ಗದ್ಯ ಪಾಠ-1 ಯುದ್ಧ
ಒಂದು ಅಂಕದ ಪ್ರಶ್ನೆಗಳು
ಉತ್ತರ :ಯುದ್ಧ ಗದ್ಯಪಾಠದ ಸಾಹಿತ್ಯಿಕ ಪ್ರಕಾರ ಸಣ್ಣಕಥೆ.
ಉತ್ತರ : ಸಣ್ಣಕಥೆ ದೇಶೀಯ ಹಾಗೂ ವಿಶ್ವ ಸಂಸ್ಕತಿಯ ಅಭಿವ್ಯಕ್ತಿಗೆ ಪೂರಕ ಮಾಧ್ಯಮವಾಗಿದೆ.
ಉತ್ತರ : ಸಮಾಜದಲ್ಲಿನ ಏಳು-ಬೀಳುಗಳು, ಜನರ ಬದುಕು-ಬವಣೆಗಳು, ನೋವು-ನಲಿವುಗಳು, ಕ್ರೌರ್ಯ-ಶಾಂತಿಯ ನಡೆ ಹಾಗೂ ಅದರ ಪರಿಣಾಮಗಳು, ಮಾನವೀಯ ಮೌಲ್ಯಗಳು ಎಲ್ಲವೂ ಸಣ್ಣಕಥೆಗೆ ವಸ್ತುಗಳಾಗಿವೆ.
ಉತ್ತರ : ‘ಯುದ್ಧ’ ಇತಿಹಾಸದ ಉದ್ದಕ್ಕೂ ಇರುವಂತಹದ್ದೇ ಆಗಿದ್ದು, ಸಾಮ್ರಾಜ್ಯ ವಿಸ್ತರಣೆ, ಲೋಭ, ಶಕ್ತಿಯ ಪ್ರದರ್ಶನ, ಕೌಟುಂಬಿಕ ಕಲಹಗಳು, ದ್ವೇಷ ಸಾಧನೆ ಮುಂತಾದವು ಯುದ್ಧಕ್ಕೆ ಕಾರಣವಾಗುತ್ತವೆ.
ಉತ್ತರ : ರಾಹಿಲ್ ತನ್ನ ಕೈಯಲ್ಲಿದ್ದ ಔಷಧ ಮತ್ತು ತುರ್ತು ಪರಿಸ್ಥಿತಿಗೆ ಬೇಕಾದ ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು ಇನ್ನಷ್ಟು ಭದ್ರವಾಗಿ ಹಿಡಿದುಕೊಂಡಿದ್ದನು.
ಉತ್ತರ : ರಾಹಿಲ್ ಸೇನೆಯಲ್ಲಿದ್ದ ಒಬ್ಬ ಡಾಕ್ಟರ್(ವೈದ್ಯ).
ಉತ್ತರ : ವಿಮಾನದ ಪೈಲಟ್ ರೇಡಿಯೋ ಸಮನಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದನು.
ಉತ್ತರ : ರಾಹಿಲನ ಶರೀರದ ಒಂದು ಕಾಲಿನ ಭಾಗಕ್ಕೆ ಜೋರು ಪೆಟ್ಟು ಬಿದ್ದಿತ್ತು.
ಉತ್ತರ : ಮಹಿಳೆಯ ಆರ್ತನಾದ ಕೇಳಿದ ರಾಹಿಲನ ಮನದಲ್ಲಿ “ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ?” ಎಂಬ ಪ್ರಶ್ನೆ ಮೊದಲು ಮೂಡಿತು.
ಉತ್ತರ : ರಾಹಿಲ್ ಬಾಗಿಲು ಬಳಿ ನಿಂತು “ದಯವಿಟ್ಟು ಬಾಗಿಲು ತೆಗೆಯಿರಿ. ನಾನು ಗಾಯಗೊಂಡಿದ್ದೇನೆ. ಪ್ಲೀಸ್...” ಎಂದು ದಯನೀಯವಾಗಿ ಅಂಗಲಾಚಿದನು.
ಉತ್ತರ : ರಾಹೀಲನು ಮುದುಕಿಯ ಎದುರಿಗೆ “ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ. ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು” ಎಂದು ಗಂಭೀರವಾಗಿ ನುಡಿದನು.
ಉತ್ತರ : ಮುದುಕಿಯು “ಗಾಯ? ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ತಾನೇ?” ಎಂದು ಗೊಣಗಿಕೊಂಡಳು.
ಉತ್ತರ : ದೀಪದ ಬೆಳಕು ಹೊರಚೆಲ್ಲದಂತೆ ಅದರ ಒಂದು ಭಾಗಕ್ಕೆ ಕಾಗದವನ್ನು ಅಂಟಿಸಲಾಗಿತ್ತು.
ಉತ್ತರ : ಯುದ್ಧದ ಹೆಸರಿನಲ್ಲಿ ಮನುಷ್ಯ ಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ.
ಉತ್ತರ : ರಾಹಿಲನು ಮುದುಕಿಯಿಂದ ಒಂದೆರಡು ಪುಟ್ಟ ಹಲಗೆಗಳನ್ನು ಪಡೆದು ತನ್ನ ಕಾಲಿನ ಎರಡೂ ಭಾಗಗಳಲ್ಲಿ ಬಟ್ಟೆಯಿಂದ ಬಲವಾಗಿ ಬಿಗಿದಾಗ ತನ್ನ ಕಾಲಿನ ಎಲುಬು ತುಂಡಾಗಿಲ್ಲವೆಂದು ತಿಳಿಯಿತು.
ಉತ್ತರ : ಮುದುಕಿಯು ತಾನು ಈ ಊರಿಗೆ ಬಂದು ಐವತ್ತು ವರ್ಷವಾಗಿದೆ ಎಂದು ತಿಳಿಸಿದಳು.
ಉತ್ತರ : “ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ?” ಎಂಬುದು ಯುದ್ಧದ ಬಗೆಗೆ ಮುದುಕಿಯ ಅಭಿಪ್ರಾಯವಾಗಿದೆ.
ಉತ್ತರ : ಮುದುಕಿಯ ಕಣ್ಣುಗಳು “ತನ್ನ ಮನೆಗೆ ಬಂದಿದ್ದಾತ ತಮ್ಮವನಲ್ಲ, ತಮಗೆ, ತಮ್ಮ ದೇಶಕ್ಕೆ ದ್ರೋಹ ಬಗೆಯುವವನು” ಎಂದು ತಿಳಿದಾಗ, ರೋಷದಿಂದ ಕೆರಳಿದವು.
