PPA-4

RMH

ಪ.ಪೋ.ಅ-4 ಮೃಗ ಮತ್ತು ಸುಂದರಿ

ಒಂದು ಅಂಕದ ಪ್ರಶ್ನೆಗಳು

ಉತ್ತರ : ವರ್ತಕನು ಮೃದು ಸ್ವಭಾವದವನಾಗಿದ್ದು, ಧರ್ಮವಂತನಾಗಿದ್ದನು.

ಉತ್ತರ : ವರ್ತಕನಿಗೆ ಮೂರು ಜನ ಹೆಣ್ಣು ಮಕ್ಕಳಿದ್ದರು.

ಉತ್ತರ : ಸುಂದರಿಯು ತಂದೆಯಷ್ಟೇ ಮೃದು ಸ್ವಭಾವದವಳಾಗಿದ್ದು, ತಂದೆಯ ನೆಮ್ಮದಿ ಆಕೆಗೆ ಮುಖ್ಯವಾಗಿತ್ತು.

ಉತ್ತರ : ನಗರಕ್ಕೆ ಹೊರಟ ತಂದೆಗೆ ಸುಂದರಿಯು ಗುಲಾಬಿ ಹೂಗಳ ಗೋಚಲು ತರಲು ಹೇಳಿದಳು.

ಉತ್ತರ : ವರ್ತಕನು ಕಾಡಿನ ಮಧ್ಯ ಭವ್ಯವಾದ ಬಂಗಲೆಯೊಂದನು (ಮನೋಹರವಾದ ಅರಮನೆ) ಕಂಡನು.

ಉತ್ತರ : ವರ್ತಕನು ಸುಂದರಿಗಾಗಿ ಅರಮನೆಯ ಪುಷ್ಪವನದಲ್ಲಿನ ಗುಲಾಬಿಗೊಂಚಲು ಕಿತ್ತು ಕೊಂಡನು.

ಉತ್ತರ : ಮೃಗವು ವರ್ತಕನ ಮೇಲೆ “ತಿಂದಿದ್ದೀ; ತೇಗಿದ್ದೀ; ಗುಲಾಬಿ ಕಿತ್ತಿದ್ದೀ” ಎಂದು ಸಿಟ್ಟಿನಿಂದ ಅಬ್ಬರಿಸಿತು.

ಉತ್ತರ : ವರ್ತಕನಿಗೆ ಮೃಗವು “ನಿನ್ನ ಬದಲಾಗಿ ನಿನ್ನ ಮುದ್ದು ಮಗಳನ್ನು ತಂದು ನನಗೆ ಕೊಟ್ಟರೆ ನಿನನ್ನು ಕೊಲ್ಲುವುದಿಲ್ಲ” ಎಂದು ಉಪಾಯ ಸೂಚಿಸಿತು.

ಉತ್ತರ : ಮೃಗವು ವರ್ತಕನಿಗೆ ನೀಡಿದ ಬುಟ್ಟಿಯಲ್ಲಿ ವಜ್ರ, ವೈಢೂರ್ಯ, ಮುತ್ತು-ರತ್ನಗಳಿದ್ದವು.

ಉತ್ತರ : ಸುಂದರಿಯು ಮೃಗವನ್ನು ಮದುವೆಯಾಗಲು ಇಷ್ಟವಿಲ್ಲ ಎಂದು ತಿಳಿಸಿದಾಗ ಮೃಗವು ಸಿಟ್ಟಿನಿಂದ ಬುಸುಗುಟ್ಟಿತು.

ಉತ್ತರ : ಮೃಗದ ಕಾಳಜಿ ಕಂಡು ಸುಂದರಿಯ ಮನವು ಕರಗುತ್ತಿತ್ತು.

ಉತ್ತರ : ಸುಂದರಿಗೆ ಅರಣ್ಯದ ಅರಮನೆಯ ಸುಖಕ್ಕಿಂತ ಮೃಗದ ವ್ಯಕ್ತಿತ್ವ ಆಕೆಯ ಮನಸ್ಸು ತುಂಬಿತ್ತು.

ಉತ್ತರ : ರಾಜಕುಮಾರನು ಶಾಪಗೊಂಡು ಮೃಗವಾಗಿದ್ದನು.

ಉತ್ತರ : ದೇವತೆಯೊಬ್ಬಳು ರಾಜಕುಮಾರನಿಗೆ ಶಾಪ ನೀಡಿದ್ದಳು.

ಉತ್ತರ : ‘ಮೃಗ ಮತ್ತು ಸುಂದರಿ’ ಕಥೆಯು ಇಂಗ್ಲಿಷನ ‘ಬ್ಯೂಟಿ ಅಂಡ್ ದಿ ಬೀಸ್ಟ್’ ಎಂಬ ಹೆಸರಿನ ಕಥೆಯ ಅನುವಾಗಿದೆ.

ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )

ಉತ್ತರ : ಶ್ರೀಮಂತ ವರ್ತಕನಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಹಿರಿಯರಾದ ಇಬ್ಬರು ಬಿಂಕ, ಬಡಿವಾರದ ಹುಡುಗಿಯರಾಗಿದ್ದರು. ಅವರಿಗೆ ಫ್ಯಾಷನ್, ಪಾರ್ಟಿ, ಗೆಳೆಯರೆಂದರೆ ಪಂಚಪ್ರಾಣ. ಮೋಜು ಮಸ್ತಿಯಲ್ಲಿ ಸಮಯ ಕಳೆಯುತ್ತಿದ್ದರು. ಮೂರನೆಯ ಹುಡುಗಿ ತಂದೆಯಷ್ಟೇ ಮೃದು ಸ್ವಭಾವದವಳಾಗಿದ್ದಳು. ರೂಪವತಿಯಾಗಿದ್ದ ಆಕೆಯನ್ನು ಎಲ್ಲರೂ ಸುಂದರಿ ಎಂದೇ ಕರೆಯುತ್ತಿದ್ದರು. ಆಕೆಗೆ ತಂದೆಯ ನೆಮ್ಮದಿ ಮುಖ್ಯವಾಗಿತ್ತು.

ಉತ್ತರ : ವರ್ತಕನ ವ್ಯಾಪಾರ ಕುಸಿದು ಬಿದ್ದಿತ್ತು. ಆತನಿಗೆ ಬರಬೇಕಾಗಿದ್ದ ಹಣ ಬಂದಿರಲಿಲ್ಲ. ಅದು ಅಲ್ಲದೇ ಸರಕುಗಳನ್ನು ತರಲು ದೂರದ ದೇಶಕ್ಕೆ ಪ್ರಯಾಣಿಸಿದ್ದ ಆತನ ಹಡಗುಗಳು ಹಿಂದಿರುಗಿರಲಿಲ್ಲ. ಇದರಿಂದ ಸಾಲಗಳು ಅವನನ್ನು ಬಾಧಿಸತೊಡಗಿದವು. ಕಾರಣ ಇದ್ದಬದ್ದ ಸ್ಥಿರಾಸ್ತಿ, ಚರಾಸ್ಥಿಯನ್ನೆಲ್ಲ ಮಾರಿ ಸಾಲತಿರಿಸಿ, ಉಳಿದ ಪುಟ್ಟ ಮೊತ್ತದಲ್ಲಿ ಹಳ್ಳಿಯ ಕಡೆ ಒಂದು ಮನೆಮಾಡಿಕೊಂಡನು.

ಉತ್ತರ : ವರ್ತಕನು ತನಗೆ ಬಡತನ ಉಂಟಾದಾಗ ತನ್ನ ಹೆಣ್ಣು ಮಕ್ಕಳನ್ನು ಕುರಿತು “ಮಕ್ಕಳೇ ನನ್ನ ಸ್ಥಿತಿ ನಿಮಗೆ ಈಗಾಗಲೇ ತಿಳಿದಿದೆ. ನಾವಿನ್ನು ನಗರದಲ್ಲಿ ವಾಸಿಸುವುದು ಕಷ್ಟ. ಆದ್ದರಿಂದ ಹಳ್ಳಿಗೆ ಹೋಗಬೇಕಾಗಿದೆ. ದಯಮಾಡಿ ಸಹಕರಿಸಿ” ಎಂದು ಹೇಳಿದ.

ಉತ್ತರ : ವರ್ತಕ ಧರ್ಮವಂತನಾಗಿದ್ದು, ಮೃದು ಸ್ವಭಾವದವನಾಗಿದ್ದನು. ಆತನ ಮೂರನೆಯ ಮಗಳು ಸುಂದರಿ ತಂದೆಯಷ್ಟೇ ಮೃದು ಸ್ವಭಾವದವಳಾಗಿದ್ದಳು. ಆಕೆಗೆ ತಂದೆಯ ನೆಮ್ಮದಿ ಮುಖ್ಯವಾಗಿತ್ತು. ವರ್ತಕನಿಗೆ ಕಷ್ಟಗಳು ಶುರುವಾದಾಗ, ನಾವಿನ್ನು ನಗರದಲ್ಲಿ ವಾಸಿಸುವುದು ಕಷ್ಟ ಆದ್ದರಿಂದ ಹಳ್ಳಿಗೆ ಹೋಗಬೇಕಾಗಿದೆ ಎಂದು ಹೇಳಿದಾಗ ಸುಂದರಿ ಸಂತೊಷದಿಂದಲೇ ಅದಕ್ಕೆ ಒಪ್ಪಿದಳು. ಅವರ ಜೀವನ ಸರಳವಾಗಿದ್ದರಿಂದ ಬಡತನದಿಂದ ವರ್ತಕನಿಗೆ ಮತ್ತು ಸುಂದರಿಗೆ ಅಷ್ಟೇನೂ ತೊಂದರೆ ಆಗಲಿಲ್ಲ.

ಉತ್ತರ : ಒಂದು ದಿನ ವರ್ತಕನ ಅಳಿದುಳಿದ ಹಡಗು ಬರುವ ಸುದ್ಧಿ ಬಂತು. ವರ್ತಕ ಹಡಗನ್ನು ಸ್ವಾಗತಿಸಲು ನಗರಕ್ಕೆ ಹೊರಟನು. ಆಗ ಇಬ್ಬರು ಹಿರಿಯ ಹೆಣ್ಣು ಮಕ್ಕಳು ಬಟ್ಟೆ, ಒಡವೆ, ಅಲಂಕಾರದ ವಸ್ತುಗಳ ಪಟ್ಟಿಯನ್ನು ವರ್ತಕನಿಗೆ ನೀಡಿ ತರಲು ಹೇಳುತ್ತಾರೆ. ಆದರೇ ಮೂರನೆಯ ಮಗಳು ಸುಂದರಿ ತನಗೊಂದು ಗುಲಾಬಿ ಹೂಗಳ ಗೊಂಚಲು ತರಬೇಕೆಂದು ತನ್ನ ತಂದೆಗೆ ಕೇಳಿಕೊಂಡಳು.

ಉತ್ತರ : ಕಾಡಿನಲ್ಲಿ ನಡೆದುಕೊಂಡು ಬರುತ್ತಿದ್ದ ವರ್ತಕನಿಗೆ ಭವ್ಯವಾದ ಭಂಗಲೆಯೊಂದು ಗೋಚರಿಸಿತು. ಅದೊಂದು ಮೃಗವು ವಾಸಿಸುತ್ತಿದ್ದ ಮನೋಹರ ಅರಮನೆಯಾಗಿತ್ತು. ನಿರ್ಜನವಾಗಿದ್ದ ಆ ಮನೆ ಮೌನವಾಗಿತ್ತು. ಅಲ್ಲಿನ ಕೋಣೆಯೊಂದರಲ್ಲಿ ಭಕ್ಷಭೋಜ್ಯಗಳನ್ನು ಇಡಲಾಗಿತ್ತು. ಸುಂದರವಾದ ಪುಷ್ಪವನವೊಂದಲ್ಲಿತ್ತು.

ಉತ್ತರ : ವರ್ತಕನು ನಿರಾಶೆಯಿಂದ ಗಾಡಿಗೆ ಕಾಸಿಲ್ಲದೆ ನಡೆದುಕೊಂಡು ದಟ್ಟ ಅರಣ್ಯದಲ್ಲಿ ಸಾಗಿದನು. ಅವನು ಹಸಿವಿನಿಂದ ಬಳಲಿದ್ದನು. ಇದ್ದಕ್ಕಿದ್ದಂತೆ ಕಾಡಿನ ನಡುವೆ ಭವ್ಯ ಬಂಗಲೆಯೊಂದು ಗೋಚರಿಸಿತು. ಮನೋಹರ ಅರಮನೆ ನಿರ್ಜನವಾಗಿತ್ತು, ಮೌನವಾಗಿತ್ತು. ಅಂಜಿಕೆಯಿಂದಲೇ ಎಲ್ಲವನ್ನು ನೋಡುತ್ತ ಸಾಗಿದನು. ಅಲ್ಲೊಂದು ಕೋಣೆಯಲ್ಲಿ ಭಕ್ಷ ಭೋಜ್ಯಗಳನ್ನು ಇಡಲಾಗಿತ್ತು. ಹಸಿವೆ ತಾಳಲಾರದೆ ಉಂಡನು. ಭೋಜನ ಸವಿದು ಹೊರಬಂದ ವರ್ತಕನು ಪುಷ್ಪವನದಲ್ಲಿ ಗುಲಾಬಿಗಳನ್ನು ನೋಡಿದನು. ತನ್ನ ಮಗಳು ಸುಂದರಿಗಾಗಿ ಒಂದು ಗೊಂಚಲು ಕಿತ್ತುಕೊಂಡನು.

ಉತ್ತರ : ವರ್ತಕನು ಪುಷ್ಪವನದಲ್ಲಿ ಗುಲಾಬಿಗಳನ್ನು ನೋಡಿ ತನ್ನ ಮಗಳು ಸುಂದರಿಗಾಗಿ ಒಂದು ಗೊಂಚಲು ಕಿತ್ತುಕೊಂಡಾಗ, ಭೀಕರ ಮೃಗವೊಂದು ಉಗ್ರ ಶಬ್ದದಿಂದ ಗರ್ಜಿಸುತ್ತ ಅವನನ್ನು ಕೊಲ್ಲಲು ಅವನ ಕುತ್ತಿಗೆಗೆ ಕೈ ಹಾಕಿತು. ವರ್ತಕನು “ಅಯ್ಯೋ ದೇವರೇ, ಕಾಪಾಡು! ಅಯ್ಯಾ ನನ್ನನ್ನು ಕೊಲ್ಲಬೇಡ. ನನ್ನ ಮೇಲೆ ಕರುಣೆದೋರು!” ಎಂದು ಬೇಡಿಕೊಂಡನು. ಮೃಗವು “ನಾನು ಅಯ್ಯನೂ ಅಲ್ಲ, ದೇವರೂ ಅಲ್ಲ, ಮನ್ಯುಷ್ಯನೂ ಅಲ್ಲ. ನನ್ನಲ್ಲಿ ಕರುಣೆ ಇಲ್ಲ. ಇರಲು ಸಾಧ್ಯವೂ ಇಲ್ಲ. ನಿನ್ನನ್ನು ಸೀಳಿ ತಿಂದು ಹಾಕುತ್ತೇನೆ” ಎಂದು ಕತ್ತು ಹಿಸುಕತೊಡಗಿತು. ವರ್ತಕನು “ಕೊಲ್ಲಬೇಡ! ನನ್ನ ಮಗಳಿಗಾಗಿ ಒಂದು ಗೊಂಚಲು ಗುಲಾಬಿ ತಗೊಂಡಿದ್ದು ಅಪರಾಧವೇ?” ಎಂದು ಕೇಳಿದನು. ಕೋಪಗೊಂಡ ಮೃಗವು “ತಿಂದಿದ್ದೀ; ತೇಗಿದ್ದೀ; ಗುಲಾಬಿ ಕಿತ್ತಿದ್ದೀ” ಎಂದು ಸಿಟ್ಟಿನಿಂದ ಅಬ್ಬರಿಸಿತು. “ಕೇಳು! ನಿನ್ನ ಬದಲಾಗಿ ನಿನ್ನ ಮುದ್ದು ಮಗಳನ್ನು ತಂದು ಕೊಟ್ಟರೆ ನಿನ್ನನ್ನು ಕೊಲ್ಲುವುದಿಲ್ಲ. ನೀನು ತಪ್ಪಿಸಿಕೊಳ್ಳಲಾರೆ. ಈ ಬುಟ್ಟಿ ತೆಗೆದುಕೋ. ಇದರೊಂದಿಗೆ ಹೋಗು ನಾಳೆ ಸಂಜೆ ಒಳಗೆ ನಿನ್ನ ಮಗಳನ್ನು ಕರೆತರದಿದ್ದರೆ ನಿನ್ನನ್ನು ನಿನ್ನ ಮಗಳನ್ನು ಒಟ್ಟಿಗೇ ಮುಗಿಸುತ್ತೇನೆ!” ಅಂದಿತು.

ಉತ್ತರ : ಕೋಪಗೊಂಡ ಮೃಗವು ವರ್ತಕನನ್ನು ಕುರಿತು “ತಿಂದಿದ್ದೀ; ತೇಗಿದ್ದೀ; ಗುಲಾಬಿ ಕಿತ್ತಿದ್ದೀ, ನನ್ನ ಮಾತು ಕೇಳು! ನಿನ್ನ ಬದಲಾಗಿ ನಿನ್ನ ಮುದ್ದು ಮಗಳನ್ನು ತಂದು ಕೊಟ್ಟರೆ ನಿನ್ನನ್ನು ಕೊಲ್ಲುವುದಿಲ್ಲ. ನೀನು ತಪ್ಪಿಸಿಕೊಳ್ಳಲಾರೆ. ಈ ಬುಟ್ಟಿ ತೆಗೆದುಕೋ. ಇದರೊಂದಿಗೆ ಹೋಗು ನಾಳೆ ಸಂಜೆ ಒಳಗೆ ಇನ್ನ ಮಗಳನ್ನು ಕರೆತರದಿದ್ದರೆ ನಿನ್ನನ್ನು ನಿನ್ನ ಮಗಳನ್ನು ಒಟ್ಟಿಗೆ ಮುಗಿಸುತ್ತೇನೆ!” ಎಂದು ಎಚ್ಚರಿಸಿತು.

ಉತ್ತರ : ಸುಂದರಿ ಭಯದಿಂದಲೇ ಅರಮನೆ ಪ್ರವೇಶಿಸಿದಳು. ಆ ಗೃಹದಲ್ಲಿ ಸುಂದರಿಯ ನೆಚ್ಚಿನ ಪುಸ್ತಕ ಭಂಡಾರವಿತ್ತು. ಅಲ್ಲಿ ಸಂಗೀತದ ಇಂಪಿತ್ತು. ಮೃಗ ನೋಡಲು ಭೀಕರವಾಗಿತ್ತು. ಕೋರೆ ಹಲ್ಲು, ಹಂದಿಯ ದೇಹ, ತೋಳದ ಚಲನೆಯನ್ನು ಪಡೆದಿದ್ದ ಮೃಗವು ಕರ್ಕಶ ಮತ್ತು ಗೊಗ್ಗರು ಧ್ವನಿ ಹೊಂದಿತ್ತು.

ಉತ್ತರ : ಮೃಗ ನೋಡಲು ಭೀಕರವಾಗಿತ್ತು. ಕೋರೆ ಹಲ್ಲು, ಹಂದಿಯ ದೇಹ, ತೋಳದ ಚಲನೆಯನ್ನು ಪಡೆದಿದ್ದ ಮೃಗವು ಕರ್ಕಶ ಮತ್ತು ಗೊಗ್ಗರು ಧ್ವನಿ ಹೊಂದಿತ್ತು.

ಉತ್ತರ : ಸುಂದರಿ ಭಯದಿಂದಲೇ ಅರಮನೆ ಪ್ರವೇಶಿಸಿದಳು. ಭೀಕರವಾದ ಮೃಗವು ಸುಂದರಿಯನ್ನು ಕುರಿತು “ನೀನು ಸಂತೋಷದಿಂದ ಬಂದೆಯಾ?” ಎಂದು ಕೇಳಿತು. ಸುಂದರಿ ಭಯದಿಂದ ಹೂಂ ಅಂದಳು. “ಒಳ್ಳೆಯದು ನೀನು ಒಳ್ಳೆಯವಳು. ನಾನು ನಿನಗೆ ಇಷ್ಟವಾ?” ಎಂದು ಕೇಳಿತು. ಸುಂದರಿಗೆ ಇನ್ನೂ ಭಯವಾಯಿತು. ಅಂಜುತ್ತಲೇ “ನಾನು ಸುಳ್ಳು ಹೇಳಲಾರೆ, ನೀನು ಕುರೂಪಿ. ಆದರೂ ನೀನು ತುಂಬಾ ಒಳ್ಳೆಯವನಂತಿದ್ದಿ” ಎಂದಳು. ಆಗ ಮೃಗ “ನನ್ನ ಹೃದಯ ಒಳ್ಳೆಯದಿರಬಹುದು, ಆದರೂ ನಾನು ಮೃಗ” ಅಂದಿತು. ಅದಕ್ಕೆ ಸುಂದರಿ “ಮೃಗ ಒಳ್ಳೆಯ ಹೃದಯ ಹೊಂದಿದ್ದರೂ ಮೃಗದ ಆಕಾರ ಹೊಂದಿರುವುದು ಸಹಜ. ಆದರೆ ಜಗತ್ತಿನ ಅನೇಕ ಮನುಷ್ಯರು ಸುಂದರ ಆಕಾರ ಪಡೆದು ಮೃಗದ ಹೃದಯ ಹೊಂದಿರುತ್ತಾರೆ” ಎಂದು ಹೇಳಿದಳು.

ಉತ್ತರ : ಸುಂದರಿಗೆ ಮೃಗದ ಬಗ್ಗೆ ಕುತೂಹಲವಾಗುತ್ತಿತ್ತು. ಒಮ್ಮೊಮ್ಮೆ ನೋಡುವ ಇಷ್ಟವಾಗುತ್ತಿತ್ತು. ಅವನ ಒರಟು ಮಾತು, ತಿಕ್ಕಲು ನಡವಳಿಕೆ ಮನಸ್ಸಿನಲ್ಲೇ ನಗು ತರುತ್ತಿದ್ದವು. ಆತನ ಕಾಳಜಿ ನೆನೆದು ಸುಂದರಿಯ ಮನ ಕರಗುತ್ತಿತ್ತು.

ಉತ್ತರ : ಸುಂದರಿಯು ಮೃಗದ ಒಪ್ಪಿಗೆ ಪಡೆದು ತನ್ನ ತಂದೆಯ ಮನೆಗೆ ಬರೀ ಎರಡು ದಿನ ಹೋಗಿ ಬರುವುದಾಗಿ ಎಂದು ಹೇಳಿ ಹೋದವಳು ಹತ್ತನೇ ದಿನವಾದರೂ ಅರಣ್ಯಕ್ಕೆ ಹಿಂದಿರುಗಲೇ ಇಲ್ಲ. ಆಕೆಗೆ ಅಳುಕು ಶುರುವಾಯಿತು. ಮೃಗ ಎಂದೂ ತನ್ನ ವಚನ ಮುರಿದಿರಲಿಲ್ಲ. ಮನ ನೋಯಿಸಿರಲಿಲ್ಲ. ತನ್ನನ್ನು ನೆಮ್ಮದಿಯಾಗಿಡುವುದೇ ಅದರ ಸುಖವಾಗಿತ್ತು. ಅದರ ಮುಖ, ಚಲನ- ವಲನ ಆಕೆಗೆ ನೆನಪಾದವು. ಅದರಿಂದ ಆಕೆಗೆ ಮೃಗವನ್ನು ನೋಡಬೇಕೆಂಬ ಆಶೆ ತೀವ್ರವಾಯಿತು.

ಉತ್ತರ : ಸುಂದರಿಗೆ ಅರಣ್ಯದ ಅರಮನೆಯ ಸುಖಕ್ಕಿಂತ ಮೃಗದ ವ್ಯಕ್ತಿತ್ವ ಆಕೆಯ ಮನಸ್ಸು ತುಂಬಿತ್ತು. ಅರಮನೆ ತಲುಪಿದ ಕೂಡಲೇ ಮೃಗಕ್ಕಾಗಿ ಹುಡುಕಾಡಿದಳು. ಅದು ಇರಲಿಲ್ಲ. ಅರಮನೆಯ ಆಚೆಯ ಬಂಡೆಯ ಮೇಲೆ ಕೂರುತ್ತಿದ್ದ ನೆನಪಾಯಿತು. ಅಲ್ಲಿಗೆ ಹೋದಳು. ಮೃಗ ನೆಲಕ್ಕೊರಗಿತ್ತು. ಅದು ತೇಲುಗಣ್ಣು ಮೇಲುಗಣ್ಣಾಗಿ ಮಲಗಿತ್ತು. ಅದರ ದೇಹ ಬಡವಾಗಿ ಹೋಗಿತ್ತು. ಸತ್ತಿರಬಹುದೇ? ಎಂಬ ಭಯದಿಂದ ಮೂಗಿನ ಹತ್ತಿರ ಬೆರಳಿಟ್ಟು ನೋಡಿದಳು. ಉಸಿರು ಹೋಗಿರಲಿಲ್ಲ.

ಉತ್ತರ : ಸುಂದರಿಯು ಚಿಂತಾಜನಕ ಸ್ಥಿತಿಯಲ್ಲಿದ್ದ ಮೃಗದ ಬಳಿಗೆ ಬಂದು ಅದರ ಮೂಗಿನ ಹತ್ತಿರ ಬೆರಳಿಟ್ಟು ಪರೀಕ್ಷಿಸಿ ದುಃಖದಿಂದ ಮೃಗವನ್ನು ಅಪ್ಪಿಕೊಂಡು “ನೀನು ನನ್ನವನು, ನೀನು ಸಾಯಬಾರದು, ನಾನು ನಿನ್ನನ್ನು ಮದುವೆ ಆಗುತ್ತೇನೆ” ಎಂದು ಕಂಬನಿಗರೆದಳು. ಆಗ ಮೃಗ ಕ್ರಮೇಣ ಉಸಿರಾಡಿತು. “ನೀನು ಬಂದೆಯಾ?” ಎಂದು ಸಂತೋಷಗೊಂಡಿತು. “ನೀನಿಲ್ಲದೆ ನನಗೆ ಊಟ ಸೇರಲಿಲ್ಲ. ನನಗೆ ನಿದ್ರೆ ಬರಲಿಲ್ಲ” ಎಂದಿತು. ಸುಂದರಿ “ನಾನು ನಿನ್ನನ್ನು ಪ್ರೀತಿಸುವುದು ಮಾತ್ರವಲ್ಲ ನಿನ್ನನ್ನು ನಾನು ಮದುವೆ ಆಗುತ್ತೇನೆ” ಎಂದಾಗ ಮೃಗ ಸಂತೋಷದಿಂದ ಹಿಗ್ಗಿತು. ಶಾಪವಿಮೋಚನೆಗೊಂಡ ಮೃಗದ ಆಕಾರವುಬದಲಾಗಿ ಸುಂದರ ರಾಜಕುಮಾರನಾಯಿತು.

ಉತ್ತರ : ಸುಂದರಿಯು ಮೃಗದ ರೂಪದಲ್ಲಿದ್ದ ರಾಜಕುಮಾರನನ್ನು ಮನಸಾರೆ ಒಪ್ಪಿ ಪ್ರೀತಿಸಿದ್ದರಿಂದ ರಾಜಕುಮಾರನ ಮೃಗತ್ವ ಕರಗಿತು. ರಾಜಕುಮಾರ ತನ್ನ ಮಂತ್ರದಂಡದಿಂದ ತನ್ನ ಪ್ರಜೆಗಳನ್ನೆಲ್ಲಾ ಕರೆದ. ಅರಮನೆ ಇನ್ನೂ ಮೋಹಕವಾಗಿ ಝಗಝಗಿಸತೊಡಗಿತು. ಸುಂದರಿ ಮತ್ತು ರಾಜಕುಮಾರ ಮದುವೆಯಾಗಿ ನೆಮ್ಮದಿಯಿಂದ ರಾಜ್ಯಭಾರ ನಡೆಸತೊಡಗಿದರು.

ಉತ್ತರ : ಮಾನವನಲ್ಲಿಯೇ ಮೃಗೀಯವಾದ ಗುಣಗಳಿವೆ. ಪ್ರೀತಿ, ಸ್ನೇಹ, ಕರುಣೆ, ಬಾಂಧವ್ಯದಿಂದ ಕ್ರೂರತೆಯನ್ನು ಕಳೆದು ಮಾನವೀಯ ಗುಣಸಂಪನ್ನನಾದರೆ ಅವನ ಬದುಕು ಸಾರ್ಥಕವಾಗುವುದು. ನಮ್ಮ ಹಣ, ಅಧಿಕಾರ, ಸಂಪತ್ತೆಲ್ಲವು ಕ್ಷಣಿಕ. ಅವುಗಳು ಯಾವ ಸಮಯದಲ್ಲಾದರೂ ಬದಲಾವಣೆಯಾಗಬಹುದು. ಎಂತಹ ಕಷ್ಟ ಸಮಯದಲ್ಲೂ ಅಂಜದೆ ಸವಾಲುಗಳನ್ನು ತಾಳ್ಮೆಯಿಂದ ಎದುರಿಸಿದರೆ ಬದುಕಿನಲ್ಲಿ ಯಶಸ್ಸನ್ನು ಸಾಧಿಸಬಹುದು ಎಂಬುದು ಮೃಗ ಮತ್ತು ಸುಂದರಿ ಕಥೆಯ ಆಶಯವಾಗಿದೆ.

« BACK ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