10-Kan 6 ವ್ಯಾಘ್ರಗೀತೆ

RMH

ಗದ್ಯ ಪಾಠ-5 ಎದೆಗೆ ಬಿದ್ದ ಅಕ್ಷರ

ಒಂದು ಅಂಕದ ಪ್ರಶ್ನೆಗಳು

ಉತ್ತರ: “ಎಲೆ ಬೆಕ್ಕೆ ರೂಪಿನಿಂದಲೆ ಹುಲಿಯಜಾತಿಗೆ ಸೇರ್ದೆನೆಂದು ಗರ್ವಿಸಬೇಡ” ಎಂದು ಬರೆದ ಕವಿಯ ವಿಷಯದಲ್ಲಿ ಗೌರವವಿದೆ ಎಂದಿದ್ದಾರೆ.

ಉತ್ತರ: ರೂಪಿನಿಂದಲೆ ಹುಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ ಎಂದು ಬೆಕ್ಕಿಗೆ ಹೇಳಿದ್ದಾರೆ.

ಉತ್ತರ: ಲೇಖಕರಿಗೆ ತಮ್ಮ ಬಂಧು ಕೃಷ್ಣಮೂರ್ತಿಯವರು ಅವರ ವಂಶದವರೊಬ್ಬರ ಅನುಭವದ ಕಥೆಯನ್ನು ಹೇಳಿದ್ದನ್ನು ಕೇಳಿದ ನಂತರ ಹುಲಿಯ ಧರ್ಮಶ್ರದ್ಧೆಯ ಅರಿವು ಉಂಟಾಯಿತು.

ಉತ್ತರ: ಕೃಷ್ಣಮೂರ್ತಿಯವರ ಅಜ್ಜಂದಿರು ತುಮಕೂರು ಜಿಲ್ಲೆಗೆ ಸೇರಿದವರು.

ಉತ್ತರ: ಶಾನುಭೋಗರ ಪಾಲಿಗೆ ರಾಜ ಭಕ್ತಿಯ ಲಾಂಛನ ‘ಖಿರ್ದಿ ಪುಸ್ತಕ’ ವಾಗಿತ್ತು.

ಉತ್ತರ: ಚಿಕ್ಕನಾಯಕನ ಹಳ್ಳಿಗೆ ಹೋಗಿದ್ದರು.

ಉತ್ತರ: ಮದಲಿಂಗನ ಕಣಿವೆ ದಾಟಿ ತಮ್ಮ ಹಳ್ಳಿಗೆ ತಲುಪಬೇಕಾಗಿತ್ತು.

ಉತ್ತರ: ಹುಲಿಯ ಬಡಬಂಧು ಬೆಕ್ಕು.

ಉತ್ತರ: ಆರನೆಯ ಇಂದ್ರಿಯ ಜಾಗೃತವಾಗಿದ್ದರಿಂದ ಹುಲಿ ಬಂದದ್ದು ತಿಳಿಯಿತು.

ಉತ್ತರ: ಸದ್ವಂಶ ದಲ್ಲಿ ಜನಿಸಿತ್ತು.

ಉತ್ತರ: ‘ಸ್ವಧರ್ಮೇ ನಿಧನಂ ಶ್ರೇಯಃ’ ಎಂಬ ಸಾಲು ನೆನಪಿಗೆ ಬಂದಿತು.

ಉತ್ತರ: “ಸೈತಾನ ಹಿಂದಿರುಗು” ಎಂಬ ಸಾಲು ನೆನಪಿಗೆ ಬಂತು.

ಉತ್ತರ: ಕುಲಾಲ ಚಕ್ರದಂತೆ ತಮ್ಮ ವೇಗವನ್ನು ಹೊಂದಿಸಿಕೊಂಡು ತಿರುಗುತ್ತಿದ್ದರು.

ಉತ್ತರ: ಶಾನುಭೋಗರು ಹುಲಿಯ ಮುಖಕ್ಕೆ ಖಿರ್ದಿಪುಸ್ತಕ ದಿಂದ ಹೊಡೆದರು.

ಉತ್ತರ: “ದೇವರೇ ಮರ ಹತ್ತುವಷ್ಟು ಅವಕಾಶ ಕರುಣಿಸು” ಎಂದುದೇವರನ್ನು ಪ್ರಾರ್ಥಿಸಿದರು.

ಉತ್ತರ: ಖಿರ್ದಿಪುಸ್ತಕ ಎಂದಿನಂತೆ ತನ್ನಜೀರ್ಣವಸ್ತ್ರದ ಹೊದಿಕೆಯಲ್ಲಿ ತೊಲೆಯಲ್ಲಿ ವಿಶ್ರಾಂತಿ ಪಡೆಯುತ್ತಿತ್ತು.

ಉತ್ತರ: ʼಹುಲಿಯ ಧರ್ಮಶ್ರದ್ಧೆ ʼ ಯಿಂದ ಉಳಿದರು.