ಉತ್ತರ : ಮುದುಕಿಯು ಮಕ್ಕಳನ್ನು ಯುದ್ಧಕ್ಕೆ ಕರೆದೊಯ್ಯುವವರಿಗೆ ಇವರ ಮನೆ ಹಾಳಾಗ! ಎಂದು ನೆಲಕ್ಕೆ ಕೈ ಬಡಿದು ಶಪಿಸಿದಳು.
ಉತ್ತರ : ಮುದುಕಿಯು ತನ್ನ ಮಗ ಯುದ್ಧಕ್ಕೆ ಹೋಗಿದ್ದಾನೆಂದು ತಿಳಿಸಿದಳು.
ಉತ್ತರ : ಯುದ್ಧಕಾಲದಲ್ಲಿ ರಾತ್ರಿವೇಳೆ ಶತ್ರು ಸೈನಿಕರು ವೈಮಾನಿಕ ದಾಳಿಮಾಡಲು ಅವಕಾಶವಾಗದಂತೆ ವಿದ್ಯುತ್ ದೀಪ, ಬೆಂಕಿಯನ್ನು ಉರಿಸದೆ ಕತ್ತಲಿನಲ್ಲಿದ್ದು ರಕ್ಷಿಸಿಕೊಳ್ಳುವುದೇ ‘ಬ್ಲಾಕ್ ಔಟ್’ ನಿಯಮ.
ಉತ್ತರ : ವೈಮಾನಿಕ ದಾಳಿಯಿಂದ ರಕ್ಷಿಸಿಕೊಳ್ಳಲು ‘ಬ್ಲಾಕ್ ಔಟ್’ ನಿಯಮವನ್ನು ಪಾಲಿಸಲಾಗುತ್ತದೆ.
ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )
ಉತ್ತರ : ವಿಮಾನದ ಪೈಲಟ್ ಡಾಕ್ಟರ್ ಕುರಿತು “ಡಾಕ್ಟರ್! ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗ್ರೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ. ಎಲ್ಲಾದರೂ ಹೇಗಾದರೂ ಇಳಿಯೋಣವೆಂದರೆ ಈ ಕತ್ತಲೆಯಲ್ಲಿ ಏನೂ ಕಾಣಿಸ್ತಾ ಇಲ್ಲವಲ್ಲ?” ಎಂದು ಹೇಳಿದನು.
ಉತ್ತರ : ಮಹಿಳೆಯ ಆರ್ತನಾದ ಕೇಳಿದ ರಾಹಿಲನ ಮನದಲ್ಲಿ “ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ? ಆ ಮನೆಯೊಳಗೆ ಏನು ಸಂಭವಿಸುತ್ತಿದೆ? ತಾನೀಗ ಈ ಕದವನ್ನು ತಟ್ಟಿದರೆ ಪರಿಣಾಮವೇನಾಗಬಹುದು? ಆ ಮನೆಯಿಂದ ಒಂದೇ ಒಂದು ಬೆಳಕಿನ ಕಿರಣವೂ ಹೊರಗಡೆಗೆ ಹಾಯುತ್ತಿಲ್ಲವಲ್ಲ. ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ‘ಬ್ಲಾಕ್ ಔಟ್’ ನಿಯಮ ಪಾಲಿಸಲಾಗುತ್ತದೆ. ಇಂತಹ ಈ ಸಮಯದಲ್ಲಿ ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ?” ಎಂಬ ಪ್ರಶ್ನೆಗಳು ಮೂಡಿದವು.
ಉತ್ತರ : ಮುದುಕಿಯು ರಾಹಿಲನ ಬಳಿ, “ನೋಡಪ್ಪಾ, ನಾನು ಈ ಊರಿಗೆ ಬಂದು ಐವತ್ತು ವರ್ಷಗಳಾದರೂ ಆಗಿರಬಹುದು. ಮದುವೆಯಾಗಿ ನವವಧುವಾಗಿ ಈ ಊರನ್ನು ಪ್ರವೇಶಿಸಿದೆ. ಕೆಲವು ಕಾಲ ನೆಮ್ಮದಿಯಿಂದಲೇ ಇದ್ದೇವು. ಜಮೀನು ಆಸ್ತಿ ನಮಗೆ ಸಾಕಾಗುವಷ್ಟಿತ್ತು. ಈಗಲೂ ಇದೆಯೆನ್ನು. ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ? ಯುದ್ಧವಂತೆ, ಯುದ್ಧ!” ಎಂದು ತಿರಸ್ಕಾರದಿಂದ ನುಡಿದಳು.
ಉತ್ತರ : ನಿರ್ಜೀವಾಗಿರುವ ಮಗುವನ್ನು ನೋಡಿ ಮುದುಕಿಯು “ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ? ಈ ಯುದ್ಧವಿಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ? ಈ ಮನುಷ್ಯರಿಗೆ ಎಂತಹ ಬುದ್ಧಿ ಕೊಡುತ್ತೀಯಾ?” ಎಂದು ನಿರಾಶೆಯಿಂದ ಹೇಳಿದಳು
ಉತ್ತರ : ರಾಹಿಲ್ ತಾನೋರ್ವ ಡಾಕ್ಟರ್ ಎಂದು ತಿಳಿಸಿದಾಗ, ಮುದುಕಿಯು “ಹೌದಾ ಎಂದು ಸಂತೋಷಪಟ್ಟಳು. ಅಲ್ಲಾಹುವೇ ನಿನ್ನನ್ನು ನಮ್ಮ ಬಳಿಗೆ ಕಳಿಸಿದನೆಂದು ತೋರುತ್ತದೆ. ಆದರೆ .. ನೀನು ತುಂಬಾ ಬಳಲಿದ್ದಿ, ನೀರಲ್ಲಿ ಒದ್ದೆಯಾಗಿದ್ದಿ, ಇರು ನನ್ನ ಮಗನ ಬಟ್ಟೆಯನ್ನು ತಂದುಕೊಡವೆ” ಎನ್ನುತ್ತಾ ಒಳ ಹೋಗಿ ತನ್ನ ಮಗನ ಬಟ್ಟೆಗಳನ್ನು ರಾಹಿಲನಿಗೆ ನೀಡಿದಳು.
