PPA-3

RMH

ಪ.ಪೋ.ಅ-3 ಭಗತ್‌ಸಿಂಗ್.

ಒಂದು ಅಂಕದ ಪ್ರಶ್ನೆಗಳು

ಉತ್ತರ : ಜಲಿಯನ್ ವಾಲಾಬಾಗ್ನಲ್ಲಿ ಓಡಾಡುತ್ತಿದ್ದ ಹನ್ನೆರೆಡು ವರ್ಷದ ಬಾಲಕ ಭಗತ್ಸಿಂಗ್.

ಉತ್ತರ : ಬಾಲಕ ಭಗತ್ಸಿಂಗ್ನು ತನ್ನ ಪುಟ್ಟ ಡಬ್ಬಿಯಲ್ಲಿ ಅಮೃತಸರದ ಜಲಿಯನ್ ವಾಲಾಬಾಗ್ ದುರಂತ ಸ್ಥಳದಲ್ಲಿನ ರಕ್ತಸಿಕ್ತ ಮಣ್ಣು ತಂದಿದ್ದನು.

ಉತ್ತರ : ಭಗತ್ಸಿಂಗ್ನಿಗೆ ಮಾವಿನಹಣ್ಣು ಪ್ರಿಯವಾಗಿತ್ತು.

ಉತ್ತರ : ಭಗತ್ಸಿಂಗ್ ತನ್ನ ಸಹೋದರಿಗೆ ತಾನು ಡಬ್ಬಿಯಲ್ಲಿ ಶೇಖರಿಸಿರುವ ಮಣ್ಣು ತ್ಯಾಗದ ಪ್ರತೀಕ ಎಂದು ಹೇಳುತ್ತಾನೆ.

ಉತ್ತರ : 13ನೆಯ ಏಪ್ರೀಲ್ 1919ರಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆಯಿತು.

ಉತ್ತರ : ಬಾಲಕ ಭಗತ್ಸಿಂಗ್ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡವರಿಗೆ ನಮನ ಸಲ್ಲಿಸಲು ಅಮೃತಸರದ ಜಲಿಯನ್ ವಾಲಾಬಾಗ್ ಹೋಗಿದ್ದನು.

ಉತ್ತರ : ಬ್ರಿಟಿಷ ಜನರಲ್ ಡಯರ್ನು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣನಾಗಿದ್ದನು.

ಉತ್ತರ : ಬ್ರಿಟಿಷ ಜನರಲ್ ಡಯರ್ನು ಜಲಿಯನ್ ವಾಲಾಬಾಗ್ನಲ್ಲಿ ನೆರೆದ ಜನರ ಮೇಲೆ 1650 ಸುತ್ತು ಗುಂಡಿನ ಮಳೆ ಸುರಿಸಿದ್ದನು.

ಉತ್ತರ : ಜಲಿಯನ್ ವಾಲಾಬಾಗ್ನ ಒಕ್ಕಣೆಯ ಪ್ರಕಾರ ಸುಮಾರು 2000 ಜನ ಹುತಾತ್ಮರಾದರು.

ಉತ್ತರ : ಜಲಿಯನ್ ವಾಲಾಬಾಗ್ನ ಪ್ರದೇಶ ಸುಮಾರು 2000 ಜನ ಹುತಾತ್ಮರಾದ ಹಿಂದೂ, ಸಿಖ್, ಮುಸಲ್ಮಾನರ ರಕ್ತದಿಂದ ಪಾವನವಾಗಿದೆ.

ಉತ್ತರ : ಜನರಲ್ ಡಯರ್ನು “ಒಂದೇ ಒಂದು ಗುಂಡು ಸಹ ದಂಡವಾಗಲಿಲ್ಲ” ಎಂದು ಸೊಕ್ಕಿನಿಂದ ಹೇಳಿದನು.

ಉತ್ತರ : ಭಗತ್ಸಿಂಗ್ನು ಜಲಿಯನ್ ವಾಲಾಬಾಗಿನ ರಕ್ತಸಿಕ್ತವಾಗಿದ್ದ ಮಣ್ಣನ್ನು ನಿಧಿಯಂತೆ ಕಾಪಾಡಿಕೊಂಡು ಬಂದಿದ್ದನು.