ಉತ್ತರ: ತಮ್ಮ ವಂಶದ ಕೀರ್ತಿಗೆ ಕುಂದು ತರದಂತೆ ಖಿರ್ದಿಪುಸ್ತಕವನ್ನು ಕಾಪಾಡಿಕೊಂಡು ಬಂದಿದ್ದರು.

ಉತ್ತರ: ಶಾನುಭೋಗರು ಹುಲಿಗೆ ಅಭಿಮುಖರಾಗಿರದೆ ಅದರಕಡೆಗೆ ಬೆನ್ನುತಿರುಗಿಸಿ ನಡೆಯುತ್ತಿದ್ದುದು.

ಉತ್ತರ: ಹುಲಿಯು ತನ್ನ ಬಡಬಂಧುವಾದ ಬೆಕ್ಕಿನಂತೆ ದೇಹವನ್ನು ಹುದುಗಿಸಿಕೊಂಡು ಶಾನುಭೋಗರ ಕಡೆಗೆ ಮೆಲ್ಲಮೆಲ್ಲನೆ ಸರಿಯಿತು.

ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )

ಉತ್ತರ: ಶಾಕಾಹಾರವನ್ನು ತಿಂದು ಬದುಕಬಹುದಾದ ಮಾನವನೇ ಮಾಂಸವನ್ನು ತಿನ್ನಬಹುದಾದರೆ ಹುಲಿಯಲ್ಲಿ ಅದೊಂದು ಅಪರಾಧವೆ?
ಅದು ಆಹಾರಕ್ಕಾಗಿ ಕೊಲ್ಲುವುದರಲ್ಲೇನೂ ತಪ್ಪಿಲ್ಲ; ಹಾಗೆ ಕೊಲ್ಲುವಾಗ ಯಾವುದಾದರೊಂದು ಧರ್ಮವನ್ನು ಅನುಸರಿಸಿ ಕೊಲ್ಲುತ್ತದೆಯೇ ಅಥವಾ ಧರ್ಮಾಧರ್ಮಗಳ ಲೆಕ್ಕವನ್ನೇ ಇಡದೆ ಸ್ವಚ್ಛಂದದಿಂದ ವರ್ತಿಸುತ್ತದೆಯೇ ಎಂಬುದೇ ಮುಖ್ಯ ಪ್ರಶ್ನೆ.

ಉತ್ತರ: ಕೃಷ್ಣಮೂರ್ತಿಯ ಅಜ್ಜಂದಿರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಯವರು.
ಅವರ ಹಿರಿಯರು ಸಣ್ಣದೊಂದು ಸಂಸ್ಥಾನದಲ್ಲಿ ಮಂತ್ರಿಯಾಗಿದ್ದು ತಮ್ಮ ರಾಜಭಕ್ತಿಗಾಗಿ ಹೆಸರು ಪಡೆದಿದ್ದರು.
ಕಥಾನಾಯಕನ ಕಾಲಕ್ಕೆ ಮಂತ್ರಿತ್ವ ಹೋಗಿ ಶಾನು ಭೋಗಿಕೆ ಉಳಿದಿತ್ತು.

ಉತ್ತರ: ವಿಧಿ ಆಹಾರಕ್ಕೆ ಎನನ್ನು ಒದಗಿಸುವುದೋ ಎಂದು ಯೋಚಿಸುತ್ತಾ ಒಂದೆರಡು ಸಾರಿ ಮೈಮುರಿದು ಹೊರಟಿತು.
ಬಂಡೆಗಳ ಮರೆಯಲ್ಲೇ ನಡೆಯುತ್ತಿದ್ದಾಗ ಇದ್ದಕ್ಕಿದ್ದ ಹಾಗೆಯೇ ಮಧುರವಾದ ಗಂಧವೊಣದು ಹುಲಿಯ ಘ್ರಾಣೇಂದ್ರಿಯವನ್ನು ಆಕ್ರಮಿಸಿತು.
ಆ ಸುವಾಸನೆಯ ಜಾಡನ್ನೇ ಹಿಡಿದು ನಿಶ್ಶಬ್ದವಾಗಿ ನಡೆಯುತ್ತಾ ರಸ್ತೆಯ ಬಳಿಗೆ ಬಂದು ಶಾನುಭೋಗರನ್ನು ಕಂಡಿತು.

ಉತ್ತರ: ಶಾನುಭೋಗರು ಹುಲಿಗೆ ಅಭಿಮುಖರಾಗದೆ ಬೆನ್ನುತಿರುಗಿಸಿ ನಡೆಯುತ್ತಿದ್ದರು. ಆದ್ದರಿಂದ ಹಿಂದಿನಿಂದ ಕೊಲ್ಲುವುದು ಧರ್ಮವಲ್ಲ ಎಂದು ತಿಳಿದ ಹುಲಿಯು ಹೇಗಾದರು ಮಾಡಿ ಶಾನುಭೋಗರಿಗೆ ಅಭಿಮುಖವಾಗಿ ಬರಬೇಕು, ಆದರೆ ಅವರನ್ನು ಹಾದು ಮುಂದೆ ಹೋಗುವುದು ಕಷ್ಟ ನಿಶ್ಶಬ್ದವಾಗಿ ಅವರ ಹಿಂದೆಯೇ ನಡೆದು ಅನಂತರ ಮುಂಭಾಗಕ್ಕೆ ನೆಗೆದು ಅವರ ಮೇಲೆ ಬೀಳಬೇಕೆಂದು ಯೋಚಿಸಿ ಬಡಬಂಧುವಾದ ಬೆಕ್ಕಿನಂತೆ ಹೇಹ ಹುದುಗಿಸಿ ಮೆಲ್ಲಮೆಲ್ಲನೆ ಶಾನುಭೋಗರ ಕಡೆ ಸರಿಯಿತು.

