾರಾಜನು ಸಂತಾನಫಲಕ್ಕಾಗಿ ಪುತ್ರಕಾಮೇಷ್ಠಿ ಮಾಡಿ ಮಿಥಿಲೆಯಲ್ಲಿ ಭೂಮಿಯನ್ನು ಉಳುಮೆ ಮಾಡುತ್ತಿದ್ದಾಗ ದೊರೆತ ಶಿಶುವೇ ಸೀತೆ.

ಉತ್ತರ : ‘ಭೂಮಿಜಾತೆ’ ಎಂದರೆ ಸೀತೆ.

ಉತ್ತರ : ಚಿತ್ರಕೂಟ ಪರ್ವತವು ಉತ್ತರ ಭಾರತದ ಪಯೋಷ್ಣಿ ನದಿಯ ಪಕ್ಕದಲ್ಲಿದೆ.

ಉತ್ತರ : ಭರತನು ಶ್ರೀರಾಮನನ್ನು ಭೇಟಿಮಾಡಿ ರಾಮನ ಪಾದುಕೆಗಳನ್ನು ಪಡೆದ ಸ್ಥಳ ಚಿತ್ರಕೂಟ.

ಉತ್ತರ : ಶ್ರೀರಾಮನ ತಂದೆಯ ಹೆಸರು ದಶರಥ.

ಉತ್ತರ : ದಶರಥನ ಸ್ಥಳ ಆಯೋಧ್ಯೆ.

ಉತ್ತರ : ಶ್ರೀರಾಮನ ಸಹೋದರರ ಹೆಸರು ಲಕ್ಷ್ಮಣ, ಭರತ, ಶತ್ರುಘ್ನ.

ಉತ್ತರ : ಕೌಸಲ್ಯೆ, ಸುಮಿತ್ರೆ, ಕೈಕೆ ದಶರಥನ ಮಡದಿಯರು.

ಉತ್ತರ : ಲಕ್ಷ್ಮಮಣನ ತಾಯಿಯ ಹೆಸರು ಸುಮಿತ್ರೆ.

ಉತ್ತರ : ಸೌಮಿತ್ರಿ ಎಂದರೆ ಲಕ್ಷ್ಮಣ.

ಉತ್ತರ : ಲಕ್ಷ್ಮಣನು ಸುಮಿತ್ರೆಯ ಮಗನಾದುದರಿಂದ ಅವನನ್ನು ಸೌಮಿತ್ರಿ ಎಂದು ಕರೆಯುತ್ತಾರೆ.

ಉತ್ತರ : ಕಬಂಧ ರಾಕ್ಷಸನು ದಂಡಕಾರಣ್ಯದಲ್ಲಿ ವಾಸಮಾಡುತ್ತಿದ್ದನು.

ಉತ್ತರ : ಕಬಂಧ ರಾಕ್ಷಸನಹಿಂದಿನ ಹೆಸರು ವಿಶ್ವಾಸವಸು.

ಉತ್ತರ : ದನು ಅಪಮಾನಿಸಿದ ಋಷಿಯ ಹೆಸರು ಸ್ಥೂಲಶಿರ.

ಉತ್ತರ : ಇಂದ್ರನ ವಜ್ರಾಯುಧದ ಪ್ರಹಾರದಿಂದ ಕಬಂಧ ರಾಕ್ಷಸನಿಗೆ ಉದರಮುಖನೆಂಬ ಹೆಸರು ಬಂದಿತ್ತು.

ಉತ್ತರ : ರಾಮಲಕ್ಷ್ಮಣರಿಂದ ಕಬಂಧ ರಾಕ್ಷಸನ ಶಾಪ ವಿಮೋಚನೆ ಆಯಿತು.

ಉತ್ತರ : ದನು ಶ್ರೀರಾಮನಿಗೆ ಶಬರಿಯ ವೃತ್ತಾಂತವನ್ನು ತಿಳಿಸಿ, ಸುಗ್ರೀವನ ಸಖ್ಯಮಾಡಿ ಸೀತೆಯನ್ನು ಮರಳಿ ಪಡೆಯಬಹುದು ಎಂಬ ಸಲಹೆಯನ್ನು ನೀಡುತ್ತಾನೆ.

ಉತ್ತರ : ಶಬರಿಯು ಮತಂಗ ಋಷಿಯ ಆಶ್ರಮದಲ್ಲಿ ವಾಸವಿದ್ದಳು.

ಉತ್ತರ : ರಾಮ ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ದನು.

ಉತ್ತರ : ಶ್ರಮಣಿಯಂತ ರೂಪ ಶಬರಿಯದು.

ಉತ್ತರ : ಲಕ್ಷ್ಮಣನು ತಾನು ತನ್ನ ಅಹಂಕಾರಕ್ಕೆ (ಎನ್ನಹಂಕೃತಿಗೆ) ಮನ್ನಣೆ ನೀಡಿದನು ಎಂದನು.

ಉತ್ತರ : ಶ್ರೀರಾಮನಿಗೆ ಸಮರ್ಪಿಸಲು ಶಬರಿ ಹೂವು, ಹಣ್ಣು ಹಂಪಲು, ಮಧುಪರ್ಕ ಮತ್ತು ತಳಿರು ತೋರಣಗಳನ್ನು ಸಂಗ್ರಹಿಸಿದ್ದಳು.

ಉತ್ತರ : ಚೆಂದಳಿರು(ಎಳೆ ಚಿಗುರಿನತಳಿರು) ಬರಿಗಾಳಿಗೆ ಆರಿವೆ ಎಂದು ಶಬರಿ ಹೇಳುತ್ತಾಳೆ.

ಉತ್ತರ : ಹೂವುಗಳು ದುಂಬಿಗಳ ಗುಂಪಿನ ಹೊಗಳಿಕೆ ಸೊರಗಿವೆ ಎಂದು ಶಬರಿ ಹೇಳುತ್ತಾಳೆ.

ಉತ್ತರ : ವನ್ಯಫಲಗಳು ಹುಳುವಿಗೆ ಆಸರೆ ಆಗಿ ರುಚಿ ಕೆಟ್ಟಿವೆ ಎಂದು ಶಬರಿ ಹೇಳುತ್ತಾಳೆ.

ಉತ್ತರ : ಶ್ರೀರಾಮನು ಅರಸುತನವ ತೊರೆದು ತಪಸ್ವಿತನವ ಕೊಂಡನು.

ಉತ್ತರ : ಶ್ರೀರಾಮನಿಗೆ ತಮ್ಮ(ಲಕ್ಮಣ)ನೊಡನೆ ಕಾಡಿಗೆ ಹೋಗಲು ಭಯವು ಇಲ್ಲವಂತೆ.