ಉತ್ತರ : ನಿರ್ಜಿವವಾಗಿರುವ ಮಗುವಿನ ಬಳಿ ಕುಳಿತು ಮುದುಕಿ ಸೈನಿಕರಿಗೆ “ಹೂಂ...ನೋಡಿ; ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ; ಅದನ್ನೂ ನೋಡಿ! ಈ ಯುದ್ಧ ನನ್ನ ಮೊಮ್ಮಗುವನ್ನೂ ಉಳಿಸಲಿಲ್ಲವಲ್ಲ? ಯಾರಿಗಾಗಿ, ಯಾತಕ್ಕಾಗಿ ಈ ಯುದ್ಧ? ಅದನ್ನಾದರೂ ಹೇಳಿರಲ್ಲ?” ಎಂದು ಹೇಳಿದಳು.
ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ (3 ಅಂಕ)
ಆಯ್ಕೆ : ಪ್ರಸ್ತುತ ವಾಕ್ಯವನ್ನು ಲೇಖಕಿ ಶ್ರೀಮತಿ ‘ಸಾರಾ ಅಬೂಬಕ್ಕರ್’ ಅವರು ರಚಿಸಿರುವ ‘ಚಪ್ಪಲಿಗಳು’ ಕಥಾಸಂಕಲನದಿಂದ ಆರಿಸಿದ ‘ಯುದ್ಧ’ ಎಂಬ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಸೇನಾ ಡಾಕ್ಟರ್ ರಾಹಿಲನು ಶತ್ರು ಸೈನಿಕರ ವೈಮಾನಿಕ ದಾಳಿಯಿಂದ ಸಮುದ್ರಕ್ಕೆ ಬಿದ್ದು, ಕಾಲಿಗೆ ಗಾಯಮಾಡಿಕೊಂಡು, ಕತ್ತಲಿನಲ್ಲೇ ಈಜಿ ದಡ ಸೇರುತ್ತಾನೆ. ಅಲ್ಲಿಂದ ತಪ್ಪಿಸಿಕೊಂಡು ಬರುವಾಗ ಧಾರಾಕಾರವಾದ ಮಳೆ ಸುರಿಯುತ್ತಿತ್ತು. ರಕ್ಷಣೆ ಪಡೆಯಲೆಂದು ಹುಡುಕುತ್ತಿರುವಾಗ, ಒಂಟಿ ಮನೆಯೊಂದನ್ನು ಕಾಣುತ್ತಾನೆ. ನಂತರ ಆ ಮನೆಯ ಬಳಿಗೆ ತೆವಳಿಕೊಂಡು ಹೋಗಿ ಬಾಗಿಲನ್ನು ತಟ್ಟುತ್ತ ಡಾಕ್ಟರ್ ರಾಹಿಲನು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ : ಶತ್ರುಗಳಿಂದ ತಪ್ಪಿಸಿಕೊಂಡು, ಶತ್ರುದೇಶದ ಮನೆಗೇ ಬಂದು, ಹೇಗಾದರೂ ಮಾಡಿ ರಕ್ಷಣೆ ಬೇಡಿ ಜೀವ ಉಳಿಸಿಕೊಳ್ಳಬೇಕೆಂಬ ರಾಹೀಲನ ಹಂಬಲ, ಆತನ ದಯನೀಯ ಸ್ಥಿತಿ ಪ್ರಸ್ತುತ ಮಾತಿನಲ್ಲಿ ಅರ್ಥಪೂರ್ಣವಾಗಿ ಮೂಡಿಬಂದಿದೆ.
ಆಯ್ಕೆ : ಪ್ರಸ್ತುತ ವಾಕ್ಯವನ್ನು ಲೇಖಕಿ ಶ್ರೀಮತಿ ‘ಸಾರಾ ಅಬೂಬಕ್ಕರ್’ ಅವರು ರಚಿಸಿರುವ ‘ಚಪ್ಪಲಿಗಳು’ ಕಥಾಸಂಕಲನದಿಂದ ಆರಿಸಿದ ‘ಯುದ್ಧ’ ಎಂಬ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಮುದುಕಿಯು “ನನ್ನ ಸೊಸೆ ಹೆರಿಗೆ ಬೇನೆ ತಿನ್ನುತ್ತಿದ್ದಾಳೆ. ಸಂಜೆಯಿಂದಲೇ ನೋವು ಪ್ರಾರಂಭವಾಗಿದೆ. ಡಾಕ್ಟರ್ ಅಥವಾ ಸೂಲಗಿತ್ತಿಯನ್ನದರೂ ಕರೆಯೋಣವೆಂದರೇ ಈ ಬಾಂಬುಗಳು, ಬ್ಲಾಕ್ ಔಟ್ ನಿಯಮ” ಎಂದು ಹೇಳಿದ ಮಾತುಗಳನ್ನು ಕೇಳಿದ ಸೇನಾವೈದ್ಯನಾದ ರಾಹಿಲನು ಮುದುಕಿಗೆ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ : ತನ್ನ ಕಾಲಿಗೆ ಪೆಟ್ಟಾಗಿ ಅತಿಯಾದ ನೋವಿದ್ದರೂ, ಅದನ್ನು ಲೆಕ್ಕಿಸದೇ ಮುದುಕಿಯ ಸೊಸೆಗೆ ಹೆರಿಗೆ ಮಾಡಿಸಲು ಮಂದಾಗುವ ರಾಹೀಲನ ವೃತ್ತಿಧರ್ಮ ಮತ್ತು ಪರೋಪಕಾರದ ಗುಣ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ”.
ಆಯ್ಕೆ : ಪ್ರಸ್ತುತ ವಾಕ್ಯವನ್ನು ಲೇಖಕಿ ಶ್ರೀಮತಿ ‘ಸಾರಾ ಅಬೂಬಕ್ಕರ್’ ಅವರು ರಚಿಸಿರುವ ‘ಚಪ್ಪಲಿಗಳು’ ಕಥಾಸಂಕಲನದಿಂದ ಆರಿಸಿದ ‘ಯುದ್ಧ’ ಎಂಬ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ತನ್ನ ಮನೆಗೆ ಬಂದಿರುವಾತ ತಮ್ಮವನಲ್ಲ, ಶತ್ರುಗಳ ಕಡೆಯವನು. ತಮಗೆ, ತಮ್ಮ ದೇಶಕ್ಕೆ ದ್ರೋಹ ಬಗೆಯುವವನು ಎಂದು ಮುದುಕಿಯು ತಿಳಿದಾಗ, ಆಕೆಯ ಕಣ್ಣುಗಳು ರೋಷದಿಂದ ಕ್ಷಣಕಾಲ ಕೆರಳಿದವು. ನಂತರ ಬಾಗಿಲ ಬಳಿ ಸಮೀಪಿಸುತ್ತಾ ಆತನ ದಯನೀಯ ನೋಟದ ಮುಖ ನೋಡಿದಾಗ ಯುದ್ಧಕ್ಕೆ ಹೋದ ತನ್ನ ಮಗ ನೇನಪಾಗಿ ಮುದುಕಿಯು ತನ್ನಲ್ಲೇ ಈ ಮಾತನ್ನು ಹೇಳಿಕೊಳ್ಳುತ್ತಾಳೆ.