ಉತ್ತರ: ಹುಲಿಯು ಮೊದಲ ಪ್ರಯತ್ನದ ನಂತರ ಮತ್ತೊಂದು ಬಾರಿ ಶಾನುಭೋಗರ ಮೇಲೆ ನೆಗೆದಾಗ ಈ ಸಲವೂ ಅವರ ಬೆನ್ನೇ ಕಂಡಿತು. ಒಂದುಕಡೆ ಹಸಿವು ಮತ್ತೊಂದುಕಡೆ ತನ್ನ ಸ್ವಾಭಿಮಾನಕ್ಕೆ ಇಂಥ ದಕ್ಕೆ ಬಂತಲ್ಲಾ ಎಂಬ ಯೋಚನೆ ನಾಳೆ ಇತರ ವ್ಯಾಘ್ರಗಳೆದುರಿಗೆ ತನ್ನಗೌರವ ಎಷ್ಟಕ್ಕೆ ನಿತೀತು ಎಂದು ಯೋಚಿಸಿದ್ದರಿಂದ ಹುಲಿಯ ಮನಸ್ಸಿನಲ್ಲಿ ಶಾನುಭೋಗರ ಮೇಲೆ ಬಿದ್ದೇಬಿಡಲೆ ಎಂಬ ಯೋಚನೆ ಹೊಳೆಯಿತು.

ಉತ್ತರ:

ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ (3 ಅಂಕ)

ಆಯ್ಕೆ : ಪ್ರಸ್ತುತ ಈ ಮಾತನ್ನು ಎ.ಎನ್.ಮೂರ್ತಿರಾವ್ ಅವರ ಸಮಗ್ರಲಲಿತ ಪ್ರಬಂಧಗಳು ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ ಪಾಠದಿಂದ ಆಯ್ದು ಕೊಳ್ಳಲಾಗಿದೆ.


ಸಂದರ್ಭ :ಶಾನುಭೋಗರು ಹುಲಿಯಿಂದ ರಕ್ಷಿಸಿಕೊಳ್ಳಲು ಕುಲಾಲ ಚಕ್ರದಂತೆ ತಿರುಗಿದ್ದರಿಂದ ಅವರ ತಲೆ ಸುತ್ತಲಾರಂಬಿಸಿತು ಆ ವಿಪತ್ತಿನ ಸನ್ನಿವೇಶದಲ್ಲಿಅವರಿಗೆ ಹುಲಿಯಿಂದ ತಪ್ಪಿಸಿ ಕೊಳ್ಳುವ ಕೊನೆಯ ಯೋಚನೆಯಲ್ಲಿ ಖಿರ್ದಿಪುಸ್ತಕ ಬಂದಿತು. ಹುಲಿಯ ಪಂಜಾದಿಂದ ಒಂದೇಟು ಬಿದ್ದರೆ ಸಾಕು ಮುಂದೆ ಯಾವುದರ ಅರಿವೂ ಉಳಿಯುವುದಿಲ್ಲ. ನೋವೇನಿದ್ದರೂ ಒಂದೇ ಒಂದುಕ್ಷಣದ ಮಾತು. ಎಂದು ಕೊನೆಯದಾಗಿ ಏನನ್ನಾದರು ಮಾಡಬೇಕೆಂದು ನಿಶ್ಚಯಿಸಿದಾಗ ಈ ಮೇಲಿನ ಮಾತು ಶಾನುಬೋಗರ ಮನದಲ್ಲಿ ಮೂಡಿದುದೆ ಸಂದರ್ಭ.


ಸ್ವಾರಸ್ಯ: ಹುಲಿಯ ನಿರಂತರ ದಾಳಿಯಿಂದ ತಮ್ಮಕೊನೆಯ ಸನ್ನಿವೇಶವನ್ನು ಅರಿತು ಶಾನುಭೋಗರು ದೃತಿಗೆಡದೆ ಈ ಮೇಲಿನಂತೆ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳುವುದೆ ಈ ಸಂದರ್ಭದ ಸ್ವಾರಸ್ಯ.

ಆಯ್ಕೆ : ಪ್ರಸ್ತುತ ಈ ಮಾತನ್ನು ಎ.ಎನ್.ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ ಪಾಠದಿಂದ ಆಯ್ದು ಕೊಳ್ಳಲಾಗಿದೆ.


