ಗದ್ಯ ಪಾಠ-7 ವೃಕ್ಷಸಾಕ್ಷಿ
ಒಂದು ಅಂಕದ ಪ್ರಶ್ನೆಗಳು
ಉತ್ತರ: ಬೇರೆ ಬೇರೆ ಊರಿಗಳಿಗೆ ಹೋಗಿ, ವ್ಯಾಪಾರವನ್ನು ಮಾಡಿ ಅಪಾರ ಹೊನ್ನು ಗಳಿಸಿದರು.
ಉತ್ತರ: ಧರ್ಮಬುದ್ದಿ ಮತ್ತು ದುಷ್ಟಬುದ್ದಿಯರ ಊರು ಮಧುರಾಪುರ
ಉತ್ತರ: ‘ನಿನೇ ಹೊನ್ನನ್ನು ತೆಗೆದುಕೊಂಡು ಹೋಗಿರುವೆ’ ಎಂದು ಹೇಳಿದ
ಉತ್ತರ: ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ ನ್ಯಾಯಕ್ಕಾಗಿ ಧರ್ಮಾಧಿಕಾರಿಗಳ ಬಳಿ ಹೋದರು.
ಉತ್ತರ: ಹೊನ್ನನ್ನು ಬಚ್ಚಿಟ್ಟಿರುವುದಕ್ಕೆ ವಟವೃಕ್ಷವೇ ಸಾಕ್ಷಿ ಎಂದು ದುಷ್ಟಬುದ್ಧಿ ಹೇಳಿದನು
ಉತ್ತರ: ದುಷ್ಟಬುದ್ಧಿಯು ಸುಳ್ಳು ಸಾಕ್ಷಿ ಹೇಳಿಸಲು ತನ್ನ ತಂದೆಯನ್ನು ಒತ್ತಾಯಿಸಿದನು.
ಉತ್ತರ: ದುಷ್ಟಬುದ್ಧಿ ತನ್ನ ತಂದೆಯನ್ನು ವಟವೃಕ್ಷದ ಪೊಟರೆಯೋಳಗೆ ಕುಳ್ಳಿರಿಸಿದನು
ಉತ್ತರ: ಹೊನ್ನನೆಲ್ಲಾ ತಾನೇ ಪಡೆದುಕೊಳ್ಳುವ ದುರಾಸೆಯಿಂದ ದುಷ್ಟಬುದ್ಧಿಯು ತನ್ನ ತಂದೆಯ ಮೂಲಕ ಸುಳ್ಳು ಹೇಳಿಸಲು ಪ್ರಯತ್ನಿಸದನು.
ಉತ್ತರ: ದುಷ್ಟಬುದ್ಧಿಯ ತಂದೆ ಪ್ರೇಮಮತಿ
ಉತ್ತರ: ಬಳಾರಿಯ (ಮಾರಿದೇವತೆಯ ಗುಡಿಯನ್ನು) ಮನೆಯನ್ನು ಹೊಗಿಸುವ ಹರಕೆಯ ಕುರಿಗೆ ಹೋಲಿಸಿದ್ದಾನೆ
ಉತ್ತರ: "ಧರ್ಮಬುದ್ದಿಯೇ ಹೊನ್ನನ್ನು ತೆಗೆದುಕೊಂಡು ಹೋಗಿರುವನು" ಎಂಬುದು ವಟವೃಕ್ಷದ ಹೇಳಿಕೆ
ಉತ್ತರ: ಆ ಮರಕ್ಕೆ ಸುತ್ತು ಬಂದು, ದೊಡ್ಡ ಪೊಟರೆಯನ್ನೂ ಮನುಷ್ಯ ಸಂಚಾರವಾಗಿದ್ದ ಚಿಹ್ನೆಯನ್ನೂ ಕಂಡನು
ಉತ್ತರ; ದುಷ್ಟಬುದ್ದಿಯು, ದುರ್ಬುದ್ದಿಯಿಂದ ತನ್ನ ತಂದೆಯನ್ನು ಹೊಗೆಗೆ ಸಿಕ್ಕಿಸಿ ಕೊಂದನು.
ಉತ್ತರ: ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೊನ್ನಿನ ಕಳ್ಳತನದ ಆರೋಪವನ್ನು ಹೊರಿಸಿದನು.
ಉತ್ತರ: ದುಷ್ಟಬುದ್ಧಿಯು ಆ ಸ್ಥಳದಲ್ಲಿ ಹೊನ್ನನ್ನು ಇಡುವಾಗ ಈತ ಮತ್ತು ನಾನು ಅಲ್ಲದೆ ಬೇರೆ ಯಾರು ಮನುಷ್ಯರು ಇರಲಿಲ್ಲ ಆ ಸ್ಥಳದಲ್ಲಿ ಇದ್ದ ಆಲದ ಮರವೇ ಸಾಕ್ಷಿ ಎಂದು ಹೇಳಿದ್ದನ್ನು ಕೇಳಿ ಧರ್ಮಾಧಿಕರಣರು ವಿಸ್ಮಯ ಹೊಂದಿದರು.