ಉತ್ತರ : ಶ್ರೀರಾಮನು ಕೆಟ್ಟ ಕನಸಿನ ಇರುಳು ಕಳೆವ ಸುಪ್ರಭಾತದ ಹಾಗೆ ಇರುವವನು ಆಗಿರುವನು.

ಉತ್ತರ : ತನ್ನ ಮನದ ಬಯಕೆಯಂತೆ ಶಬರಿಯ ಶ್ರೀರಾಮನನ್ನು ಮೊದಲು ಕಂಡು ವೈವಿz್ಯsÀ ಸುವಾಸನೆ ನೀಡುವ ವನಮಾಲೆಯನ್ನು ಶ್ರೀರಾಮನ ಕೊರಳಿಗೆ ಹಾಕಿ ಸಂತೋಷ ಪಡುತ್ತಾಳೆ.

ಉತ್ತರ : ಆದರದಿಂದ ಸತ್ಕರಿಸುವ ಶಬರಿಯನ್ನು ರಾಮನು ಅಬ್ಬೆ(ಮಾತೆ) ಎಂದು ತಿಳಿದೆನೆಂದು ಹೇಳುತ್ತಾನೆ.

ಉತ್ತರ : ಶ್ರೀರಾಮನ ರೂಪದಂತೆ ಆತನ ಮಾತು ಕೂಡ ಉದಾರವಾಗಿದೆ ಎಂದು ಶಬರಿ ಹೇಳುತ್ತಾಳೆ.

ಉತ್ತರ : ಶ್ರೀರಾಮನ ದರ್ಶನದಿಂದ ತನ್ನ ಗುರುವಿನ ಪೂಜೆ ಮಾಡಿದ ತೃಪ್ತಿ ಲಭಿಸಿತೆಂದು ಶಬರಿ ಹೇಳುತ್ತಾಳೆ.

ಉತ್ತರ : ಶಬರಿಗೆ ಸಿದ್ಧರ ವರವು ಲಭಿಸಿತು.

ಉತ್ತರ : ಶಬರಿಯು ಶಾಂತಿ ತೋರುವ ಕಾಡಿನ ಮಧ್ಯ ಪ್ರೇಮಶುದ್ಧೆಯಾಗಿರುವಳು ಎಂದು ಶ್ರೀರಾಮನು ತಿಳಿಸುತ್ತಾನೆ.

ಉತ್ತರ : ಶಬರಿಯು ಶ್ರೀರಾಮನಿಗೆ ಪುಣ್ಯಲೋಕ ದೊರೆಯಲೆಂದು ಹರಕೆಯನ್ನು ಇಡಲು ತಿಳಿಸುತ್ತಾಳೆ.

ಉತ್ತರ : ಪ್ರೀತಿಯನ್ನು ತೋರಿದ ಶಬರಿಗೆ ಶ್ರೀರಾಮನು ತಾನು ನೀಡುವ ಕಾಣ್ಕೆ ಸಾವು ಎಂದು ತಿಳಿಸುತ್ತಾನೆ.

ಉತ್ತರ : ಶಬರಿಯು ಪೂಣ್ಕೆ ಮುಕ್ತಿ ಬಯಸುವುದು.

ಉತ್ತರ : ಶ್ರೀರಾಮನು ಒಪ್ಪಿದರೆ ದಿವ(ಸ್ವರ್ಗ) ತಪ್ಪುವುದಿಲ್ಲ ಎಂದು ಶಬರಿ ಹೇಳುತ್ತಾಳೆ.

ಉತ್ತರ : ಬೆಳಕಿಗೆ ಒಲಿದವರು ಉರಿವ ಬತ್ತಿಯ ಕರುಕವನ್ನು ಕಾಣರು.

ಉತ್ತರ : ಶ್ರೀರಾಮನು ಶಬರಿಯು ಪಂಚಭೂತದಲ್ಲಿ “ಬೆರೆಯುತ ಸೀತೆಗೆ ರಕ್ಷನೆಯನ್ನು ಇಡಲಿ ಎಂದು ತಿಳಿಸುತ್ತಾನೆ.

ಉತ್ತರ : ಎಲೆಗಳಿಂದ ಮೇಲ್ಛಾವಣಿ ನಿರ್ಮಿಸಿರುವ ಕುಟೀರವನ್ನು ಪರ್ಣಶಾಲೆ ಎಂದು ಕರೆಯುವರು.

ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )

ಉತ್ತರ : ರಾಮನು ಗಿರಿವನಗಳನ್ನು ಕುರಿತು “ ಗಿರಿವನಗಳೇ, ನಾನು ನಿಮ್ಮನ್ನು ಬೇಡಿಕೊಳ್ಳುವೆನು. ಹೇಳಿರಿ, ಪ್ರೀತಿಯ ರಾಣಿ ಸೀತೆಯು ನನಗೆ ದೊರೆಯುವಳೇ? ಅವಳು ಇರುವ ಸ್ಥಳವನ್ನು ನೀವು ತಿಳಿದಿರುವಿರೇ? ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ” ಎಂದು ಪ್ರಾರ್ಥಿಸಿದನು.

ಉತ್ತರ : ಲಕ್ಷ್ಮಣನು ಸೀತೆಗಾಗಿ ಪರಿತಪಿಸುತ್ತಿದ್ದ ಅಣ್ಣನಾದ ರಾಮನನ್ನು ಕುರಿತು “ತಾಳಿಕೊ ಅಣ್ಣ ತಾಳಿಕೋ, ಸೂರ್ಯನೇ ತೇಜಗೆಡಲು ಕಾಂತಿಯನ್ನು ನೀಡುವವರು ಯಾರು? ರಾಮನೇ ಧೈರ್ಯಗೆಡಲು ಲೋಕಕ್ಕೆ ಸ್ಥೈರ್ಯ ನೀಡುವವರು ಯಾರು?” ಎಂದು ಹೇಳಿ ಸಂತೈಸಿದನು.

ಉತ್ತರ : ರಾಮನ ಸ್ವಾಗತಕ್ಕಾಗಿ ಶಬರಿಯು ಸವಿಯಾದ ಬಗೆಬಗೆಯ ಹಣ್ಣುಗಳನ್ನು, ಜೇನುತುಪ್ಪ ಅಧಿಕವಾಗಿರುವ ಮಧುಪರ್ಕವೆಂಬ ಪಾನೀಯವನ್ನು, ಸುವಾಸನೆಯಿಂದ ಕೂಡಿದ ಬಾಡದ ಹೂವುಗಳನ್ನು ಸಂಗ್ರಹಿಸಿ ಸಿದ್ಧತೆಮಾಡಿಕೊಂಡಿದ್ದಳು.

