ಪದ್ಯ ಪಾಠ-7 ವೀರಲವ
ಒಂದು ಅಂಕದ ಪ್ರಶ್ನೆಗಳು
ಉತ್ತರ: ಜೈಮಿನಿ ಭಾರತ ಕಾವ್ಯವನ್ನು ಬರೆದ ಕವಿ ಲಕ್ಷ್ಮೀಶ.
ಉತ್ತರ: ಯಜ್ಞಾಶ್ವವನ್ನು ಕಟ್ಟಿದವರು ಲವ.
ಉತ್ತರ: ಕುದುರೆಯನ್ನು ಲವನು ತನ್ನ ಉತ್ತರೀಯ (ಮೇಲುಹೊದಿಕೆ) ದಿಂದ ಕಟ್ಟಿದನು.
ಉತ್ತರ: ಲವನು ಯಜ್ಞಾಶ್ವವವನ್ನು ಕಟ್ಟಿ ಹಾಕಿದ್ದರಿಂದ ಮುನಿಸುತರು ಹೆದರಿದರು.
ಉತ್ತರ: ರಾಮನು ಅಶ್ವಮೇದಯಾಗದ ಕುದುರೆ ಬೆಂಗಾವಲಿಗೆ ಸೋಹದರನಾದ ಶತ್ರುಘ್ನನನ್ನು ಕಳಿಹಿಸುತ್ತಾನೆ.
ಉತ್ತರ: ಕುದುರೆಯು ವಾಲ್ಮೀಕಿಯ ಆಶ್ರಮವನ್ನು ಪ್ರವೇಶಿಸಿತು.
ಉತ್ತರ: ವಾಲ್ಮೀಕಿ ಮುನಿಗಳು ವರಣನ ಲೋಕಕ್ಕೆ ಹೋಗಿದ್ದರು.
ಉತ್ತರ: ಲವನು ಕುದುರೆಯನ್ನು ಬಾಳೆಯ ಗಿಡ (ಕದಳಿದ್ರುಮ)ಕ್ಕೆ ಕಟ್ಟಿದನು.
ಉತ್ತರ: ಶ್ರೀರಾಮನ ತಾಯಿಯ ಹೆಸರು ಕೌಸಲ್ಯೆ.
ಉತ್ತರ: ವಾಲ್ಮೀಕಿ ಮುನಿಗಳು ತೋಟದ ಕಾವಲಿಗೆ ಲವಕುಶರನ್ನು ನೇಮಿಸಿದರು
ಉತ್ತರ: ಲವನ ತಾಯಿಯ ಹೆಸರು ಜಾನಕಿ (ಸೀತೆ)
ಉತ್ತರ: ಕೌಸಲ್ಯೆಯ ಕುಮಾರ ಶ್ರೀರಾಮ.
ಉತ್ತರ: ವಾಲ್ಮೀಕಿ ಮುನಿಗಳು ಸಂಸ್ಕೃತದಲ್ಲಿ ‘ರಾಮಾಯಣ ಮಹಾಕಾವ್ಯ’ವನ್ನು ರಚಿಸಿದರು.
ಉತ್ತರ: ಲಕ್ಷ್ಮೀಶನಿಗೆ ‘ಉಪಮಾಲೋಲ’, ‘ಕರ್ನಾಟಕವಿಚೂತವನಚೈತ್ರ’ ಎಂಬ ಬಿರುದುಗಳು ಇದ್ದವು.
ಉತ್ತರ: ಲವ ಕುಶನ ತಂದೆ ಶ್ರೀರಾಮ, ತಾಯಿ ಸೀತೆ (ಜಾನಕಿ)
ಉತ್ತರ: ಪ್ರಜೆಯೊಬ್ಬ ಸೀತೆ ಬಗ್ಗೆ ಅವಮಾನದ ನುಡಿಯನ್ನು ಆಡುತ್ತಾನೆ. ಆಕೆಯನ್ನು ಪರೀಕ್ಷಿಸಲು ಕಾಡಿಗೆ ಕಳಿಸಿದನು.
ಉತ್ತರ: ವಾಲ್ಮೀಕಿ ಮಹರ್ಷಿಗಳು ಲವ ಕುಶ ಎಂದು ನಾಮಕರಣ ಮಾಡಿದರು.