ಸ್ವಾರಸ್ಯ : ಕಷ್ಟದಲ್ಲಿದ್ದರೂ ತನ್ನ ಸೊಸೆಯ ಪ್ರಾಣ ಉಳಿಸಿದ ರಾಹೀಲನಲ್ಲಿ ಮುದುಕಿಯು ತನ್ನ ಮಗನನ್ನು ಕಾಣುವ ಭಾವವು ಆಕೆಯಲ್ಲಿರುವ ಮಾತೃವಾತ್ಸಲ್ಯವನ್ನು ಸ್ವಾರಸ್ಯಪೂರ್ಣವಾಗಿ ವ್ಯಕ್ತಗೊಳಿಸಿದೆ.
ಆಯ್ಕೆ : ಪ್ರಸ್ತುತ ವಾಕ್ಯವನ್ನು ಲೇಖಕಿ ಶ್ರೀಮತಿ ‘ಸಾರಾ ಅಬೂಬಕ್ಕರ್’ ಅವರು ರಚಿಸಿರುವ ‘ಚಪ್ಪಲಿಗಳು’ ಕಥಾಸಂಕಲನದಿಂದ ಆರಿಸಿದ ‘ಯುದ್ಧ’ ಎಂಬ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಸೈನಿಕರ ಉಡುಪಿನಲ್ಲಿದ್ದ ನಾಲ್ಕೈದು ಜನರು “ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ?” ಎಂದು ಕೇಳುತ್ತಾ ಮುದುಕಿಯ ಮನೆಗೆ ನುಗ್ಗಿದಾಗ, ಮುದುಕಿಯು “ಇಲ್ಲವಲ್ಲಾ” ಎನ್ನುತ್ತಾಳೆ. ಆದರೆ ಅಧಿಕಾರಿ “ಆದರೂ ಮನೆಯಲೊ ್ಲಮ್ಮೆ ನೋಡಿ ಬಿಡಿ” ಎಂದು ಸೈನಿಕರಿಗೆ ಅಪ್ಪಣೆ ಮಾಡುತ್ತಾನೆ. ಆಗ ಮುದುಕಿಯು ರಾಹಿಲನ್ನು ರಕ್ಷಿಸುವ ಸಲುವಾಗಿ ಸತ್ತ ಮುಗುವಿನ ಬಳಿ ಕುಳಿತು ಎದೆ ಬಡಿದು ಕೊಳ್ಳುತ್ತಾ ಈ ಮಾತನ್ನು ಹೇಳುತ್ತಾಳೆ.
ಸ್ವಾರಸ್ಯ : ಶತ್ರು ದೇಶದವನಾದರೂ ತನ್ನ ಗಾಯದ ನೋವನ್ನು ಸಹಿಸಿಕೊಂಡು, ಸೊಸೆಯ ಪ್ರಾಣ ಉಳಿಸಿದ ರಾಹೀಲನನ್ನು ರಕ್ಷಿಸುವ ಮುದುಕಿಯ ಉಪಾಯ ಮತ್ತು ಮಾನವೀಯತಾ ಗುಣ ಹಾಗೂ ಯುದ್ಧದ ಪರಿಣಾಮದ ವಾಚ್ಯಾರ್ಥ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.
ಆಯ್ಕೆ : ಪ್ರಸ್ತುತ ವಾಕ್ಯವನ್ನು ಲೇಖಕಿ ಶ್ರೀಮತಿ ‘ಸಾರಾ ಅಬೂಬಕ್ಕರ್’ ಅವರು ರಚಿಸಿರುವ ‘ಚಪ್ಪಲಿಗಳು’ ಕಥಾಸಂಕಲನದಿಂದ ಆರಿಸಿದ ‘ಯುದ್ಧ’ ಎಂಬ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಸೇನಾ ಡಾP್ಟÀರ್ ರಾಹಿಲನು ಶತ್ರು ಸೈನಿಕರ ವೈಮಾನಿಕ ದಾಳಿಯಿಂದ ಸಮುದ್ರಕ್ಕೆ ಬಿದ್ದು, ಕಾಲಿಗೆ ಗಾಯಮಾಡಿಕೊಂಡು, ಕತ್ತಲಿನಲ್ಲೇ ಈಜಿ ದಡ ಸೇರುತ್ತಾನೆ. ಅಲ್ಲಿಂದ ತಪ್ಪಿಸಿಕೊಂಡು ಬರುವಾಗ ಧಾರಾಕಾರವಾದ ಮಳೆ ಸುರಿಯುತ್ತಿತ್ತು. ರಕ್ಷಣೆ ಪಡೆಯಲೆಂದು ಹುಡುಕುತ್ತಿರುವಾಗ, ಒಂಟಿ ಮನೆಯೊಂದನ್ನು ಕಾಣುತ್ತಾನೆ. ಆ ಒಂಟಿಮನೆಯಿಂದ ಮಹಿಳೆಯೊಬ್ಬಳ ಆರ್ತನಾದ ರಾಹಿಲನು ಕೇಳಿ ಅವನ ಮನದಲ್ಲಿ ಅನೇಕ ಪ್ರಶ್ನೆಗಳು ಮೂಡಿದ ಸಂದರ್ಭದಲ್ಲಿ ಬಂದ ಪ್ರಶ್ನೆ ಇದು.