ಉತ್ತರ : ಶಬರಿಯು ರಾಮ ಲಕ್ಷ್ಮಣರನ್ನು ಕಂಡು ಬೆರಗಾಗಿ, ಹತ್ತಿರಕ್ಕೆ ಬಂದು, ಮೈಯನ್ನು ಮುಟ್ಟಿ, ಕಾಲಿಗೆ ಬಿದ್ದು ನಮಸ್ಕರಿಸಿ, ಕೈಯನ್ನು ಕಣ್ಣಿಗೊತ್ತಿಕೊಂಡಳು. ಮನದಾಸೆಯಂತೆ ಬಗೆಬಗೆಯ ಸುವಾಸನೆಯುಳ್ಳ ಹೂಮಾಲೆಯನ್ನು ಕೊರಳಿಗೆ ಹಾಕಿ ಸಂತಸಪಟ್ಟಳು. ನಂತರ “ಜಗದಲ್ಲಿ ಇದರಷ್ಟು ರುಚಿಯಾದ ಹಣ್ಣೇ ಇಲ್ಲ. ನಿಮಗೆಂದೆ ತಂದೆನು” ಎಂದು ಹೇಳುತ್ತಾ ಸವಿಯಾದ ಹಣ್ಣುಗಳನ್ನು ನೀಡಿ ಉಪಚರಿಸಿದಳು.

ಉತ್ತರ : ಆತಿಥ್ಯ ಸ್ವೀಕರಿಸಿದ ರಾಮ ಲಕ್ಷ್ಮಣರು ಶಬರಿಗೆ “ನಾವು ನಿನ್ನ ಪ್ರೀತಿಯ ಸ್ವಾಗತದಿಂದ ಸಂತಸಗೊಂಡೆವು. ನಿನ್ನ ಸುಖದಲ್ಲಿ ನಮ್ಮ ಸುಖ ಕಂಡೆವು. ಕಣ್ಣಿಗೆ ಕಾಣದ ಆನಂದವನ್ನು ಈ ಕಾಡಿನಲ್ಲಿ ಅನುಭವಿಸುವ ಪುಣ್ಯ ನಮ್ಮದಾಯಿತು. ನಾವು ನಿನಗೆ ಎಂದೆಂದಿಗೂ ಋಣಿಗಳು. ನಿನ್ನ ಈ ಆತಿಥ್ಯದಲ್ಲಿ ಸ್ವಲ್ಪವೂ ಕೊರತೆ ಇಲ್ಲ; ನಮ್ಮ ಅಯೋಧ್ಯ ಅರಮನೆಯಲ್ಲಿ ಇದಕ್ಕೂ ಒಳ್ಳೆಯ ಆತಿಥ್ಯ ದೊರೆಯದು. ಇಂದು ನಾವು ಕಾಡನ್ನು ಮರೆತ್ತಿದ್ದೆವೆ. ಇದನ್ನೇ ನಮ್ಮ ಮನೆಯೆಂದೇ ತಿಳಿದೆವು. ಇಷ್ಟು ಗೌರವ ತೋರುವ ನಿನ್ನನ್ನು ನಮ್ಮ ಮಾತೆ ಎಂದೆ ತಿಳಿದೆವು” ಎಂದು ಹೇಳಿದರು.

ಉತ್ತರ : “ದಶರಥರಾಜನ ಮಗನಾಗಿರುವ ಶ್ರೀರಾಮನು, ಸಾಧುಸಜ್ಜನರ ಸ್ನೇಹಿತ, ಧೀರ ಶೂರ ವೀರ ಗಂಭೀರ ಸದ್ಗುಣಗಳ ಸಾರಿನಂತೆ ಇದ್ದಾನೆ. ಹೆದರಿಸುವವರು ಹೆದರುವರಂತೆ ಬಿಲ್ಲನ್ನು ಹಿಡಿದು ಬರುವ ಶ್ರೀರಾಮನು ಬಹಳ ಸೌಮ್ಯ ಸ್ವಭಾವದವನಾಗಿರುವವನು. ನೋಡಲು ಮಗುವಿನಂತೆ ಕಾಣುವ ಶ್ರೀರಾಮನು ರಾಜ್ಯ ಪದವಿಯನ್ನು ತ್ಯಜಿಸಿ, ತಪಸ್ವೀತನವನ್ನು ಹಿಡಿದು, ತಮ್ಮನಾದ ಲಕ್ಷ್ಮಣನ ಜೊತೆಗೆ ಕಾಡಿಗೆಬಂದಿರುವ ಅವನ ಮನಸ್ಸಿಗೆ ಭಯವೇ ಇಲ್ಲ. ಶ್ರೀರಾಮನು ಕೆಟ್ಟ ಕನಸಿನ ರಾತ್ರಿಯನ್ನು ಕಳೆಯುವಬೆಳಗಿನಜಾವದಂತೆ ಇದ್ದಾನೆ. ಅವನ ಗುರುಗಳು, ಸಿದ್ಧರು ಮೆಚ್ಚಿರುವರು. ಇಂತಹ ಶುಭಕರ ಮೂರ್ತಿಯಾದ ಶ್ರೀರಾಮನನ್ನು ಎಂದು ನಾನು ಕಾಣುತ್ತೇನೆ” ಎಂದು ಶ್ರೀರಾಮನ ಗುಣಗಾನವನ್ನು ಶಬರಿ ಮಾಡುತ್ತಾಳೆ.

ಉತ್ತರ : “ನಿನ್ನ ಎಳೆಯತನ ಕೋಮಲತೆಯನ್ನು ಅವನು ಮುಟ್ಟಲೂ ನೀಡದೆ ಬರಿಗಾಳಿಗೆ ಒಣಗಿರುವ ನಿನ್ನೆಯ ಕೆಂಪಾದ ಚಿಗುರೇ, ದುಂಬಿ ಸಮೂಹದ ಹೊಗಳುವಿಕೆಗೆ ಆಶ್ರಯವಾದ ಸುವಾಸನೆಯಿಂದ ರಾಮನಜೀವವನ್ನು ಉತ್ತೇಜಿಸದೇ ಬಾಡಿದ ಹೂವುಗಳೇ, ಅವನ ಜೀವನಾಹಾರಕ್ಕೆ ದೊರೆಯದ ರುಚಿ ಹದ ಕೆಟ್ಟು ಹುಳುವಿಗೆ ಆಸರೆಯಾದ ಎಲೆ ಕಾಡಿನ ಹಣ್ಣುಗಳೇ, ಬಳಸಲಾಗದೆ ಹೀಗೆ ಮಲೀನವಾಗುತ್ತಿರುವ ಇವುಗಳನ್ನು ಮತ್ತೆಮತ್ತೆ ಹೊಸತರಿಂದ ಸಿದ್ಧಮಾಡುವ ಹಠವೇ” ಎಂದು ಶಬರಿಯು ರಾಮನಿಗೊಸ್ಕರ ತಂದಿರುವ ಹೂವು, ಹಣ್ಣು, ತಳಿರುಗಳನ್ನು ಉದ್ದೇಶಿಸಿ” ಹಾಡುವಳು.