ಉತ್ತರ: ಶ್ರೀರಾಮನ ತಂದೆ ದಶರಥ
ಉತ್ತರ: ಆದಿಕಾವ್ಯ ರಾಮಯಣವನ್ನು ವಾಲ್ಮೀಕಿ ಮಹರ್ಷಿಗಳು ರಚಿಸಿದರು
ಉತ್ತರ: ಅಷ್ಟದಿಕ್ಪಾಲರಲ್ಲಿ ಒಬ್ಬನಾದ ಈತ ಪಶ್ಚಿಮ ದಿಕ್ಕಿಗೆ ಒಡೆಯ. ಜಲಾಧಿಪತಿ ಎಂದು ಪ್ರಸಿದ್ಧನಾದವನು.
ಉತ್ತರ: ಬಿಲ್ಲಿಗೆ ಕಟ್ಟು ಹಗ್ಗವನ್ನು ಹೆದೆ ಎಂದು ಕರೆಯುತ್ತಾರೆ.
ಉತ್ತರ: ಬಿಲ್ಲಿಗೆ ಕಟ್ಟಿದ ಹಗ್ಗವನ್ನು ಎಳೆದು (ಜಗ್ಗಿ) ಸರಿಯಾಗಿರುವುದನ್ನು ಖಾತರಿಪಡಿಸಿಕೊಳ್ಳುವುದು.
ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಬರೆಯಿರಿ ( 2 ಅಂಕದ ಪ್ರಶ್ನೆಗಳು )
ಉತ್ತರ: ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧ ಯಾಗವನ್ನು ಕೈಗೊಂಡು, ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು. ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಭುಜಬಲ ಪರಾಕ್ರಮಿಗಳಾದ ರಾಜರುಗಳು ತಡೆಯಲು ಹೆದರಿ ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು. ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲ ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು.
ಉತ್ತರ: ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ “ಭೂಮಂಡದಲ್ಲಿ ಕೌಸಲ್ಯಯ ಮಗನಾದ ರಾಮನು ಒಬ್ಬನೇ ವೀರನು. ಇದು ಅವನ ಯಜ್ಞ ಕುದುರೆ. ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರೂ ತಡೆಯಲಿ” ಎಂದು ಬರೆಯಲಾಗಿತ್ತು.
ಉತ್ತರ: ಲವನು ಆಶ್ರಮವನ್ನು ಹೊಕ್ಕ ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಬಾಳೆಯ ಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು ಹೆದರಿದ ಮುನಿಸುತರು “ಬೇಡಬೇಡ ಅರಸುಗಳ ಕುದುರೆಯನ್ನು ಬಿಡು, ನಮ್ಮನ್ನು ಹೊಡೆಯವರು ಎಂದುಹೇಳಿದರು. ಆಗ ಲವನು ನಗುತ “ಬ್ರಾಹ್ಮಣರ ಮಕ್ಕಳು ಹೆದರಿದರೆ, ಜಾನಕಿಯ ಮಗನು ಇದಕ್ಕೆ ಹೆದರುವನೇ,ನೀವು ಹೋಗಿ” ಎಂದು ಶೌರ್ಯದಿಂದ ಹೇಳಿದನು
ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯ ಬರೆಯಿರಿ (3 ಅಂಕ)
ಆಯ್ಕೆ:- ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ “ಜೈಮಿನಿ ಭಾರತ” ಮಹಾಕಾವ್ಯದಿಂದ ಆಯ್ದ “ವೀರಲವ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ:- ಶ್ರೀರಾಮನ ಅಶ್ವಮೇಧ ಯಾಗದ ಯಜ್ಞಾಶ್ವವು ಸಂಚರಿಸಿದ ಕಡೆಯಲ್ಲೆಲ್ಲ ರಾಜರುಗಳಿಂದ ಅದಕ್ಕೆ ದೊರೆತ ಭವ್ಯ ಸ್ವಾಗತ ಹಾಗೂ ನೀಡಿದ ಗೌರವವನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ ಕವಿಯು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ:- ಶ್ರೀರಾಮನ ಹೆಸರನ್ನು ಕೇಳಿಯೇ ಪರಾಕ್ರಮಿಗಳಾದ ರಾಜರುಗಳು ಗೌರವದಿಂದ ನಮಿಸಿ ಶರಣಾಗಿ ಯಜ್ಞಾಶ್ವವು ಮುಂದೆ ಸಂಚರಿಸಲು ಅನುವು ಮಾಡಿಕೊಟ್ಟರು ಎಂದು ವರ್ಣಿಸಿರುವುದು ಸ್ವಾರಸ್ಯಪೂರ್ಣವಾಗಿದೆ.