ಸಂದರ್ಭ : ಹುಲಿಯಿಂದ ರಕ್ಷಿಸಿಕೊಳ್ಳಲು ತಮ್ಮಕೋನೆಯ ನಿರ್ಧಾರದಂತೆ ಖಿರ್ದಿ ಪುಸ್ತಕವನ್ನು ಹುಲಿಯ ಮುಖಕ್ಕೆ ಎಸೆದು ಪಕ್ಕದಲ್ಲಿದ್ದ ಮರದಕಡೆ ಹತ್ತಲು ತೆರಳುವಾಗ ಕಲ್ಲನ್ನು ಎಡವಿ ಮೂರ್ಛೆ ಹೊಗುತ್ತಾರೆ. ಆ ಸಂರ್ಭದಲ್ಲಿ ಚಿಕ್ಕನಾಯಕನ ಹಳ್ಳಿಯಿಂದ ತೆಂಗಿನಕಾಯಿ ಮಾರಿ ತಮ್ಮ ಹಳ್ಳಿಗೆ ತಿಂಗಳ ಬೆಳಕಿನಲ್ಲಿ ಮದಲಿಂಗನ ಕಣಿವೆಯ ಮೂಲಕ ರೈತರು ಬರುತ್ತಿದ್ದರು. ಹುಲಿಯಘರ್ಜನೆ ಕೇಳಿದ ರೈತರುಗಾಡಿಯನ್ನ ನಿಲ್ಲಿಸಿ ಸ್ವಲ್ಪ ಹೊತ್ತಾದ ನಂತರ ಗಲಭೆ ಮಾಡುತ್ತಾ ತೋಟಾ ಹಾರಿಸಿ ಪಂಜು ಹೋತ್ತಿಸಿ ಮುಂದುವರೆದು ಮೂರ್ಛೆಯಲ್ಲಿದ್ದ ಶಾನುಭೋಗರ ಮುಖಕ್ಕೆ ನೀರು ಎರೆಚಿ ತಮ್ಮಗಾಡಿಯಲ್ಲಿ ಕರೆದುಕೊಂಡು ತಮ್ಮಗಾಡಿಯಲ್ಲಿ ಕರೆದುಕೊಂಡು ಹೊರಟಾಗ ಗಾಡಿಯವರನ್ನು ನಾನು ಮುಖ ಮೇಲಾಗಿ ಬಿದ್ದಿದ್ದೆನೆ? ಎಂದು ಶಾನುಭೋಗರು ಕೇಳಿದಾಗ ಇಲ್ಲ ಎಂಬ ಉತ್ತರದೊರೆತ ನಂತರ ಹುಲಿಯ ಕುಲ ಧರ್ಮದ ಬಗ್ಗೆ ಶಾನುಭೋಗರು ‘ಭಲೆ’ ಎಂಬ ಮೆಚ್ಚಿಕೆಯ ಮಾತನ್ನು ಹೇಳಿದಾಗ ಸಂದರ್ಭವನ್ನರಿಯದ ಗಾಡಿಯವರು ಈ ಮೇಲಿನ ಮಾತನ್ನು ಹೇಳುತ್ತಾರೆ.


ಸ್ವಾರಸ್ಯ : ರೈತರು ತಾವು ಶಾನುಭೋಗರನ್ನು ಹುಲಿಯಿಂದ ಕಾಪಾಡಿದರೂ ಶಾನುಭೋಗರು ಹುಲಿಯ ಬಗ್ಗೆ ಮೆಚ್ಚುಗೆಯ ಮಾತನ್ನು ಹೇಳಿದಾಗ ಹುಲಿಯ ಧರ್ಮದ ಗುಣ ತಿಳಿಯದ ರೈತರು ಶಾನುಭೋಗರಿಗೆ ಈ ಮೇಲಿನಂತೆ ಹೇಳಿವುದೆ ಈ ಸಂದರ್ಭದ ಸ್ವಾರಸ್ಯ.

ಆಯ್ಕೆ : ಪ್ರಸ್ತುತ ಈ ಮಾತನ್ನು ಎ.ಎನ್.ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ ಪಾಠದಿಂದ ಆಯ್ದು ಕೊಳ್ಳಲಾಗಿದೆ.

ಎ.ಎನ್.ಮೂರ್ತಿರಾವ್ ಅವರ ಬಂಧು ಕೃಷ್ಣಮೂರ್ತಿ ತನ್ನ ವಂಶದವರೊಬ್ಬರ ಅನುಭವದ ಕಥೆಯನ್ನ ಹೇಳಿದ್ದನ್ನ ಕೇಳಿದ ನಂತರ ಹುಲಿಯು ತನ್ನ ಧರ್ಮದ ನಿಷ್ಠೆಯಿಂದಲೋ, ಅಥವಾ ಪ್ರಾಣಿ ಸಹಜ


ಸಂದರ್ಭ : ಗುಣದಿಂದಲೋ ಶಾನುಭೋಗರನ್ನು ಹಿಂದಿನಿಂದ ದಾಳಿಮಾಡದೆ ತನ್ನ ಕುಲ ಧರ್ಮವನ್ನ ಪಾಲಿಸಿಕೊಂಡು ಬಂದ ಹುಲಿಯ ಬಗ್ಗೆ ಲೇಖಕರಿಗೆ ಮಚ್ಚಿಗೆಯಾಗುತ್ತದೆ. ಇದರಿಂದ ಶಾನುಭೋಗರು ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ ಹುಲಿಯ ಧರ್ಮಶ್ರದ್ಧೆಯಿಂದ ಎಂದುತಮ್ಮ ಲೇಖನದಕೊನೆಯ ಭಾಗದಲ್ಲಿ ಈ ಮಾತನ್ನು ಹೇಳುತ್ತಾರೆ.