ಉತ್ತರ : “ಸುಖಿ ನಾನು ಸುಖಿ ನಾನು ಪರಮ ಸುಖಿ ನಾನು. ನಾನು ಸುಖಿರಾಗಿರಲು ಕಾರಣವೇ ಇಲ್ಲ. ನಾನು(ಅಹಂ) ಎಂಬುದು ಹೋಗಿ ಈಗ ನಾನು ಆಗಿರುವೆನು. ಆಸೆಗಳೆಲ್ಲ ತೀರಿಹೋಗಿ ಹಾಯಾಗಿರುವೆನು. ಮನದ ಹಂಬಲವು ಕೊಡ ನಾಶವಾಗಿ ಸುಖದಿಂದ ತುಂಬಿಕೊಂಡಿರುವೆನು. ನನ್ನ ಮನವು ನದಿ ಸಮುದ್ರಕ್ಕೆ ಸೇರುವ ರೀತಿಯಲ್ಲಿ, ದೋಣಿಯು ಬಂದರಿಗೆ ತಲುಪುವ ರೀತಿಯಲ್ಲಿ ವಿವಿಧ ಹಾರೈಕೆಯ ನೌಕೆಗೆ ಕಟ್ಟುವ ಹಾಯಿ ಇಳಿಸಿ ನಿಂತಿದೆ. ಇದೆ ನನಗೆ ಮುಕ್ತಿಯನಿಸಿದೆ. ನಿಮ್ಮನ್ನು ನೋಡುತ, ನಿಮ್ಮನ್ನು ಮಾತನಾಡಿಸುತ್ತ ಸುಖಿಯಾಗಿರುವ ನಾನು, ನಿಮ್ಮ ತೃಪ್ತಿಯಲ್ಲಿ, ಆನಂದದಲ್ಲಿ ಸುಖಕಾಣುತ್ತಿರುವೆ. ಇಂದು ನಾನು ಬಹಳ ಹಗುರ ಆಗಿರುವೆನು. ಪರಲೋಕ (ದೇವರು) ತನ್ನ ಕೈಯ ನೀಡಿ ನನ್ನನ್ನು ಕರೆದಿರುವುದು. ನಿನ್ನೆ ನಾಳೆ ನನಗೆ ಇನ್ನಿಲ್ಲ. ಈ ಆನಂದವೇ ಶಾಶ್ವತವೆಂಬ ರೀತಿಯಲ್ಲಿ ನಾನು ಸುಖಿಯಾಗಿರುವೆ” ಎಂದು ಶ್ರೀರಾಮ ಲಕ್ಷ್ಮಣರಿಗೆ ಉಪಚಾರವನ್ನು ಮಾಡಿದ ಶಬರಿ ತನ್ನ ಅಂತರಂಗದ ಸುಖವನ್ನು ತೋರುವುದಕ್ಕೆ ಹಾಡಿಕೊಂಡು ನರ್ತಿಸುತ್ತಾಳೆ.

ಉತ್ತರ : ಶ್ರೀರಾಮ ಲಕ್ಷ್ಮಣರು ಆಶ್ರಮವನ್ನು ಪ್ರವೇಶಿಸಿದಾಗ ಆಶ್ರಮದ ದೂರದಲ್ಲಿ, ಹಿಂಬದಿಗೆ ವೇದಿಕೆ ಮತ್ತು ಅದರ ಸುತ್ತ ಆಶ್ರಮದ ಸಿದ್ಧರು ಅಲಂಕರಿಸಿ ಹೋದ ಹೂವು ಇನ್ನೂ ಒಣಗದಂತಿದ್ದವು. ಯಜ್ಞ ಮಾಡುವ ಸ್ಥಳದಲ್ಲಿ ಅಗ್ನಿ ಹೊಗೆಯಾಡುತ್ತಿತ್ತು. ಶಬರಿ ನಿನ್ನೆ ರಾಮನಿಗೆಂದು ಆರಿಸಿ ತಂದ, ಈಗ ಬಾಡಿ ಹೋಗಿರುವ ಹೂವು, ಹಣ್ಣು, ತಳಿರುಗಳನ್ನು ವಿಂಗಡಿಸುತ್ತಾ ಅವುಗಳ ಜಾಗದಲ್ಲಿ ಹೊಸದನ್ನು ಇಡುತ್ತಾ ಇದ್ದಳು.

ಉತ್ತರ : ಶ್ರೀರಾಮಲಕ್ಷಣರನ್ನು ಉಪಚರಿಸಿದ ನಂತರ ಶಬರಿ ಅವರನ್ನು ಕುರಿತು “ನನಗೆ ಬಹಳ ಸಂತೋಷವಾಗಿದೆ. ನನ್ನ ಆಸೆಯ ಸುಳಿವನ್ನು ಹಿಡಿದು ನೀವು ಬಂದಿರುವಿರೇ? ಕೊನೆಗೆ ಆಯಾಸಗೊಂಡಿರುವಿರೇನು ಅಯ್ಯ? ಸಮಾಧಾನ ಹೊಂದಿದಿರಾ, ಹಸಿವು ಬಾಯಾರಿಕೆಯನ್ನು ತೊರೆದಿರಾ? ಬಡವಳು, ಒಬ್ಬಳೇ ಏನನ್ನು ಮಾಡುವಳು, ಎಂದು ನನ್ನ ಮೇಲೆ ಮರುಕ ಹೊಂದಿರುವಿರಾ?” ಎಂದು ಪ್ರಶ್ನಿಸಿದಳು.

ಉತ್ತರ : ಶಬರಿಯು “ಕೋಟಿಕಿರಣರಗಳಿಂದ ಸೂರ್ಯನು ಎತ್ತಿರುವ ಈ ಆಕಾಶದ ಹೊರಗೆ ನನ್ನ ಗಮನ, ಈ ಮಾಯೆಯೆಂಬ ಅಜ್ಞಾನದ ಹೊರಗೆ ನನ್ನ ಪ್ರಯಾಣ. ಈ ಹಕ್ಕಿಗಳ ಹಾಗೆ ಹಾರಲು ಬಯಸುವುದಿಲ್ಲ, ಈ ಬಿಳಿಮುಗಿಲಂತೆ ತೇಲಲು ಬಯಸುವುದಿಲ್ಲ. ಕಾರ್ಮೋಡವನ್ನು ಸೆಳೆಯುವ ಮಿಂಚಿನ ರೀತಿಯಲ್ಲಿ ಹೀಗೆಯೇ ಈ ಜೀವನವನ್ನು ಬಿಡಲು ನಾನು ಬಯಸಿರುವೆನು” ಎಂದು ತಿಳಿಸುತ್ತಾಳೆ.