ಆಯ್ಕೆ:- ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ “ಜೈಮಿನಿ ಭಾರತ” ಮಹಾಕಾವ್ಯದಿಂದ ಆಯ್ದ “ವೀರಲವ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ:- ಲವನು ತನ್ನ ಆಶ್ರಮದ ತೋಟವನ್ನು ಧ್ವಂಸ ಮಾಡಿದ ಶ್ರೀರಾಮನ ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯ ಬರಹವನ್ನು ಓದಿ ಅದನ್ನು ಕಟ್ಟಿಹಾಕಲು ನಿರ್ಧರಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ :- ಕ್ಷತ್ರಿಯನಾದ ವೀರಲವನು ಬಾಲಕನಾದರೂ ಹೆದರದೆ ಕುದುರೆಯನ್ನು ಕಟ್ಟಲು ನಿರ್ಧರಿಸಿ, ತನ್ನ ವೀರತ್ವವನ್ನು ಪ್ರದರ್ಶಿಸುವುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.
ಆಯ್ಕೆ:- ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ “ಜೈಮಿನಿ ಭಾರತ” ಮಹಾಕಾವ್ಯದಿಂದ ಆಯ್ದ “ವೀರಲವ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ:- ವೀರಲವನು ತನ್ನ ಉತ್ತರೀಯದಿಂದ ಯಜ್ಞಾಶ್ವವನ್ನು ಬಾಳೆಯಗಿಡಕ್ಕೆ ಕಟ್ಟಿಹಾಕಿದ ಸಂದರ್ಭದಲ್ಲಿ ಮುನಿಪುತ್ರರು ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ :- ರಾಜನ ಯಜ್ಞಾಶ್ವವನ್ನು ಕಟ್ಟಿಹಾಕುವುದು ಅಪರಾಧ ಅದರಿಂದಮುಂದೆ ತೊಂದರೆ ಉಂಟಾಗುತ್ತದೆ ಎಂದು ಮುನಿಪುತ್ರರು ಭಯಗೊಳ್ಳುವುದನ್ನು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ.
ಆಯ್ಕೆ:- ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ “ಜೈಮಿನಿ ಭಾರತ” ಮಹಾಕಾವ್ಯದಿಂದ ಆಯ್ದ “ವೀರಲವ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ:- ವೀರಲವನು ತನ್ನ ಉತ್ತರೀಯದಿಂದ ಯಜ್ಞಾಶ್ವವನ್ನು ಬಾಳೆಯಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು ಮುನಿಪುತ್ರರು ಕುದುರೆಯನ್ನು ಬಿಡು ಎಂದು ಹೇಳಿದ ಸಂದರ್ಭದಲ್ಲಿ ಈ ಮಾತನ್ನು ಲವನು ಹೇಳುತ್ತಾನೆ.
ಸ್ವಾರಸ್ಯ :- ಸೀತೆಯ ಮಗನಾದ ಲವನ ಧೈರ್ಯವು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
ಕವಿ ಪರಿಚಯ (3 ಅಂಕ)