ಉತ್ತರ: ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ದೇವರು, ಗುರುಗಳು, ವೇದಾಧ್ಯಯನ ನಿರತರನ್ನು ಪೂಜೆ ಮಾಡುತ್ತ ಕಳೆದನು.
ಉತ್ತರ: ದುಷ್ಟಬುದ್ಧಿ ಮತ್ತು ಧರ್ಮಬುದ್ಧಿಯ ನಡುವಿನ ವ್ಯಾಜ್ಯವನ್ನು ಪರಿಹರಿಸಲು, ವೃಕ್ಷಸಾಕ್ಷಿಯನ್ನು ಕೇಳಲು ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಬಂದರು.
ಉತ್ತರ: ದುಷ್ಟಬುದ್ಧಿಯು ವಟುವೃಕ್ಷ (ಆಲದಮರವನ್ನು) ಸಾಕ್ಷಿಯನ್ನಾಗಿ ಮಾಡಿದನು
ಉತ್ತರ: ದುಷ್ಟಬುದ್ಧಿಯು ತನ್ನ ತಂದೆಯನ್ನು ವಟುವೃಕ್ಷದ ಪೊಟರೆಯಲ್ಲಿ ಅಡಗಿಸಿದ್ದನು
ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )
ಉತ್ತರ: ಮನುಷ್ಯರ ಸುಕೃತ ದಷ್ಕೃತಗಳನ್ನು ದೈವಗಳು ತಿಳಿಯುವವು. ಆದುದರಿಂದ ಈ ಸಾಕ್ಷಿಯೂ ಉಚಿತವಾದುದು. ಸಾಕ್ಷಿಯ ವಿಚಾರದಲ್ಲಿ ಮನುಷ್ಯನೇ ನುಡಿಯುವುದು ಅಸಾಧ್ಯವೆಂದ ಮೇಲೆ ಮರವನ್ನು ಮಾತನಾಡಿಸುವುದು ಪರಮಗಹನವಾದ ವಿಚಾರ. ಈ ಸಾಕ್ಷಿಯನ್ನು ಅಂಗೀಕರಿಸುವುದು ಎಂದರು
ಉತ್ತರ: ಧರ್ಮಬುದ್ದಿ ಹುಲ್ಲನ್ನೂ ಕಟ್ಟಿಗೆಯನ್ನೂ ತರಿಸಿ ಆ ಪೊಟರೆಯಲ್ಲಿ ತುಂಬಿ ದುಷ್ಟಬುದ್ದಿಯ ಮನೆಗೆ ಕಿಚ್ಚು ಹಾಕುವಂತೆ ಬೆಂಕಿ ಹಾಕಿದನು. ಹೊಗೆ ಸುತ್ತಿ ಬೆಂಕಿ ಧಗಧಗಿಸಲು ಪ್ರೇಮಮತಿ ಧೈರ್ಯಗೆಟ್ಟು ಬೊಬ್ಬೆ ಹಾಕಿ ಪೊಟರೆಯೊಳಗಿಂದ ಹೊರಳಿ ಉರುಳಿ ಕಂಠಗತಪ್ರಾಣನಾದುದನ್ನು ಧರ್ಮಾಧಿಕರಣರು ಕಂಡು, ದುಷ್ಟಬುದ್ದಿಯ ತಂದೆಯಾಗಿರುವುದರಲ್ಲಿ ಸಂದೇಹವಿಲ್ಲ. ಎಂದು ತಿಳಿದರು.
ಉತ್ತರ: ವಟವೃಕ್ಷದಿಂದ ಬಂದ ಸಾಕ್ಷಿಯ ಮಾತು ಧರ್ಮಬುದ್ದಿಯೇ ಧನವನ್ನು ತೆಗೆದುಕೊಂಡಿರುವನು ಧರ್ಮಬುದ್ದಿಯು `ಧರ್ಮೋಜಯತಿನಾಧರ್ಮ ಇತ್ಯಮೋಘಕೇತಂ ವಚಃ' ಎಂಬ ವಾಕ್ಯ ಸಳ್ಳಾಗುವುದು ಸಾಧ್ಯವಿಲ್ಲ. ನನಗೂ ಇದು ಆಶ್ಚರ್ಯ ಇದು ದೈವವಲ್ಲ; ಆಗಿದ್ದರೆ ಸತ್ಯವನ್ನೇಕೆ ನುಡಿಯದು. ಇದೇನೋ ಒಂದು ಕೃತ್ರಿಮವಾಗಿರಲೇಬೇಕೆಂದು ಆ ಮರಕ್ಕೆ ಸುತ್ತು ಬಂದು, ದೊಡ್ಡ ಪೊಟರೆಯನ್ನೂ ಮನುಷ್ಯ ಸಂಚಾರವಾಗಿದ್ದ ಚಿಹ್ನೆಯನ್ನೂ ಕಂಡು ಸಂದೇಹ ಮೂಡಿತು.