ಉತ್ತರ : ಶಬರಿಯು ಮೋಕ್ಷವನ್ನು ಶ್ರೀರಾಮನಬಳಿ ಬೇಡಿದಾಗ ರಾಮನು “ತಾಯಿಯ ರೀತಿಯಲ್ಲಿ ನೀನು ನಮ್ಮನ್ನು ಗೌರವಿಸಿದೆ. ನಂತರ ಈ ರೀತಿ ನುಡಿಯಿತ್ತಿರುವೆಯಲ್ಲ, ನಿನಗೆ ಈ ಆಲೋಚನೆ ಸರಿಯೇ? ಇಷ್ಟು ಪ್ರೀತಿಯನ್ನು ಮಾಡಿದ ನಿನಗೆ ನಾವು ನೀಡುವ ಕಾಣಿಕೆ ಸಾವು ಎಂಬುದಾಗಿದೆ. ಈ ಕಾರ್ಯಕ್ಕೆ ನನ್ನ ಮನವು ಒಪ್ಪಿದರೂ ಹೃದಯ ಒಪ್ಪುತ್ತಿಲ್ಲವಲ್ಲಾ” ಎಂದು ತಿಳಿಸುತ್ತಾನೆ. ಆಗ ಶಬರಿ “ ಪ್ರಭುವೇ ನನಗೆ ಪುಣ್ಯಲೋಕವು (ಸ್ವರ್ಗಲೋಕ) ದೊರೆಯಲಿ ಎಂದು ಹರಕೆಯಿಡು. ಅದು ಸಾವಲ್ಲ, ಮೋಕ್ಷ. ಇದೇ ನನ್ನ ಬಯಕೆಯಾಗಿದೆ. ಅಲ್ಲದೆ ನೀವು ಮೆಚ್ಚಿ ಒಪ್ಪಿದರೆ ಸ್ವರ್ಗವು ತಪ್ಪುವುದಿಲ್ಲವಲ್ಲಾ” ಎಂದು ತಿಳಿಸುತ್ತಾಳೆ. ಆಗ ರಾಮನು “ನಾನು ನಿನಗೆ ಬೆರಗಾಗಿರುವೆನು. ಆಗಲಿ ಎನ್ನುವೆನು ನಿನ್ನಯ ಪ್ರೀತಿಗೆ. ಆಗಲಿ ಹೋಗು ತಾಯಿ ನಿನ್ನ ಬಯಕೆಯ ಸಿದ್ಧಿಗಾಗಿ” ಎಂದು ಆಶೀರ್ವದಿಸುತ್ತಾನೆ.

ಉತ್ತರ : ಶ್ರೀರಾಮನು ಶಬರಿಗೆ ನಿನ್ನ ಬಯಕೆ ಸಿದ್ದಿಸಲಿ ಎಂದು ಆಶೀರ್ವದಿಸುತ್ತಾನೆ ಆಗ ಶಬರಿಯು ನಮಸ್ಕಾರ! ನಿಮಗೆ ನಮಸ್ಕಾರ. ಈ ಕಾಡಿಗೆ ನಮಸ್ಕಾರ. ಈ ಬೆಟ್ಟಕ್ಕೆ ನಮಸ್ಕಾರ. ಎಲ್ಲರಿಗೂ, ಎಲ್ಲಕ್ಕೂ ಶರಣು ಎಂದು ಹೇಳಿ ಯಜ್ಞವೇದಿಕೆಯಲ್ಲಿ ಉರಿಯುತ್ತಿರುವ ಬೆಂಕಿಯನ್ನು ಪ್ರದಕ್ಷಿಣೆ ಹಾಕಿ ಹಾಡುತ್ತಾ ಪ್ರವೇಶಿಸುತ್ತಾಳೆ.

ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ (3 ಅಂಕ)

ಆಯ್ಕೆ :- ಈ ವಾಕ್ಯವನ್ನು ಲೇಖಕರಾದ ‘ಪು. ತಿ. ನರಸಿಂಹಾಚಾರ್’ ಅವರು ರಚಿಸಿರುವ ‘ಶಬರಿ’ ಗೀತನಾಟಕದ ‘ಶಬರಿ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :- ಸೀತಾಪಹರಣದ ಅನಂತರ ಶೋಕತಪ್ತರಾದ ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಬರುವಾಗ, ಮಾರ್ಗದ ಮಧ್ಯ ಭೇಟಿಯಾದ ದನುವಿನ ಸೂಚನೆಯಂತೆ ಮತಂಗಾಶ್ರಮವನ್ನು ಪ್ರವೇಶಿಸುತ್ತಾರೆ. ಆ ಸಂದರ್ಭದಲ್ಲಿ ಎದುರಿಗೆ ಬರುತ್ತಿದ್ದ ವೃದ್ಧೆ (ಶಬರಿ) ಯನ್ನು ಕಂಡು ರಾಮನು ಲಕ್ಷ್ಮಣನಿಗೆ ಈ ಮಾತನ್ನು ಹೇಳುತ್ತಾನೆ
ಸ್ವಾರಸ್ಯ :- ಶ್ರೀರಾಮನ ಬರುವಿಕೆಗಾಗಿ ಕಾದು, ಹಂಬಲಿಸಿ, ಮರುಳಳಂತೆ ಆಗಿದ್ದ ವೃದ್ಧೆ ಶಬರಿಯನ್ನು ಕಂಡು ಲಕ್ಷ್ಮಣನೊಡನೆ ರಾಮನು ಭಯಗೊಂಡ ಸ್ವಾರಸ್ಯ ಈ ಮಾತಿನಲ್ಲಿ ವರ್ಣಿತವಾಗಿದೆ.

ಆಯ್ಕೆ :- ಈ ವಾಕ್ಯವನ್ನು ಲೇಖಕರಾದ ‘ಪು. ತಿ. ನರಸಿಂಹಾಚಾರ್’ ಅವರು ರಚಿಸಿರುವ ‘ಶಬರಿ’ ಗೀತನಾಟಕದ ‘ಶಬರಿ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :- ಶ್ರೀರಾಮನು ಶಬರಿಯನ್ನು ಮತಂಗಾಶ್ರಮದಲ್ಲಿ ಕಂಡು, ತನ್ನ ಬರುವಿಕೆಗಾಗಿ ಹಂಬಲಿಸುತ್ತಿದ್ದ ಶಬರಿಗೆ ತನ್ನಿಂದ ಸ್ವಲ್ಪವೂ ಉಪಕಾರವಿಲ್ಲದಿದ್ದರೂ, ತನ್ನನ್ನು ಪ್ರೀತಿಯಿಂದ ನೆನೆಯುತ್ತಿರುವುದು ಸೋಜಿಗವೆನಿಸಿದೆ ಎಂದು ಲಕ್ಷ್ಮಣನಿಗೆ ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ :- ಪೂಜ್ಯೆಯಾದ ಶಬರಿಯು ತನ್ನನ್ನು ಪ್ರೀತಿಯಿಂದ ನೆನೆಯುತ್ತ, ಬರುವಿಕೆಗಾಗಿ ಭಕ್ತಿಯಿಂದ ಹಂಬಲಿಸುತಿರುವ ದೃಶ್ಯವನ್ನು ನೋಡಿ ರಾಮನು “ಅವಳ ಅನುರಾಗನ್ನು ಕಂಡು ನಾಚಿದೆನು” ಎಂದು ಹೇಳಿರುವುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.