ಸ್ವಾರಸ್ಯ : ಶತ್ರುಗಳಿಂದ ತಪ್ಪಿಸಿಕೊಂಡು, ಶತ್ರುದೇಶದ ಮನೆಗೇ ಬಂದು, ಹೇಗಾದರೂ ಮಾಡಿ ರಕ್ಷಣೆ ಬೇಡಿ ಜೀವ ಉಳಿಸಿಕೊಳ್ಳಬೇಕೆಂಬ ಸಂದರ್ಭದಲ್ಲಿÉೂಂಟಿಮನೆಯ ಮಹಿಳೆಯ ಆರ್ತನಾದ ರಾಹಿಲನಲ್ಲಿ ಭಯವನ್ನುಂಟು ಮಾಡಿದ್ದು ಮೇಲಿನ ಪ್ರಶ್ನೆಯಲ್ಲಿ ಮೂಡಿಬಂದಿದೆ.
ಆಯ್ಕೆ : ಪ್ರಸ್ತುತ ವಾಕ್ಯವನ್ನು ಲೇಖಕಿ ಶ್ರೀಮತಿ ‘ಸಾರಾ ಅಬೂಬಕ್ಕರ್’ ಅವರು ರಚಿಸಿರುವ ‘ಚಪ್ಪಲಿಗಳು’ ಕಥಾಸಂಕಲನದಿಂದ ಆರಿಸಿದ ‘ಯುದ್ಧ’ ಎಂಬ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಸೇನಾ ಡಾP್ಟÀರ್ ರಾಹಿಲನು ಶತ್ರು ಸೈನಿಕರ ವೈಮಾನಿಕ ದಾಳಿಯಿಂದ ಸಮುದ್ರಕ್ಕೆ ಬಿದ್ದು, ಕಾಲಿಗೆ ಗಾಯಮಾಡಿಕೊಂಡು, ಕತ್ತಲಿನಲ್ಲೇ ಈಜಿ ದಡ ಸೇರುತ್ತಾನೆ. ಅಲ್ಲಿಂದ ತಪ್ಪಿಸಿಕೊಂಡು ಬರುವಾಗ ಧಾರಾಕಾರವಾದ ಮಳೆ ಸುರಿಯುತ್ತಿತ್ತು. ರಕ್ಷಣೆ ಪಡೆಯಲೆಂದು ಹುಡುಕುತ್ತಿರುವಾಗ, ಒಂಟಿ ಮನೆಯೊಂದನ್ನು ಕಾಣುತ್ತಾನೆ. ನಂತರ ಆ ಮನೆಯ ಬಳಿಗೆ ತೆವಳಿಕೊಂಡು ಹೋಗಿ ಬಾಗಿಲನ್ನು ತೆರೆದಾಗ ಒಳ ಪ್ರವೇಶಿಸಿದ ಅಪರಿಚಿತ ರಾಹಿಲನ ಬಳಿಗೆ ಬಂದ ಆ ಒಂಟಿಮನೆಯಲ್ಲಿನ ಮುದುಕಿ ಪ್ರಶ್ನಿಸಿದ ಸಂದರ್ಭದಲ್ಲಿ ಬಂದ ಮಾತುಗಳಿವು.
ಸ್ವಾರಸ್ಯ : ಮುದುಕಿಯ ಈ ಮಾತುಗಳಲ್ಲಿ ಆಕೆಯಲ್ಲಿ ರಾಹಿಲನ ಬಗ್ಗೆ ಭಯ ಮತ್ತು ಸಂದೇಹದ ಛಾಯೆ ಇರುವುದು ಸ್ವಾರಸ್ಯಪೂರ್ಣವಾಗಿ ಮೂಡಿ ಬಂದಿದೆ.
ಆಯ್ಕೆ : ಪ್ರಸ್ತುತ ವಾಕ್ಯವನ್ನು ಲೇಖಕಿ ಶ್ರೀಮತಿ ‘ಸಾರಾ ಅಬೂಬಕ್ಕರ್’ ಅವರು ರಚಿಸಿರುವ ‘ಚಪ್ಪಲಿಗಳು’ ಕಥಾಸಂಕಲನದಿಂದ ಆರಿಸಿದ ‘ಯುದ್ಧ’ ಎಂಬ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಸೇನಾ ಡಾP್ಟÀರ್ ರಾಹಿಲನು ಶತ್ರು ಸೈನಿಕರ ವೈಮಾನಿಕ ದಾಳಿಯಿಂದ ರಕ್ಷಣೆ ಪಡೆಯಲೆಂದು ಹುಡುಕುತ್ತಿರುವಾಗ, ಒಂಟಿ ಮನೆಯೊಂದನ್ನು ಕಾಣುತ್ತಾನೆ. ನಂತರ ಆ ಮನೆಯ ಬಳಿಗೆ ತೆವಳಿಕೊಂಡು ಹೋಗಿ ಬಾಗಿಲನ್ನು ತೆರೆದಾಗ ಒಳ ಪ್ರವೇಶಿಸುತ್ತಾನೆ. ಅಲ್ಲಿ ಮುದುಕಿಯ ಸೊಸೆಯ ಹೆರಿಗೆ ನೋವಿನ ಆರ್ತನಾದ ಕೇಳಿ ರಾಹಿಲನು ಮುದುಕಿಯನ್ನು ಪ್ರಶ್ನಿಸುತ್ತ ಈ ಮೇಲಿನ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ : ತನ್ನ ಕಾಲಿಗೆ ಪೆಟ್ಟಾಗಿ ಅತಿಯಾದ ನೋವಿದ್ದರೂ, ಅದನ್ನು ಮರೆತು ಮುದುಕಿಯ ಸೊಸೆಯ ಬಗ್ಗೆ ರಾಹಿಲನು ವಿಚಾರಿಸುವಲ್ಲಿ ಆತನ ಪರರ ನೋವಿಗೆ ಸ್ಪಂದಿಸುವ ಮಾನವೀಯತೆಯ ಗುಣ ಸ್ವಾರಸ್ಯಪೂರ್ಣವಾಗಿ ಮೂಡಿ ಬಂದಿದೆ.