ಸ್ವಾರಸ್ಯ: ಶಾನುಭೋಗರ ಕಥೆಯನ್ನು ಕೇಳಿದ ನಂತರ ಹುಲಿಯ ಧರ್ಮಶ್ರದ್ಧೆ ಮತ್ತು ಅದರ ಕುಲ ಧರ್ಮ ಶಾನುಭೋಗರನ್ನ ಕಾಪಾಡಿತು. ಅಂತಹ ಹುಲಿಯನ್ನ ಹಾಡಿ ಹೊಗಳುವುದೇ ಭಾಗ್ಯ ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿರುವುದೇ ಸ್ವಾರಸ್ಯ.

ಆಯ್ಕೆ :- ಪ್ರಸ್ತುತ ಈ ಮಾತನ್ನು ಎ.ಎನ್.ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ ಪಾಠದಿಂದ ಆಯ್ದು ಕೊಳ್ಳಲಾಗಿದೆ.


ಸಂದರ್ಭ :- ಹಸಿದ ಹುಲಿಗೆ ಶಾನುಭೋಗರ ದುಂಡು-ದುಂಡಾದ ಶರೀರವನ್ನು ನೊಡಿ ಪರಮಾನಂದವಾಯಿತು ಆದರೆ ಶಾನುಭೋಗರು ಹುಲಿಯಕಡೆಗೆ ಬೆನ್ನು ತಿರುಗಿಸಿ ನಡೆಯುತ್ತಿದ್ದರು. ಹಿಂದಿನಿಂದ ಕೊಲ್ಲುವುದು ಅಧರ್ಮವೆಂದು ತಿಳಿದ ಹುಲಿ ಬೆಕ್ಕಿನಂತೆ ತನ್ನ ದೇಹವನ್ನು ಹುದುಗಿಸಿಕೊಂಡು ಮೆಲ್ಲನೆ ಶಾನುಭೋಗರ ಹತ್ತಿರ ಸರಿದು ಅವರ ತಲೆಯ ಮೇಲೆ ಹಾರಿ ದಾಳಿಮಾಡಬೇಕೆನ್ನುವಷ್ಟರಲ್ಲಿ ಹುಲಿಯಯೋಚನೆ ಶಾನುಭೋಗರಲ್ಲಿ ಬಂದು ತಕ್ಷಣ ಹುಲಿಯಕಡೆ ಬೆನ್ನು ಮಾಡಿದರು. ಹುಲಿಯ ಮುಖ ಪೆಚ್ಚಾಯಿತು ನಂತರ ಅವರ ವಿಷಯದಲ್ಲಿ ಮೆಚ್ಚಿಕೆಯಾಗಿ ತಿಂದರೆ ಇಂಥವನನ್ನೆ ತಿನ್ನಬೇಕು ಎಂದು ಕೊಂಡು ಮತ್ತೊಂದು ಬಾರಿ ನೆಗೆಯಿತು. ಈ ಸಲವೂ, ಹುಲಿಗೆ ಕಂಡದ್ದು ಶಾನುಭೋಗರ ಬೆನ್ನು, ಒಂದುಕಡೆ ಹಸಿವು ಮತ್ತೊಂದುಕಡೆ ಸ್ವಾಭಿಮಾನಕ್ಕೆ ಇಂತಹ ದಕ್ಕೆ ಬಂತಲ್ಲಾ ಎಂದು ಯೋಚಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.


ಸ್ವಾರಸ್ಯ : ಧರ್ಮಶ್ರದ್ಧೆ ಹಾಗೂ ಸ್ವಾಭಿಮಾನಿಯಾದ ಹುಲಿ ಶಾನುಭೋಗರ ಮೇಲೆ ದಾಳಿಮಾಡಿದಾಗ ವಿಫಲವಾದಾಗ ತನ್ನ ಸ್ಥಾನಮಾನವನ್ನು ಕುರಿತು ಕ್ಷಣಕಾಲ ಯೋಚಿಸುವ ಸಂದರ್ಭದಲ್ಲಿ ಈ ಮೇಲಿನ ವಿಚಾರ ಬಂದಿರುವುದೆ ಸ್ವಾರಸ್ಯ.

ಆಯ್ಕೆ :- ಪ್ರಸ್ತುತ ಈ ಮಾತನ್ನು ಎ.ಎನ್.ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ ಪಾಠದಿಂದ ಆಯ್ದು ಕೊಳ್ಳಲಾಗಿದೆ.