ಉತ್ತರ: ಆ ಮರವನ್ನು ಕುರಿತು ಹೇಗೆಂದರು:“ಎಲೈ ವೃಕ್ಷವೇ, ಪಿತೃಗಳು ನಿನ್ನನ್ನೇ ಅವಲಂಬಿಸಿರುವರು, ನಿನ್ನ ವಾಕ್ಯವನ್ನೇ ಬಯಸುತ್ತಿರುವರು. ಉದ್ದಾರವಾಗಲಿ, ಅಧೋಗತಿಯಾಗಲಿ, ಸತ್ಯವಾದ ಸಾಕ್ಷಿಯನ್ನೇ ನುಡಿ ಎಂದರು. ಅಲ್ಲದೆ ‘ಯಾವ ಸಾಕ್ಷಿ ಸುಳ್ಳು ಹೇಳುವನೋ ಅವನು ದಿಗಂಬರನೂ ಬೋಳನೂ ಬಿಕ್ಷುಕನೂ ಹಸಿವೂ ಬಾಯಾರಿಕೆಯುಳ್ಳವನೂ ಕುರುಡನೂ ಆಗಿ ಹಗೆಯ ಮನೆಗೆ ತಿರಿದುಣ್ಣುವುದಕ್ಕೆ ಹೋಗುವನು. ಸಾಕ್ಷಿಯಾಗಿ ಸುಳ್ಳಾಡುವವರಿಗೆ ಪಾಪವೇ ಸಂಭವಿಸುವುದು. ನೀನಾದರೋ ಯಕ್ಷಾದಿ ದಿವ್ಯ ದೇವತಾ ವಾಸವೂ ಸೇವ್ಯವೂ ಆದ ವೃಕ್ಷವಾಗಿರುವೆ, ಆದ್ದರಿಂದ ನಿನ್ನನ್ನು ಸಾಕ್ಷಿಮಾಡಿ ಕೇಳುವೆವು. ನೀನು ತಪ್ಪದೆ ನುಡಿ”ಎಂದು ಧರ್ಮಾಧಿಕರಣರು ಕೇಳಿದರು.
ಉತ್ತರ: ಆಕಾಶವನ್ನು ಆವರಿಸಿ ದಿಕ್ಕುಗಳನ್ನು ಮುಚ್ಚಿ ದೃಷ್ಟಿಯನ್ನು ತಡೆದು ಹೊಗೆ ತುಂಬಿ, ಮಳೆಗಾಲದ ಮೋಡ, ಕಾಡಿಗೆಯ ರಾಶಿ, ಕೋಗಿಲೆಯ ಬಣ್ಣ, ವಿಷ್ಣುವಿನ ಕಾಯ ಕಾಂತಿ, ಶಿವನ ಕುತ್ತಿಗೆಯ ಬಣ್ಣದ ಕತ್ತಲೆ ಕ್ರಮೇಣ ಭೂಮಿಯನ್ನು ಆವರಿಸಿತು ಹಬ್ಬಿತು.
ಉತ್ತರ: ಧರ್ಮಬುದ್ದಿಯು, ಧರ್ಮಾಧಿಕರಣರನ್ನು ಕುರಿತು ಹೀಗೆಂದನು. ʼಕಿರಾಟೋ ನಾಸ್ತಿ ನಿಶ್ಶಠಃ' ಹುಸಿಯದ ವ್ಯಾಪಾರಿಯೇ ಇಲ್ಲ!, ನಾನು ವ್ಯಾಪಾರಿಯಾಗಿರುವುದರಿಂದ ನನ್ನ ಜಾತಿ ಧಮಕ್ಕೆ, ಧರ್ಮಬುದ್ದಿ ಅಧರ್ಮಬುದ್ದಿಯಾಗಿ, ಧನವನ್ನು ವಂಚಿಸಿ ನನ್ನ ಮನೆಗೆ ಕೊಂಡು ಹೋಗುವೆನು ಎಂದು ಮನಸ್ಸಿನಲ್ಲೇ ಎಣಿಸಿಕೊಂಡೆನು. ಆಗ ಸೂರ್ಯ ಮೂಡಿದುದರಿಂದ ತೆಗೆದುಕೊಂಡು ಹೋಗಲು ದಾರಿಯಿಲ್ಲದೆ ಮರದ ಪೊಟರೆಯಲ್ಲಿಟ್ಟು ಬಂದೆನು. ಮರುದಿನ ಹೋಗಿ ನೋಡಲು ಆ ಹೊನ್ನನ್ನು ಒಂದು ಸರ್ಪ ಸುತ್ತಿಕೊಂಡು ಮಲಗಿರುವುದನ್ನು ಕಂಡು ಕೊಂಡುಹೋಗಲು ಅಂಜಿದೆನು.
ಉತ್ತರ: ಅರ್ಧರಾತ್ರಿಯಲ್ಲಿ ಧರ್ಮಬುದ್ಧಿಯು ದುರ್ಬುದ್ಧಿಯಾದ ದುಷ್ಟಬುದ್ಧಿಯನ್ನು ಕರೆದು “ಚಿನ್ನವನ್ನು ಹಂಚಿಕೊಳ್ಳೋಣ” ಎಂದಾಗ ದುಷ್ಟಬುದ್ಧಿಯು ಪಾಪಬುದ್ಧಿಯವನಾಗಿ ನಾವು ಈ “ಹೊನ್ನನ್ನು ಹಂಚಿಕೊಂಡು ಮನೆಯಲ್ಲಿ ಸ್ವೇಚ್ಛೆಯಿಂದ ಇರುವವರಲ್ಲ. ಮತ್ತೆ ವ್ಯಾಪಾರಕ್ಕೆ ಹೋಗಬೇಕಾಗುತ್ತದೆ. ಆಕಾರಣದಿಂದ ನಿನಗೂ ನನಗೂ ಖರ್ಚಿಗೆ ತಕ್ಕಷ್ಟು ಹೊನ್ನನ್ನು ತೆಗೆದುಕೊಂಡು, ಉಳಿದ ಹೊನ್ನೆಲ್ಲವನ್ನು ಇಲ್ಲಿಯೇ ಇಟ್ಟು ಬಿಡೋಣ” ಎಂದು ಸಲಹೆಯಿತ್ತನು.