ಆಯ್ಕೆ : ಪ್ರಸ್ತುತ ವಾಕ್ಯವನ್ನು ಲೇಖಕಿ ಶ್ರೀಮತಿ ‘ಸಾರಾ ಅಬೂಬಕ್ಕರ್’ ಅವರು ರಚಿಸಿರುವ ‘ಚಪ್ಪಲಿಗಳು’ ಕಥಾಸಂಕಲನದಿಂದ ಆರಿಸಿದ ‘ಯುದ್ಧ’ ಎಂಬ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ರಾಹಿಲನು ತನ್ನ ರಕ್ಷಣೆಗೆಂದು ಪ್ರವೇಶಿಸಿದ ಮನೆಯ ಹೆಂಗಸೊಬ್ಬಳು ಹೆರಿಗೆ ನೋವಿನಿಂದ ಬಳಲುತ್ತಿರುವುದನ್ನು ಕಂಡು ತಾನೋರ್ವ ವೈದ್ಯನಾಗಿರುವುದರಿಂದ ಆ ಮಹಿಳೆಯ ಹೇರಿಗೆ ಮಾಡಿಸಲು ಮುಂದಾಗುತ್ತಾನೆ. ಜೀವಿಯೊಂದನ್ನು ಹೊರಹಾಕಲು ಆ ಹೆಣ್ಣುಮಗಳು ತನ್ನ ಜೀವವನ್ನೇ ಪಣಕ್ಕಿಟ್ಟುವುದನ್ನು ಕಂಡು ರಾಹಿಲನ ಮನದಲಿ ್ಲ ಈ ಮೇಲಿನ ಮಾತು ಮೂಡಿಬಂದಿದೆ.
ಸ್ವಾರಸ್ಯ : ಒಂದೆಡೆ ಹೊಸ ಜೀವಿಗೆ ಜನ್ಮನೀಡಲು ತನ್ನ ಜೀವವನ್ನೇ ಪಣಕ್ಕಿಡುವ ತಾಯಿ, ಮತ್ತೊಂದೆಡೆ ಯುದ್ಧದ ಹೆಸರಿನಲ್ಲಿ ನಡೆಯುವ ರಕ್ತಪಾತದ ಸಾವು ರಾಹಿಲನಲ್ಲಿ ವೈಚಿತ್ರ್ಯವನ್ನು ಮೂಡಿಸಿರುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.
ಆಯ್ಕೆ : ಪ್ರಸ್ತುತ ವಾಕ್ಯವನ್ನು ಲೇಖಕಿ ಶ್ರೀಮತಿ ‘ಸಾರಾ ಅಬೂಬಕ್ಕರ್’ ಅವರು ರಚಿಸಿರುವ ‘ಚಪ್ಪಲಿಗಳು’ ಕಥಾಸಂಕಲನದಿಂದ ಆರಿಸಿದ ‘ಯುದ್ಧ’ ಎಂಬ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ರಾಹಿಲನು ಮುದುಕಿಯ ಬಳಿ ಚರ್ಚಿಸುತ್ತ ಯುದ್ಧದ ಬಗೆಗೆ ಕೇಳುತ್ತಾನೆ. ಆಗ ಮುದುಕಿಯು ಇಲ್ಲಿನ ಜನರು ದುಡಿಯುವ ಜನರಿಂದ ಹಣ ದೋಚುವುದಲ್ಲದೇ, ಮನೆಯ ಮಕ್ಕಳನ್ನು ಯುದ್ಧಕ್ಕೆ ಕರೆದೊಯ್ಯುತ್ತಾರೆ. ಇವರ ಮನೆ ಹಾಳಾಗಿ ಹೋಗಲಿ ಎಂದು ಶಪಿಸುತ್ತ ಈ ಮೇಲಿನ ಮಾತನ್ನು ನುಡಿದಳು.
ಸ್ವಾರಸ್ಯ : ಮುದುಕಿಯು ತಾನು ವಾಸಿಸುವ ಊರಿನ ಜನರ ದೌರ್ಜನ್ಯಕ್ಕೆ ಬೇಸತ್ತು ಶಪಿಸುತ್ತ ನುಡಿದ ಈ ಮಾತು ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ.
ಆಯ್ಕೆ : ಪ್ರಸ್ತುತ ವಾಕ್ಯವನ್ನು ಲೇಖಕಿ ಶ್ರೀಮತಿ ‘ಸಾರಾ ಅಬೂಬಕ್ಕರ್’ ಅವರು ರಚಿಸಿರುವ ‘ಚಪ್ಪಲಿಗಳು’ ಕಥಾಸಂಕಲನದಿಂದ ಆರಿಸಿದ ‘ಯುದ್ಧ’ ಎಂಬ ಗದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಶತ್ರು ದೇಶದ ಸೈನಿಕನು ಆ ಮನೆಯನ್ನು ಪ್ರವೇಶಿಸಿರಬಹುದು ಎಂಬ ಅನುಮಾನದಿಂದ ಮುದುಕಿಯ ಮನೆಯನ್ನು ಪ್ರವೇಶಿಸಿದ ಸೈನಿಕರಲಿ ್ಲ ಒಬ್ಬ ಸೈನಿಕ “ವಿಮಾನವನ್ನೇ ನಾವು ಹೊಡೆದುರುಳಿಸಿರುವಾಗ ಅದರಿಂದ ಯಾರು ಬದುಕಿರಲಾರರು. ಅಲ್ಲದೇ ಈ ಕತ್ತಲಿನಲ್ಲಿ ಸುಮ್ಮನೇ ವ್ಯರ್ಥಪ್ರಯತ್ನ ಮಾಡಬೇಕಿದೆ” ಎಂದು ಹೇಳಿದ ಸಂದರ್ಭದಲ್ಲಿ ಹಿರಿಯ ಸೈನಿಕ ಅಧಿಕಾರಿ ಈ ಮೇಲಿನ ಮಾತನ್ನು ಸೈನಿಕರಿಗೆ ಆದೇಶದ ರೀತಿಯಲ್ಲಿ ಹೇಳುತ್ತಾನೆ.
ಸ್ವಾರಸ್ಯ : ವಿಮಾನ ಹೊಡೆದುರುಳಿಸಿದರೂ ಯಾರಾದರೂ ಬದುಕಿ ಈ ಮನೆ ಪ್ರವೇಶಿಸಿರಬಹುದೆಂಬ ಅನುಮಾನದಿಂದ ಸೈನಿಕ ಅಧಿಕಾರಿ ಮನೆಯ ಸಂಪೂರ್ಣ ವೀಕ್ಷಣೆ ಮಾಡಿಸಲು ಹೇಳಿರುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.