ಸಂದರ್ಭ :- ಸದ್ವಂಶದಲ್ಲಿ ಜನಿಸಿದ ಹುಲಿ ಪುಣ್ಯಕೋಟಿ ಆಹ್ವಾನಕೊಟ್ಟರೂ ಬಾಯಿಚಪ್ಪರಿಕೊಂಢು ಆ ಹಸುವನ್ನು ತಿನ್ನದೇ ಸತ್ತವೃತೆಯಾದ ಪುಣ್ಯಕೋಟಿಯನ್ನು ಕೊಲ್ಲದೆ ಪ್ರಾಣ ಬಿಟ್ಟ ಆ ಪವೀತ್ರ ಕಥೆ ಸುವರ್ಣಾಕ್ಷರಗಳಲ್ಲಿ ಲಿಖಿತವಾಗಿ ಇಂದಿಗೂ ಹುಲಿಗಳಿಗೂ ಹಸುಗಳಿಗೂ ಆದರ್ಶವಾಗಿಲ್ಲವೇ? ಅಂತಹ ಹುಲಿಯ ಮೊಮ್ಮಗನಾಗಿ ತಾನು ಅಧರ್ಮಕ್ಕೆ ಕೈ ಹಾಕುವುದೇ? ಎಂದು ಹುಲಿಗೆ ಭಗವದ್ಗೀತೆಯ ಮಾತು ಸ್ವಧರ್ಮೆ ನಿಧನಂ ಶ್ರೇಯಃ, ಮತ್ತು ಬೈಬಲ್ ನೆನಪಿಗೆ ಬಂದ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.


ಸ್ವಾರಸ್ಯ : ಈ ವಾಕ್ಯದಲ್ಲಿ ಮನಸ್ಸಿನಲ್ಲಿ ಮೂಡಿಬಂದ ಕೆಟ್ಟ ವಿಚಾರಕ್ಕೆ ಕಡಿವಾಣ ಹಾಕುವ ಮಾತು ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.

ಉತ್ತರ:

ಲೇಖಕರ ಪರಿಚಯ(3 ಅಂಕ)

ಶ್ರೀ ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್ ಅವರು ಕ್ರಿ. ಶ. 1900 ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮ ದಲ್ಲಿ ಜನಿಸಿದರು. ಇವರು ಸಮಗ್ರ ಲಲಿತಪ್ರಬಂಧಗಳು, ದೇವರು, ಹಗಲುಗನಸು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಎಂಟು-ಹತ್ತು ವಾಕ್ಯದಲ್ಲಿ ಉತ್ತರ ಬರೆಯಿರಿ(4 ಅಂಕ)