ಉತ್ತರ: ಮನುಷ್ಯರ ಸುಕೃತ ದಷ್ಕೃತಗಳನ್ನು ದೈವಗಳು ತಿಳಿಯುವವು. ಆದುದರಿಂದ ಈ ಸಾಕ್ಷಿಯೂ ಉಚಿತವಾದುದು. ಸಾಕ್ಷಿಯ ವಿಚಾರದಲ್ಲಿ ಮನುಷ್ಯನೇ ನುಡಿಯುವುದು ಅಸಾಧ್ಯವೆಂದ ಮೇಲೆ ಮರವನ್ನು ಮಾತನಾಡಿಸುವುದು ಪರಮಗಹನವಾದ ವಿಚಾರ. ಈ ಸಾಕ್ಷಿಯನ್ನು ಅಂಗೀಕರಿಸುವುದು ಎಂದರು.
ಉತ್ತರ: ಪರಧನಹರಣವೂ, ಪರಸ್ತ್ರೀಗಮನವೂ, ವಿಸ್ವಾಸ ಘಾತುಕವೂ, ಸ್ವಾಮಿದ್ರೋಹವೂ ಇವೆಲ್ಲ ಏನು ಮಾಡಿದರೂ ಕೆಡುಕನ್ನು ಉಂಟುಮಾಡುವುವು. ಇವೇಲ್ಲವನ್ನು ನೀನು ತಿಳಿದಿದ್ದು ನನ್ನನ್ನು ಸಾಕ್ಷಿಮಾಡಿ ನುಡಿಸಿ ಕೆಡಿಸಲು ಯೋಚಿಸಿದೆ. ನಿನ್ನ ಕ್ಷುಲ್ಲಕಯೋಚನೆಯು ನಮ್ಮ ಕುಲವನ್ನೇ ನಾಶಮಾಡುವ ರೀತಿಯದು. ಅಲ್ಲದೆ ನಿನ್ನ ಈ ಬಗೆಯ ಉಪಾಯಕ್ಕೆ ಅಪಾಯ ಬಹಳವಿದೆ. ಎಂದು ಸಾಕ್ಷಿ ಹೇಳಲು ಒಪ್ಪಲಿಲ್ಲ
ಉತ್ತರ: ದುಷ್ಟಬುದ್ಧಿಯು ತನ್ನ ತಂದೆಯ ಕೈ ಹಿಡಿದು, ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿ “ನಿನ್ನ ಒಂದು ಮಾತಿನಿಂದ ನಮ್ಮ ಕಷ್ಟಗಳೆಲ್ಲವೂ ಪರಿಹಾರವಾಗಿ, ಹಲವು ಕಾಲ ಹಸಿಯದೆ ಊಟಮಾಡಿ ಬಾಳುವಂತಹ ಸಾಧನೆಯನ್ನು ಮಾಡಬಹುದು. ನೀನು ಆ ಮರದ ಪೊಟರೆಯಲ್ಲಿ ಅಡಗಿದ್ದು, ಧರ್ಮಬುದ್ಧಿಯೇ ಹೊನ್ನು ತೆಗೆದುಕೊಂಡು ಹೋದನೆಂದು ಹೇಳು” ಎಂದು ಹೇಳಿದನು.
ಉತ್ತರ: ಧರ್ಮಾಧಿಕರಣರು ವಟವೃಕ್ಷಕ್ಕೆ “ನೀನಾದರೋ ಯಕ್ಷಾದಿ ದಿವ್ಯ ದೇವತೆಗಸು ವಾಸ ಮಾಡುವಂತಹ ಮತ್ತು ಅವರ ಸೇವೆಯನ್ನು ಮಾಡುವಂತಹವನು ಆಗಿದ್ದೀಯಾ, ಆ ಕಾರಣದಿಂದ ನಿನ್ನನ್ನು ಸಾಕ್ಷಿ ಮಾಡಿ ಕೇಳುತ್ತಿದ್ದೇವೆ, ನೀನು ತಪ್ಪದೆ ಸಾಕ್ಷಿಯನ್ನು ನುಡಿ” ಎಂದು ಹೇಳಿದರು.