ಲೇಖಕರ ಪರಿಚಯ(3 ಅಂಕ)
ಸಾ.ರಾ.ಅಬೂಬಕ್ಕರ್ : ನಾಡಿನ ಖ್ಯಾತ ಕತೆಗಾರ್ತಿ ಮತ್ತು ಕಾದಂಬರಿಗಾರ್ತಿಯಾಗಿ ಜನಪ್ರಿಯತೆ ಗಳಿಸಿರುವ ಸಾರಾ ಅಬೂಬಕ್ಕರ್ ಅವರು 30 ಜೂನ್ 1936ರಂದು ಕಾಸರಗೋಡಿನಲ್ಲಿ ಜನಿಸಿದರು. ಚಂದ್ರಗಿರಿಯ ತೀರದಲ್ಲಿ, ಸಹನಾ, ಕದನ ವಿರಾಮ, ವಜ್ರಗಳು, ಸುಳಿಯಲ್ಲಿ ಸಿಕ್ಕವರು, ತಳ ಒಡೆದ ದೋಣಿಯಲಿ ಮೊದಲಾದುವು ಇವರು ಬರೆದ ಪ್ರಮುಖ ಕಾದಂಬರಿಗಳು. ಚಪ್ಪಲಿಗಳು, ಖೆಡ್ಡಾ, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಪಯಣ ಇವು ಪ್ರಮುಖ ಕಥಾಸಂಕಲನಗಳು. ಇವರ ಸಾಹಿತ್ಯ ಕೃಷಿಗಾಗಿ ಅನೇಕ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ ಪ್ರಶಸ್ತಿ’ ಲಭಿಸಿವೆ.
ಎಂಟು-ಹತ್ತು ವಾಕ್ಯದಲ್ಲಿ ಉತ್ತರ ಬರೆಯಿರಿ(4 ಅಂಕ)
ಉತ್ತರ : : ಮುದುಕಿಯು ಚಿಕ್ಕ ಮಕ್ಕಳನ್ನು ಯುದ್ಧಕ್ಕೆ ಕರೆದೊಯ್ಯುತ್ತಾರೆ ಎಂಬ ವಿಷಯವನ್ನು ಹೇಳಿದಾಗ ರಾಹಿಲನು” ಈಗ ನಿಮ್ಮ ಮಗನೆಲ್ಲಿದ್ದಾನಮ್ಮಾ?” ಎಂದು ಕೇಳಿದನು. ಆಗ ಮುದುಕಿಯು ತನ್ನ ಮಗ ಯುದ್ಧಕ್ಕೆ ಹೋದ ಸಂದರ್ಭವನ್ನು ಹೀಗೆ ವಿವರಿಸಿದಳು. “ಯುದ್ಧಕ್ಕೆ ಹೋಗಿದ್ದಾನೆ! ನನ್ನ ಮಗನಿನ್ನೂ ಚಿಕ್ಕ ಹುಡುಗನಾಗಿದ್ದಾಗ ಯುದ್ಧಕ್ಕೆ ಹೋದ ಅವನ ತಂದೆ ಹಿಂತಿರುಗಲಿಲ್ಲ. ಎದೆ ತುಂಬ ಬೂದಿ ಮುಚ್ಚಿದ ಕೆಂಡ. ಎದೆಯ ಗಾಯ ಇಂದಿಗೂ ಇದೆ, ನೋಡು. ಎಲ್ಲಾ ದುಃಖ ನುಂಗಿಕೊಂಡು ಮಗನನ್ನು ಸಾಕಿ ಸಲಹಿದೆ. ಮದುವೆಯನ್ನೂ ಮಾಡಿದೆ. ಈಗ ಐದಾರು ವರ್ಷಗಳ ಬಳಿಕ ಸೊಸೆ ಗರ್ಭಿಣಿಯಾದಳು. ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ ಮಗ ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು. ಅಷ್ಟರಲ್ಲಿ ಬಂತು ಯುದ್ಧ! ಅವನೊಮ್ಮೆ ಹಿಂತಿರುಗಿ ಬಂದಿದ್ದರೆ ಸಾಕಾಗಿತ್ತು. ಈ ವಿಷಯ ತಿಳಿದು ಅವನೆಷ್ಟು ಸಂಕಟ ಪಡುತ್ತಾನೋ...” ಮುದುಕಿಯ ಮಗ ಚಿಕ್ಕವನಿರುವಾಗ ಗಂಡನು ಯುದ್ಧದಲ್ಲಿ ತೀರಿಹೋದನು. ಈ ನೋವನ್ನು ಮಗನಿಗಾಗಿ ಸಹಿಸಿಕೊಂಡಳು. ಮಗನನ್ನು ಬೆಳಸಿ ದೊಡ್ಡವನನ್ನಾಗಿ ಮಾಡಿ ಮದುವೆ ಮಾಡಿದಳು. ಮೊಮ್ಮಗು ಬರುವ ಸಂತೋಷದಲ್ಲಿದ್ದರು. ಆದರೆ ಮೊಮ್ಮಗು ಸಹ ತೀರಿ ಹೋಯಿತು. ಯುದ್ಧಕ್ಕೆ ಹೋದ ಮಗ ಬಂದರೆ ಸಾಕು ಎಂದುಕೊಳ್ಳುತ್ತಿದ್ದಳು. ಒಟ್ಟಾರೆ ಯುದ್ಧವು ಮುದುಕಿಯ ಬಾಳಲ್ಲಿ ಬಹಳಷ್ಟು ದುರಂತ ತಂದಿತು ಎಂಬುದು ಅವಳ ಮಾತಲ್ಲಿ ಕಾಣುತ್ತದೆ.
ಉತ್ತರ : : ಸೈನ್ಯದಲ್ಲಿ ವೈದ್ಯನಾಗಿದ್ದ ರಾಹಿಲನು ವಿಮಾನ ಸ್ಪೋಟದಿಂದ ಗಾಯಗೊಂಡು ನೀರಿನಲ್ಲಿ ಬಿದ್ದನು. ಪ್ರಾಯಾಸದಿಂದ ಈಜಿ ದಡ ಸೇರಿದರೂ ಕಾಲಿಗೆ ಗಾಯವಾದ್ದರಿಂದ ನಡೆಯಲಾರದೆ ಆ ಕತ್ತಲಲ್ಲಿ ಮಿಂಚಿನ ಬೆಳಕನ್ನು ಅನುಸರಿಸಿ ಧಾರಾಕಾರ ಮಳೆಯಲ್ಲಿ ಒಂಟಿ ಮನೆಗೆ ತೆವಳುತ್ತಾ ಬಂದನು. ಆ ಮನೆಯಲ್ಲಿ ಮುದುಕಿಯ ಸೊಸೆ ಹೆರಿಗೆ ಬೇನೆಯಲ್ಲಿ ಕಷ್ಟಪಡುತ್ತಾ ನೆರಳುತ್ತಿದ್ದಳು. ರಾಹಿಲನು “ ಅಮ್ಮಾ ನಾನೊರ್ವ ಡಾಕ್ಟರ್ ನಾನಾಕೆಯನ್ನು ಪರೀಕ್ಷಿಸಲೇ?” ಎಂದು ಕೇಳಿದನು. ಮುದುಕಿಯು ಸಂತೋಷದಿಂದ ಒಪ್ಪಿಕೊಳ್ಳುವಳು. ರಾಹಿಲನು ತನ್ನ ಒದ್ದೆ ಬಟ್ಟೆ ಬದಲಿಗೆ ಮುದುಕಿ ಕೊಟ್ಟ ಆಕೆಯ ಮಗನ ಬಟ್ಟೆ ಧರಿಸುತ್ತಾನೆ. ತನಗೆ ತೀರ್ವವಾಗಿ ಕಾಲಿಗೆ ಪೆಟ್ಟಾಗಿದ್ದರೂ ಅದನ್ನು ಕಡೆಗಣಿಸಿ, ಸೊಸೆಯ ಆರೈಕೆಗೆ ಸಿದ್ಧನಾಗುತ್ತಾನೆ. ಸೊಸೆಯನ್ನು ಪರೀಕ್ಷಿಸುತ್ತಾನೆ. ಯಾವುದೇ ವೈದ್ಯಕೀಯ ಉಪಕರಣ ಔಷಧಿಗಳು ಇಲ್ಲದ್ದಿದ್ದರೂ ತನ್ನ ವೈದ್ಯ ವೃತ್ತಿಯ ಅನುಭವದ ಮೇಲೆ ಬಹಳಷ್ಟು ಪ್ರಯತ್ನಪಟ್ಟು ಸೊಸೆಯನ್ನು ಬದುಕಿಸುತ್ತಾನೆ. ಆದರೆ ಮಗುವನ್ನು ಬದುಕಿಸಲಾಗಲಿಲ್ಲ. ರಾಹಿಲನು ಇಲ್ಲದಿದ್ದರೆ ಸೊಸೆಯೂ ಬದುಕುತ್ತಿರಲಿಲ್ಲ. ಮುದುಕಿಯು ರಾಹಿಲನು ಯುದ್ಧದ ಅಪರಾತ್ರಿ ಮಳೆಯಲ್ಲಿ ಬಂದಾಗ ಆಶ್ರಯ ನೀಡುತ್ತಾಳೆ. ತನ್ನ ಮಗನ ಬಟ್ಟೆ ಕೊಡುತ್ತಾಳೆ. ಸೊಸೆಯನ್ನು ರಕ್ಷಿಸಿದ್ದರಿಂದ ಆತನಲ್ಲಿ ತನ್ನ ಮಗನನ್ನು ಕಾಣುತ್ತಾಳೆ. ರಾಹಿಲನ ಪಾಲಿನ ವೈರಿಸೈನಿಕರು ಮುದುಕಿಯ ಮನೆ ಶೋಧಿಸಲು ಮನೆ ಹೊರಗೆ ಬಂದಾಗ ತನ್ನ ಸೊಸೆಯ ಮಂಚದಡಿ ರಾಹಿಲನನ್ನು ಅಡಗಿಸುತ್ತಾಳೆ. ಸೈನಿಕರು ಒಳ ಬಂದಾಗ ಮೊಮ್ಮಗುವಿನ ಶವದ ಎದಿರು ಗೋಳಾಡುತ್ತಾಳೆ. ಇದನ್ನು ಕಂಡ ಸೈನಿಕರು ಹೊರಟು ಹೋಗುತ್ತಾರೆ. ನಂತರ ಮುದುಕಿ ರಾಹಿಲ£ಗೆ ಉಳಿಯಲು ಬೇರೆ ಕೋಣೆ ವ್ಯವಸ್ಥೆ ಮಾಡುತ್ತಾಳೆ. ಒಂದೆರಡು ದಿನಗಳಲ್ಲಿಯೇ ಪರಸ್ಪರರಲ್ಲಿ ವಿಶ್ವಾಸ ಮೂಡಿತು. ಹೀಗೆ ರಾಹಿಲನು ಮುದುಕಿಯ ಮನೆಗೆ ಮತ್ತು ಮುದುಕಿಯು ರಾಹಿಲನಿಗೆ ನೆರವಾದರು.
« BACK ಮುಂದಿನ ಅಧ್ಯಾಯ
THANK URMH-9731734068
ಧನ್ಯವಾದಗಳು
ಪ್ರತ್ಯುತ್ತರಅಳಿಸಿExclent 👍
ಪ್ರತ್ಯುತ್ತರಅಳಿಸಿThank U
ಪ್ರತ್ಯುತ್ತರಅಳಿಸಿಚೆನ್ನಾಗಿದೆ ಸರ್
ಪ್ರತ್ಯುತ್ತರಅಳಿಸಿಉತ್ತಮವಾಗಿದೆ ಸರ್ ಧನ್ಯವಾದಗಳು
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್
ಪ್ರತ್ಯುತ್ತರಅಳಿಸಿಉತ್ತಮವಾಗಿದೆ ಸರ್.
ಪ್ರತ್ಯುತ್ತರಅಳಿಸಿThank you
ಪ್ರತ್ಯುತ್ತರಅಳಿಸಿಅತ್ಯುತ್ತಮವಾಗಿದೆ.ಗುರುಗಳೆ
ಪ್ರತ್ಯುತ್ತರಅಳಿಸಿಅತ್ಯುತ್ತಮವಾಗಿದೆ ಗುರುಗಳೆ
ಪ್ರತ್ಯುತ್ತರಅಳಿಸಿತಮ್ಮ ಬ್ಲಾಗ್ ನಿಜಕ್ಕೂ ಉತ್ತಮವಾಗಿ ಕನ್ನಡ ಸೇವೆಗೆ ಬದ್ಧವಾಗಿದೆ..ಎಲ್ಲವನ್ನು ಅತ್ಯುತ್ತಮವಾಗಿ ಮಾಡುತ್ತಿದ್ಧೀರಿ..ತಮ್ಮ ಪರಿಶ್ರಮಶುಲತೆಗೆ ಅನಂತಾನಂತ ಧನ್ಯವಾದಗಳು ಸರ್..ಒಳಿತಾಗಲಿ..🙏🙏🙏
ಪ್ರತ್ಯುತ್ತರಅಳಿಸಿ