ಆಯ್ಕೆ :- ಈ ವಾಕ್ಯವನ್ನು ಲೇಖಕರಾದ ‘ಪು. ತಿ. ನರಸಿಂಹಾಚಾರ್’ ಅವರು ರಚಿಸಿರುವ ‘ಶಬರಿ’ ಗೀತನಾಟಕದ ‘ಶಬರಿ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :- ಶ್ರೀರಾಮನು ಲಕ್ಷ್ಮಣನೊಡನೆ ಮತಂಗಾಶ್ರಮವನ್ನು ಪ್ರವೇಶಿಸಿಸುತ್ತಾನೆ. ಆ ಸಂದರ್ಭದಲ್ಲಿ “ಎಂದು ಕಾಣುವೆನು ಶ್ರೀರಾಮನನ್ನು ಸನ್ಮಂಗಳ ಮೂರುತಿಯನ್ನು” ಎಂದು ಹಾಡುತ್ತ ಶ್ರೀರಾಮನಿಗೆ ಹಂಬಲಿಸುತ್ತಿರುವ ಶಬರಿಗೆ ರಾಮನು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ :-ತನಗಾಗಿ ಹಂಬಲಿಸುತ್ತಿರುವ ಶಬರಿಗೆ ರಾಮನು ಏನೂ ಅರಿಯದವನಂತೆ “ದಾರಿಗರಾದ ನಮಗೆ ಇಲ್ಲಿ ಉಳಿದುಕೊಳ್ಳಲು ಸ್ಥಳಾವಕಾಶ ದೊರೆಯುವುದೇ?” ಎಂದು ಕೇಳಿರುವುದು ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.

ಆಯ್ಕೆ :- ಈ ವಾಕ್ಯವನ್ನು ಲೇಖಕರಾದ ‘ಪು. ತಿ. ನರಸಿಂಹಾಚಾರ್’ ಅವರು ರಚಿಸಿರುವ ‘ಶಬರಿ’ ಗೀತನಾಟಕದ ‘ಶಬರಿ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :- ಶ್ರೀರಾಮನು ಶಬರಿಯ ಅತಿಥಿ ಸತ್ಕಾರದಪರಿಯನ್ನು ಕುರಿತು “ನಿನ್ನ ಆತಿಥ್ಯದ ಸವಿಯು ಅಯೋಧ್ಯೆಯ ಅರಮನೆಯ ಆತಿಥ್ಯಕ್ಕಿಂತ ಮಿಗಿಲಾದುದು, ಇಷ್ಟೊಂದು ಪ್ರೀತಿಯನ್ನು ತೋರುವ ನಿನ್ನನ್ನು ನಾನು ತಾಯಿ ಎಂದು ತಿಳಿದಿದ್ದೇನೆ” ಎಂದು ನುಡಿದ ಸಂದರ್ಭದಲ್ಲಿ ಶಬರಿಯು ಈ ಮಾತನ್ನು ಹೇಳುತ್ತಾಳೆ.
ಸ್ವಾರಸ್ಯ :- ಶಬರಿಯ ಈ ಮಾತಿನಲ್ಲಿ “ರಾಮನ ಪ್ರೀತಿಯ ಮಾತುಗಳು ಅವನ ರೂಪಿನಂತೆ ಮಧುರವಾದುದು” ಎಂದು ಹೇಳುವ ಮೂಲಕ ರಾಮನ ವ್ಯಕ್ತಿತ್ವವನ್ನು ಬಹುಸ್ವಾರಸ್ಯಪೂರ್ಣವಾಗಿ ವರ್ಣಿಸಿದ ಬಗೆ ವ್ಯಕ್ತಗೊಂಡಿದೆ.

ಆಯ್ಕೆ :- ಈ ವಾಕ್ಯವನ್ನು ಲೇಖಕರಾದ ‘ಪು. ತಿ. ನರಸಿಂಹಾಚಾರ್’ ಅವರು ರಚಿಸಿರುವ ‘ಶಬರಿ’ ಗೀತನಾಟಕದ ‘ಶಬರಿ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :- ಶ್ರೀರಾಮನ ದರ್ಶನ ಭಾಗ್ಯದಿಂದ ಶಬರಿಯು ಸಂತುಷ್ಟಳಾಗುತ್ತಾಳೆ. ನಂತರ ಮುಕ್ತಿಯನ್ನು ಪಡೆಯುವುದಕ್ಕಾಗಿ ಆಕೆಯು ಅಗ್ನಿಯನ್ನು ಪ್ರವೇಶಿಸುವಳು. ಆ ಸಂದರ್ಭದಲ್ಲಿ ಅಗ್ನಿ ಪ್ರವೇಶ ಮಾಡಿದ ಶಬರಿಯ ಭಕ್ತಿಯ ಅನನ್ಯತೆಯನ್ನು ರಾಮನು ಲಕ್ಷ್ಮಣನಿಗೆ ತಿಳಿಸುತ್ತ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ :- ಶಬರಿಯ ರಾಮಭಕ್ತಿಯ ಶ್ರೇಷ್ಠತೆಯ ಸ್ವಾರಸ್ಯ ಈ ಮಾತಿನಲ್ಲಿ ಅರ್ಥಪೂರ್ಣವಾಗಿ ಬಿಂಬಿತವಾಗಿದೆ.