ಉತ್ತರ: ಶಾನುಭೋಗರ ದುಂಡು ದುಂಡಾದ ಶರೀರವನ್ನು ನೋಡಿ ಹುಲಿಗೆ ಪರಮಾನಂದವಾಯಿತು. ಹುಲಿಯ ಆನಂದಕ್ಕೆ ಕೊರತೆ ಒಂದಿತ್ತು.
ಆ ಶಾನುಭೋಗರು ಹುಲಿಗೆ ಅಭಿಮುಖರಾಗಿರದೆ ಅದರ ಕಡೆಗೆಬೆನ್ನು ತಿರುಗಿಸಿ ನಡೆಯುತ್ತಿದ್ದರು. ಯಾರನ್ನೇ ಆಗಲಿ, ಭರತ ಖಂಡದ ಹುಲಿಗಳು ಹಿಂದಿನಿಂದ ಹಾರಿಕೊಲ್ಲುವುದಿಲ್ಲ.
ಶತ್ರುವನ್ನಾದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲವಷ್ಟೆ.
ಆದ್ದರಿಂದ ಹುಲಿ ಹೇಗಾದರೂ ಮಾಡಿ ಶಾನುಭೋಗರಿಗೆ ಅಭಿಮುಖವಾಗಿ ಬರಬೇಕು. ಆದರೆ ಅವರನ್ನು ಹಾದು ಮುಂದೆ ಹೋಗುವುದು ಕಷ್ಟ.
ನಿಶ್ಶಬ್ದವಾಗಿ ಅವನ ಹಿಂದೆಯೇ ನಡೆದು, ಅನಂತರ ಅವನ ಮುಂಭಾಗಕ್ಕೆ ನೆಗೆದು, ಕೂಡಲೆ ತಿರುಗಿ ಅವನ ಮೇಲೆ ಬೀಳಬೇಕು.
ತನ್ನ ಬಡ ಬಂಧುವಾದ ಬೆಕ್ಕಿನಂತೆ ದೇಹವನ್ನು ಹುದುಗಿಸಿಕೊಂಡು ಹುಲಿ ಮೆಲ್ಲಮೆಲ್ಲನೆ ಶಾನುಭೋಗರ ಹತ್ತಿರ ಸರಿಯಿತು. ಹುಲಿ ಹತ್ತಿರ ಬಂದು ನೆಗೆಯಿತು.
ಅದು ತಮ್ಮ ತಲೆಯ ಮೇಲೆ ಬರುವ ವೇಳೆಗೆ ಸರಿಯಾಗಿ ಶಾನುಭೋಗರು ಸ್ವಲ್ಪಬಾಗಿದರು. ಹುಲಿ ನೆಲಕ್ಕೆ ಇಳಿದು ತಮ್ಮ ಕಡೆಗೆತಿರುಗುವುದರೊಳಗೆ ಅವರೂ ಹಿಂದಿರುಗಿ ಬಂದದಾರಿಯಲ್ಲೇ ಪುನಃನಡೆದರು.
ಹುಲಿ ಕತ್ತೆತ್ತಿ ನೋಡಿದರೆ ಶಾನುಭೋಗರು ಮತ್ತೆ ತನ್ನ ಕಡೆಗೆ ಬೆನ್ನುತಿರುಗಿಸಿದ್ದಾರೆ! ಹುಲಿಯ ಮುಖಪೆಚ್ಚಾಯಿತು.
ಆದರೆ ಶಾನುಭೋಗರ ವಿಷಯದಲ್ಲಿ ಮೆಚ್ಚಿಕೆಯೂ ಆಯಿತು ತನಗೆ ಎದುರಾಳಿಯೇ ಸಿಕ್ಕಿದನೆಂಬ ಮೆಚ್ಚಿಕೆ. ತಿಂದರೆ ಇಂಥವನನ್ನೇ ತಿನ್ನಬೇಕು ಎಂದುಕೊಂಡು ಮತ್ತೊಂದು ಬಾರಿಗೆ ನೆಗೆಯಿತು.
ಈ ಸಲವೂ, ಹುಲಿಗೆ ಕಂಡದ್ದು ಶಾನುಭೋಗರ ಬೆನ್ನೇ. ಅದಕ್ಕೆ ಒಂದು ಕಡೆ ಹಸಿವು, ಮತ್ತೊಂದು ಕಡೆ ತನ್ನ ಸ್ವಾಭಿಮಾನಕ್ಕೆ ಇಂಥಧಕ್ಕೆ ಬಂತಲ್ಲಾ ಎಂಬ ಯೋಚನೆ.
ನಾಳೆ ಇತರ ವ್ಯಾಘ್ರಗಳೆದುರಿಗೆ ತನ್ನ ಗೌರವ ಎಷ್ಟಕ್ಕೆ ನಿಂತೀತು, ಮೇಲೆ ಬಿದ್ದೇ ಬಿಡಲೆ ಎಂಬ ಯೋಚನೆ ಅದರ ಮನಸ್ಸಿನಲ್ಲಿ ಹೊಳೆದುಹೋಯಿತು. ಅದು ಸದ್ವಂಶದಲ್ಲಿ ಜನಿಸಿದಹುಲಿ.
“ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ” ಎಂದು ಆ ಹಸು ಆಹ್ವಾನ ಕೊಟ್ಟಾಗ ತನ್ನ ಅಜ್ಜ ಬಾಯಿ ಚಪ್ಪರಿಸಿಕೊಂಡು ಹಸುವನ್ನು ತಿನ್ನಬಹುದಾಗಿತ್ತು.
ಆದರೂ ಆ ಹುಲಿರಾಯ ಸತ್ಯವ್ರತೆಯಾದ ಪುಣ್ಯಕೋಟಿಯನ್ನು ತಿನ್ನಲ್ಲೊಲ್ಲದೆ ಪ್ರಾಣಬಿಡಲಿಲ್ಲವೆ ? ಆ ಪವಿತ್ರಕಥೆ ಸುವರ್ಣಾಕ್ಷರದಲ್ಲಿ ಲಿಖಿತವಾಗಿ ಇಂದಿಗೂ ಹುಲಿಗಳಿಗೂ ಹಸುಗಳಿಗೂ ಆದರ್ಶವಾಗಿಲ್ಲವೆ?
ಅಂಥ ಹುಲಿಯ ಮೊಮ್ಮಗನಾಗಿ ಹುಟ್ಟಿ ತಾನು ಅಧರ್ಮಕ್ಕೆ ಕೈ ಹಾಕುವುದೆ?
ಹುಲಿಗೆ ಭಗವದ್ಗೀತೆ ನೆನಪಿಗೆ ಬಂತು; ಸ್ವಧರ್ಮೇನಿ ಧನಂಶ್ರೇಯಃ, ಬೈಬಲ್ ನೆನಪಿಗೆ ಬಂದಿತು; “ಸೈತಾನ ಹಿಂದಿರುಗು” ಎಂದುಕೊಂಡಿತು