ಉತ್ತರ: ದುಷ್ಟಬುದ್ದಿಯು ತನ್ನ ಮನೆಗೆ ಬಂದು ತನ್ನ ತಂದೆಯ ಕೈಯನ್ನು ಹಿಡಿದು ಏಕಾಂತಕ್ಕೆ ಕರೆದು ವೃತ್ತಾಂತವನ್ನು ತಿಳಿಸಿ, ನಿಮ್ಮ ಒಂದು ಮಾತಿನಿಂದ ನಮ್ಮ ಕಷ್ಟಗಳೇಲ್ಲಾ ದೂರವಾಗಿ ಹಲವು ಕಾಲದವರೆಗೆ ಹಸಿಯದೆ ಉಂಡು ಬಾಳುವಷ್ಟು ಹಣ ಬರುವುದು. ನೀವು ಆ ಮರದ ಪೊಟರೆಯಲ್ಲಿ ಅಡಗಿದ್ದು ಧರ್ಮಬುದ್ದಿಯೇ ಆ ಹಣವನ್ನು ಕೊಂಡುಹೋದನೆಂದು ಹೇಳಿರಿ ಎಂದು ಒಪ್ಪಿಸಿದನು
ಉತ್ತರ: ಧರ್ಮಬುದ್ದಿಯು, ಧರ್ಮಾಧಿಕರಣರನ್ನು ಕುರಿತು ಹೀಗೆಂದನು. `ಕಿರಾಟೋ ನಾಸ್ತಿ ನಿಶ್ಶಠಃ' ಹುಸಿಯದ ವ್ಯಾಪಾರಿಯೇ ಇಲ್ಲ!, ನಾನು ವ್ಯಾಪಾರಿಯಾಗಿರುವುದರಿಂದ ನನ್ನ ಜಾತಿ ಧಮಕ್ಕೆ, ಧರ್ಮಬುದ್ದಿ ಅಧರ್ಮಬುದ್ದಿಯಾಗಿ, ಧನವನ್ನು ವಂಚಿಸಿ ನನ್ನ ಮನೆಗೆ ಕೊಂಡು ಹೋಗುವೆನು ಎಂದು ಮನಸ್ಸಿನಲ್ಲೇ ಎಣಿಸಿಕೊಂಡೆನು.
ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ (3 ಅಂಕ)
ಆಯ್ಕೆ: ಈ ಮಾತನ್ನು ಕವಿ ದುರ್ಗಸಿಂಹನು ರಚಿಸಿರುವ“ಕರ್ನಾಟಕ ಪಂಚತಂತ್ರ”ಕೃತಿಯಿಂದ ಆಯ್ದ‘ವೃಕ್ಷಸಾಕ್ಷಿ’ ಎಂಬ ಗದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ :- ದುಷ್ಟಬುದ್ಧಿಯು ಧರ್ಮಬುದ್ಧಿಯನ್ನು ಮೋಸಗೊಳಿಸಿ ಹೂತಿಟ್ಟ ಹೊನ್ನೆಲ್ಲವನ್ನು ತೆಗೆದುಕೊಂಡು ಗುಳಿಯನ್ನು ಮೊದಲಿನಂತೆ ಮುಚ್ಚಿ, ತಾನೇ ಧರ್ಮಬುದ್ಧಿಯ ಹತ್ತಿರ ಬಂದು “ಖರ್ಚಿಗೆ ಹೊನ್ನು ಇಲ್ಲ, ಸ್ವಲ್ಪ ಹೊನ್ನನ್ನು ತೆಗೆದುಕೊಳ್ಳೋಣ ಬಾ” ಎಂದು ಜೊತೆಯಲ್ಲಿ ಕರೆದುಕೊಂಡು ಹೋಗಿ, ಹೂತಿಟ್ಟ ಸ್ಥಳದಲ್ಲಿ ಹೊನ್ನನ್ನು ಕಾಣದೆ ಇದ್ದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ :- ದುಷ್ಟಬುದ್ಧಿಯು ಇನ್ನು ಮಾತನಾಡದಿದ್ದರೆ ಅಪವಾದವು ತನ್ನ ಮೇಲೆ ಬರುವುದೆಂದು, “ಹೊನ್ನೆಲ್ಲವನ್ನು ನೀನೆ ತೆಗೆದುಕೊಂಡಿದ್ದೀಯೆ” ಎಂದನು ಎಂದು ಕವಿ ಸ್ವಾರಸ್ಯಪೂರ್ಣವಾಗಿ ವರ್ಣಿಸುತ್ತಾನೆ.
ಆಯ್ಕೆ :- ಈ ಮಾತನ್ನು ಕವಿ ದುರ್ಗಸಿಂಹನು ರಚಿಸಿರುವ “ಕರ್ನಾಟಕ ಪಂಚತಂತ್ರ” ಕೃತಿಯಿಂದ ಆಯ್ದ “ವೃಕ್ಷಸಾಕ್ಷಿ” ಎಂಬ ಗದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ :- ದುಷ್ಟಬುದ್ಧಿಯು “ಆ ಸ್ಥಳದಲ್ಲಿ ಹೊನ್ನನ್ನು ಇಡುವಾಗ ಈತ ಮತ್ತು ನಾನು ಅಲ್ಲದೆ ಬೇರೆ ಯಾರು ಮನುಷ್ಯರು ಇರಲಿಲ್ಲ. ಆ ಸ್ಥಳದಲ್ಲಿ ಇದ್ದ ಆಲದ ಮರವೇ ಸಾಕ್ಷಿ” ಎಂದ ಸಂದರ್ಭದಲ್ಲಿ ಧರ್ಮಾಧಿಕರಣರು ಆಶ್ಚರ್ಯಗೊಂಡು ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ :- ಧರ್ಮಾಧಿಕರಣರು “ವೃಕ್ಷವು ಸಾಕ್ಷಿಯನ್ನು ಹೇಳುವುದು ಎಂಬುದನ್ನು ಹಿಂದೆ ಎಂದೂ ಕೇಳಿಲ್ಲ” ಎಂದು ವಿಸ್ಮಯದಿಂದ ಹೇಳುವುದು ಬಹು ಸ್ವಾರಸ್ಯಪೂರ್ಣವಾಗಿದೆ.