ಲಕ್ಷ್ಮೀಶ ಕನ್ನಡ ಮಹಾ ಕವಿಗಳಲ್ಲಿ ಲಕ್ಷ್ಮೀಶನು ಒಬ್ಬ ಪ್ರಮುಖ. ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನವನು. ಭರದ್ವಾಜಗೋತ್ರದ ಅಣ್ಣಯ್ಯ (ಅಣ್ಣಮಾಂಕ)ನ ಮಗನು ಲಕ್ಷ್ಮೀಶ, ಕರ್ನಾಟ ಕವಿ ಚೂತವನ ಚೈತ್ರ ಎನ್ನುವುದು ಇವನ ಬಿರುದು. ಇವನು ದೇವಪುರದ ಶ್ರೀ ಲಕ್ಷ್ಮೀಕಾಂತಸ್ವಾಮಿಯ ಭಕ್ತ. ಇವನ ಕಾಲ ಸಮಾರು ಕ್ರಿ ಶ 1550, ಇತನು ಯಾವ ರಾಜಾಶ್ರಯದಲ್ಲಿಯೂ ಇದ್ದಂತೆ ತೋರುವುದಿಲ್ಲ. ಅವನ ಕಡು ಬಡತನದಿಂದಾಗಿ ಊರಿನಲ್ಲಿ ಯಾವ ಗೌರವವೂ ಇಲ್ಲದೆ ಎಲ್ಲರ ತಿರಸ್ಕಾರಕ್ಕೆ ಪಾತ್ರನಾಗಿದ್ದ.ಕಥೆಯನ್ನು ಲಕ್ಷ್ಮೀಶನು ಗಮಕದಲ್ಲಿ ನಾದಬದ್ದವಾಗಿ ಹಾಡುತ್ತಿದ್ದನು ಹಾಗಾಗಿ ಅವನಿಗೆ `ನಾದಲೋಲ' ಎಂಬ ಬಿರುದು ಇದ್ದಿತು. ಹಿಂದೆ ಅಯ್ಯ ಶಾಲೆಗಳಲ್ಲಿ ಕುಮಾರವ್ಯಾಸ ಭಾರತ ಮತ್ತು ಜೈಮಿನಿ ಭಾರತದ ಕಥಾ ಸಂದರ್ಭವನ್ನು ಪರೀಕ್ಷಿಸಿ ಅವರ ಪಾಂಡಿತ್ಯವನ್ನು ಅಳೆಯಲಾಗುತ್ತಿತ್ತು. ಎಷ್ಟೋ ಸಂಪ್ರದಾಯಕ ಮನೆತನಗಳಲ್ಲಿ ವರಪರೀಕ್ಷೆಗೆ ಈ ಎರಡು ಕಾವ್ಯದ ಸಂದರ್ಭ ಶ್ಲೋಕಗಳನ್ನು ಕೇಳುತ್ತಿದ್ದರಂತೆ. ಅಷ್ಟು ಪ್ರಸಿದ್ಧವಾಗಿದೆ ಈ ಜೈಮಿನಿ ಭಾರತ ಕಾವ್ಯ. ಸಂಸ್ಕೃತದಲ್ಲಿ 68 ಅಧ್ಯಾಯಗಳಿಂದ ಕೂಡಿದೆ ಕಥೆಯನ್ನು, ಲಕ್ಷ್ಮೀಶನು 34 ಅಧ್ಯಾಯಗಳಲ್ಲಿ 1906 ವಾರ್ಧಕ ಷಟ್ಪದಿಗಳಲ್ಲಿ ವರ್ಣಿಸಿದ್ದಾನೆ.
ಎಂಟು-ಹತ್ತು ವಾಕ್ಯದಲ್ಲಿ ಉತ್ತರ ಬರೆಯಿರಿ(4 ಅಂಕ)
ಉತ್ತರ: ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧ ಯಾಗವನ್ನು ಕೈಗೊಂಡು, ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು.ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಭುಜಬಲ ಪರಾಕ್ರಮಿಗಳಾದ ರಾಜರುಗಳು ತಡೆಯಲು ಹೆದರಿ ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು. ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲ ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು. ಆಗ ಇದನ್ನು ಕಂಡ ಲವನು “ಇದು ಯಾವ ಕಡೆಯ ಕುದುರೆಯು, ಹೊಕ್ಕು, ಹೂತೋಟವನ್ನು ನುಗ್ಗುನುರಿಯಾಗುವಂತೆ ತುಳಿದುದು. ”ಎಂದು ಕುದುರೆಯ ಕಡೆಗೆ ನಡೆದು ಬಂದು ನೋಡಿದನು. ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ “ಭೂಮಂಡಲದಲ್ಲಿ ಕೌಸಲ್ಯೆಯ ಮಗನಾದ ರಾಮನು ಒಬ್ಬನೇ ವೀರನು ಇದು ಅವನ ಯಜ್ಞ ಕುದುರೆ ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರು ತಡೆಯಲಿ” ಎಂದು ಬರೆಯಲಾಗಿತ್ತು. ಇದನ್ನು ಓದಿದ ಲವನು ಕೋಪಗೊಂಡು “ಅಹಂಕಾರವನ್ನು ಬಿಡಿಸದಿದ್ದರೆ ತನ್ನ ತಾಯಿಯನ್ನು ಎಲ್ಲ ಜನರೂ ಬಂಜೆ ಎನ್ನದಿರುವರೇ, ತನಗೆ ಇರುವ ತೋಳುಗಳು ಇವು ಏತಕೆ?” ಎಂದು ಪ್ರತಿಜ್ಞೆಯನ್ನು ಕೈಗೊಂಡು, ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಕಟ್ಟಿಹಾಕಿದನು.
