ಪ.ಪೋ.ಅ-2 ವಸಂತ ಮುಖ ತೋರಲಿಲ್ಲ.
ಒಂದು ಅಂಕದ ಪ್ರಶ್ನೆಗಳು
ಉತ್ತರ : ಪುಟ್ಟ ಪೋರಿ ಮುಸುರೆ ತಿಕ್ಕುವ ಕೆಲಸ ಮಾಡುತ್ತಿದ್ದಾಳೆ.
ಉತ್ತರ : ಪುಟ್ಟ ಪೋರಿಯ ಅಮ್ಮ ಗೂರುತ್ತ ಗುಡಿಸಲಿನಲ್ಲಿ ಮಲಗಿದ್ದಾಳೆ.
ಉತ್ತರ : ಕವಯಿತ್ರಿ ವಿಜಯಶ್ರೀ ಸಬರದ ತೂತು ಬಿದ್ದ ಸೀರೆಯಲಿ ಬಾಲ ರವಿ ಸೊರಗಿದ್ದಾರೆಂದು ತಿಳಿಸಿದ್ದಾರೆ.
ಉತ್ತರ : ಕವಯಿತ್ರಿ ವಿಜಯಶ್ರೀ ಸಬರದ ಗುಡಿಸಲೊಳಗೆ ವಸಂತನಿಗೆ ಬರಲು ಹೆದರಿಕೆ ಎಂದು ತಿಳಿಸುತ್ತಾರೆ.
ಉತ್ತರ : ಕಮ್ಮಾರ, ಕುಂಬಾರ, ನೇಕಾರ, ಕೇರಿಯ ಮಾರ ಇವರಾರಿಗೂ ವಸಂತ ಮುಖ ತೋರಲಿಲ್ಲ.
ಉತ್ತರ : ಗುಡಿಸಲೊಳಗೆ ಬರಲು ವಸಂತ ಹೆದರಿದನೆ? ಹರಿದ ಚಿಂದಿ ಬಟ್ಟೆಗಳ ಕಂಡು ಅವನು ಮರುಗಿದನೆ? ಎನ್ನುವುದು ಪುಟ್ಟಿಯ ಪ್ರಶ್ನೆಗಳಾಗಿವೆ.
ಉತ್ತರ : ಇಳೆಗೆ ಕಡಲುಕ್ಕಿ ಹರಿಯುವ ಸಂಭ್ರಮ.
ಉತ್ತರ : ಹೊಳೆಯುವ ರಂಗವಲ್ಲಿಯಲ್ಲಿ ಬಾಲರವಿಯು ಥಳಥಳಿಸುತ್ತಿರುವನು.
ಉತ್ತರ : ಕೇರಿಯ ಮಾರನ ಒಲೆ ಹೊತ್ತಲಿಲ್ಲ.
ಉತ್ತರ : ಮಾವಿನ ಮರಗಳು ಒಡೆಯನ ಅಂಗಳದಲ್ಲಿ ಮೈತುಂಬಿ ನಿಂತಿವೆ.
ಉತ್ತರ : ಪುಟ್ಟಿಯ ಗುಡಿಸಲಿನ ಗೋಡೆಗಳು ಸುಣ್ಣ ಕಾಣದೆ ಮುಖ ಮುಚ್ಚಿಕೊಂಡಿವೆ.
ಉತ್ತರ : ಪುಟ್ಟಿಯು ಗುಡಿಸಲಿನಲಿ ಇರುವ ಗವ್ವೆನ್ನುವ ಕತ್ತಲು ವಸಂತನು ಹೆದರಲು ಕಾರಣವೆಂದು ತಿಳಿಸುತ್ತಾಳೆ.
ಉತ್ತರ : ಪುಟ್ಟಿಯು ತಾನು ತೊಟ್ಟಿರುವ ಹರಿದ ಚಿಂದಿ ಬಟ್ಟೆಗಳ ಕಂಡು ವಸಂತನು ಮರುಗಿದನೆಂದು ತಿಳಿಸುತ್ತಾಳೆ.
ಉತ್ತರ : ಮಲ್ಲಿಗೆಯ ಹೂವಿನಲಿ ಮುಗುಳು ನಗೆಯು ಬೀರಿತ್ತು.
ಉತ್ತರ : ಬಾಲರವಿಯ ಕಂಡು ಪುಟ್ಟಿಯು ಮೂಕವಿಸ್ಮಿತಳಾಗಿರುವಳು.
ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )
ಉತ್ತರ : ವಸಂತಮಾಸದ ಆಗಮನದ ಸಂದರ್ಭದಲ್ಲಿ ಮನೆಯೊಡೆಯನ ಅಂಗಳದಲ್ಲಿ ಮರಗಳೆಲ್ಲವೂ ಚಿಗುರಿ ಮೈತುಂಬಿ ಬೆಳೆದು ನಿಂತಿವೆ. ಹಕ್ಕಿಗಳು ಸಂತಸದಿಂದ ರೆಕ್ಕೆ ಬಿಚ್ಚಿ ಹಾರುತ್ತಿವೆ. ಎಳೆಯ ಚಿಗುರನ್ನು ತಿಂದ ಕೋಗಿಲೆಗಳು ಪ್ರಕೃತಿ ಸೌಂದರ್ಯವನ್ನು ಮೈದುಂಬಿ ಇಂಪಾಗಿ ಹಾಡುತ್ತಿವೆ. ಇಡೀ ಇಳೆಯಲ್ಲಿ ಕಡಲುಗಳು ತುಂಬಿ ಉಕ್ಕಿ ಹರಿಯುವ ರೀತಿಯಾದ ಸಂಭ್ರಮವನ್ನು ಕಾಣಬಹುದಾಗಿದೆ. ಹೀಗೆ ವಸಂತ ಮುಖ ತೋರಲಿಲ್ಲ ಕವನದಲ್ಲಿ ಪ್ರಕೃತಿಯ ಸಂಭ್ರಮ ವ್ಯಕ್ತವಾಗಿದೆ.
ಉತ್ತರ : ಒಡೆಯನ ಮನೆಯ ಬಾಗಿಲಲ್ಲಿನ ಮಾವಿನೆಲೆಯ ತೋರಣ, ಮಲ್ಲಿಗೆ ಹೂವಿನ ಸುವಾಸನೆಯೊಂದಿಗೆ ಬೀರುವ ಸಂತಸದ ವಾತಾವರಣ ಹಾಗೂ ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿ ಇವೆಲ್ಲವುಗಳ ಮಧ್ಯೆ ಬಾಲರವಿಯು ಥಳಥಳಿಸುವುದನ್ನು ಕಂಡು ಪುಟ್ಟಿ.ಯು ಮೂಕವಿಸ್ಮೀತಳಾಗಿರುವಳು.
ಉತ್ತರ : ಪ್ರಸ್ತುತ ಕವನದಲ್ಲಿ “ಕಮ್ಮಾರನ ಕುಲುಮೆ ಉರಿಯಲಿಲ್ಲ. ಕುಂಬಾರನ ತಿಗುರಿ (ಚಕ್ರ) ತಿರುಗಲಿಲ್ಲ ನೇಕಾರನ ಮಗ್ಗ ಉಸಿರಾಡಲಿಲ್ಲ. ಕೇರಿಯ ಮಾರನ ಒಲೆ ಹೊತ್ತಲಿಲ್ಲ. ಇವರಾರಿಗೂ ವಸಂತ ಮುಖ ತೋರಲಿಲ್ಲ” ಎಂದು ಕವಯತ್ರಿ ಹೇಳಿರುವಲ್ಲಿ ಬಡವರ, ಶ್ರಮಿಕರ ಬದುಕು ಇನ್ನೂ ಹಸನಾಗಿಲ್ಲ. ಅವರಿಗೆ ಒಳ್ಳೆಯ ದಿನಗಳು ಬರದೆ ಹಾಗೆಯೇ ಬಡವರಾಗಿಯೇ ಇದ್ದು, ಆವರು ಶೋಷಣೆಯಿಂದ ಮುಕ್ತಿಹೊಂದಿಲ್ಲ. ಅವರ ಶ್ರಮಕ್ಕೆ ತಕ್ಕ ಫಲವಿಲ್ಲ ಎಂದು ಶ್ರಮಿಕರ ಬದುಕನ್ನು ಕುರಿತು ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಸಾಮಾಜಿಕ ನ್ಯಾಯ ದೊರೆತು, ಶೋಷಣೆ ಮುಕ್ತ ಸಮಾಜವಾದರೆ ಮಾತ್ರ ಸರ್ವರ ಏಳಿಗೆ ಸಾಧ್ಯ.
« BACK ಮುಂದಿನ ಅಧ್ಯಾಯ
THANK URMH-9731734068
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