ಉತ್ತರ : ಸುಖ್ದೇವ್, ರಾಜಗುರು, ಭಟುಕೇಶ್ವರ ದತ್ತರು ಭಗತ್ಸಿಂಗ್ನ ಸಹಚರರು.

ಉತ್ತರ : ಭಗತ್ಸಿಂಗ್ನು ಮಾರ್ಚ 23, 1931 ರಂದು ಸ್ವಾತಂತ್ರ್ಯದ ಹಣತೆಗೆ ತೈಲವೆಂಬಂತೆ ವೀರಯೋಧನಾಗಿ ಹುತಾತ್ಮನಾದ.

ಉತ್ತರ : “ಇಂಕ್ವಿಲಾಬ್ ಜಿಂದಾಬಾದ್” ಇದು ಭಗತ್ಸಿಂಗ್ನ ಘೋಷಣೆ.

ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )

ಉತ್ತರ : ಜಲಿಯನ್ ವಾಲಾಭಾಗ್ ನಲ್ಲಿರುವ ಒಕ್ಕಣೆ “ಏಪ್ರಿಲ್- 13- 1919 ರಂದು ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು 2000 ಮುಗ್ಧ ಹಿಂದೂ, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ” ಎಂಬುದಾಗಿದೆ.

ಉತ್ತರ : ಜಲಿಯನ್ ವಾಲಾಬಾಗ್ನಲ್ಲಿ ಅಂತರ್ಮುಖಿಯಾಗಿದ್ದ ಭಗತ್ ಸಿಂಗ್ ಅಲ್ಲಿನ ಸ್ವಲ್ಪ ಮಣ್ಣನ್ನು ತೆಗೆದು ಹಣೆಗಿಟ್ಟುಕೊಂಡು, ಇನ್ನಷ್ಟನ್ನು ಡಬ್ಬಿಯಲ್ಲಿ ಶೇಖರಿಸಿ ರಾತ್ರಿ ಮನೆಗೆ ಹಿಂತಿರುಗಿದ. ಆತನ ಸಹೋದರಿ ಭಗತ್ಸಿಂಗನನ್ನು ಊಟಕ್ಕೆಂದು ಕರೆದಾಗ ನಿರಾಕರಿಸಿದನು. ನಂತರ ಆತನಿಗೆ ಪ್ರಿಯವಾದ ಮಾವಿನ ಹಣ್ಣನ್ನು ನೀಡಿದಾಗಲೂ ನಿರಾಕರಿಸಿ, ಮನೆಯ ಹಿಂಭಾಗಕ್ಕೆ ಸಹೋದರಿಯನ್ನು ಕೈಹಿಡಿದು ಕರೆದೊಯ್ದನು. ತನ್ನ ಡಬ್ಬಿಯಲ್ಲಿದ್ದ ಮಣ್ಣನ್ನು ತೋರಿಸಿ ಅದರ ಬಗ್ಗೆ ವಿವರಿಸಿದಾಗ ಉಪವಾಸದ ಕಾರಣವನ್ನು ಆಕೆಯು ತಿಳಿದಳು.

ಉತ್ತರ : ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಪೈಶಾಚಿಕ ಘಾತುಕತೆಯ ಭಾವನೆ ಹೊಂದಿದ್ದನು. ಜಲಿಯನ್ ವಾಲಾಬಾಗ್ನಲ್ಲಿ ಶಾಂತಿ ಆಂದೋಲನದಲ್ಲಿ ನೆರೆದಿದ್ದ ಭಾರತೀಯ ಜನರನ್ನು ಕ್ರೂರ ಮಾರ್ಗದಿಂದ ಬಗ್ಗು ಬಡಿಯಲು ಚಿಂತಿಸಿದನು. ಸುಮಾರು 1650 ಸುತ್ತುಗಳಷ್ಟು ಗುಂಡಿನ ಮಳೆ ಕರೆದು ಭಾರತೀಯರ ಮಾರಣಹೋಮ ನಡೆಸಿದನು. ಆದ್ದರಿಂದ ಒಂದೇ ಒಂದು ಗುಂಡು ದಂಡವಾಗಲಿಲ್ಲ ಎಂದನು.