ಆಯ್ಕೆ :- ಈ ಮಾತನ್ನು ಕವಿ ದುರ್ಗಸಿಂಹನು ರಚಿಸಿರುವ “ಕರ್ನಾಟಕ ಪಂಚತಂತ್ರ” ಕೃತಿಯಿಂದ ಆಯ್ದ “ವೃಕ್ಷಸಾಕ್ಷಿ” ಎಂಬ ಗದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ :- ದುಷ್ಟಬುದ್ಧಿಯು ತನ್ನ ಮನೆಗೆ ಬಂದು ತನ್ನ ತಂದೆಯ ಕೈಹಿಡಿದು, ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿ, ನೀನು ಆ ಮರದ ಪೊಟರೆಯಲ್ಲಿ ಅಡಗಿದ್ದು, ಧರ್ಮಬುದ್ಧಿಯೇ ಹೊನ್ನು ತೆಗೆದುಕೊಂಡು ಹೋದನೆಂದು ಹೇಳು” ಎಂದು ಹೇಳಿದ ಸಂದರ್ಭದಲ್ಲಿ ಅವನಿಗೆ ಬುದ್ಧಿಯನ್ನು ಹೇಳುತ್ತ ತಂದೆಯು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ :- ದುಷ್ಟಬುದ್ಧಿಯನ್ನು ಕುರಿತು ಅವನ ತಂದೆಯು “ನಿನ್ನ ಕೆಟ್ಟತನ ನಮ್ಮ ಕುಲವನ್ನು ನಾಶಮಾಡುವ ರೀತಿಯದಾಗಿದೆ” ಎಂದು ಹೇಳುವುದು ಸ್ವಾರಸ್ಯಪೂರ್ಣವಾಗಿದೆ.
ಆಯ್ಕೆ :- ಈ ಮಾತನ್ನು ಕವಿ ದುರ್ಗಸಿಂಹನು ರಚಿಸಿರುವ “ಕರ್ನಾಟಕ ಪಂಚತಂತ್ರ” ಕೃತಿಯಿಂದ ಆಯ್ದ “ವೃಕ್ಷಸಾಕ್ಷಿ” ಎಂಬ ಗದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ :-ಮರದ ಪೊಟರೆಯೊಳಗೆ ಅಡಗಿದ್ದ ದುಷ್ಟಬುದ್ಧಿಯ ತಂದೆ ಪ್ರೇಮಮತಿಯು ಮತಿಗೆಟ್ಟು, ದರ್ಮದ ಹಾದಿಯನ್ನು ಬಿಟ್ಟು “ಧರ್ಮಬುದ್ಧಿಯೇ ಹೊನ್ನನ್ನು ತೆಗೆದುಕೊಂಡನೆಂದು” ನುಡಿದ ಸಂದರ್ಭದಲ್ಲಿ ಕವಿಯು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ :- ಪಾಪಕರ್ಮನಾದ ದುಷ್ಟಮಗನ ಮಾತನ್ನು ಕೇಳಿ ತಂದೆಯು ತೊಂದರೆಗೆ ಒಳಗಾದನು ಎಂಬುದನ್ನು ಪ್ರಕೃತಿ ವಿಕೃತಿಯಾದ ಮನುಷ್ಯನ ಆಯುಷ್ಯವು ಕಡಿಮೆಯಾಗುತ್ತದೆ‟ಎಂಬ ಮಾತು ಸ್ವಾರಸ್ಯಪೂರ್ಣವಾಗಿ ವರ್ಣಿಸಲ್ಪಟ್ಟಿದೆ.
ಆಯ್ಕೆ :- ಈ ಮಾತನ್ನು ಕವಿ ದುರ್ಗಸಿಂಹನು ರಚಿಸಿರುವ “ಕರ್ನಾಟಕ ಪಂಚತಂತ್ರ” ಕೃತಿಯಿಂದ ಆಯ್ದ “ವೃಕ್ಷಸಾಕ್ಷಿ” ಎಂಬ ಗದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ :- ಧರ್ಮಬುದ್ಧಿಯು ಆಲದ ಮರದ ಬಳಿ ಬಂದು ನೋಡಿ, ಮರವನ್ನು ಸುತ್ತು ಹಾಕಿ, ದೊಡ್ಡದಾದ ಪೊಟರೆಯನ್ನು, ಮನುಷ್ಯ ಸಂಚಾರವಾಗಿರುವುದನ್ನು ಕಂಡು ನಿಶ್ಚಯಿಸಿದ ಸಂದರ್ಭದಲ್ಲಿ ಧರ್ಮಾಧಿಕಾರಿಗಳಿಗೆ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ :- ವ್ಯಾಪಾರಿ ವೃತ್ತಿಧರ್ಮದಲ್ಲಿ ಧರ್ಮಬುದ್ಧಿಯು ಅಧರ್ಮಬುದ್ಧಿಯಾಗಿ ಸುಳ್ಳು ಹೇಳುವ ಮನಸ್ಸು ಉಂಟಾಗುತ್ತದೆ ಎಂಬುದನ್ನು ಈ ಮಾತಿನಲ್ಲಿ ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ.