ಉತ್ತರ: ಲವನು ಬಾಲಕನಾಗಿದ್ದರು ಸ್ವಾಭಿಮಾನಿ. ಅವನ ಮಾತುಗಳು ವೀರೋಚಿತ. ಆತನ ಮಾತೃಪ್ರೇಮ ಅನನ್ಯ. ವಾಲ್ಮೀಕಿ ಮಹರ್ಷಿಗಳು ಆಶ್ರಮದಿಂದ ಹೊರಗೆ ಹೋಗುವಾಗ ಲವನಿಗೆ ಆಶ್ರಮದ ಜವಾಬ್ದಾರಿಯನ್ನು ವಹಿಸಿರುತ್ತಾರೆ. ಇಂತಹ ಸಮಯದಲ್ಲಿ ರಾಮನ ಯಜ್ಞಾಶ್ವವು ಆಶ್ರಮವನ್ನು ಪ್ರವೇಶಿಸಿ ಹೂದೋಟವನ್ನು ಹಾಳುಮಾಡುತ್ತದೆ. ಇದನ್ನು ಕಂಡು ಲವನು ಕುದುರೆಯ ಬಳಿಬಂದು, ಕುದುರೆಯ ನೆತ್ತಿಯ ಮೇಲೆ ಮೆರೆಯುತ್ತಿದ್ದ ಪಟ್ಟದ ಲಿಖಿತವನ್ನು ಓದಿ, ರಾಮನೊಬ್ಬನೇ ಜಗತ್ತಿಗೆ ವೀರನೆಂಬ ವಾಕ್ಯವನ್ನು ಕಂಡು ಕೆರಳಿ, ಇವನ ಗರ್ವವನ್ನು ಬಿಡಿಸುತ್ತೇನೆ, ಇಲ್ಲದಿದ್ದಲ್ಲಿ ನನ್ನ ತಾಯಿಯನ್ನು ಎಲ್ಲರೂ ಹೇಡಿಯನ್ನು ಹೆತ್ತವಳೆಂದು ದೂರಿಬಿಡುತ್ತಾರೆ ಎಂದು ಚಿಂತಿಸಿ, ತನ್ನ ತೋಳ್ಬಲವನ್ನು ತೋರಿಸಿಬಿಡುತ್ತೇನೆ ಎಂದು ಕುದುರೆಯನ್ನು ಕಟ್ಟಿಹಾಕುತ್ತಾನೆ. ಋಷಿ ಮುನಿಗಳ ಮಕ್ಕಳು ಹೆದರಿಕೆಯಿಂದ ಬೇಡವೆಂದಾಗ, “ಬ್ರಾಹ್ಮಣರ ಮಕ್ಕಳು ಯುದ್ಧಕ್ಕೆ ಹೆದರಿದರೆ; ಜಾನಕಿಯ ಸುತನು ಹೆದರುವನೇ?” ಎಂದು ವೀರನಂತೆ ಬಿಲ್ಲಿನ ಹೆದೆಯೇರಿಸಿ ಠೇಂಕಾರವನ್ನು ಮಾಡಿ ನಿಂತನು.ಇಂತಹ ವೀರ ಬಾಲಕನ ಶೌರ್ಯ, ತಾಯಿಯ ಮೇಲಿನ ಮಮತೆ, ದುರಹಂಕಾರವನ್ನು ಮೆಟ್ಟುವ ಸಾಹಸ ಎಂತಹವರಿಗೂ ಮೆಚ್ಚುಗೆಯಾಗುತ್ತದೆ.
ಕಂಠಪಾಠ ಪದ್ಯಗಳು(4 ಅಂಕ)
ಉತ್ತರ *******
ಉತ್ತರ ******
ಕೆಳಗಿನ ಪದ್ಯಭಾಗವನ್ನು ಓದಿ ಅರ್ಥಮಾಡಿಕೊಂಡು, ಅಡಕವಾಗಿರುವ ಮೌಲ್ಯವನ್ನಾಧರಿಸಿ ಸಾರಾಂಶ ಬರೆಯಿರಿ. (4 ಅಂಕ)
ಆಯ್ಕೆ : ಪ್ರಸ್ತುತ ಪದ್ಯಭಾಗವನ್ನು ಉಪಮಾಲೋಲನೆಂದೇ ಪ್ರಸಿದ್ಧನಾದ ಲಕ್ಷ್ಮೀಶ ಕವಿ ಬರೆದಿರುವ ‘ಜೈಮಿನಿ ಭಾರತ’ ಕೃತಿಯ ‘ವೀರಲವ’ ಪದ್ಯದಿಂದ ಆರಿಸಿಕೊಳ್ಳಲಾಗಿದೆ.