ಉತ್ತರ : ಜಲಿಯನ್ ವಾಲಾಬಾಗ್ನ ರಕ್ತಸಿಕ್ತವಾಗಿದ್ದ ಮಣ್ಣನ್ನು ನಿಧಿಯಂತೆ ಕಾಪಾಡಿಕೊಂಡು ಬಂದಿದ್ದ ಬಾಲಕ ಭಗತ್ಸಿಂಗ್ ಮುಂದೆ ತನ್ನ ಕ್ರಾಂತಿಕಾರಿ ಗುಂಪಿನ ಸಹಾಯದಿಂದ ಬ್ರಿಟಿಷ್ ಸರ್ಕಾರದ ವಿರುದ್ಧ ತನ್ನ ಸೇಡನ್ನು ತೀರಿಸಿಕೊಳ್ಳುತ್ತಾನೆ. ಇದರ ಫಲವಾಗಿ ಭಗತ್ಸಿಂಗ್ನು ತನ್ನ ಸಹಚರರಾದ ಸುಖ್ದೇವ್, ರಾಜಗುರು, ಭಟುಕೇಶ್ವರ ದತ್ತರೊಂದಿಗೆ ಮರಣದಂಡಣೆಗೆ ಗುರಿಯಾದನು.

ಉತ್ತರ : ಏಪ್ರಿಲ್ 13, 1919 ರಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡಿದ್ದವರಿಗೆ ನಮನ ಸಲ್ಲಿಸಲು ಶಾಲೆಗೆ ಹೋಗಬೇಕಾಗಿದ್ದ ಹನ್ನೆರಡು ವರ್ಷದ ಬಾಲಕ ಭಗತ್ಸಿಂಗ್ನು ತನ್ನ ಹಳ್ಳಿಯಿಂದ ರೈಲಿನಲ್ಲಿ ಅಮೃತಸರದಲ್ಲಿ ಬಂದಿಳಿದಿದ್ದನು. ಅಮೃತಸರದ ಜಲಿಯನ್ ವಾಲಾಬಾಗ್ನಲ್ಲಿ ಮೂಕನಂತೆ ಅತ್ತಿಂದಿತ್ತ ಓಡಾಡುತ್ತಿದ್ದನು. ಒಂದೆರೆಡು ಪುಸ್ತಕಗಳು ಹಾಗೂ ಒಂದು ಪುಟ್ಟ ಡಬ್ಬಿಯಿದ್ದ ಕೈಚೀಲ ಅವನ ಬಳಿಯೇ ಇತ್ತು. ತುಸು ಹೊತ್ತಿನ ನಂತರ ಹುಡುಗ ಭಗತ್ಸಿಂಗ್ನು ಜಲಿಯನ್ ವಾಲಾಭಾಗ್ನಲ್ಲಿ ಒಂದೆಡೆ ಅಂತರ್ಮುಖಿಯಾಗಿ ಬಹುಕಾಲ ನಿಂತನು. ನಂತರ ಅಲ್ಲಿದ್ದ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಹಣೆಗಿಟ್ಟುಕೊಂಡನು. ಇನ್ನಷ್ಟನ್ನು ತನ್ನಲ್ಲಿದ್ದ ಡಬ್ಬಿಯಲ್ಲಿ ಶೇಖರಿಸಿಕೊಂಡು ಮನೆಗೆ ಹಿಂತಿರುಗಿದನು. ‘ತ್ಯಾಗದ ಪ್ರತೀಕ ಆ ಮಣ್ಣುʼ ಎಂದು ತಿಳಿದು ಜಲಿಯನ್ ವಾಲಾಬಾಗಿನ ರಕ್ತಸಿಕ್ತವಾಗಿದ್ದ ಮಣ್ಣನ್ನು ನಿಧಿಯಂತೆ ಕಾಪಾಡಿಕೊಂಡು ಇಟ್ಟುಕೊಂಡಿದ್ದನು.

« BACK ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