ಸ್ವಾರಸ್ಯ : ಈ ವಾಕ್ಯದಲ್ಲಿ ಮನಸ್ಸಿನಲ್ಲಿ ಮೂಡಿಬಂದ ಕೆಟ್ಟ ವಿಚಾರಕ್ಕೆ ಕಡಿವಾಣ ಹಾಕುವ ಮಾತು ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.
ಉತ್ತರ:
ಲೇಖಕರ ಪರಿಚಯ(3 ಅಂಕ)
ದುರ್ಗಸಿಂಹನು ಕ್ರಿ. ಶ. ಸುಮಾರು 1031 ರಲ್ಲಿ ಕಿಸುಕಾಡು ನಾಡಿನ ಸಯ್ಯಡಿಯಲ್ಲಿ ಜನಿಸಿದನು.
ಇವನು ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ ದಂಡನಾಯಕನೂ ಸಂಧಿವಿಗ್ರಹಿಯೂ ಆಗಿದ್ದನು.
ಮತಧರ್ಮ ಸಮನ್ವಯನಾದ ಈತ ಸಯ್ಯಡಿಯಲ್ಲಿ ಹಲವಾರು ಹರಿಹರ ಭವನಗಳನ್ನು ನಿರ್ಮಿಸಿದ್ದಾನೆ.
ಈತನು ‘ಕರ್ಣಾಟಕ ಪಂಚತಂತ್ರ’ ಎಂಬ ಚಂಪೂ ಕಾವ್ಯವನ್ನು ರಚಿಸಿದ್ದಾನೆ.
ಎಂಟು-ಹತ್ತು ವಾಕ್ಯದಲ್ಲಿ ಉತ್ತರ ಬರೆಯಿರಿ(4 ಅಂಕ)
ಉತ್ತರ: ‘ವೃಕ್ಷಸಾಕ್ಷಿ’ ಪಾಠದಲ್ಲಿ ನಾವು ಮೆಚ್ಚುವ ಪಾತ್ರ ಧರ್ಮಬುದ್ಧಿಯದು.
ಧರ್ಮಬುದ್ಧಿಯು ವ್ಯಾಪಾರಿ ಆದರೂ ಕಪಟವರಿಯದ ಸತ್ಯವಂತ, ಆಧ್ಯಾತ್ಮಿಕ ಮನೋಭಾವವುಳ್ಳವನು.
ಸೂರ್ಯೋದಯಕ್ಕೆ ಮೊದಲೇ ಎದ್ದು ನಿತ್ಯಕರ್ಮ ಮುಗಿಸಿ ದೇವರು, ಗುರುಗಳು, ವೇದಾಧ್ಯಯನ ನಿರತರನ್ನು ಪೂಜಿಸುವವನು.
ದುಷ್ಟಬುದ್ಧಿಯು ಮರದ ಪೊಟರೆಯೊಳಗೆ ತಂದೆಯನ್ನು ಕೂರಿಸಿ ಧರ್ಮಬುದ್ಧಿಯೇ ಚಿನ್ನ ಕದ್ದನೆಂದು ಹೇಳಿಸಿದಾಗಲೂ ಧರ್ಮಬುದ್ಧಿ ಕೂಗಾಡಲಿಲ್ಲ, ಶಾಂತನಾಗಿಯೇ ಇದ್ದನು.
ಅವನಿಗೆ ದೇವರ ಮೇಲೆ ನಂಬಿಕೆ.ದೇವರಿದ್ದರೆ ಸತ್ಯವೇ ಹೊರಬರಬೇಕಿತ್ತು ಎಂಬುದು ಅವನ ಅನಿಸಿಕೆ.
ಮರವನ್ನು ಪರೀಕ್ಷಿಸಬೇಕೆಂದು ಮರವನ್ನು ಸುತ್ತಿದಾಗ ಮನುಷ್ಯ ಸಂಚಾರವಾಗಿರುವುದನ್ನು ಬುದ್ಧಿವಂತಿಕೆಯಿಂದ ಕಂಡುಕೊಂಡನು.
ದುಷ್ಟಬುದ್ಧಿಗೆ ಬುದ್ಧಿ ಕಲಿಸುವ ಚಾಣಾಕ್ಷತನವನ್ನು ಮೆರೆಯುತ್ತಾನೆ.