ಆಯ್ಕೆ :- ಈ ವಾಕ್ಯವನ್ನು ಲೇಖಕರಾದ ‘ಪು. ತಿ. ನರಸಿಂಹಾಚಾರ್’ ಅವರು ರಚಿಸಿರುವ ‘ಶಬರಿ’ ಗೀತನಾಟಕದ ‘ಶಬರಿ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :- ಶಬರಿಯ ಆಶ್ರಮದ ಬಳಿಗೆ ಬಂದ ಶ್ರೀರಾಮನು ಗಿರಿವನಗಳನ್ನು ಕುರಿತು “ಗಿರಿವನಗಳೇ, ನಾನು ನಿಮ್ಮನ್ನು ಬೇಡಿಕೊಳ್ಳುವೆನು. ಹೇಳಿರಿ, ಪ್ರೀತಿಯ ರಾಣಿ ಸೀತೆಯು ನನಗೆ ದೊರೆಯುವಳೇ? ಅವಳು ಇರುವ ಸ್ಥೈರ್ಯವನ್ನು ನೀವು ತಿಳಿದಿರುವಿರೇ? ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ” ಎಂದು ಸೀತೆಗಾಗಿ ಹಂಬಲಿಸುತ್ತಾ ಪ್ರಾರ್ಥಿಸಿದನು. ಆಗ ಶ್ರೀರಾಮನಿಗೆ ಸಮಾಧಾನಪಡಿಸುತ್ತ ಲಕ್ಷ್ಮಣನು ಈ ಮೇಲಿನಮಾತನ್ನು ಹೇಳುವನು.
ಸ್ವಾರಸ್ಯ :- ಜಗತ್ತಿಗೆ ಬೆಳಕು ನೀಡುವ ಸೂರ್ಯನ ಹಾಗೆ ಅಖಿಲ ಲೋಕಕ್ಕೆ ಪ್ರಜಾರಕ್ಷಕನಾಗಿರುವ ಅಯೋಧ್ಯೆಯ ಅಧಿಪತಿ ಶ್ರೀರಾಮನು ಧೈರ್ಯವನ್ನು ಕಳೆದುಕೊಂಡರೇ, ಲೋಕದ ಗತಿಯೇನು? ಎಂದು ಲಕ್ಷ್ಮಣನು ಪ್ರಶ್ನಿಸಿರುವ ಮೇಲಿನ ಮಾತಿನಲ್ಲಿ ಶ್ರೀರಾಮನ ಶ್ರೇಷ್ಠತೆ ಅರ್ಥಪೂರ್ಣವಾಗಿ ಬಿಂಬಿತವಾಗಿದೆ.

ಆಯ್ಕೆ :- ಈ ವಾಕ್ಯವನ್ನು ಲೇಖಕರಾದ ‘ಪು. ತಿ. ನರಸಿಂಹಾಚಾರ್’ ಅವರು ರಚಿಸಿರುವ ‘ಶಬರಿ’ ಗೀತನಾಟಕದ ‘ಶಬರಿ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :- ಶಬರಿಯು ರಾಮನಿಗೋಸ್ಕರ ತಂದಿರುವ ಹೂವು, ಹಣ್ಣು ತಳಿರುಗಳನ್ನು ಉದ್ದೇಶಿಸಿ“ನಿನ್ನ ಎಳತೆಯ ಕೋಮಲತೆಯನ್ನು ಅವನು ಮುಟ್ಟಲೂ ನೀಡದೇ ಬರಿಗಾಳಿಗೆ ಒಣಗಿರುವ ನಿನ್ನೆಯ ಕೆಂಪಾದ ಚಿಗುರೆ, ದುಂಬಿ ಸಮೂಹದ ಹೊಗಳುವಿಕೆಗೆ ಆಶ್ರಯವಾದ ಸುವಾಸನೆಯಿಂದ ರಾಮನ ಜೀವವನ್ನು ಉತ್ತೇಜಿಸದೇ ಬಾಡಿದ ಹೂವುಗಳೇ, ಅವನ ಜೀವನಾಹಾರಕ್ಕೆ ದೊರೆಯದ ರುಚಿ ಹದ ಕೆಟ್ಟು ಹುಳುವಿಗೆ ಆಸರೆಯಾದ ಎಲೆ ಕಾಡಿನ ಹಣ್ಣುಗಳೇ, ಬಳಸಲಾಗದೆ ಹೀಗೆ ಮಲೀನವಾಗುತ್ತಿರುವ ಇವುಗಳನ್ನ ಮತ್ತೆಮತ್ತೆ ಹೊಸತರಿಂದ ಸಿದ್ಧಮಾಡುವ ಹಠವೇ” ಎಂದು ಹಾಡುವ ಸಂದರ್ಭದಲ್ಲಿ ಮೇಲಿನ ಮಾತನ್ನು ಹೇಳಿರುವಳು.
ಸ್ವಾರಸ್ಯ :- ಶ್ರೀರಾಮನಿಗಾಗಿ ಹಂಬಲ ಪಡುವ ಶಬರಿಯ ಮುಗ್ಧತೆ, ಶ್ರೀರಾಮನ ದರ್ಶನ ನಿಶ್ಚಿತ ಎಂಬ ಅಚಲವಾದ ನಂಬಿಕೆ ಮತ್ತು ನಿಷ್ಠೆ ಪ್ರಸ್ತುತ ಮಾತಿನಲ್ಲಿ ಅರ್ಥಪೂರ್ಣವಾಗಿ ಬಿಂಬಿತವಾಗಿದೆ.

ಆಯ್ಕೆ :- ಈ ವಾಕ್ಯವನ್ನು ಲೇಖಕರಾದ ‘ಪು. ತಿ. ನರಸಿಂಹಾಚಾರ್’ ಅವರು ರಚಿಸಿರುವ ‘ಶಬರಿ’ ಗೀತನಾಟಕದ ‘ಶಬರಿ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :- ಶಬರಿಯ ನಂಬಿಕೆಯಂತೆ ಶ್ರೀರಾಮ ಲಕ್ಷ್ಮಣರು ಶಬರಿ ಇರುವ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಆಶ್ರಮ ಪ್ರವೇಶಿಸಿದ ಶ್ರೀರಾಮಲಕ್ಷ್ಮಣರನ್ನು ಕಂಡ ಶಬರಿ ಪರಮಾನಂದದಿಂದ ಅವರನ್ನು ಬರಮಾಡಿಕೊಳ್ಳುತ್ತಾಳೆ. ಶ್ರೀರಾಮನ ಸ್ಪರ್ಶಮಾಡಿ ಸಂತಸ ಪಡುವಳು. ನಂತರ ತನ್ನ ಮನದ ಬಯಕೆಯಂತೆ ಶ್ರೀರಾಮನ ಕೊರಳಿಗೆ ಬಗೆಬಗೆಯ ಸುವಾಸನೆನೀಡುವ ವನಮಾಲೆಯನ್ನು ಹಾಕಿ ಸಂಭ್ರಮಿಸುವ ಸಂದರ್ಭದಲ್ಲಿ ಈ ಮೇಲಿನ ಮಾತನ್ನು ಶಬರಿಯು ಶ್ರೀರಾಮಲಕ್ಷ್ಮಣರಿಗೆ ಹೇಳುತ್ತಾಳೆ
ಸ್ವಾರಸ್ಯ :- ಶ್ರೀರಾಮಲಕ್ಷ್ಮಣರ ಆಗಮನಕ್ಕಾಗಿ ಪ್ರತಿನಿತ್ಯದಂತೆ ಸಿದ್ಧತೆ ಮಾಡಿಕೊಂಡಿದ್ದರೂ, ತಾನೂ ಏನೂ ಸಿದ್ಧತೆ ಮಾಡಿಕೊಂಡಿಲ್ಲ ಎಂದು ತಿಳಿಸುವ ಶಬರಿಯ ಈ ಮಾತಿನಲ್ಲಿ ಆಕೆಯ ಮುಗ್ಧತೆ ಮತ್ತು ಆತಿಥ್ಯದ ರೀತಿ ಅರ್ಥಪೂರ್ಣವಾಗಿ ಮೂಡಿಬಂದಿದೆ.

ಆಯ್ಕೆ :- ಈ ವಾಕ್ಯವನ್ನು ಲೇಖಕರಾದ ‘ಪು. ತಿ. ನರಸಿಂಹಾಚಾರ್’ ಅವರು ರಚಿಸಿರುವ ‘ಶಬರಿ’ ಗೀತನಾಟಕದ ‘ಶಬರಿ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :- ಶಬರಿಯ ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ “ನಾವು ನಿನ್ನ ಪ್ರೀತಿಯ ಸ್ವಾಗತದಿಂದ ಸಂತಸಗೊಂಡೆವು. ನಿನ್ನ ಸುಖದಲ್ಲಿ ನಮ್ಮ ಸುಖ ಕಂಡೆವು. ಕಣ್ಣಿಗೆ ಕಾಣದ ಆನಂದವನ್ನು ಈ ಕಾಡಿನಲ್ಲಿ ಅನುಭವಿಸುವ ಪುಣ್ಯ ನಮ್ಮದಾಯಿತು. ನಾವು ನಿನಗೆ ಎಂದೆಂದಿಗೂ ಋಣಿಗಳು” ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತನ್ನು ಹೇಳುವರು.
ಸ್ವಾರಸ್ಯ:- ಶ್ರೀರಾಮಲಕ್ಷ್ಮಣರ ಈ ಮಾತಿನಲ್ಲಿ ಅವರ ಸರಳ ಸಜ್ಜನಿಕೆ ಹಿತ-ಮಿತ ಮೃದುವಚನ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.

ಆಯ್ಕೆ :- ಈ ವಾಕ್ಯವನ್ನು ಲೇಖಕರಾದ ‘ಪು. ತಿ. ನರಸಿಂಹಾಚಾರ್’ ಅವರು ರಚಿಸಿರುವ ‘ಶಬರಿ’ ಗೀತನಾಟಕದ ‘ಶಬರಿ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :- ಶಬರಿಯು ಮೋಕ್ಷವನ್ನು ಶ್ರೀರಾಮನ ಬಳಿ ಬೇಡಿದಾಗ ರಾಮನು “ತಾಯಿಯ ರೀತಿಯಲ್ಲಿ ನೀನು ನಮ್ಮನ್ನು ಗೌರವಿಸಿದೆ. ನಂತರ ಈ ರೀತಿ ನುಡಿಯಿತ್ತಿರುವೆಯಲ್ಲ, ನಿನಗೆ ಈ ಆಲೋಚನೆ ಸರಿಯೇ? ಇಷ್ಟು ಪ್ರೀತಿಯನ್ನು ತೋರಿದ ನಿನಗೆ ನಾವು ನೀಡುವ ಕಾಣಿಕೆ ಸಾವು ಎಂಬುದಾಗಿದೆ” ಎಂದು ತಿಳಿಸುವನು. ಆಗ ಶಬರಿಯು “ಅದು ಸಾವಲ್ಲ, ಮೋಕ್ಷ ಇದೇ ನನ್ನ ಬಯಕೆಯಾಗಿದೆ” ಎಂದು ತಿಳಿಸುತ್ತಾಳೆ. ಆ ಸಂದರ್ಭದಲ್ಲಿ ಶ್ರೀರಾಮನು ಈ ಮೇಲಿನ ಮಾತನ್ನು ಶಬರಿಗೆ ಹೇಳುವನು.
ಸ್ವಾರಸ್ಯ :- ತನ್ನ ಆರಾಧ್ಯದೈವ ಶ್ರೀರಾಮನನ್ನು ಕಂಡು ಆನಂದಿಸಿ, ಧನ್ಯತೆಯತೆಯ ಭಾವನೆಯಿಂದ ಮುಕ್ತಿಯನ್ನು ಬಯಸಿದ ಶಬರಿಗೆ ಶ್ರೀರಾಮನು ಹೇಳುವ ಈ ಮೇಲಿನ ಮಾತಿನಲ್ಲಿ ಶಬರಿಯ ಬಗೆಗೆ ಶ್ರೀರಾಮನಿಗಿರುವ ಕಾಳಜಿ ಅರ್ಥಪೂರ್ಣವಾಗಿ ಮೂಡಿಬಂದಿದೆ.

ಲೇಖಕರ ಪರಿಚಯ(3 ಅಂಕ)

ಪು. ತಿ. ನರಸಿಂಹಾಚಾರ್ : ಕನ್ನಡ ನವೋದಯದ ಪ್ರಮುಖ ಕವಿ ಪು.ತಿ.ನ. ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಶ್ರೀ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಹಾಚಾರ್ ಅವರು ಕ್ರಿ.ಶ. 1905 ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು. ಗೀತನಾಟಕ, ಕವಿತೆ, ಸಣ್ಣಕತೆ, ಪ್ರಬಂಧ, ವಿಚಾರಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿರುವ ಇವರು,ಶಬರಿ (ಗೀತನಾಟಕ) ಅಹಲ್ಯ, ವಿಕಟಕವಿವಿಜಯ, ಹಂಸದಮಯಂತಿ ಮತ್ತು ಇತರ ರೂಪಕಗಳು, ಹಣತೆ, ರಸಸರಸ್ವತಿ, ಗಣೇಶದರ್ಶನ ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ವಿಶ್ವಕೋಶದ ಭಾಷಾಂತರಕಾರರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಂಘಟು ಸಂಪಾದಕರಾಗಿ ಸೇವೆಸಲ್ಲಿಸಿರುವ ಶ್ರೀಯುತರ ‘ಶ್ರೀಹರಿಚರಿತೆ’ ಕೃತಿಗೆ ಪಂಪ ಪ್ರಶಸ್ತಿ, ‘ಹಂಸದಮಯಂತಿ ಮತ್ತು ಇತರ ರೂಪಕಗಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್. ಪದವಿ ಮತ್ತು 1981ರಲ್ಲಿ ಚಿಕ್ಕಮಂಗಳೂರಿನಲ್ಲಿ ನಡೆದ 53ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯ ಗೌರವಗಳು ಇವರಿಗೆ ಸಂಧಿವೆ.

ಎಂಟು-ಹತ್ತು ವಾಕ್ಯದಲ್ಲಿ ಉತ್ತರ ಬರೆಯಿರಿ(4 ಅಂಕ)

ಉತ್ತರ : : ಮ***

« BACK ಮುಂದಿನ ಅಧ್ಯಾಯ

THANK U
RMH-9731734068

2 ಕಾಮೆಂಟ್‌ಗಳು: