PPA-5

RMH

ಪ.ಪೋ.ಅ-5 ಒಗಟುಗಳು

ಒಂದು ಅಂಕದ ಪ್ರಶ್ನೆಗಳು

ಉತ್ತರ : ಅಂಗಿಯ ಎರಡು ತೋಳುಗಳ ಭಾಗವೇ ಕೈ. ಅಂಗಿಗೆ ತಲೆಯಿಲ್ಲ. ಅಂಗಿಯ ಬೇರೆಬೇರೆ ಭಾಗ ಸೇರಿಸಿ ಹೊಲಿಗೆ ಹಾಕಿರುವುದೇ ನವಗಾಯ, ರಾಜಮಹಾರಾಜರನ್ನು ಬಿಡದಂತೆ ಮೆಲ್ಲನೆ ಬಂದು ಶರೀರಕ್ಕೆ ಉಡುಗೆಯಾಗಿ ಏರಿಕೊಳ್ಳುವುದರಿಂದ ಅದು ಅಂಗಿಯಾಗಿ ಎಲ್ಲರಿಗೂ ಪ್ರಚಂಡವಾಗಿದೆ. ಹೀಗೆ ‘ಜನಪದ ಒಗಟುಗಳು’ ಪಾಠದಲ್ಲಿ “ಕೈಯುಂಟು ಕಾಲಿಲ್ಲ ಶಿರಹರಿದ ಮುಂಡ ಮೈಯೊಳಗೆ ನವಗಾಯ ಒಂಬತ್ತು ತುಂಡ ಒಯ್ಯನೊಯ್ಯನೇ ಬಂದು ಹೆಗಲೇರಿಕೊಂಡ ರಾಯ ರಾಯರಿಗೆಲ್ಲ ತಾನೇ ಪ್ರಚಂಡ” ಎಂದು ಅಂಗಿಯ ವಿಶೇಷತೆ ವ್ಯಕ್ತವಾಗಿದೆ.

ಉತ್ತರ : “ಕೈಯುಂಟು ಕಾಲಿಲ್ಲ ಶಿರಹರಿದ ಮುಂಡ

ಮೈಯೊಳಗೆ ನವಗಾಯ ಒಂಬತ್ತು ತುಂಡ

ಒಯ್ಯನೊಯ್ಯನೇ ಬಂದು ಹೆಗಲೇರಿಕೊಂಡ

ರಾಯ ರಾಯರಿಗೆಲ್ಲ ತಾನೇ ಪ್ರಚಂಡ”

- ಇದು ‘ಅಂಗಿ’ ಎಂಬ ಉತ್ತರ ಬರುವ ಬೆಡಗಿನ ಒಗಟಾಗಿದೆ.

ಉತ್ತರ : ಉಪ್ಪನ್ನು ನೀರಿನಿಂದಲೇ ತಯಾರಿಸುತ್ತಾರೆ. ಅಂದರೆ ಸಮುದ್ರದ ನೀರಿನಲ್ಲಿ ಉಪ್ಪು ಹುಟ್ಟುವುದು. ಸಮುದ್ರದ ನೀರು ನೀರಿನ ಅಂಶವನ್ನು ಕಳೆದುಕೊಂಡು ಉಪ್ಪಾಗಿ ಪರಿವರ್ತಿತವಾಗುವುದು. ಪುನಃ ಅದೇ ನೀರು ಉಪ್ಪಿಗೆ ಸೋಕಿದರೆ ಮತ್ತೆ ಕರಗಿ ಹೋಗುತ್ತದೆ. ಹೀಗೆ ‘ಜನಪದ ಒಗಟುಗಳು’ ಪಾಠದಲ್ಲಿ “ನೀರಲ್ಲೆ ಹುಟ್ಟೋದು, ನೀರಲ್ಲೆ ಬೆಳಿಯೋದು, ನೀರು ತಾಕಿದರೆ ಮಟಮಾಯ, ಕನ್ನಡದ ಬೆಡಗೀನ ಜಾಣೆ ತಿಳಿದ್ಹೇಳೆ” ಎಂದು ಉಪ್ಪಿನ ವಿಶೇಷತೆ ವ್ಯಕ್ತವಾಗಿದೆ.

ಉತ್ತರ : “ನೀರಲ್ಲೆ ಹುಟ್ಟೋದು ನೀರಲ್ಲೆ ಬೆಳಿಯೋದು

ನೀರು ತಾಕಿದರೆ ಮಟಮಾಯ| ಕನ್ನಡದ

ಬೆಡಗೀನ ಜಾಣೆ ತಿಳಿದ್ಹೇಳೆ”

- ಇದು ಉಪ್ಪನ್ನು ಕುರಿತು ಹೇಳಿರುವ ಬೆಡಗಿನ ಒಗಟಾಗಿದೆ.

ಉತ್ತರ : ಕಮಲವು ಕೆಸರಿನಲ್ಲೆ ಹುಟ್ಟುವುದು. ಅದು ಅಲ್ಲಿಯೇ ಬೆಳೆಯುವುದು. ಕಮಲವು ಒಂದು ಜಾತಿಯ ಗಿಡಕ್ಕೆ ಸೇರಿದ್ದು ಕೆಸರೇ ಜೀವವಾಗಿದೆ. ಕೆಸರಿಗೂ ಕಮಲಕ್ಕೂ ತಾಯಿ ಮಗುವಿನ ಅನ್ಯೊನ್ಯ ಸಂಬಂಧವಿದೆ. ಹೀಗೆ ‘ಜನಪದ ಒಗಟುಗಳು’ ಪಾಠದಲ್ಲಿ “ನೀರಲ್ಲೆ ಹುಟ್ಟೋದು ನೀರಲ್ಲೆ ಬೆಳಿಯೋದು, ನೀರು ತಾಕಿದರೆ ಮಟಮಾಯ, ಕನ್ನಡದ ಬೆಡಗೀನ ಜಾಣೆ ತಿಳಿದ್ಹೇಳೆ” ಎಂದು ತಾವರೆ ಬೇರಿನ ವಿಶೇಷತೆ ವ್ಯಕ್ತವಾಗಿದೆ.

ಉತ್ತರ : “ಕೆಸರಲ್ಲಿ ಹುಟ್ಟೋದು, ಕೆಸರಲ್ಲಿ ಬೆಳೆಯೋದು

ಅದು ಒಂದು ಗಿಡದ ಪರಿಕಾರ-ಎಲೆಬಾಲೆ

ಬಾರೆ ನಮ್ಮರ್ಥ ಒಡೆದ್ಹೇಳೆ”

- ಇದು ತಾವರೆಬೇರು ಉತ್ತರ ಬಯಸುವ ಕುರಿತು ಹೇಳಿರುವ ಒಗಟಾಗಿದೆ.

ಉತ್ತರ : ಉತ್ತರಾಣಿ ಗಿಡವು ದಾರಿಯ ಬದಿಯಲ್ಲೆ ಹುಟ್ಟಿ ಬೇಳೆಯುತ್ತದೆ. ಇದು ಸಣ್ಣ ಮುಳನ್ನು ಹೊಂದಿರುವ ಗಿಡವಾಗಿರುವುದರಿಂದ ದಾರಿಯಲ್ಲಿ ಹೋಗುವವರ ಸೆರಗನ್ನು ಹಿಡಿದು ತೊಂದರೆಕೊಡುವುದು. ಹೀಗೆ ‘ಜನಪದ ಒಗಟುಗಳು’ ಪಾಠದಲ್ಲಿ “ಬದಿನಲ್ಲಿ ಹುಟ್ಟೋದು ಬದಿನಲ್ಲಿ ಬೆಳೆಯೋದು, ಹೋಗೋರ ಮುಂಜೆರಗ ಹಿಡಿಯೋದು, ಎಲೆಬಾಲೆ ಬಾಲೆ ಇದರರ್ಥ ಒಡೆದ್ಹೇಳೆ” ಎಂದು ಉತ್ತರಾಣಿ ಗಿಡದ ವಿಶೇಷತೆ ವ್ಯಕ್ತವಾಗಿದೆ.

ಉತ್ತರ :“ಬದಿನಲ್ಲಿ ಹುಟ್ಟೋದು ಬದಿನಲ್ಲಿ ಬೆಳೆಯೋದು

ಹೋಗೋರ ಮುಂಜೆರಗ ಹಿಡಿಯೋದು-ಎಲೆಬಾಲೆ

ಬಾರೆ ಇದರರ್ಥ ಒಡೆದ್ಹೇಳೆ”

- ಇದು ಉತ್ತರಾಣಿ ಉತ್ತರ ಹೇಳಿರುವ ಬೆಡಗಿನ ಒಗಟಾಗಿದೆ.

ಉತ್ತರ : ಗರಕೆಯ ಹುಲ್ಲು ಹೊಲದ ಬದುವಿನಲ್ಲಿ ಹುಟ್ಟುವುದು. ಇದು ರೈತರಿಗೆ ಹಲವು ರೀತಿಯಲ್ಲಿ ಬೆಳೆಯ ಬೆಳವಣಿಗೆಗೆ ಅಡ್ಡಿಯಾಗಿ ತೊಂದರೆ ಕೊಡುತ್ತದೆ. ಇದನ್ನೇ ಗರಕೆಯ ಹುಲ್ಲು ಉಳುವಾನ (ರೈತನ) ಕಂಡು ನಗುವುದು ಎಂದು ವಿವರಿಸಲಾಗಿದೆ. ಹೀಗೆ ‘ಜನಪದ ಒಗಟುಗಳು’ ಪಾಠದಲ್ಲಿ “ಹೊಲದಲ್ಲಿ ಹುಟ್ಟೋದು ಹೊಲದಲ್ಲಿ ಬೆಳೆಯೋದು, ಉಳುವಾನ ಕಂಡು ನಗುವುದು, ಎಲೆಬಾಲೆ ಬಾಲೆ ನಮ್ಮರ್ಥ ಒಡೆದ್ಹೇಳೆ” ಎಂದು ಗರಕೆಯ ಹುಲ್ಲಿನ ವಿಶೇಷತೆ ವ್ಯಕ್ತವಾಗಿದೆ.

ಉತ್ತರ : “ಹೊಲದಲ್ಲಿ ಹುಟ್ಟೋದು ಹೊಲದಲ್ಲಿ ಬೆಳೆಯೋದು

ಉಳುವಾನ ಕಂಡು ನಗುವುದು- ಎಲೆಬಾಲೆ

ಬಾರೆ ನಮ್ಮರ್ಥ ಒಡೆದ್ಹೇಳೆ”

- ಇದು ಗರಕೆಯ ಹುಲ್ಲು ಉತ್ತರ ಬಯಸಲು ಹೇಳಿರುವ ಬೆಡಗಿನ ಒಗಟಾಗಿದೆ.

ಉತ್ತರ : ಬೀಸುವಕಲ್ಲನ್ನು ಹಿಡಿದು ಬೀಸಲು ಅದರ ಮೇಲೆ ಗೂಟವೊಂದನ್ನು ಕುಕ್ಕಿ ನಿಲ್ಲಿಸಲಾಗಿರುತ್ತದೆ. ಅಲ್ಲದೆ ಬೀಸುಕಲ್ಲಿನಲ್ಲಿ ಕಾಳುಗಳನ್ನು ನೆತ್ತಿಯ ಮೇಲೆ (ಬಾಯಲ್ಲಿ) ಹಾಕಿ ಬೀಸಿದಾಗ ಅದು ಮಗ್ಗುಲಲ್ಲಿ ಹಿಟ್ಟಾಗಿ ಬೀಳುವುದು. ಹೀಗೆ ‘ಜನಪದ ಒಗಟುಗಳು’ ಪಾಠದಲ್ಲಿ “ಬಗಲಲ್ಲಿ ಕುಕ್ಕುವುದು ಬಾಯಲ್ಲಿ ತಿಂಬೂದು, ನಂಗ್ಹೇಳಿ ಅರ್ತು ಈ ಹಾಡಿನ ಹೇಳ್ದಿರೆ ಕೈಗೆ ಹಲ್ಮರ‍್ದು ಕೊಡುವೆನು” ಎಂದು ಬಿಸುಕಲ್ಲಿನ ವಿಶೇಷತೆ ವ್ಯಕ್ತವಾಗಿದೆ.

ಉತ್ತರ : “ಬಗಲಲ್ಲಿ ಕುಕ್ಕುವುದು ಬಾಯಲ್ಲಿ ತಿಂಬೂದು

ನಂಗ್ಹೇಳಿ ಅರ್ತು ಈ ಹಾಡಿನ - ಹೇಳ್ದಿರೆ

ಕೈಗೆ ಹಲ್ಮರ‍್ದು ಕೊಡುವೆನು”

- ಇದು ಬಿಸುವಕಲ್ಲು ಕುರಿತು ಹೇಳಿರುವ ಬೆಡಗಿನ ಒಗಟಾಗಿದೆ.

« BACK ಮುಂದಿನ ಅಧ್ಯಾಯ

THANK U
RMH-9731734068

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