ಸಾರಾಂಶ:- ಲವನು ಉತ್ತರೀಯವನ್ನು ತೆಗೆದು ಕುದುರೆಯ ಕುತ್ತಿಗೆಗೆ ಕಟ್ಟಿ ಒಂದು ಬಾಳೆಯ ಮರದ ಬುಡಕ್ಕೆ ಕಟ್ಟಲು, ಮುನಿಪುತ್ರರು “ಇದು ರಾಜರ ಕುದುರೆ ಬಿಟ್ಟು ಬಿಡು, ಇಲ್ಲದಿದ್ದರೆ ಅವರು ಬಂದು ನಮ್ಮನ್ನು ಹೊಡೆಯುತ್ತಾರೆ” ಎನ್ನಲು. ನಗುತ್ತ “ಬ್ರಾಹ್ಮಣರ ಮಕ್ಕಳು ಹೇದರಿದರೆ, ಸೀತೆಯ ಮಗನು ಇದಕ್ಕೆಲ್ಲಾ ಹೆದರುವನೇ” ಎಂದು ಬಿಲ್ಲಿಗೆ ಹೆದೆಯನ್ನೇರಿಸಿ ಜೇವಡೆದು (ಬಿಲ್ಲಿಗೆ ಹೆದೆಯನ್ನೇರಿಸಿ ಮಾಡುವ ಧ್ವನಿ), ಯುದ್ಧಕ್ಕೆ ಸಿದ್ದನಾಗಿ ನಿಂತನು.
ಅಷ್ಟರಲ್ಲಿ ಕುದುರೆಯ ಕಾವಲು ಸೈನಿಕರು ಬಂದು, ಬಾಳೆಯ ಗಿಡಕ್ಕೆ ಕಟ್ಟಿದ ಕುದುರೆಯನ್ನು ನೋಡಿದರು. ಅಲ್ಲಿದ್ದ ವಟುಗಳ ಮೇಲೆ ಜೋರು ಮಾಡಿ “ಈ ಕುದುರೆಯನ್ನೇಕೆ ಕಟ್ಟಿದಿರಿ” ಎಂದು ಕೇಳಿದರು. ಅವರು ಹೆದರಿ “ನಾವು ಕಟ್ಟಲಿಲ್ಲ. ಬೇಡ ಬೇಡವೆಂದರೂ ಇವನೇ ಕಟ್ಟಿ ಹಾಕಿದ” ಎಂದು ಲವನನ್ನು ತೋರಿಸಿದರು. ಈ ಹುಡುಗನು ತಿಳಿಯದೆ ಕಟ್ಟಿದ್ದಾನೆ `ಬಿಡು' ಎಂದು ಅರ್ಭಟಿಸಿದರು. ಲವನು `ಈ ಜೋರು ಏಕೆ ? ಈ ಕುದುರೆಯನ್ನು ಬಿಡುವುದಿಲ್ಲ,
ಯಾರಾದರೂ ಬಿಡಿಸಲು ಬಂದರೆ ಅವರ ಕೈಗಳನ್ನು ಕತ್ತರಿಸುತ್ತೇನೆ. ಎಂದನು.
ಮೌಲ್ಯ:- ಕುದುರೆಯ ಹಣೆಯ ಮೇಲಿದ್ದ ಲಿಖಿತವನ್ನು ಓದಿ, ಬಾಳೆಗಿಡಕ್ಕೆ ಕಟ್ಟಿದಾಗ, ಮುನಿಸುತರು ಹೆದರುವರು. ಕ್ಷತ್ರಿಯ ಮಗನಾದ ಲವನು ಹೆದರದೆ ವೀರತನವನ್ನು ಪ್ರದರ್ಶಿಸುವನು.
« BACK ಮುಂದಿನ ಅಧ್ಯಾಯ
THANK URMH-9731734068
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