“ಸುಳ್ಳನ್ನು ಸುಳ್ಳಿನಿಂದಲೇ; ಮುಳ್ಳನ್ನು ಮುಳ್ಳಿನಿಂದಲೇ ಜಯಿಸುವಂತೆ” ಧರ್ಮಬುದ್ಧಿಯು ತಂತ್ರಬುದ್ಧಿಯಿಂದ ತನಗೆ ಒದಗಿದ್ದ ಕೆಟ್ಟ ಹೆಸರನ್ನು ಹೋಗಲಾಡಿಸಿ ಕೊಂಡನು.
ಆದ್ದರಿಂದ ಸತ್ಯವಂತನಾದ ಧರ್ಮಬುದ್ಧಿ ಮೆಚ್ಚುಗೆಗೆ ಪಾತ್ರನಾಗುತ್ತಾನೆ.
ಉತ್ತರ: ದುಷ್ಟಬುದ್ಧಿಯು ಧರ್ಮಬುದ್ಧಿಯೊಡನೆ ಸೇರಿ ವ್ಯಾಪಾರ ಮಾಡಿ, ಲಾಭ ಗಳಿಸಿದ್ದ ಹೊನ್ನನು ತಾನೇ ದೋಚಿ, ಕಳ್ಳತನವನ್ನು ಧರ್ಮಬುದ್ಧಿಯ ಮೇಲೆ ಹೊರಿಸಿ, ಇದಕ್ಕೆ ವಟವೃಕ್ಷವೇ ಸಾಕ್ಷಿ ಎಂದು ಧರ್ಮಾಧಿಕಾರಿಗಳ ಮುಂದೆ ಹೇಳುತ್ತಾನೆ. ಇದರಿಂದ ಧರ್ಮಬುದ್ಧಿ ಮತ್ತು ಧರ್ಮಾಧಿಕಾರಿಗಳಿಗೆ ಆಶ್ಚರ್ಯವಾಗುತ್ತದೆ. ದುಷ್ಟಬುದ್ಧಿಯು ತಂದೆಯ ಬುದ್ಧಿ ಮಾತನ್ನು ಆಲಿಸದೇ, ಮರದಿಂದ ಸಾಕ್ಷಿ ಹೇಳಿಸಲು ತನ್ನ ತಂದೆಯನ್ನೇ ಪೊಟರೆಯಲ್ಲಿ ಕೂರಿಸಿ, ಅವನಿಂದ ಧರ್ಮಬುದ್ಧಿಯೇ ಚಿನ್ನ ಕದ್ದನೆಂದು ಸುಳ್ಳು ಹೇಳಿಸುತ್ತಾನೆ. ಧರ್ಮಬುದ್ಧಿಯು ದೈವ ಭಕ್ತನಾಗಿದ್ದು ಸತ್ಯ ಹೊರ ಬರುತ್ತದೆ ಎಂದು ನಂಬಿದ್ದನು. ಅವನ ನಂಬಿಕೆಯು ಸುಳ್ಳಾದಾಗ ಮರದ ಬಳಿ ಪರೀಕ್ಷಿಸಿ ಪೊಟರೆಯೊಳಗೆ ಮನುಷ್ಯ ಸಂಚಾರವಾಗಿರುವುದನ್ನು ಕಂಡುಕೊಳ್ಳುತ್ತಾನೆ. ಧರ್ಮಾಧಿಕಾರಿಗಳಿಗೆ ತಾನು ವ್ಯಾಪಾರಿಯ ಮನೋಭಾವದಂತೆ ಸುಳ್ಳು ಹೇಳಿದ್ದಾಗಿ, ಚಿನ್ನವನ್ನು ತಾನೇ ತೆಗೆದುಕೊಂಡುದ್ದಾಗಿ ತಿಳಿಸಿ, ಈಗ ಆ ಚಿನ್ನಕ್ಕೆ ಹಾವು ಸುತ್ತುಕೊಂಡಿದೆ ಎಂದು ಹೇಳಿ, ಚಿನ್ನವನ್ನು ತೆಗೆಯಲು ಮರದ ಪೊಟರೆಗೆ ಹುಲ್ಲುಕಡ್ಡಿಯಿಟ್ಟು ಬೆಂಕಿ ಇಡುತ್ತಾನೆ. ಪೊಟರೆಗೆ ಹೊಗೆ ತುಂಬಿ ದುಷ್ಟಬುದ್ಧಿಯ ತಂದೆ ಪ್ರೇಮಮತಿ ಉಸಿರುಕಟ್ಟಿ ಕೂಗಾಡುತ್ತ ಪೊಟರೆಯಿಂದ ಉರುಳಿ ಪ್ರಾಣಬಿಡುತ್ತಾನೆ. ದುಷ್ಟಬುದ್ಧಿಯ ಕುಟಿಲತೆ ಧರ್ಮಾಧಿಕಾರಿಗಳಿಗೆ ತಿಳಿಯುತ್ತದೆ. ಹೀಗೆ ದುಷ್ಟಬುದ್ಧಿಯ ತಂತ್ರ ಅವನಿಗೆ ತಿರುಗು ಬಾಣವಾಯಿತು.
« BACK *............................. .............................* ಮುಂದಿನ ಅಧ್ಯಾಯ
THANK URMH-9731734068
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ಪ್ರತ್ಯುತ್ತರಅಳಿಸಿ