ಉತ್ತರ: “ಶಾಕಾಹಾರವನ್ನು ತಿಂದು ಬದುಕಬಹುದಾದ ಮಾನವನೇ ಮಾಂಸವನ್ನು ತಿನ್ನ ಬಹುದಾದರೆ ಆಹಾರಕ್ಕಾಗಿ ಹುಲಿಯು ಪ್ರಾಣಿಗಳನ್ನು ಕೊಂದು ತಿನ್ನುವುದರಲ್ಲಿ ತಪ್ಪಿಲ್ಲ.
ಆದರೆ ಹಾಗೆ ಕೊಲ್ಲುವಾಗ ಯಾವುದಾರೂ ಒಂದು ಧರ್ಮವನ್ನು ಅನುಸರಿಸಿ ಕೊಲ್ಲುವುದೋ ಅಥವಾ ಧರ್ಮಾಧರ್ಮಗಳ ಲೆಕ್ಕ ಇಡದೆ ಸ್ವಚ್ಛಂದದಿಂದ ವರ್ತಿಸುತ್ತದೆಯೇ ಎಂಬುದೇ ಮುಖ್ಯ ಪ್ರಶ್ನೆ.
ಇತರ ದೇಶಗಳಲ್ಲಿ ಇರುವ ಹುಲಿಗಳ ವಿಷಯ ಹೇಗೋ ಗೊತ್ತಿಲ್ಲ ಆದರೆ ಯಾವ ನಾಡಿನಲ್ಲಿ ಶ್ರೀರಾಮನಂಥ ದೊರೆಗಳು ಆಳಿದರೋ, ಭಗವದ್ಗೀತೆಯಂಥ ಗ್ರಂಥ ಉದ್ಭವಿಸಿತೋ,
ಆ ಭರತ ಭೂಮಿಯಲ್ಲಿ ಹುಲಿಗಳು ಅಧರ್ಮಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ
ಏಕೆಂದರೆ ಶತ್ರುಗಳಾದರೂ ಸರಿಯೆ, ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ.
ಭಗವದ್ಗೀತೆಯ ‘ಸ್ವಧರ್ಮೇ ನಿಧನಂ ಶ್ರೇಯಃ’ ಎಂಬ ಮಾತಿನಂತೆ ಹುಲಿಗಳು ಧರ್ಮಪರತೆಯಿಂದ ಬೇಟೆಯಾಡುತ್ತವೆ” ಎಂದು ಮೂರ್ತಿರಾಯರು ಅಭಿಪ್ರಾಯಪಡುತ್ತಾರೆ.

ಉತ್ತರ: ಶಾನುಭೋಗರು ಖಿರ್ದಿ ಪುಸ್ತಕ ಹುಲಿಗೆ ಎಸೆದು ಓಡುವಾಗ ಎಡವಿ ಬಿದ್ದು ಮೂರ್ಛೆ ಹೋದರು. ಮೂರ್ಛೆಯಿಂದ ಎದ್ದಾಗ ಅವರ ಸುತ್ತ ನಾಲ್ಕೈದು ಜನ ರೈತರು ಇದ್ದರು.
ಅವರು ನೀರು ಚಿಮುಕಿಸಿ ಶಾನುಭೋಗರನ್ನು ಎಚ್ಚರಿಸಿದ್ದರು. ಮನೆಗೆ ಬಂದ ಶಾನುಭೋಗರು ಖಿರ್ದಿ ಪುಸ್ತಕವನ್ನು ಜೋಪಾನವಾಗಿ ತೊಲೆಯ ಮೇಲೆ ಇಟ್ಟರು.
ಶಾನುಭೋಗರು ಆ ಪುಸ್ತಕವನ್ನು ಅನಂತ ವಾತ್ಸಲ್ಯದಿಂದ, ಕೃತಜ್ಞತೆಯಿಂದ ನೋಡಿದರು. ತನ್ನ ಪ್ರಾಣವನ್ನು ಖಿರ್ದಿ ಪುಸ್ತಕವೇ ಉಳಿಸಿತು ಎಂಬ ಕೃತಜ್ಞತೆ ಶಾನುಭೋಗರಲ್ಲಿ ಇದೆ. ಹ
ುಲಿಯಿಂದ ತಪ್ಪಿಸಿಕೊಳ್ಳಲು ಖಿರ್ದಿ ಪುಸ್ತಕ ಆಕ್ಷಣಕ್ಕೆ ಒಂದು ಸಾಧನವಾದರೂ ಅವರು ಎಡವಿ ಬಿದ್ದಾಗ ಬೆನ್ನು ಮೇಲಾಗಿ ಬಿದ್ದು ಮೂರ್ಛೆ ಹೋಗಿರುತ್ತಾರೆ. ಹ
ುಲಿಯ ಧರ್ಮಶ್ರದ್ಧೆ ಬೆನ್ನ ಕಡೆಯಿಂದ ಬೇಟೆಯಾಡುವುದಲ್ಲ. ಆದ್ದರಿಂದ ಅದು ಶಾನುಭೋಗರನ್ನು ಕೊಲ್ಲದೆ ಬಿಟ್ಟಿದೆ.
ಖಿರ್ದಿ ಪುಸ್ತಕಕ್ಕಿಂತ ಹುಲಿಯ ಧರ್ಮಶ್ರದ್ಧೆಯೇ ಶಾನುಭೋಗರ ಪ್ರಾಣ ಉಳಿಯಲು ಕಾರಣವೆಂಬುದು ಲೇಖಕರ ಅಭಿಪ್ರಾಯವಾಗಿದೆ.

« BACK *............................. .............................* ಮುಂದಿನ ಅಧ್ಯಾಯ

THANK U
RMH-9731734068

1 ಕಾಮೆಂಟ್‌: